ಸೈರಸ್‌ಗೆ ತಟ್ಟಿದ 'ನ್ಯಾನೋ' ವೈರಸ್; ಟಾಟಾಗೆ ಕಂಟಕ!

Written By:

ಹಠಾತ್ ಬೆಳವಣಿಗೆಯಲ್ಲಿ ಟಾಟಾ ಸಮೂಹದ ಅಧ್ಯಕ್ಷ ಸ್ಥಾನದಿಂದ ಸೈರಸ್ ಮಿಸ್ಟ್ರಿ ಅವರನ್ನು ವಜಾಗೊಳಿಸಿ ರತನ್ ಟಾಟಾ ಅವರು ಹಂಗಾಮಿ ಅಧ್ಯಕ್ಷರಾಗಿ ಜವಾಬ್ದಾರಿ ವಹಿಸಿಕೊಂಡಿದ್ದರು. ತದಾ ನಂತರ ಟಾಟಾ ಸಮೂಹ ನಿರ್ದೇಶನ ಮಂಡಳಿ ಸದ್ಯಸರಿಗೆ ಕಳುಹಿಸಿದ ಇ-ಮೇಲ್ ನಲ್ಲಿ ಕೆಲವೊಂದು ಗಂಭೀರ ವಿಷಯಗಳನ್ನು ಬೊಟ್ಟು ಮಾಡಿರುವುದು ವಿವಾದಕ್ಕೆ ನಾಂದಿ ಹಾಡಿದೆ.

To Follow DriveSpark On Facebook, Click The Like Button
ಸೈರಸ್‌ಗೆ ತಟ್ಟಿದ 'ನ್ಯಾನೋ' ವೈರಸ್; ಟಾಟಾಗೆ ಕಂಟಕ!

ವಿಶ್ವದ ಅತಿ ಅಗ್ಗದ ನ್ಯಾನೋ ಕಾರನ್ನು ಬಿಡುಗಡೆಗೊಳಿಸಿರುವುದು ಎಲ್ಲರಿಗೂ ತಿಳಿದ ವಿಚಾರ. ಈಗ ಸೈರಲ್ ಅವರ ವಜಾಗೊಳಿಸಲು ಇದೇ ನ್ಯಾನೋ ಕಾರು ವೈರಸ್ ರೂಪದಲ್ಲಿ ಕಾಡಿತೇ ಎಂಬುದು ಚರ್ಚೆಗೀಡು ಮಾಡಿದೆ.

ಸೈರಸ್‌ಗೆ ತಟ್ಟಿದ 'ನ್ಯಾನೋ' ವೈರಸ್; ಟಾಟಾಗೆ ಕಂಟಕ!

ಮಿಸ್ಟ್ರಿ ಮಾಡಿರುವ ಇ-ಮೇಲ್ ನಲ್ಲಿ ರತನ್ ಟಾಟಾ ಕನಸಿನ ಕೂಸಾಗಿರುವ ನ್ಯಾನೋ ಕಾರಿನ ಮೇಲೆ ಭಾವನಾತ್ಮಕ ಸಂಬಂಧ ಮುಂದುವರಿಸಿರುವುದು ಸಂಸ್ಥೆಯನ್ನು ಸಂಕಷ್ಟಕ್ಕೀಡು ಮಾಡಿತ್ತು ಎಂದು ಗಂಭೀರವಾದ ಆರೋಪಗಳನ್ನು ಮಾಡಿದ್ದರು.

ಸೈರಸ್‌ಗೆ ತಟ್ಟಿದ 'ನ್ಯಾನೋ' ವೈರಸ್; ಟಾಟಾಗೆ ಕಂಟಕ!

ಟಾಟಾ ಸಮೂಹ ನಿರ್ದೇಶನ ಮಂಡಳಿಗೆ ಕಳುಹಿಸಿದ ಐದು ಪುಟಗಳ ಇ-ಮೇಲ್ ನಲ್ಲಿ ದೋಷಯುಕ್ತ ಯೋಜನೆ ಮತ್ತು ಪ್ರಶ್ನಾರ್ಹ ವ್ಯವಹಾರಗಳ ಬಗ್ಗೆ ವಿವರವಾಗಿ ವಿವರಣೆಯನ್ನು ನೀಡಿದ್ದಾರೆ.

ಸೈರಸ್‌ಗೆ ತಟ್ಟಿದ 'ನ್ಯಾನೋ' ವೈರಸ್; ಟಾಟಾಗೆ ಕಂಟಕ!

2008ರಲ್ಲಿ ಬಿಡುಗಡೆಗೊಂಡ ವಿಶ್ವದ ಅತಿ ಅಗ್ಗದ ಕಾರು ಟಾಟಾ ನ್ಯಾನೋ, ಮಾರಾಟದಲ್ಲಿ ಅಷ್ಟೇನೂ ಸದ್ದು ಮಾಡಿರಲಿಲ್ಲ. ಆದರೂ ಟಾಟಾ ಸಂಸ್ಥೆಯು ತನ್ನ ಪ್ರತಿಷ್ಠೆಯ ಸಂಕೇತವನ್ನಾಗಿ ಯೋಜನೆಯನ್ನು ಕೈಬಿಟ್ಟಿರಲಿಲ್ಲ.

ಸೈರಸ್‌ಗೆ ತಟ್ಟಿದ 'ನ್ಯಾನೋ' ವೈರಸ್; ಟಾಟಾಗೆ ಕಂಟಕ!

ವಾಹನ ವಿಶ್ಲೇಷಕರ ಪ್ರಕಾರ ಕಳೆದ ವರ್ಷವಿದ್ದ 2300ರಷ್ಟಿದ್ದ ನ್ಯಾನೋ ಮಾರಾಟ 600ಕ್ಕಿಳಿದಿದೆ. ಕಳೆದ ಆರ್ಥಿಕ ಸಾಲಿನಲ್ಲಿ ಮಾರ್ಚ್ ವೇಳೆಯಾಗುವ 21,012 ಯುನಿಟ್ ಗಳಷ್ಟೇ ಮಾರಾಟವಾಗಿತ್ತು. ಇದೇ ಅವಧಿಯಲ್ಲಿ ರೆನೊ ಕ್ವಿಡ್ 41,204 ಯುನಿಟ್ ಗಳಷ್ಟು ಮಾರಾಟವಾಗಿದೆ.

ಸೈರಸ್‌ಗೆ ತಟ್ಟಿದ 'ನ್ಯಾನೋ' ವೈರಸ್; ಟಾಟಾಗೆ ಕಂಟಕ!

ಇದಕ್ಕೂ ಮೊದಲು ಮಧ್ಯಮ ವರ್ಗದ ಕುಟುಂಬದ ಕಾರು ಕನಸು ನನಸಾಗಿಸುವ ಮಹತ್ತರ ಯೋಜನೆಯೊಂದಿಗೆ ಅಂದಾಜು ಒಂದು ಲಕ್ಷ ರುಪಾಯಿಗಳ ಬೆಲೆ ಪರಿಧಿಯಲ್ಲಿ ನ್ಯಾನೋ ಕಾರನ್ನು ಬಿಡುಗಡೆಗೊಳಿಸಿತ್ತು. ಆದರೆ ಬದಲಾದ ಮಾರುಕಟ್ಟೆ ಪರಿಸ್ಥಿತಿಯಲ್ಲಿ ರತನ್ ಟಾಟಾ ಅವರ ಕನಸು ನೆರವೇರಲಿಲ್ಲ.

ಸೈರಸ್‌ಗೆ ತಟ್ಟಿದ 'ನ್ಯಾನೋ' ವೈರಸ್; ಟಾಟಾಗೆ ಕಂಟಕ!

ಯಶ ಕಾಣದ ಉತ್ಪನ್ನಗಳನ್ನು ಹೆಚ್ಚಿನ ಹಿನ್ನಡೆಯಾಗದಂತೆ ನೋಡಿಕೊಳ್ಳಲು ಮಾರುಕಟ್ಟೆಯಿಂದ ಹಿಂಪಡೆದುಕೊಳ್ಳುವುದು ಉಚಿತವಾದ ನಿರ್ಧಾರವಾಗಿದೆ. ಆದರೆ ನ್ಯಾನೋ ವಿಚಾರದಲ್ಲಿ ಹಾಗಾಗಲಿಲ್ಲ. ಇದರೊಂದಿಗೆ ಟಾಟಾ ಸಂಸ್ಥೆಯು ಭಾವನಾತ್ಮಕ ನಂಟನ್ನು ಇಟ್ಟಿಕೊಂಡಿತ್ತು. ಪರಿಣಾಮ ಸತತ ವೈಫಲ್ಯದ ನಡುವೆಯೂ ನಷ್ಟಗಳನ್ನೆಲ್ಲ ಸಹಿಸುತ್ತಾ ಮುನ್ನಡೆಸಿಕೊಂಡು ಮುಂದಕ್ಕೆ ಸಾಗಿತ್ತು.

ಸೈರಸ್‌ಗೆ ತಟ್ಟಿದ 'ನ್ಯಾನೋ' ವೈರಸ್; ಟಾಟಾಗೆ ಕಂಟಕ!

ಮಿಸ್ಟ್ರಿ ತಮ್ಮ ಪತ್ರದಲ್ಲಿ ಬಹಿರಂಗಪಡಿಸಿರುವಂತೆಯೇ ಟಾಟಾ ನ್ಯಾನೋ ಯೋಜನೆಯಿಂದಾಗಿ ಟಾಟಾ ಮೋಟಾರ್ಸ್ ಸಂಸ್ಥೆಗೆ ಬರೋಬ್ಬರಿ 1000 ಕೋಟಿ ರುಪಾಯಿಗಳಷ್ಟು ನಷ್ಟವಾಗಿದೆ.

English summary
Cyrus Mistry tears into Tata Group, says Nano should be shut, questions other deals
Story first published: Friday, October 28, 2016, 16:34 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark