ಸಿಟಿ 100 ಮತ್ತು ಪ್ಲಾಟಿನಾ ಬೈಕುಗಳ ಹೊಸ ರೂಪಾಂತರ ಬಿಡುಗಡೆ
ಭಾರತೀಯ ದ್ವಿಚಕ್ರ ಉತ್ಪಾದಕ ಸಂಸ್ಥೆಯಾದ ಬಜಾಜ್ ಆಟೊ ಭಾರತದಲ್ಲಿ ಸಿಟಿ 100 ಮತ್ತು ಪ್ಲಾಟಿನಾ ಬೈಕುಗಳ ಹೊಸ ರೂಪಾಂತರವನ್ನು ಬಿಡುಗಡೆಗೊಳಿಸಿದೆ.
ಭಾರತೀಯ ದ್ವಿಚಕ್ರ ಉತ್ಪಾದಕ ಸಂಸ್ಥೆಯಾದ ಬಜಾಜ್ ಆಟೊ ಭಾರತದಲ್ಲಿ ಸಿಟಿ 100 ಮತ್ತು ಪ್ಲಾಟಿನಾ ಬೈಕುಗಳ ಹೊಸ ರೂಪಾಂತರವನ್ನು ಬಿಡುಗಡೆಗೊಳಿಸಿದೆ.

ಪ್ರವೇಶ ಮಟ್ಟದ ಪ್ಲಾಟಿನಾ ಬೈಕಿನಲ್ಲಿ ಮಿಶ್ರಲೋಹದ ಚಕ್ರಗಳ ವಿರುದ್ಧವಾಗಿ ನವೀನ ಇಎಸ್ ಸ್ಪೋಕ್ ಚಕ್ರಗಳನ್ನು ನೀಡಲಾಗಿದೆ. ಇಎಸ್ ಸ್ಪೋಕ್ ಚಕ್ರಗಳನ್ನು ಪಡೆದುಕೊಂಡಿರುವ ಬೈಕು ರೂ. 42,650(ಎಕ್ಸ್ ಷೋರೂಂ ಭಾರತ) ಬೆಲೆ ಹೊಂದಿರಲಿದೆ.

ಬಜಾಜ್ ಪ್ಲಾಟಿನಾ 102 ಸಿಸಿ ಎಂಜಿನ್ ಹೊಂದಿದ್ದು, 8.6 ಏನ್‌ಎಂ ತಿರುಗುಬಲದಲ್ಲಿ 8.1 ರಷ್ಟು ಬಿಎಚ್‌ಪಿ ಉತ್ಪಾದಿಸುತ್ತದೆ. ಈ ಬೈಕಿನಲ್ಲಿ 4 ಸ್ಪೀಡ್ ಗೇರ್‌ಬಾಕ್ಸ್ ಇರಿಸಲಾಗಿದೆ.

ಉನ್ನತ ಮಟ್ಟದ ಸಿಟಿ 100 ಬೈಕಿನಲ್ಲಿ ಇಎಸ್ ಅಲಾಯ್ ಚಕ್ರಗಳನ್ನು ನೀಡಲಾಗಿದೆ. ಈ ಬೈಕ್ ಬಜಾಜ್ ಕುಟುಂಬದ ಇತರೆ ಮೋಟರ್ ಸೈಕಲ್‌ಗಳಲ್ಲಿ ಇರುವಂತೆ ಮಿಶ್ರಲೋಹದ ಚಕ್ರಗಳು ಪಡೆಯುತ್ತದೆ.

ಈ ಸಿಟಿ 100 ಬೈಕಿನಲ್ಲಿ ಎಲೆಕ್ಟ್ರಿಕ್ ಸ್ಟಾರ್ಟ್ ಆಯ್ಕೆ ನೀಡಲಾಗಿದೆ ಮತ್ತು ಇಎಸ್ ಅಲಾಯ್ ಚಕ್ರಗಳನ್ನು ಪಡೆದುಕೊಂಡಿರುವ ಬೈಕು ರೂ. 41,997(ಎಕ್ಸ್ ಷೋರೂಂ ಭಾರತ) ಬೆಲೆ ಹೊಂದಿರಲಿದೆ.

ಸಿಟಿ 100 ಬೈಕ್ 99.3 ಸಿಸಿ ಎಂಜಿನ್ ಬೈಕ್, 8.05 ಏನ್‌ಎಂ ತಿರುಗುಬಲದಲ್ಲಿ ಗರಿಷ್ಠ 8.1 ರಷ್ಟು ಟಾರ್ಕ್ ಉತ್ಪಾದನೆ ಮಾಡಲಿದೆ ಮತ್ತು 4 ಸ್ಪೀಡ್ ಗೇರ್‌ಬಾಕ್ಸ್ ಅಳವಡಿಸಲಾಗಿದೆ. ಇತರ ರೂಪಾಂತರಗಳಿಗೆ ಹೋಲಿಸಿದರೆ ಸಿಟಿ 100 ಇಎಸ್ ಅಲಾಯ್ ಬೈಕ್ ರೂ. 3,300 ಬೆಲೆ ಹೆಚ್ಚಿಗೆ ಇರಲಿದೆ.

ಬಜಾಜ್ ಪ್ಲಾಟಿನಾ ಮತ್ತು ಸಿಟಿ 100 ಬೈಕುಗಳು ಕಂಪನಿಯ ಉತ್ತಮ ಮಾರಾಟವಾಗುವ ಪ್ರವೇಶ ಮಟ್ಟದ ಮೋಟಾರ್ ಸೈಕಲ್‌ಗಳಾಗಿದ್ದು, ಬಜಾಜ್ ಈ ಬೈಕುಗಳಲ್ಲಿ ಹೊಸ ಆಯ್ಕೆಗಳನ್ನು ನೀಡಿ ಗ್ರಾಹಕರನ್ನು ಮತ್ತಷ್ಟು ಸೆಳೆಯಲು ಉದ್ದೇಶಿಸಿದೆ.


Click it and Unblock the Notifications








