ಭವಿಷ್ಯತ್ತಿನ ಚಾಲಕರಹಿತ ಸೂಪರ್ ಕಾರು ಕಾನ್ಸೆಪ್ಟ್‌ನೊಂದಿಗೆ ರೋಲ್ಸ್ ರಾಯ್ಸ್

By Nagaraja

ಬ್ರಿಟನ್‌ನ ಅತಿ ಪುರಾತನ ಹಾಗೂ ಪ್ರಖ್ಯಾತ ವಾಹನ ಸಂಸ್ಥೆಯಾಗಿರುವ ರೋಲ್ಸ್ ರೋಲ್ಸ್, ಭವಿಷ್ಯತ್ತಿನ ಸ್ವಯಂಚಾಲಿತ ಸೂಪರ್ ಕಾರು ಕಾನ್ಸೆಪ್ಟ್ ನೊಂದಿಗೆ ಮುಂದೆ ಬಂದಿದೆ. ಭವಿಷ್ಯದ ಕಾರುಗಳಿಗೆ ಹೊಸ ಆಯಾಮ ತುಂಬಿರುವ ರೋಲ್ಸ್ ರಾಯ್ಸ್, ಅತಿ ನೂತನ 'ವಿಷನ್ ನೆಕ್ಸ್ಟ್ 100' (VISION NEXT 100) ಡ್ರೈವರ್ ಲೆಸ್ ಕಾನ್ಸೆಪ್ಟ್ ಕಾರನ್ನು ಪ್ರದರ್ಶನಗೊಳಿಸಿದೆ.

'103ಇಎಕ್ಸ್' ಎಂಬ ಕೋಡ್ ಪಡೆದುಕೊಂಡಿರುವ ಆರು ಮೀಟರ್ ಗಳಷ್ಟು ಉದ್ದದ ರೋಲ್ಸ್ ರಾಯ್ಸ್ ಡ್ರೈವರ್ ಲೆಸ್ ಕಾರು ವಿಶಿಷ್ಟವಾದ ಮೇಲಾವರಣವನ್ನು (canopy) ಪಡೆದಿದ್ದು, ಕ್ಲಾಸಿಕ್ ಜೊತೆಗೆ ಆಧುನಿಕ ವಿನ್ಯಾಸ ಶೈಲಿಯನ್ನು ಮೈಗೂಡಿಸಿಕೊಂಡಿದೆ.

ಭವಿಷ್ಯತ್ತಿನ ಚಾಲಕರಹಿತ ಸೂಪರ್ ಕಾರು ಕಾನ್ಸೆಪ್ಟ್‌ನೊಂದಿಗೆ ರೋಲ್ಸ್ ರಾಯ್ಸ್

ಕಾರಿನೊಳಗಿನ ಸೀಟುಗಳನ್ನು ಸೋಫಾ ಶೈಲಿಯ ದೇಹ ರಚನೆಯನ್ನು ಕಾಣಬಹುದಾಗಿದ್ದು, ಎಲೀನರ್ (Eleanor) ಎಂಬ ವಾಯ್ಸ್ ಅಸಿಸ್ಟಡ್ ಸೇವೆಯೂ ಇರುತ್ತದೆ.

ಭವಿಷ್ಯತ್ತಿನ ಚಾಲಕರಹಿತ ಸೂಪರ್ ಕಾರು ಕಾನ್ಸೆಪ್ಟ್‌ನೊಂದಿಗೆ ರೋಲ್ಸ್ ರಾಯ್ಸ್

ರೋಲ್ಸ್ ರಾಯ್ಸ್ ಇದಕ್ಕೆ 'ಅಲ್ಟಿಮೇಟ್ ಕಾನ್ಸೆಪ್ಟ್ ಕಾರು' ಎಂಬ ವಿಶ್ಲೇಷಣೆಯನ್ನು ನೀಡಿದ್ದು, ಭವಿಷ್ಯತ್ತಿನ ಮೋಟಾರು ಸಂಚಾರವನ್ನು ಈ ಐಷಾರಾಮಿ ಸಂಸ್ಥೆ ಹೇಗೆ ದೃಷ್ಟಿ ಹಾಯಿಸುತ್ತಿದೆ ಎಂಬುದಕ್ಕೆ ಉದಾಹರಣೆಯಾಗಿದೆ.

ಭವಿಷ್ಯತ್ತಿನ ಚಾಲಕರಹಿತ ಸೂಪರ್ ಕಾರು ಕಾನ್ಸೆಪ್ಟ್‌ನೊಂದಿಗೆ ರೋಲ್ಸ್ ರಾಯ್ಸ್

ಲಂಡನ್ ನ ರೌಂಡ್ ಹೌಸ್ ನಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ ರೋಲ್ಸ್ ರಾಯ್ಸ್ ಚಾಲಕ ರಹಿತ ಕಾರು ಅನಾವರಣಗೊಂಡಿದೆ. ಹಾಗಿದ್ದರೂ ಇದು ನನಸಾಗಲು ಇನ್ನು 25 ವರ್ಷಗಳಷ್ಟು ಕಾಲ ಕಾಯಬೇಕಾಗುತ್ತದೆ ಎಂದು ಸಂಸ್ಥೆಯು ಅಭಿಪ್ರಾಯಪಟ್ಟಿದೆ.

ಭವಿಷ್ಯತ್ತಿನ ಚಾಲಕರಹಿತ ಸೂಪರ್ ಕಾರು ಕಾನ್ಸೆಪ್ಟ್‌ನೊಂದಿಗೆ ರೋಲ್ಸ್ ರಾಯ್ಸ್

ರೋಲ್ಸ್ ರಾಯ್ಸ್ ಅಧೀನತೆಯನ್ನು ಹೊಂದಿರುವ ಜರ್ಮನಿಯ ಮೂಲದ ಬಿಎಂಡಬ್ಲ್ಯು, ಚಾಲಕ ರಹಿತ ಸ್ವಯಂಚಾಲಿತ ಕಾರುಗಳ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿದೆ.

ಭವಿಷ್ಯತ್ತಿನ ಚಾಲಕರಹಿತ ಸೂಪರ್ ಕಾರು ಕಾನ್ಸೆಪ್ಟ್‌ನೊಂದಿಗೆ ರೋಲ್ಸ್ ರಾಯ್ಸ್

ಇಂದು ರೋಲ್ಸ್ ರಾಯ್ಸ್ ಸಂಸ್ಥೆಯು ಭವಿಷ್ಯದ ಐಷಾರಾಮಿ ಚಾಲನೆಗೆ ಹೊಸ ವ್ಯಾಖ್ಯಾನ ನೀಡಿದೆ. ರೋಲ್ಸ್ ರಾಯ್ಸ್ ವಿಷನ್ ನೆಕ್ಸ್ಟ್ 100 ಕಾನ್ಸೆಪ್ಟ್ ಸಹ ಇದರ ಭಾಗವಾಗಿರಲಿದೆ.

ಭವಿಷ್ಯತ್ತಿನ ಚಾಲಕರಹಿತ ಸೂಪರ್ ಕಾರು ಕಾನ್ಸೆಪ್ಟ್‌ನೊಂದಿಗೆ ರೋಲ್ಸ್ ರಾಯ್ಸ್

ಕ್ಲಾಸಿಕ್ ಕಾರುಗಳ ವಿಭಾಗದಲ್ಲಿ ಸ್ಥಾನ ಗಿಟ್ಟಿಸಿಕೊಂಡಿರುವ ರೋಲ್ಸ್ ರಾಯ್ಸ್, ಕೈಯಿಂದಲೇ ನಿರ್ಮಿಸುವ ತಂತ್ರಗಾರಿಕೆಗೆ ಹೆಚ್ಚು ಹೆಸರುವಾಸಿಯಾಗಿದೆ.

ಭವಿಷ್ಯತ್ತಿನ ಚಾಲಕರಹಿತ ಸೂಪರ್ ಕಾರು ಕಾನ್ಸೆಪ್ಟ್‌ನೊಂದಿಗೆ ರೋಲ್ಸ್ ರಾಯ್ಸ್

ಶೂನ್ಯ ಮಾಲಿನ್ಯ ಎಂಬ ಪರಿಕಲ್ಪನೆಗೆ ರೋಲ್ಸ್ ರಾಯ್ಸ್ ಸಹ ತನ್ನ ಕೊಡುಗೆಯನ್ನು ನೀಡಲಿದೆ. ಹಾಗೆಯೇ ಗರಿಷ್ಠ ತಂತ್ರಜ್ಞಾನಕ್ಕೆ ಒತ್ತು ಕೊಡಲಾಗುವುದು.

ಭವಿಷ್ಯತ್ತಿನ ಚಾಲಕರಹಿತ ಸೂಪರ್ ಕಾರು ಕಾನ್ಸೆಪ್ಟ್‌ನೊಂದಿಗೆ ರೋಲ್ಸ್ ರಾಯ್ಸ್

ಇತ್ತೀಚೆಗಿನ ವರ್ಷಗಳಲ್ಲಿ ರೋಲ್ಸ್ ರಾಯ್ಸ್ ಕಾರುಗಳಲ್ಲಿ ಕಂಡುಬರುತ್ತಿರುವ 12 ಸಿಲಿಂಡರ್ ಎಂಜಿನ್ ಗಳು ಭವಿಷ್ಯದಲ್ಲೂ ಮುಂದುವರಿಯುವ ಸಾಧ್ಯತೆಯನ್ನು ಸಂಸ್ಥೆಯು ಸೂಚಿಸಿದೆ. ಹಾಗಿದ್ದರೂ ಹೊಸ ಕಾರಿನ ತಾಂತ್ರಿಕತೆಗಳ ಬಗ್ಗೆ ಮಾಹಿತಿಯನ್ನು ಬಹಿರಂಗಪಡಿಸಿಲ್ಲ.

ಭವಿಷ್ಯತ್ತಿನ ಚಾಲಕರಹಿತ ಸೂಪರ್ ಕಾರು ಕಾನ್ಸೆಪ್ಟ್‌ನೊಂದಿಗೆ ರೋಲ್ಸ್ ರಾಯ್ಸ್

1911ನೇ ಇಸವಿಯಲ್ಲಿ ಆಟೋಮೊಬೈಲ್ ಕ್ಷೇತ್ರಕ್ಕೆ ರಂಗ ಪ್ರವೇಶ ಮಾಡಿರುವ ರೋಲ್ಸ್ ರಾಯ್ಸ್, ಒಂದು ಶತಮಾನದ ಬಳಿಕವೂ ತನ್ನ ದೈತ್ಯ ಪರಂಪರೆಯನ್ನು ಕಾಪಾಡಿಕೊಂಡು ಬಂದಿದ್ದು, ಭವಿಷ್ಯದತ್ತ ದಿಟ್ಟ ಹೆಜ್ಜೆಯನ್ನಿಟ್ಟಿದೆ.

ಹಿನ್ನಲೆ...

ಹಿನ್ನಲೆ...

2016 ಮಾರ್ಚ್ 07ರಂದು ಶತಮಾನದ ಸಂಭ್ರಮೋತ್ಸದ ವೇಳೆಯಲ್ಲಿ ಬಿಎಂಡಬ್ಲ್ಯು ಸಂಸ್ಥೆಯು ಮುಂದಿನ 100 ವರ್ಷಗಳ 'ವಿಷನ್ ವೆಹಿಕಲ್' ಕಾನ್ಸೆಪ್ಟ್ ಗಳ ಘೋಷಣೆಯನ್ನು ಮಾಡಿತ್ತು. ಇದರಂತೆ ರೋಲ್ಸ್ ಜೊತೆಗೆ ಮಿನಿ ಬ್ರಾಂಡ್ ಗಳ ವಿಷನ್ 100 ಕಾನ್ಸೆಪ್ಟ್ ಕಾರುಗಳನ್ನು ಪ್ರದರ್ಶಿಸಲಾಗಿದೆ.

ಭವಿಷ್ಯತ್ತಿನ ಚಾಲಕರಹಿತ ಸೂಪರ್ ಕಾರು ಕಾನ್ಸೆಪ್ಟ್‌ನೊಂದಿಗೆ ರೋಲ್ಸ್ ರಾಯ್ಸ್

ವಿಷನ್ ನೆಕ್ಸ್ಟ್ 100 ಕಾನ್ಸೆಪ್ಟ್ ಕಾರಿನಲ್ಲಿ ವಿನ್ಯಾಸಗಾರರು ಪ್ರಮುಖವಾಗಿಯೂ ನಾಲ್ಕು ಪ್ರಮುಖ ಘಟಕಗಳಿಗೆ ಪ್ರಾಮುಖ್ಯತೆಯನ್ನು ಕೊಟ್ಟಿದ್ದಾರೆ. ಅವುಗಳೆಂದರೆ, ದಿ ಪರ್ಸನಲ್ ವಿಷನ್, ದಿ ಎಫರ್ಟ್ ಲೆಸ್ ಜರ್ನಿ, ದಿ ಗ್ರಾಂಡ್ ಸಾಂಕ್ಚರಿ ಮತ್ತು ದಿ ಗ್ರಾಂಡ್ ಎರೈವಲ್.

Most Read Articles

Kannada
English summary
The Future of Luxury Mobility - Rolls Royce VISION NEXT 100 concept
Story first published: Monday, June 20, 2016, 13:05 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X