ವಿಟಾರಾ ಬ್ರಿಝಾಗೆ ತಕ್ಕ ಎದುರಾಳಿ ಟಾಟಾ ನೆಕ್ಸನ್

Written By:

ಮಾರುತಿ ವಿಟಾರಾ ಬ್ರಿಝಾ ಕಾರಿಗೆ ನಿಕಟ ಪ್ರತಿಸ್ಪರ್ಧಿಯೊಂದು ಸಿದ್ಧಗೊಳ್ಳುತ್ತಿರುವ ಬಗ್ಗೆ ನಾವು ಈಗಾಗಲೇ ವರದಿ ಮಾಡಿರುತ್ತೇವೆ. ಈಗ ದೇಶದ ಅತಿ ದೊಡ್ಡ ಟಾಟಾ ಮೋಟಾರ್ಸ್ ಬಿಡುಗಡೆ ಮಾಡಲು ಸಜ್ಜಾಗುತ್ತಿರುವ ಅತಿ ನೂತನ ಟಾಟಾ ನೆಕ್ಸನ್ ಟೆಸ್ಟಿಂಗ್ ವೇಳೆ ಸಂಪೂರ್ಣವಾಗಿ ಮರೆಮಾಚಿದ ರೂಪದಲ್ಲಿ ಪತ್ತೆ ಹಚ್ಚಲಾಗಿದೆ.

ವಿಟಾರಾ ಬ್ರಿಝಾಗೆ ತಕ್ಕ ಎದುರಾಳಿ ಟಾಟಾ ನೆಕ್ಸನ್

ವಾಹನ ವಿಶ್ಲೇಷಕರ ಪ್ರಕಾರ ಟಾಟಾ ನೆಕ್ಸನ್ ವಿನ್ಯಾಸ ಅತ್ಯಂತ ಪ್ರಭಾವಶಾಲಿ ಎನಿಸಿಕೊಂಡಿದ್ದು, ಮಾರುತಿ ವಿಟಾರಾ ಬ್ರಿಝಾಗೆ ತಕ್ಕ ಎದುರಾಳಿಯಾಗಲಿದೆ.

ವಿಟಾರಾ ಬ್ರಿಝಾಗೆ ತಕ್ಕ ಎದುರಾಳಿ ಟಾಟಾ ನೆಕ್ಸನ್

'ಬೆರ್ರಿ ರೆಡ್' ಎಂಬ ಹೊಸ ಬಣ್ಣದಲ್ಲಿ ಟಾಟಾ ನೆಕ್ಸನ್ ಟೆಸ್ಟಿಂಗ್ ವೇಳೆ ಸೆರೆ ಹಿಡಿಯಲಾಗಿದೆ. ಇದು ಮುಂದಿನ ವರ್ಷ ದ್ವಿತಿಯಾರ್ಧದಲ್ಲಷ್ಟೇ ಬಿಡುಗಡೆಯಾಗಲಿದೆ.

ವಿಟಾರಾ ಬ್ರಿಝಾಗೆ ತಕ್ಕ ಎದುರಾಳಿ ಟಾಟಾ ನೆಕ್ಸನ್

ಟಾಟಾ ನೆಕ್ಸನ್ ಟಾಪ್ ಎಂಡ್ ವೆರಿಯಂಟ್ ನಂತೆ ಭಾಸವಾಗುತ್ತಿದ್ದು, ಪ್ರೊಜೆಕ್ಟರ್ ಹೆಡ್ ಲ್ಯಾಂಪ್, ಸೆರಾಮಿಕ್ ಸೈಡ್ ಫಿನಿಶ್, ಕ್ರಾಂಟ್ರಾಸ್ಟ್ ರೂಫ್, 16 ಇಂಚುಗಳ ಅಲಾಯ್ ಚಕ್ರ, ಎಲ್ ಇಡಿ ಟೈಲ್ ಟೈಟ್, ಎಲ್ ಇಡಿ ಡೇಟೈಮ್ ರನ್ನಿಂಗ್ ಲೈಟ್ಸ್, ಫಾಗ್ ಲ್ಯಾಂಪ್ ಮತ್ತು ಬ್ಲ್ಯಾಕ್ ಫಿನಿಶಿಂಗ್ ಅಗಲವಾದ ಗ್ರಿಲ್ ಇರಲಿದೆ.

ವಿಟಾರಾ ಬ್ರಿಝಾಗೆ ತಕ್ಕ ಎದುರಾಳಿ ಟಾಟಾ ನೆಕ್ಸನ್

ಟಾಟಾ ಎಕ್ಸ್ 1 ತಳಹದಿಯಲ್ಲಿ ನಿರ್ಮಾಣವಾಗಲಿರುವ ಈ ಕ್ರಾಸೋವರ್ ಕಾರು ಪೆಟ್ರೋಲ್ ಹಾಗೂ ಡೀಸೆಲ್ ವೆರಿಯಂಟ್ ಗಳಲ್ಲಿ ಲಭ್ಯವಾಗಲಿದೆ.

ವಿಟಾರಾ ಬ್ರಿಝಾಗೆ ತಕ್ಕ ಎದುರಾಳಿ ಟಾಟಾ ನೆಕ್ಸನ್

ಇದರಲ್ಲಿರುವ 1.5 ಲೀಟರ್ ಫೋರ್ ಸಿಲಿಂಡರ್ ಡೀಸೆಲ್ ಎಂಜಿನ್ 260 ಎನ್ ಎಂ ತಿರುಗುಬಲದಲ್ಲಿ 110 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಹಾಗೆಯೇ ಆರು ಸ್ಪೀಡ್ ಗೇರ್ ಬಾಕ್ಸ್ ಮತ್ತು ಎಎಂಟಿ ಇದರಲ್ಲಿರುತ್ತದೆ.

ವಿಟಾರಾ ಬ್ರಿಝಾಗೆ ತಕ್ಕ ಎದುರಾಳಿ ಟಾಟಾ ನೆಕ್ಸನ್

ಟಾಟಾ ನೆಕ್ಸಾದಲ್ಲಿರುವ ಮಗದೊಂದು 1.2 ಲೀಟರ್ ತ್ರಿ ಸಿಲಿಂಡರ್ ರವೊಟ್ರಾನ್ ಪೆಟ್ರೋಲ್ ಎಂಜಿನ್ ಸಹ ಅತ್ಯುತ್ತಮ ನಿರ್ವಹಣೆಯನ್ನು ಕಾಪಾಡಿಕೊಳ್ಳಲಿದೆ.

ವಿಟಾರಾ ಬ್ರಿಝಾಗೆ ತಕ್ಕ ಎದುರಾಳಿ ಟಾಟಾ ನೆಕ್ಸನ್

ಟಾಟಾ ನೆಕ್ಸಾದಲ್ಲಿರುವುದಕ್ಕೆ ಸಮಾನವಾಗಿ ನೂತನ ಹೆಕ್ಸಾ ಸೂಪರ್ ಡ್ರೈವ್ ಚಾಲನಾ ವಿಧಗಳನ್ನು ಪಡೆಯುವ ಸಾಧ್ಯತೆಯಿದೆ.

ವಿಟಾರಾ ಬ್ರಿಝಾಗೆ ತಕ್ಕ ಎದುರಾಳಿ ಟಾಟಾ ನೆಕ್ಸನ್

3995 ಎಂಎಂ ಉದ್ದ ಹಾಗೂ 200 ಎಂಎಂ ಗ್ರೌಂಡ್ ಕ್ಲಿಯರನ್ಸ್ ಕಾಪಾಡಿಕೊಂಡಿರುವ ಟಾಟಾ ನೆಕ್ಸನ್ ಸಬ್ ಫೋರ್ ಮೀಟರ್ ಕಾಂಪಾಕ್ಟ್ ಸೆಡಾನ್ ವಿಭಾಗದಲ್ಲಿ ಮಾರುತಿ ವಿಟಾರಾ ಬ್ರಿಝಾ ಜೊತೆಗೆ ಫೋರ್ಡ್ ಇಕೊಸ್ಪೋರ್ಟ್ ಮತ್ತು ಮಹೀಂದ್ರ ಟಿಯುವಿ300 ಮಾದರಿಗಳಿಗೆ ಪ್ರತಿಸ್ಪರ್ಧೆಯನ್ನು ಒಡ್ಡಲಿದೆ.

English summary
Tata Nexon Spied Testing With Berry Red Body Colour
Story first published: Friday, October 28, 2016, 17:25 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark