ಭಾರತದಲ್ಲಿ ಎಲೆಕ್ಟ್ರೊಮೊಬಿಲಿಟಿ ಪರಿಚಯಕ್ಕೆ ಮುಂದಾದ ಬಾಷ್‌ ಸಂಸ್ಥೆ

Written By:

ಭಾರತದಲ್ಲಿ ಇರುವಂತಹ 40ಕ್ಕೂ ಹೆಚ್ಚು ಭಾರತೀಯ ನಗರಗಳು ಲಕ್ಷಾಂತರ ಮಂದಿಗೆ ಆಸರೆಯಾಗಿದ್ದು, ಇಂತಹ ನಗರ ಪ್ರದೇಶದಲ್ಲಿ ಮೊಬಿಲಿಟಿ ಅಗತ್ಯತೆಗಳು ಹೆಚ್ಚಿದ್ದು, ಬಾಷ್ ಎಲೆಕ್ಟ್ರಿಫಿಕೇಷನ್ ಭಾರತದ ಭವಿಷ್ಯದ ಬೆಳವಣಿಗೆ ಎಂದು ಅಂದಾಜಿಸಿದೆ.

ಭಾರತದಲ್ಲಿ ಎಲೆಕ್ಟ್ರೊಮೊಬಿಲಿಟಿ ಪರಿಚಯಕ್ಕೆ ಮುಂದಾದ ಬಾಷ್‌ ಸಂಸ್ಥೆ

ಬಾಷ್ ಕಂಪನಿ ಸ್ಥಳೀಯ ಮಾರುಕಟ್ಟೆಗೆ ಎಲೆಕ್ಟ್ರಿಫೈಡ್ ಸಲ್ಯೂಷನ್ಸ್ ಒದಗಿಸಲು ಸಜ್ಜಾಗಿದ್ದು, ಸಣ್ಣ ವಾಹನ ಮಾರುಕಟ್ಟೆ ಬೃಹತ್ ಎಲೆಕ್ಟ್ರಿಫಿಕೇಷನ್ ವರ್ಗಾಂತರಕ್ಕೆ ಸಾಕ್ಷಿಯಾಗಲಿದೆ. "ನಗರವಾಸಿಗಳು ಸರಳ ಮತ್ತು ಕೈಗೆಟಕುವ ಪರ್ಯಾಯ ಹೆಜ್ಜೆಗಳನ್ನು ನೋಡುತ್ತಿದ್ದಾರೆ" ಎಂದು ಬಾಷ್ ಸಮೂಹದ ಏಷ್ಯಾ ಫೆಸಿಫಿಕ್ ಆಡಳಿತ ಮಂಡಳಿ ಸದಸ್ಯ ಪೀಟರ್ ಟೈರೊಲರ್ ಹೇಳಿದ್ದಾರೆ.

ಭಾರತದಲ್ಲಿ ಎಲೆಕ್ಟ್ರೊಮೊಬಿಲಿಟಿ ಪರಿಚಯಕ್ಕೆ ಮುಂದಾದ ಬಾಷ್‌ ಸಂಸ್ಥೆ

ಕಂಪನಿಯ ಎಲೆಕ್ಟ್ರಿಫೈಡ್ ಸಲ್ಯೂಷನ್ಸ್ ವಿಭಾಗವು ಭಾರತದ ವೈಯಕ್ತಿಕ ಮೊಬಿಲಿಟಿ ಅಗತ್ಯತೆಗಳನ್ನು ಪರಿಹರಿಸುವ ಗುರಿ ಹೊಂದಿದೆ. ಎಲೆಕ್ಟ್ರೊಮೊಬಿಲಿಟಿ ಹೊರತಾಗಿ ದೀರ್ಘಾವಧಿಯಲ್ಲಿ ಇಂಟರ್‌ನಲ್ ಕಂಬ್ಯುಶ್ಚನ್ಸ್ ಭವಿಷ್ಯದಲ್ಲಿ ಪ್ರಮುಖ ಪಾತ್ರ ವಹಿಸಲಿದೆ.

ಭಾರತದಲ್ಲಿ ಎಲೆಕ್ಟ್ರೊಮೊಬಿಲಿಟಿ ಪರಿಚಯಕ್ಕೆ ಮುಂದಾದ ಬಾಷ್‌ ಸಂಸ್ಥೆ

ಇನ್ನು ಸಂಸ್ಥೆಯು ಭಾರತೀಯ ವಿತರಕ ಮೂಲವಾದ ಎಲೆಕ್ಟ್ರೊಮೊಬಿಲಿಟಿಗೆ ಅಂಟಿಕೊಂಡಿದ್ದು, "ಬಾಷ್‌ನಿಂದ ನೀಡುತ್ತಿರುವ ಈಗಿನ ಪವರ್‌ಟ್ರೈನ್‌ನೊಂದಿಗೆ ಬಾಷ್ ಇಂಡಿಯಾ ಅಲ್ಲಿನ ಅಂತರ ಕಡಿಮೆ ಮಾಡುವ ಗುರಿ ಹೊಂದಿದೆ" ಎಂದು ಟೈರೊಲರ್ ಹೇಳಿದರು.

ಭಾರತದಲ್ಲಿ ಎಲೆಕ್ಟ್ರೊಮೊಬಿಲಿಟಿ ಪರಿಚಯಕ್ಕೆ ಮುಂದಾದ ಬಾಷ್‌ ಸಂಸ್ಥೆ

ಬಾಷ್ ಇಂಡಿಯಾ ಎಲೆಕ್ಟ್ರೊಮೊಬಿಲಿಟಿಯಲ್ಲಿ ಸ್ಥಳೀಯ ಗ್ರಾಹಕರಿಗೆ ಸಮಗ್ರ ಪರಿಹಾರ ಒದಗಿಸಲಿದೆ. ಪ್ರಸ್ತುತ ಕಂಪನಿ 2014 ನಂತರ ಸರಣಿ ಉತ್ಪನ್ನಗಳನ್ನು ನೀಡುವ ಆಲೋಚನೆಯಲ್ಲಿದೆ.

ಭಾರತದಲ್ಲಿ ಎಲೆಕ್ಟ್ರೊಮೊಬಿಲಿಟಿ ಪರಿಚಯಕ್ಕೆ ಮುಂದಾದ ಬಾಷ್‌ ಸಂಸ್ಥೆ

ಭಾರತದಲ್ಲಿ 2020ರ ವೇಳೆಗೆ ಎಲ್ಲ ಎಲೆಕ್ಟ್ರಿಕ್ ಉತ್ಪನ್ನ ಹೊಂದುವ ಕೇಂದ್ರ ಸರ್ಕಾರದ ಆಲೋಚನೆಯಂತೆ ಬಾಷ್ ಹೈಬ್ರಿಡ್ ಮತ್ತು ಎಲೆಕ್ಟ್ರಿಕ್ ವಾಹನಗಳ ಅಭಿವೃದ್ಧಿ ತ್ವರಿತಗೊಳಿಸುತ್ತಿದೆ. ಇದಕ್ಕೆ ಅಗತ್ಯ ಎಲ್ಲ ಪರಿಹಾರಗಳನ್ನು ಕಂಪನಿ ಒದಗಿಸಲಿದೆ. ಮೋಟಾರ್, ಕಂಟ್ರೋಲ್ ಯೂನಿಟ್, ಬ್ಯಾಟರಿ, ಚಾರ್ಜರ್, ಡಿಸ್‌ಪ್ಲೆ ಮತ್ತು ಆಪ್ ಸೇರಿದಂತೆ ಬಾಷ್ ಎಲ್ಲ ಬಗೆಯ ಎಲೆಕ್ಟ್ರಿಫಿಕೇಷನ್ ವ್ಯವಸ್ಥೆಯನ್ನು ಅಭಿವೃದ್ಧಿಗೊಳಿಸಿದೆ.

ಭಾರತದಲ್ಲಿ ಎಲೆಕ್ಟ್ರೊಮೊಬಿಲಿಟಿ ಪರಿಚಯಕ್ಕೆ ಮುಂದಾದ ಬಾಷ್‌ ಸಂಸ್ಥೆ

ಸ್ಥಳೀಯತೆಯ ತನ್ನ ಸ್ಟಾಟಜಿಯಂತೆ ಬಾಷ್ ಭಾರತಕ್ಕೆ ಸಮಗ್ರ ಎಲೆಕ್ಟ್ರಿಫಿಕೇಷನ್ ವ್ಯವಸ್ಥೆಯನ್ನು ರೂಪಿಸುವ ಗುರಿಯನ್ನು ಹೊಂದಿದೆ. ಇದು ಭಾರತದ ಪರಿಸರ ಸ್ಥಿತಿ ಮತ್ತು ಪವರ್‌ಟ್ರೈನ್ ಅಗತ್ಯತೆಗಳಿಗೆ ಮಾನದಂಡವಾಗಲಿದೆ.

ಭಾರತದಲ್ಲಿ ಎಲೆಕ್ಟ್ರೊಮೊಬಿಲಿಟಿ ಪರಿಚಯಕ್ಕೆ ಮುಂದಾದ ಬಾಷ್‌ ಸಂಸ್ಥೆ

ನಗರದ ಯುವ ಜನತೆ ಸರಳ ಮತ್ತು ಒತ್ತಡ ರಹಿತ ಮೊಬಿಲಿಟಿಯನ್ನು ನೋಡುತ್ತಿದೆ. ಹೀಗಾಗಿ ಮುಂಬರುವ ವರ್ಷದಲ್ಲಿ ಎಲೆಕ್ಟ್ರೊಮೊಬಿಲಿಟಿ ಹೆಚ್ಚಿನ ಪ್ರಾತಿನಿಧ್ಯ ಪಡೆಯಲಿದೆ. ಇದನ್ನು ಮನಸಿನಲ್ಲಿಟ್ಟುಕೊಂಡು ಬಾಷ್ ಭಾರತದಲ್ಲಿ ಎಲೆಕ್ಟ್ರೊಮೊಬಿಲಿಟಿ ಭವಿಷ್ಯ ಹೆಚ್ಚಲಿದೆ ಎಂದು ಅಂದಾಜಿಸಿದೆ.

Read more on ಬಾಷ್ bosch
English summary
Bosch is a German auto component manufacturer, they provided various components across the globe. Now this company started providing Electro mobility facility in Inida
Story first published: Saturday, September 2, 2017, 12:32 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark