ಹ್ಯುಂಡೈ ವರ್ನಾ ಕಾರಿಗೆ 'ಸೆಕ್ಯುರಾಡ್ರೈವ್' ಹೆಸರಿನ ಟೈರ್ ಬಿಡುಗಡೆಗೊಳಿಸಿದ ಸಿಯಟ್

Written By:

ಭಾರತೀಯ ಟೈರ್ ತಯಾರಕ ಸಿಯಟ್ ತನ್ನ ಹೊಸ ಶ್ರೇಣಿಯ 'ಸೆಕ್ಯುರಾಡ್ರೈವ್' ಎಂಬ ಹೆಸರಿನ ಟೈಯರ್ ಬಿಡುಗಡೆ ಮಾಡಿದೆ. ಹ್ಯುಂಡೈ ವರ್ನಾ ಕಾರಿಗೆ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ ಎಂದು ಕಂಪನಿ ತಿಳಿಸಿದೆ.

ಹ್ಯುಂಡೈ ವರ್ನಾ ಕಾರಿಗೆ 'ಸೆಕ್ಯುರಾಡ್ರೈವ್' ಹೆಸರಿನ ಟೈರ್ ಬಿಡುಗಡೆಗೊಳಿಸಿದ ಸಿಯಟ್

ವಾಹನದ ಕಾರ್ಯಕ್ಷಮತೆ ಮತ್ತು ಸುರಕ್ಷೆಯಲ್ಲಿ ಟೈರ್ ಪ್ರಮುಖ ಪಾತ್ರವಹಿಸಲಿರುವುದು ನಮಗೆಲ್ಲರಿಗೂ ತಿಳಿದಿರುವ ವಿಚಾರವೇ ಆಗಿದೆ. ಹೀಗಿರುವಾಗ, ಹೊಸದಾಗಿ ಬಿಡುಗಡೆಯಾದ ಟೈರ್ಗಳು ಹೊಸ ಹ್ಯುಂಡೈ ವರ್ನಾ ಮಾದರಿಗೆ ಹೆಚ್ಚು ವೇಗದಲ್ಲಿ ಸುರಕ್ಷಿತ ಮತ್ತು ಹಿತಕರವಾದ ಡ್ರೈವ್ ಅನುಭವ ನೀಡಲಿದೆ ಎಂದು ಕಂಪನಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಹ್ಯುಂಡೈ ವರ್ನಾ ಕಾರಿಗೆ 'ಸೆಕ್ಯುರಾಡ್ರೈವ್' ಹೆಸರಿನ ಟೈರ್ ಬಿಡುಗಡೆಗೊಳಿಸಿದ ಸಿಯಟ್

ಭಾರತದ ಪ್ರತಿಷ್ಠಿತ ಟೈರ್ ತಯಾರಕ ಕಂಪೆನಿಯಾದ ಸಿಯಟ್ ಸೆಕ್ಯುರಾಡ್ರೈವ್ ಟೈರ್‌ಗಳು ಪರಿಣಾಮಕಾರಿ ಬ್ರೇಕಿಂಗ್, ಬಲವಾದ ಹಿಡಿತ ಮತ್ತು ಮಣ್ಣಿನ ರಸ್ತೆಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಲಿವೆ.

ಹ್ಯುಂಡೈ ವರ್ನಾ ಕಾರಿಗೆ 'ಸೆಕ್ಯುರಾಡ್ರೈವ್' ಹೆಸರಿನ ಟೈರ್ ಬಿಡುಗಡೆಗೊಳಿಸಿದ ಸಿಯಟ್

ಇದಲ್ಲದೆ, ಚಾಲಕನ ಸುರಕ್ಷತೆಯನ್ನು ಖಾತರಿಪಡಿಸಿಕೊಳ್ಳುವ ಮೂಲಕ ಹೆಚ್ಚಿನ ವೇಗದಲ್ಲಿ ಉನ್ನತ ನಿಯಂತ್ರಣ ಸಂಪಾದಿಸಿ ಹೊಸ-ಪೀಳಿಗೆಯ ಕಾರಿಗೆ ಸಹಾಯ ಹಸ್ತ ಚಾಚಲಿದೆ ಎಂಬುದು ಕಂಪನಿಯ ಅಭಿಪ್ರಾಯವಾಗಿದೆ.

ಹ್ಯುಂಡೈ ವರ್ನಾ ಕಾರಿಗೆ 'ಸೆಕ್ಯುರಾಡ್ರೈವ್' ಹೆಸರಿನ ಟೈರ್ ಬಿಡುಗಡೆಗೊಳಿಸಿದ ಸಿಯಟ್

ಇತರ ಬೆಂಚ್‌ಮಾರ್ಕ್ ಜನಪ್ರಿಯ ಟೈರ್‌ಗಳಿಗೆ ಹೋಲಿಸಿದರೆ, ಸೀಟ್ ಸೆಕ್ಯುರಾಡ್ರೈವ್ ಟೈಯರ್ ಒಣ ಸ್ಥಿತಿಯಲ್ಲಿ ಬ್ರೇಕ್ ಕಾರ್ಯಕ್ಷಮತೆ ಮತ್ತು ಒಟ್ಟಾರೆ ಶಬ್ದವನ್ನು ಉತ್ತಮಗೊಳಿಸುವುದಂತು ಖಂಡಿತ.

ಹ್ಯುಂಡೈ ವರ್ನಾ ಕಾರಿಗೆ 'ಸೆಕ್ಯುರಾಡ್ರೈವ್' ಹೆಸರಿನ ಟೈರ್ ಬಿಡುಗಡೆಗೊಳಿಸಿದ ಸಿಯಟ್

"ಹುಂಡೈ ವರ್ನಾ ಕಾರಿಗೆ ಟೈರ್ ಪೂರೈಕೆ ಮಾಡುತ್ತಿರುವುದು ಸಂತೋಷದಾಯಕ ವಿಚಾರವಾಗಿದ್ದು, ಪ್ರಯಾಣಿಕರ ಮತ್ತು ಚಾಲಕನ ಆದ್ಯತೆಯ ಮೇರೆಗೆ ಸುರಕ್ಷತೆಯನ್ನು ಕಾಪಾಡಿಕೊಂಡಿರುವುದು ಈ ಟೈರ್‌ನ ವಿಶೇಷತೆಯಾಗಿದೆ ಮತ್ತು ಕಂಪನಿಯ ನಿರೀಕ್ಷೆಗೆ ತಕ್ಕಂತೆ ಟೈಯರ್ ಅಭಿವೃದ್ಧಿಪಡಿಸಿರುವುದು ಕಂಪನಿಯ ಬೆಳವಣಿಗೆಗೆ ಪೂರಕವಾಗಿದೆ" ಎಂದು ಸಿಯಟ್ ಕಂಪನಿಯ ಮಾರ್ಕೆಟಿಂಗ್ ಉಪಾಧ್ಯಕ್ಷ ನಿತೀಶ್ ಬಜಾಜ್ ತಿಳಿಸಿದ್ದಾರೆ.

ಹ್ಯುಂಡೈ ವರ್ನಾ ಕಾರಿಗೆ 'ಸೆಕ್ಯುರಾಡ್ರೈವ್' ಹೆಸರಿನ ಟೈರ್ ಬಿಡುಗಡೆಗೊಳಿಸಿದ ಸಿಯಟ್

ಹ್ಯುಂಡೈ ಇತ್ತೀಚೆಗೆ ಭಾರತದಲ್ಲಿ ಹೊಸ ವೆರ್ನಾ ಕಾರನ್ನು ಬಿಡುಗಡೆಗೊಳಿಸಿತ್ತು. ಈ ಮೂರನೇ ತಲೆಮಾರಿನ ಸೆಡಾನ್ 1.6-ಲೀಟರ್ ಪೆಟ್ರೋಲ್ ಮತ್ತು ಡೀಸಲ್ ಇಂಜಿನ್ ಆಯ್ಕೆ ಹೊಂದಿದೆ.ಈ ಕಾರು ತನ್ನ ಹಿರಿಯ ಸಹೋದರ, ಎಲಾಂಟ್ರಾಗೆ ಹೋಲುತ್ತದೆ.

Read more on ಟೈರ್ tyre
English summary
Indian tyre manufacturer Ceat has launched a new range of tyres 'Securadrive', specially designed for Hyundai Verna.
Story first published: Monday, September 25, 2017, 10:47 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark