ಹೊಸ ಟಾಟಾ ಹೆಕ್ಸಾದಲ್ಲಿದೆ ರಹಸ್ಯ ವೈಶಿಷ್ಟ್ಯ; ಏನದು ಗೊತ್ತಾ?

Written By:

ದೇಶದ ಅತಿ ದೊಡ್ಡ ವಾಹನ ಸಂಸ್ಥೆ ಟಾಟಾ ಮೋಟಾರ್ಸ್, 2016 ಹಬ್ಬದ ಸಂಭ್ರಮದ ವೇಳೆ ಅತಿ ನೂತನ ಟಾಟಾ ಹೆಕ್ಸಾ ಕ್ರಾಸೋವರ್ ಕ್ರೀಡಾ ಬಳಕೆಯ ವಾಹನವನ್ನು ಬಿಡುಗಡೆ ಮಾಡಲಿದೆ. ಈ ನಡುವೆ ಟೆಸ್ಟಿಂಗ್ ವೇಳೆ ಅನೇಕ ಬಾರಿ ಕ್ಯಾಮೆರಾ ಕಣ್ಣಿಗೆ ಸೆರೆ ಸಿಕ್ಕಿರುವ ಟಾಟಾ ಹೆಕ್ಸಾದಲ್ಲಿ ರಹಸ್ಯ ವೈಶಿಷ್ಟ್ಯವೊಂದಿದೆ. ಅದೇನೆಂಬುದು ನಿಮಗೆ ಗೊತ್ತೇ?

ಹೊಸ ಟಾಟಾ ಹೆಕ್ಸಾದಲ್ಲಿದೆ ರಹಸ್ಯ ವೈಶಿಷ್ಟ್ಯ; ಏನದು ಗೊತ್ತಾ?

ಅತಿ ನೂತನ ಟಾಟಾ ಹೆಕ್ಸಾ ಕಾರು 'ಸೂಪರ್ ಡ್ರೈವ್ ಮೋಡ್' ವೈಶಿಷ್ಟ್ಯವನ್ನು ಗಿಟ್ಟಿಸಿಕೊಳ್ಳಲಿದೆ. ಇದು ದಣಿವು ರಹಿತ ಸುಲಭ ಚಾಲನೆಗೆ ನೆರವಾಗಲಿದೆ.

ಹೊಸ ಟಾಟಾ ಹೆಕ್ಸಾದಲ್ಲಿದೆ ರಹಸ್ಯ ವೈಶಿಷ್ಟ್ಯ; ಏನದು ಗೊತ್ತಾ?

ಟಾಟಾ ಹೆಕ್ಸಾ ನಾಲ್ಕು ಚಾಲನಾ ವಿಧಗಳನ್ನು ಪಡೆದುಕೊಳ್ಳಲಿದೆ. ಸೆಂಟ್ರಲ್ ಕನ್ಸಾಲ್ ಕೊಡಲಾಗಿರುವ ಈ ನಾಬ್ ಬಳಕೆ ಅತ್ಯಂತ ಸುಲಭವಾಗಿದೆ.

ಹೊಸ ಟಾಟಾ ಹೆಕ್ಸಾದಲ್ಲಿದೆ ರಹಸ್ಯ ವೈಶಿಷ್ಟ್ಯ; ಏನದು ಗೊತ್ತಾ?

ಟಾಟಾ ಸೂಪರ್ ಡ್ರೈವ್ ಮೋಡ್ ಗಳು ಆಟೋ, ಕಂಫರ್ಟ್, ಡೈನಾಮಿಕ್ ಮತ್ತು ರಫ್ ರೋಡ್ ಚಾಲನಾ ವಿಧಗಳನ್ನು ಪಡೆದುಕೊಂಡಿದೆ.

ಹೊಸ ಟಾಟಾ ಹೆಕ್ಸಾದಲ್ಲಿದೆ ರಹಸ್ಯ ವೈಶಿಷ್ಟ್ಯ; ಏನದು ಗೊತ್ತಾ?

ಪ್ರತಿಯೊಂದು ಮೋಡ್ ಗಳನ್ನು ಚಾಲನಾ ಪರಿಸ್ಥಿತಿಗೆ ಅನುಗುಣವಾಗಿ ಬಳಕೆ ಮಾಡಬಹುದಾಗಿದ್ದು, ಆರಾಮದಾಯಕ ಚಾಲನಾ ಅನುಭವವನ್ನು ನೀಡಲಿದೆ.

ಹೊಸ ಟಾಟಾ ಹೆಕ್ಸಾದಲ್ಲಿದೆ ರಹಸ್ಯ ವೈಶಿಷ್ಟ್ಯ; ಏನದು ಗೊತ್ತಾ?

ದೇಶದೆಲ್ಲ ರಸ್ತೆ ಪರಿಸ್ಥಿತಿಗಳನ್ನು ನಿಭಾಯಿಸುವಂತಹ ರೀತಿಯಲ್ಲಿ ಟಾಟಾ ಹೆಕ್ಸಾ ಸೂಪರ್ ಡ್ರೈವ್ ಮೋಡ್ ಗಳನ್ನು ರಚನೆ ಮಾಡಲಾಗಿದೆ. ಇದು ಮುಂದಿನ ದಿನಗಳಲ್ಲಿ ಹೆಚ್ಚು ಜನಪ್ರಿಯತೆ ಗಿಟ್ಟಿಸಿಕೊಳ್ಳುವ ನಿರೀಕ್ಷೆಯಿದೆ.

ಹೊಸ ಟಾಟಾ ಹೆಕ್ಸಾದಲ್ಲಿದೆ ರಹಸ್ಯ ವೈಶಿಷ್ಟ್ಯ; ಏನದು ಗೊತ್ತಾ?

ಇನ್ನು ನ್ಯೂ ಜನರೇಷನ್ ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ಇಸಿಪಿ), ರೇಸ್ ಕಾರ್ ಮ್ಯಾಪಿಂಗ್ ವ್ಯವಸ್ಥೆಗಳನ್ನು ನೂತನ ಹೆಕ್ಸಾ ಪಡೆಯಲಿದೆ.

ಹೊಸ ಟಾಟಾ ಹೆಕ್ಸಾದಲ್ಲಿದೆ ರಹಸ್ಯ ವೈಶಿಷ್ಟ್ಯ; ಏನದು ಗೊತ್ತಾ?

ಸ್ಟೈಲಿಷ್ ಮಸಲರ್ ವಿನ್ಯಾಸದ ಜೊತೆಗೆ ಪ್ರೊಜೆಕ್ಟರ್ ಹೆಡ್ ಲ್ಯಾಂಪ್, ಎಲ್ ಇಡಿ ಡೇಟೈಮ್ ರನ್ನಿಂಗ್ ಲೈಟ್ಸ್, ಆಕರ್ಷಕ ಫ್ರಂಟ್ ಬಂಪರ್, ಬ್ಲ್ಯಾಕ್ ಕ್ರೋಮ್ ಗ್ರಿಲ್, ಸ್ವಭಾವ ರೇಖೆ ಇತ್ಯಾದಿ ವೈಶಿಷ್ಟ್ಯಗಳಿರಲಿದೆ.

ಹೊಸ ಟಾಟಾ ಹೆಕ್ಸಾದಲ್ಲಿದೆ ರಹಸ್ಯ ವೈಶಿಷ್ಟ್ಯ; ಏನದು ಗೊತ್ತಾ?

ನೂತನ ಟಾಟಾ ಹೆಕ್ಸಾ 4788 ಎಂಎಂ ಉದ್ದ, 1903 ಎಂಎಂ ಅಗಲ, 1791 ಎಂಎಂ ಎತ್ತರ, 2850 ಎಂಎಂ ಚಕ್ರಾಂತರ ಮತ್ತು 200 ಎಂಎಂ ಗ್ರೌಂಡ್ ಕ್ಲಿಯರನ್ಸ್ ಪಡೆಯಲಿದೆ.

ಹೊಸ ಟಾಟಾ ಹೆಕ್ಸಾದಲ್ಲಿದೆ ರಹಸ್ಯ ವೈಶಿಷ್ಟ್ಯ; ಏನದು ಗೊತ್ತಾ?

19 ಇಂಚುಗಳ ಹೊರತಾಗಿ 60 ಲೀಟರ್ ಗಳ ಬೃಹತ್ ಇಂಧನ ಟ್ಯಾಂಕ್ ಸಹ ಜೋಡಣೆ ಮಾಡಲಾಗಿದೆ. ಇದರಿಂದ ದೂರ ಪ್ರಯಾಣಕ್ಕೂ ಸೂಕ್ತವೆನಿಸಲಿದೆ.

ಹೊಸ ಟಾಟಾ ಹೆಕ್ಸಾದಲ್ಲಿದೆ ರಹಸ್ಯ ವೈಶಿಷ್ಟ್ಯ; ಏನದು ಗೊತ್ತಾ?

ಟಾಟಾ ಹೆಕ್ಸಾದಲ್ಲಿರುವ 2.2 ಲೀಟರ್ ವ್ಯಾರಿಕೋರ್ 400 ಡೀಸೆಲ್ ಎಂಜಿನ್ 400 ಎನ್ ಎಂ ತಿರುಗುಬಲದಲ್ಲಿ 154 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಹಾಗೆಯೇ ಆರು ಸ್ಪೀಡ್ ಮ್ಯಾನುವಲ್ ಜೊತೆಗೆ ಆರು ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಪಡೆಲಿದೆ.

ಹೊಸ ಟಾಟಾ ಹೆಕ್ಸಾದಲ್ಲಿದೆ ರಹಸ್ಯ ವೈಶಿಷ್ಟ್ಯ; ಏನದು ಗೊತ್ತಾ?

ಟಾಟಾ ಸಫಾರಿ ಸ್ಟ್ರೋಮ್ ಗಿಂತಲೂ ಮೇಲ್ದರ್ಜೆಯಲ್ಲಿ ಗುರುತಿಸಿಕೊಳ್ಳಲಿರುವ ನೂತನ ಹೆಕ್ಸಾ ಫೋರ್ ವೀಲ್ ಚಾಲನಾ ವ್ಯವಸ್ಥೆಯನ್ನು ಪಡೆದುಕೊಂಡಿದ್ದು, ಟೊಯೊಟಾ ಇನ್ನೋವಾ ಕ್ರೈಸ್ಟಾ ಹಾಗೂ ಮಹೀಂದ್ರ ಎಕ್ಸ್ ಯುವಿ500 ಮಾದರಿಗಳಿಗೆ ಪ್ರತಿಸ್ಪರ್ಧಿಯಾಗಲಿದೆ.

ಹೊಸ ಟಾಟಾ ಹೆಕ್ಸಾದಲ್ಲಿದೆ ರಹಸ್ಯ ವೈಶಿಷ್ಟ್ಯ; ಏನದು ಗೊತ್ತಾ?

ಅಂದ ಹಾಗೆ ಟಾಟಾ ಹೆಕ್ಸಾ ಪ್ರಾರಂಭಿಕ ಬೆಲೆ 12 ಲಕ್ಷ ರು.ಗಳಿಂದ ಟಾಪ್ ಎಂಡ್ ಆವೃತ್ತಿಯು 18.5 ಲಕ್ಷ ರುಪಾಯಿಗಳಷ್ಟು ದುಬಾರಿಯೆನಿಸುವ ಸಾಧ್ಯತೆಯಿದೆ.

English summary
Tata Motors Reveal To Us An Interesting Feature In The Hexa MPV
Story first published: Saturday, October 8, 2016, 9:44 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark