ಟೊಯೊಟಾ ಸಣ್ಣ ಕಾರುಗಳು ಸದ್ಯಕ್ಕೆ ಭಾರತಕ್ಕಿಲ್ಲ

Written By:

ಭಾರತದಲ್ಲಿ ಇಟಿಯೋಸ್ ಹಾಗೂ ಲಿವಾ ಮಾದರಿಗಳು ಭಾರಿ ವೈಫಲ್ಯವನ್ನು ಅನುಭವಿಸಿರುವ ಹಿನ್ನಲೆಯಲ್ಲಿ ಸದ್ಯಕ್ಕಂತೂ ಸಣ್ಣ ಕಾರುಗಳನ್ನು ದೇಶಕ್ಕೆ ತರುವ ಯಾವುದೇ ತರಹದ ಆಲೋಚನೆಯನ್ನು ಜಪಾನ್ ಮೂಲದ ಟೊಯೊಟಾ ಮೋಟಾರು ಕಾರ್ಪೋರೋಷನ್ ಸಂಸ್ಥೆಯು ಹೊಂದಿಲ್ಲ.

To Follow DriveSpark On Facebook, Click The Like Button
ಟೊಯೊಟಾ ಸಣ್ಣ ಕಾರುಗಳು ಸದ್ಯಕ್ಕೆ ಭಾರತಕ್ಕಿಲ್ಲ

ಭಾರತದಲ್ಲಿ ತನ್ನ ನೀತಿಯನ್ನು ಬದಲಾಯಿಸುವ ಸಮಯ ಆಗಮನವಾಗಿದೆ ಎಂಬುದನ್ನು ಟೊಯೊಟಾ ಒಪ್ಪಿಕೊಂಡಿದೆ. ಈ ಹಿಂದೆ 2010ರಲ್ಲಿ ಮಾರುಕಟ್ಟೆಗೆ ಎಟಿಯೋಸ್ ಕಾರುಗಳನ್ನು ಪರಿಚಯಿಸಿದ್ದರೂ ಹಿನ್ನಡೆಯನ್ನು ಅನುಭವಿಸಿತ್ತು.

ಟೊಯೊಟಾ ಸಣ್ಣ ಕಾರುಗಳು ಸದ್ಯಕ್ಕೆ ಭಾರತಕ್ಕಿಲ್ಲ

ಪ್ರಮುಖವಾಗಿಯೂ ಮಾರುತಿ ಮತ್ತು ಹ್ಯುಂಡೈ ಕಾರುಗಳಿಗೆ ಪ್ರತಿಸ್ಪರ್ಧಿಯಾಗಿ ಎಟಿಯೋಸ್ ಶ್ರೇಣಿಯ ಕಾರುಗಳನ್ನು ಬಿಡುಗಡೆಗೊಳಿಸಲಾಗಿತ್ತು. ಆದರೆ ವಾಹನ ಪ್ರೇಮಿಗಳ ಹೃದಯ ಗೆಲ್ಲುವಲ್ಲಿ ವಿಫಲವಾಗಿತ್ತು.

ಟೊಯೊಟಾ ಸಣ್ಣ ಕಾರುಗಳು ಸದ್ಯಕ್ಕೆ ಭಾರತಕ್ಕಿಲ್ಲ

ಭಾರತ ವಾಹನ ಮಾರುಕಟ್ಟೆಯಲ್ಲಿ ಶೇಕಡಾ 45ರಷ್ಟು ಮಾರಾಟವನ್ನು ಸಣ್ಣ ಕಾರುಗಳು ವಶಪಡಿಸಿಕೊಂಡಿದೆ. ಆದರೂ ಇದು ನಮ್ಮ ಮೊದಲ ಆದ್ಯತೆಯಲ್ಲ ಎಂಬುದನ್ನು ಟೊಯೊಟಾ ಸ್ಪಷ್ಟಪಡಿಸಿದೆ.

ಟೊಯೊಟಾ ಸಣ್ಣ ಕಾರುಗಳು ಸದ್ಯಕ್ಕೆ ಭಾರತಕ್ಕಿಲ್ಲ

ದೇಶದಲ್ಲಿ ಟೊಯೊಟಾ ಮಾರುಕಟ್ಟೆ ಶೇರು ಶೇಕಡಾ 5ರಷ್ಟಾಗಿದೆ. ಇನ್ನೊಂದೆಡೆ ಜಪಾನ್ ಮೂಲದ್ದೇ ಆಗಿರುವ ಸುಜುಕಿ, ದೇಶದಲ್ಲಿ ಮಾರುತಿಯ ನೆರವಿನೊಂದಿಗೆ ಶೇಕಡಾ 50ರಷ್ಟು ಮಾರಾಟ ವಲಯವನ್ನು ವಶಪಡಿಸಿಕೊಂಡಿದೆ.

ಟೊಯೊಟಾ ಸಣ್ಣ ಕಾರುಗಳು ಸದ್ಯಕ್ಕೆ ಭಾರತಕ್ಕಿಲ್ಲ

ಭಾರತ ಕೇಂದ್ರಿತ ಕಾರು ಅಭಿವೃದ್ಧಿಪಡಿಸುವುದು ಅತ್ಯಂತ ಕಷ್ಟಕರವಾದ ವಿಚಾರವಾಗಿದೆ ಎಂಬುದನ್ನು ಟೊಯೊಟಾ ಒಪ್ಪಿಕೊಂಡಿದೆ. ಹಾಗಿದ್ದರೂ 1999ರಿಂದಲೇ ಮಾರುಕಟ್ಟೆಯಲ್ಲಿರುವ ಯ್ಯಾರಿಸ್ ಸಬ್ ಕಾಂಪಾಕ್ಟ್ ಕಾರು ಬಿಡುಗಡೆ ಮಾಡುವ ಯೋಚನೆಯಲ್ಲಿದೆ. ಇದನ್ನು ಭಾರತ ರಸ್ತೆ ಪರಿಸ್ಥಿತಿಗೆ ಅನುಗುಣವಾಗಿ ಬದಲಾಯಿಸಬೇಕಿದೆ.

ಟೊಯೊಟಾ ಸಣ್ಣ ಕಾರುಗಳು ಸದ್ಯಕ್ಕೆ ಭಾರತಕ್ಕಿಲ್ಲ

ಭಾರತದಲ್ಲಿ ಸುರಕ್ಷತೆ ಮತ್ತು ಎಮಿಷನ್ ನಿಯಾಮಾವಳಿಗಳು ಸಡಿಲಗೊಳ್ಳುವ ವರೆಗೂ ಹೆಚ್ಚಿನ ವಾಹನಗಳನ್ನು ಬಿಡುಗಡೆ ಮಾಡಲು ಟೊಯೊಟಾ ಉತ್ಸುಕತೆ ತೋರುತ್ತಿಲ್ಲ.

ಟೊಯೊಟಾ ಸಣ್ಣ ಕಾರುಗಳು ಸದ್ಯಕ್ಕೆ ಭಾರತಕ್ಕಿಲ್ಲ

ಸದ್ಯ ಎಟಿಯೋಸ್, ಲಿವಾ, ಆಲ್ಟೀಸ್, ಇನ್ನೋವಾ ಮತ್ತು ಪಾರ್ಚ್ಯುನರ್ ಹೈಬ್ರಿಡ್ ಕಾರುಗಳನ್ನು ಬಿಡುಗಡೆ ಮಾಡಲು ಟೊಯೊಟಾ ಇರಾದೆಯನ್ನು ಹೊಂದಿದೆ. ಈ ಪೈಕಿ ಇನ್ನೋವಾ ಹಾಗೂ ಫಾರ್ಚ್ಯುನರ್ ಮಾದರಿಗಳು ಮೊದಲಿಗೆ ಹೈಬ್ರಿಡ್ ತಳಿಯನ್ನು ಪಡೆಯಲಿದೆ.

English summary
Toyota India Ignores Small Car Segment For Now
Story first published: Saturday, December 3, 2016, 17:12 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark