ಜೀಪ್ ಕಂಪಾಸ್‌ಗೆ ಪ್ರತಿಸ್ಪರ್ಧಿಯಾಗುತ್ತಾ ಫಿಯೆಟ್ ಹೊಸ ಎಸ್‌ಯುವಿ?

Written By:

ಇಟಾಲಿಯನ್ ಆಟೋ ಉತ್ಪಾದಕ ಸಂಸ್ಥೆಯಾದ ಫಿಯೆಟ್ ಇತ್ತೀಚೆಗೆ ಹೊಸ ಎಸ್‌ಯುವಿ ಮಾದರಿಯನ್ನು ಅಭಿವೃದ್ಧಿಗೊಳಿಸಿದ್ದು, ಜೀಪ್ ಕಂಪಾಸ್ ಸೇರಿದಂತೆ ಪ್ರಮುಖ ಎಸ್‌ಯುವಿಗಳಿಗೆ ಸ್ಪರ್ಧೆ ನೀಡುವ ನಿಟ್ಟಿನಲ್ಲಿ ಬಿಡುಗಡೆಗೆ ಸಜ್ಜುಗೊಳ್ಳುತ್ತಿದೆ.

To Follow DriveSpark On Facebook, Click The Like Button
ಜೀಪ್ ಕಂಪಾಸ್‌ಗೆ ಪ್ರತಿಸ್ಪರ್ಧಿಯಾಗುತ್ತಾ ಫಿಯೆಟ್ ಹೊಸ ಎಸ್‌ಯುವಿ?

ಎಸ್‌ಯುವಿ ಕಾರು ಮಾದರಿಗಳಿಗೆ ದೇಶಿಯ ಮಾರುಕಟ್ಟೆ ಅತ್ಯುತ್ತಮ ಬೇಡಿಕೆಯಿದ್ದು, ಈ ನಿಟ್ಟಿಯಲ್ಲಿ ಫಿಯೆಟ್ ಸಂಸ್ಥೆ ಕೂಡಾ ಜೀಪ್ ಕಂಪಾಸ್ ಎಸ್‌ಯುವಿಗೆ ಹೋಲುವ ಕಾರು ಮಾದರಿಯನ್ನು ಬಿಡುಗಡೆಗೊಳಿಸುತ್ತಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ.

ಜೀಪ್ ಕಂಪಾಸ್‌ಗೆ ಪ್ರತಿಸ್ಪರ್ಧಿಯಾಗುತ್ತಾ ಫಿಯೆಟ್ ಹೊಸ ಎಸ್‌ಯುವಿ?

ಫಿಯೆಟ್ ನಿರ್ಮಾಣದ ಮತ್ತೊಂದು ಬಹುನೀರಿಕ್ಷಿತ ಪುಂಟೊ ಸೆಡಾನ್ ಕಾರು ಸದ್ಯದಲ್ಲೇ ಬಿಡುಗಡೆಯಾಗುತ್ತಿದ್ದು, ಈ ಹಿನ್ನೆಲೆ ಹೊಸ ಮಾದರಿಯ ಎಸ್‌ಯುವಿ ಬಿಡುಗಡೆಯು ವಿಳಂಬವಾಗುತ್ತಿದೆ ಎನ್ನಲಾಗಲಿದೆ.

ಜೀಪ್ ಕಂಪಾಸ್‌ಗೆ ಪ್ರತಿಸ್ಪರ್ಧಿಯಾಗುತ್ತಾ ಫಿಯೆಟ್ ಹೊಸ ಎಸ್‌ಯುವಿ?

ಹೀಗಾಗಿ 2018ರ ಜನವರಿ ಇಲ್ಲವೇ ಫೆಬ್ರುವರಿ ಅಂತ್ಯಕ್ಕೆ ಬಿಡುಗಡೆಯಾಗುವ ಬಗ್ಗೆ ಸುಳಿವು ಸಿಕ್ಕಿದ್ದು, ಹೊರ ವಿನ್ಯಾಸಗಳು ನೇರವಾಗಿ ಜೀಪ್ ಕಂಪಾಸ್ ಮಾದರಿಗಳನ್ನೇ ಹೊಲುತ್ತಿರುವುದು ಮತ್ತೊಂದು ವಿಶೇಷತೆ ಕಾರಣವಾಗಿದೆ.

ಜೀಪ್ ಕಂಪಾಸ್‌ಗೆ ಪ್ರತಿಸ್ಪರ್ಧಿಯಾಗುತ್ತಾ ಫಿಯೆಟ್ ಹೊಸ ಎಸ್‌ಯುವಿ?

ಇನ್ನು ಗ್ರಾಹಕರ ಬೇಡಿಕೆಯಂತೆ ಪೆಟ್ರೋಲ್ ಮತ್ತು ಡಿಸೇಲ್ ಎರಡು ಆವೃತ್ತಿಯಲ್ಲೂ ಫಿಯೆಟ್ ಎಸ್‌ಯುವಿ ಬಿಡುಗಡೆ ಮಾಡಲಾಗುತ್ತಿದ್ದು, ಪೆಟ್ರೋಲ್ ಆವೃತ್ತಿಯು 1.8-ಲೀಟರ್ ಎಂಜಿನ್ ಮತ್ತು ಡಿಸೇಲ್ ಆವೃತ್ತಿಯು 2.0-ಲೀಟರ್ ಎಂಜಿನ್ ಹೊಂದಿರಲಿದೆ ಎಂಬ ಮಾಹಿತಿ ದೊರೆತಿದೆ.

ಜೀಪ್ ಕಂಪಾಸ್‌ಗೆ ಪ್ರತಿಸ್ಪರ್ಧಿಯಾಗುತ್ತಾ ಫಿಯೆಟ್ ಹೊಸ ಎಸ್‌ಯುವಿ?

ಜೊತೆಗೆ ಡೀಸೆಲ್ ಆವೃತ್ತಿಯು 170-ಬಿಎಚ್‌ಪಿ ಮತ್ತು ಪೆಟ್ರೋಲ್ ಆವೃತ್ತಿಯು 138-ಬಿಎಚ್‌ಪಿ ಉತ್ಪಾದನಾ ಶಕ್ತಿ ಹೊಂದಿದ್ದು, ಆಲ್ ವಿಲ್ಹ್ ಡ್ರೈವಿಂಗ್ ಸೌಲಭ್ಯದ ಜೊತೆಗೆ 6-ಸ್ಪೀಡ್ ಮ್ಯಾನುವಲ್ ಹಾಗೂ 9-ಸ್ಪೀಡ್ ಆಟೋ ಮ್ಯಾಟಿಕ್ ಗೇರ್‌ಬಾಕ್ಸ್ ಹೊಂದಿದೆ.

ಜೀಪ್ ಕಂಪಾಸ್‌ಗೆ ಪ್ರತಿಸ್ಪರ್ಧಿಯಾಗುತ್ತಾ ಫಿಯೆಟ್ ಹೊಸ ಎಸ್‌ಯುವಿ?

ಇದರ ಜೊತೆಗೆ 5-ಇಂಚಿನ ಯು ಕನೆಕ್ಟ್ ಇನ್ಪೋಟೈನ್‌ಮೆಂಟ್ ಸ್ಟಿಸ್ಟಂ ಹಾಗೂ ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ, ಪನೊರಾಮಿಕ್ ಸನ್‌ರೂಫ್ ಜೊತೆಗೆ ಹೆಚ್ಚಿನ ಸುರಕ್ಷತೆಗೆ 7 ಏರ್‌ಬ್ಯಾಗ್ ಸೌಲಭ್ಯವನ್ನು ಕಲ್ಪಿಸಲಾಗಿದೆ.

ಜೀಪ್ ಕಂಪಾಸ್‌ಗೆ ಪ್ರತಿಸ್ಪರ್ಧಿಯಾಗುತ್ತಾ ಫಿಯೆಟ್ ಹೊಸ ಎಸ್‌ಯುವಿ?

ಒಟ್ಟಿನಲ್ಲಿ ಜೀಪ್ ಕಂಪಾಸ್ ವೈಶಿಷ್ಟ್ಯತೆಗಳನ್ನು ಹೊತ್ತುಬರುತ್ತಿರುವ ಫಿಯೆಟ್ ಎಸ್‌ಯುವಿ ಕಾರು ಈಗಾಗಲೇ ಆಟೋ ಉದ್ಯಮದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದು, ಐಷಾರಾಮಿ ಪುಂಟೊ ಸೆಡಾನ್ ಬಿಡುಗಡೆಗಡೆ ನಂತರವಷ್ಟೇ ಎಸ್‌ಯುವಿ ಕಾರು ಬಿಡುಗಡೆಯಾಗಲಿದೆ.

Read more on ಫಿಯೆಟ್ fiat
English summary
Read in Kannada about Fiat Developing New SUV Based On Jeep Compass.
Story first published: Wednesday, September 27, 2017, 19:06 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark