ಸ್ಪಾಟ್ ಟೆಸ್ಟಿಂಗ್ ನಡೆಸಿದ ಸೂಪರ್ ಗ್ರೇಟ್ ಫ್ಯೂಸೊ ಟ್ರಕ್‌

Written By:

ಜರ್ಮನಿಯ ಡೈಮ್ಲರ್ ಎಜಿ ಅಧೀನತೆಯಲ್ಲಿರುವ ಜಪಾನ್ ಮೂಲದ ಮಿಟ್ಸುಬಿಸಿ ಫ್ಯೂಸೊ ಟ್ರಕ್ ಆಂಡ್ ಬಸ್ ಕಾರ್ಪೋರೇಷನ್ ಸಂಸ್ಥೆಯು ಭಾರತದಲ್ಲಿ ನ್ಯೂ ಜನರೇಷನ್ ಸೂಪರ್ ಗ್ರೇಟ್ ಟ್ರಕ್‌ಗಳನ್ನು ಬಿಡುಗಡೆ ಮಾಡುತ್ತಿದ್ದು, ಇದಕ್ಕೂ ಮುನ್ನ ಸ್ಪಾಟ್ ಟೆಸ್ಟಿಂಗ್ ನಡೆಸುತ್ತಿದೆ.

To Follow DriveSpark On Facebook, Click The Like Button
ಸ್ಪಾಟ್ ಟೆಸ್ಟಿಂಗ್ ನಡೆಸಿದ ಸೂಪರ್ ಗ್ರೇಟ್ ಫ್ಯೂಸೊ ಟ್ರಕ್‌

ಈ ಮಧ್ಯೆ ತಮಿಳುನಾಡು ಪಾಸಿಂಗ್ ಹೊಂದಿರುವ ಸೂಪರ್ ಗ್ರೇಟ್ ಫ್ಯೂಸೊ ಟ್ರಕ್‌‌ವೊಂದು‌ ಹೊಸೂರು ಬಳಿ ಕಾಣಿಸಿಕೊಂಡಿದ್ದು, ನ್ಯೂ ಜನರೇಷನ್ ಟೆಕ್ನಾಲಜಿ ಪ್ರೇರಿತ ಅಂಶಗಳನ್ನು ಹೊಸ ಮಾದರಿಯ ಫ್ಯೂಸೊ ಟ್ರಕ್‌ನಲ್ಲಿ ಪರಿಚಯಿಸಲಾಗುತ್ತಿದೆ.

ಸ್ಪಾಟ್ ಟೆಸ್ಟಿಂಗ್ ನಡೆಸಿದ ಸೂಪರ್ ಗ್ರೇಟ್ ಫ್ಯೂಸೊ ಟ್ರಕ್‌

ಸೂಪರ್ ಗ್ರೇಟ್ ಫ್ಯೂಸೊ ಟ್ರಕ್‌‌‌ಗಳು ಡಬಲ್ ರಿರ್ ಚಕ್ರಗಳನ್ನು ಹೊಂದಿದ್ದು, ಭಾರೀ ಗಾತ್ರದ ಸರಕು ಸೇವೆಗಳಿಗೆ ಅನುಕೂಲಕರವಾಗುವಂತೆ ಹೊಸ ಉತ್ಪನ್ನಗಳನ್ನು ಮಿಟ್ಸುಬಿಸಿ ಫ್ಯೂಸೊ ಟ್ರಕ್ ಆಂಡ್ ಬಸ್ ಕಾರ್ಪೋರೇಷನ್ ಸಂಸ್ಥೆಯು ಅಭಿವೃದ್ಧಿಗೊಳಿಸಿದೆ.

ಸ್ಪಾಟ್ ಟೆಸ್ಟಿಂಗ್ ನಡೆಸಿದ ಸೂಪರ್ ಗ್ರೇಟ್ ಫ್ಯೂಸೊ ಟ್ರಕ್‌

ಈಗಾಗಲೇ ಮಿಟ್ಸುಬಿಸಿ ಫ್ಯೂಸೊ ಟ್ರಕ್ ಆಂಡ್ ಬಸ್ ಕಾರ್ಪೋರೇಷನ್ ಸಂಸ್ಥೆಯು ಜಪಾನ್‌ ಮಾರುಕಟ್ಟೆಯಲ್ಲಿ ಸೂಪರ್ ಗ್ರೇಟ್ ಫ್ಯೂಸೊ ಟ್ರಕ್‌ ಬಿಡುಗಡೆಗೊಳಿಸಿದ್ದು, ಸದ್ಯ ಭಾರತದಲ್ಲೂ ಬಿಡುಗಡೆಗೊಳಿಸುವ ನಿಟ್ಟಿನಲ್ಲಿ ಹೊಸ ಮಾದರಿಗಳನ್ನು ವಿನ್ಯಾಸಗೊಳಿಸುತ್ತಿದೆ.

ಸ್ಪಾಟ್ ಟೆಸ್ಟಿಂಗ್ ನಡೆಸಿದ ಸೂಪರ್ ಗ್ರೇಟ್ ಫ್ಯೂಸೊ ಟ್ರಕ್‌

ಜಪಾನ್ ಬಿಡುಗಡೆಯಾಗಿರುವ ಸೂಪರ್ ಗ್ರೇಟ್ ಫ್ಯೂಸೊ ಟ್ರಕ್‌ ಮಾದರಿಯೂ 10.7-ಲೀಟರ್ ಸಿಕ್ಸ್ ಸಿಲಿಂಡರ್ ಡೀಸೆಲ್ ಎಂಜಿನ್ ಹೊಂದಿದ್ದು, 12-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್, ಹೊಂದಿವೆ.

ಸ್ಪಾಟ್ ಟೆಸ್ಟಿಂಗ್ ನಡೆಸಿದ ಸೂಪರ್ ಗ್ರೇಟ್ ಫ್ಯೂಸೊ ಟ್ರಕ್‌

ಇನ್ನು ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಡೈಮ್ಲರ್ ಸಂಸ್ಥೆಯೇ ಫ್ಯೂಸೊ ಟ್ರಕ್‌ಗಳ ಉತ್ಪಾದನೆ ಉಸ್ತುವರಿ ವಹಿಸಿಕೊಂಡಿರುತ್ತದೆ. ಆದ್ರೆ ಇದೀಗ ಭಾರತದಲ್ಲಿ ಫ್ಯೂಸೊ ಬಿಡುಗಡೆಯಾಗುತ್ತಿರುವ ಹಿನ್ನೆಲೆ ಭಾರತ್ ಬೆಂಝ್ ಸಂಸ್ಥೆಯು ಹೊಸ ಟ್ರಕ್ ಬಿಡುಗಡೆಯ ಹೊಣೆ ಹೊತ್ತಿದೆ.

ಸ್ಪಾಟ್ ಟೆಸ್ಟಿಂಗ್ ನಡೆಸಿದ ಸೂಪರ್ ಗ್ರೇಟ್ ಫ್ಯೂಸೊ ಟ್ರಕ್‌

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಉತ್ತಮ ಕಾರ್ಯಕ್ಷಮತೆ ಟ್ರಕ್ ಮಾದರಿಗಳಿಗೆ ಭಾರತದಲ್ಲಿ ಭಾರೀ ಬೇಡಿಕೆಯಿದ್ದು, ಈ ನಿಟ್ಟಿನಲ್ಲಿ ಸೂಪರ್ ಗ್ರೇಟ್ ಫ್ಯೂಸೊ ಟ್ರಕ್‌‌ ಬಿಡುಗಡೆಯಾಗುತ್ತಿರುವುದು ಭಾರೀ ಗಾತ್ರದ ಸರಕು ಸಾಗಾಟ ಪ್ರಕ್ರಿಯೆಗಳಿಗೆ ಸಹಕಾರಿಯಾಗಲಿವೆ.

English summary
Read in Kannada about Fuso Super Great Truck Spotted Testing In India.
Story first published: Friday, July 21, 2017, 18:42 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark