ಶಾಲಾ ವಾಹನಗಳಿಗೆ ಕಠಿಣ ಮಾರ್ಗಸೂಚಿ ತಂದ ಸಿಬಿಎಸ್‌ಇ- ಈಗಲಾದ್ರೂ ಆಗ್ತಾರಾ ಮಕ್ಕಳು ಸೇಫ್..?

Written By:

ಕೇಂದ್ರಿಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್ಇ) ಶಾಲಾ ವಾಹನಗಳಿಗೆ ಕಠಿಣ ಮಾರ್ಗಸೂಚಿಗಳನ್ನು ಬಿಡುಗಡೆಗೊಳಿಸಿದೆ. ಒಂದು ವೇಳೆ ಕಠಿಣ ಮಾರ್ಗಸೂಚಿಗಳನ್ನು ಪಾಲಿಸದೇ ಇದ್ದ ಪಕ್ಷದಲ್ಲಿ ಆಯಾ ಶಾಲಾ ಆಡಳಿತ ಮಂಡಳಿಗಳನ್ನೇ ಹೊಣೆಯಾಗಿ ಮಾಡಲಾಗಿದ್ದು, ಮಕ್ಕಳ ಸುರಕ್ಷತೆಗೆ  ಹೆಚ್ಚಿನ ಒತ್ತು ನೀಡಲಾಗಿದೆ.

ಶಾಲಾ ವಾಹನಗಳಿಗೆ ಕಠಿಣ ಮಾರ್ಗಸೂಚಿ ತಂದ ಸಿಬಿಎಸ್‌ಇ- ಈಗಲಾದ್ರೂ ಆಗ್ತಾರಾ ಮಕ್ಕಳು ಸೇಫ್..?

ಮಕ್ಕಳಿಗೆ ಶಾಲಾವಾಹನದಲ್ಲಿ ಹೆಚ್ಚಿನ ಸುರಕ್ಷೆ ಇಲ್ಲದೇ ಇರುವುದನ್ನು ಮನಗಂಡಿದ್ದ ಸಿಬಿಎಸ್ಇ, ಈ ಹಿಂದೆಯೂ ಕೆಲವು ಕಠಿಣ ನಿಯಮಗಳನ್ನು ಜಾರಿಗೊಳಿಸಿತ್ತು. ಆದ್ರೆ ಕೆಲವು ವಾಹನ ಚಾಲಕರು ಮತ್ತು ಮಾಲೀಕರು ನಿಯಮಗಳನ್ನು ಗಾಳಿತೂರಿ ಅವಘಡಕ್ಕೆ ಕಾರಣವಾಗಿದ್ದರು.

ಶಾಲಾ ವಾಹನಗಳಿಗೆ ಕಠಿಣ ಮಾರ್ಗಸೂಚಿ ತಂದ ಸಿಬಿಎಸ್‌ಇ- ಈಗಲಾದ್ರೂ ಆಗ್ತಾರಾ ಮಕ್ಕಳು ಸೇಫ್..?

ಸದ್ಯದ ಪರಿಸ್ಥಿತಿ ಮನಗಂಡಿರುವ ಸಿಬಿಎಸ್‌ಇ ಇದೀಗ ಮತ್ತಷ್ಟು ಕಠಿಣ ನಿಯಮಗಳನ್ನು ಜಾರಿಗೊಳಿಸಿದ್ದು, ಶಾಲಾ ಆಡಳಿತ ಮಂಡಳಿಗಳನ್ನೇ ಆಗುವ ಅನಾಹುತಗಳಿಗೆ ಹೊಣೆಯಾಗಿ ಮಾಡಲಾಗಿದೆ. ಒಂದು ವೇಳೆ ನಿಯಮ ಪಾಲನೆ ಮಾಡದೇ ಇದ್ದ ಪಕ್ಷದಲ್ಲಿ ಭಾರೀ ದಂಡದ ಎಚ್ಚರಿಕೆ ನೀಡಲಾಗಿದ್ದು, ಹೊಸ ಮಾರ್ಗಸೂಚಿಗಳು ಕೆಳಗಿನಂತಿವೆ.

ಶಾಲಾ ವಾಹನಗಳಿಗೆ ಕಠಿಣ ಮಾರ್ಗಸೂಚಿ ತಂದ ಸಿಬಿಎಸ್‌ಇ- ಈಗಲಾದ್ರೂ ಆಗ್ತಾರಾ ಮಕ್ಕಳು ಸೇಫ್..?

ಪ್ರತಿಯೊಂದು ಶಾಲಾವಾಹನವು ಹಳದಿ ಬಣ್ಣವನ್ನೇ ಹೊಂದಿರಬೇಕು ಎಂದು ಸೂಚಿಸಿರುವ ಸಿಬಿಎಸ್ಇ, ಬಸ್ ಮುಂಭಾಗ ಮತ್ತು ಹಿಂಭಾಗದಲ್ಲಿ "ಶಾಲಾ ವಾಹನ" ಎಂಬ ನಾಮಫಲಕ ಅಳವಡಿಕೆ ಕಡ್ಡಾಯ ಮಾಡಿದೆ. ಒಂದು ವೇಳೆಹೆಚ್ಚುವರಿ ಬಸ್ ಉಪಯೋಗಿಸಿಕೊಂಡಿದ್ದರೆ ಬಸ್ ಮುಂಭಾಗ ಮತ್ತು ಹಿಂಭಾಗದಲ್ಲಿ " ಆನ್ ಸ್ಕೂಲ್ ಡ್ಯೂಟಿ" ಎಂಬ ನಾಮಫಲಕ ಅಳವಡಿಕೆಗೆ ಸೂಚನೆ ನೀಡಿದೆ.

ಶಾಲಾ ವಾಹನಗಳಿಗೆ ಕಠಿಣ ಮಾರ್ಗಸೂಚಿ ತಂದ ಸಿಬಿಎಸ್‌ಇ- ಈಗಲಾದ್ರೂ ಆಗ್ತಾರಾ ಮಕ್ಕಳು ಸೇಫ್..?

ಶಾಲಾವಾಹನಗಳ ಅತಿ ವೇಗದ ಸವಾರಿಗೆ ಬ್ರೇಕ್ ಹಾಕಿರುವ ಸಿಬಿಎಸ್ಇ, ಪ್ರತಿ ಗಂಟೆಗೆ 40 ಕಿಲೋ ಮೀಟರ್ ವೇಗವನ್ನು ಸೀಮಿತಗೊಳಿಸಿದೆ. ಜೊತೆಗೆ ಶಾಲಾ ವಾಹನದಲ್ಲಿ ಸಿಸಿಟಿವಿ ಹಾಗೂ ಜಿಪಿಎಸ್ ಅಳವಡಿಕೆ ಕಡ್ಡಾಯ ಮಾಡಲಾಗಿದ್ದು, ಇದರ ಹೊಣೆಯನ್ನು ಆಯಾ ವಾಹನಗಳ ಮಾಲೀಕರಿಗೆ ವಹಿಸಲಾಗಿದೆ.

ಶಾಲಾ ವಾಹನಗಳಿಗೆ ಕಠಿಣ ಮಾರ್ಗಸೂಚಿ ತಂದ ಸಿಬಿಎಸ್‌ಇ- ಈಗಲಾದ್ರೂ ಆಗ್ತಾರಾ ಮಕ್ಕಳು ಸೇಫ್..?

ಇನ್ನು ವಾಹನದ ಒಳಾಂಗಣ ವಿನ್ಯಾಸದಲ್ಲೂ ಕೆಲವು ನಿಯಮಗಳನ್ನು ಜಾರಿ ತರವಾಗಿದೆ. ಇದರಿಂದಾಗಿ ಪ್ರತಿ ಶಾಲಾವಾಹನವು ಕಿಟಕಿಗೆ ಅಡ್ಡಲಾಗಿ ಕಬ್ಬಿಣ ಸಲಾಕೆಗಳನ್ನು ಹೊಂದಿರುವಂತೆ ಸೂಚಿಸಲಾಗಿದೆ. ಇದಲ್ಲದೇ ಸುರಕ್ಷಾ ದೃಷ್ಠಿಯಿಂದ ವಿಶ್ವಾಸರ್ಹ ಲಾಕ್‌ಗಳನ್ನೇ ಬಳಸುವಂತೆ ಎಚ್ಚರಿಸಲಾಗಿದೆ.

ಶಾಲಾ ವಾಹನಗಳಿಗೆ ಕಠಿಣ ಮಾರ್ಗಸೂಚಿ ತಂದ ಸಿಬಿಎಸ್‌ಇ- ಈಗಲಾದ್ರೂ ಆಗ್ತಾರಾ ಮಕ್ಕಳು ಸೇಫ್..?

ಇನ್ನೊಂದು ಮುಖ್ಯ ವಿಚಾರವೇನಂದರೆ ಶಾಲಾವಾಹನ ಅತಿಯಾದ ವೇಗಕ್ಕೆ ಬ್ರೇಕ್ ತಂದಿರುವ ಸಿಬಿಎಸ್ಇ, ಶಾಲಾ ಮಕ್ಕಳು ಪ್ರಯಾಣಿಸುವ ಸಂದರ್ಭದಲ್ಲಿ ನಾಲ್ಕು ಚಕ್ರದ ಯಾವುದೇ ವಾಹನಗಳನ್ನು ಓವರ್‌ಟೇಕ್ ಮಾಡದಂತೆ ಕಠಿಣ ಸೂಚನೆ ನೀಡಿದೆ. ಜೊತೆಗೆ ಪ್ರತಿ ಶಾಲಾವಾಹನದಲ್ಲಿ ಮೊಬೈಲ್ ಸೇವೆ ಹೊಂದಬೇಕಿದ್ದು, ಇದರ ವೆಚ್ಚವನ್ನು ಶಾಲಾ ಆಡಳಿತ ಮಂಡಳಿಯೇ ಭರಿಸಬೇಕಿದೆ.

ಶಾಲಾ ವಾಹನಗಳಿಗೆ ಕಠಿಣ ಮಾರ್ಗಸೂಚಿ ತಂದ ಸಿಬಿಎಸ್‌ಇ- ಈಗಲಾದ್ರೂ ಆಗ್ತಾರಾ ಮಕ್ಕಳು ಸೇಫ್..?

ಇದರ ಜೊತೆಗೆ ಶಾಲಾ ವಾಹನ ಚಾಲಾನೆ ವೇಳೆ ಇತರೆ ವಾಹನಗಳಿಂದ ಇಂತಿಷ್ಟು ಅಂತರ ಕಾಯ್ದುಕೊಳ್ಳುವಂತೆ ಕೆಲವು ಸೂಚನೆ ತರಲಾಗಿದೆ. ಇದರಿಂದ ಅಪಘಾತಗಳ ಸಂಖ್ಯೆ ತಗ್ಗಲಿದ್ದು, ಮಕ್ಕಳಿಗೆ ಸಂಪೂರ್ಣ ಸುರಕ್ಷೆ ದೊರೆಯಲಿದೆ.

ಶಾಲಾ ವಾಹನಗಳಿಗೆ ಕಠಿಣ ಮಾರ್ಗಸೂಚಿ ತಂದ ಸಿಬಿಎಸ್‌ಇ- ಈಗಲಾದ್ರೂ ಆಗ್ತಾರಾ ಮಕ್ಕಳು ಸೇಫ್..?

ಒಟ್ಟಿನಲ್ಲಿ ನಿಯಮಗಳನ್ನು ಗಾಳಿ ತೂರಿ ಅನಾಹುತಗಳಿಗೆ ಎಡೆಮಾಡಿಕೊಡುತ್ತಿದ್ದ ಶಾಲಾವಾಹನ ಮಾಲೀಕರ ವಿರುದ್ದ ಸಿಬಿಎಸ್ಇ ಕಠಿಣ ನಿಯಮ ಜಾರಿ ತಂದಿದ್ದು, ಈಗಲಾದ್ರೂ ನಮ್ಮ ಕಂದಮ್ಮಗಳಿಗೆ ಸುರಕ್ಷೆಗೆ ಸಿಗಲಿದೆಯಾ ಎಂಬದನ್ನು ಕಾಯ್ದು ನೋಡಬೇಕಿದೆ.

ನೀವು ಸುರಕ್ಷತೆಯ ಪ್ರಯಾಣಕ್ಕೆ ಹೆಚ್ಚಿನ ಒತ್ತು ನೀಡ್ತಿರಾ? ಹಾಗಾದ್ರೆ ವೋಲ್ವೋ ಎಸ್90 ಕಾರಿನ ಚಿತ್ರಗಳನ್ನು ಈಗಲೇ ನೋಡಲು ಕೆಳಗಿನ ಗ್ಯಾಲರಿಯನ್ನು ಕ್ಲಿಕ್ ಮಾಡಿ.

English summary
The Central Board of Secondary Education (CBSE) has issued strict guidelines for school buses, about the exterior, interior, and how it should be operated.
Story first published: Saturday, February 25, 2017, 14:18 [IST]
Please Wait while comments are loading...

Latest Photos