ಖರೀದಿಗೆ ಅತ್ಯುತ್ತಮ ಫಿಯೆಟ್ ಪುಂಟೊ ಇವೊ ಪ್ಯೂರ್ ಕಾರು

Written By:

ಇತಿಹಾಸ ಪ್ರಸಿದ್ಧ ಇಟಲಿಯ ವಾಹನ ತಯಾರಿಕ ಸಂಸ್ಥೆ ಫಿಯೆಟ್ ತನ್ನ ಹೊಸ ಮಾದರಿಯ ಪುಂಟೊ ಇವೊ ಪ್ಯೂರ್ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದ್ದು, ಹೊಸ ಆವೃತ್ತಿಯ ಬೆಲೆ ದೆಹಲಿ ಎಕ್ಸ್‌ಶೋರಂ ಪ್ರಕಾರ ರೂ.4.92 ಲಕ್ಷಗಳಿಗೆ ಲಭ್ಯವಿದೆ.

ಖರೀದಿಗೆ ಅತ್ಯುತ್ತಮ ಫಿಯೆಟ್ ಪುಂಟೊ ಇವೊ ಪ್ಯೂರ್ ಕಾರು

ವಿನೂತನ ವೈಶಿಷ್ಟ್ಯತೆಗಳೊಂದಿಗೆ ಅಭಿವೃದ್ಧಿ ಹೊಂದಿರುವ ಹೊಸ ಮಾದರಿಯ ಪುಂಟೊ ಇವೊ ಪ್ಯೂರ್ ಕಾರು, ಮಧ್ಯಮ ವರ್ಗಗಳ ಕಾರು ಕೊಳ್ಳುವ ಯೋಜನೆಗೆ ಹೇಳಿ ಮಾಡಿಸಿದಂತಿದೆ.

ಖರೀದಿಗೆ ಅತ್ಯುತ್ತಮ ಫಿಯೆಟ್ ಪುಂಟೊ ಇವೊ ಪ್ಯೂರ್ ಕಾರು

ಫಿಯೆಟ್ ಪುಂಟೊ ಇವೊ ಪ್ಯೂರ್ ಕಾರಿನ ಹೊರ ಭಾಗದ ವಿನ್ಯಾಸಗಳಲ್ಲಿ ಸಾಕಷ್ಟು ಬದಲಾವಣೆ ತರಲಾಗಿದ್ದು, ಮುಂಭಾಗದ ಹೆಡ್‌ಲ್ಯಾಂಪ್ ವಿನ್ಯಾಸ ಗಮನಸೆಳೆಯುತ್ತಿವೆ.

ಖರೀದಿಗೆ ಅತ್ಯುತ್ತಮ ಫಿಯೆಟ್ ಪುಂಟೊ ಇವೊ ಪ್ಯೂರ್ ಕಾರು

ಪ್ರಮುಖ 7 ಬಣ್ಣಗಳಲ್ಲಿ ಮಿಂಚುತ್ತಿರುವ ಫಿಯೆಟ್ ಪುಂಟೊ ಇವೊ ಪ್ಯೂರ್ ಕಾರು, ಎಕ್ಸೋಟಿಕ್ ರೆಡ್, ಬೊಸ್ನೋವಾ ವೈಟ್, ಹಿಪ್ ಹಾಪ್ ಬ್ಲ್ಯಾಕ್, ಮಿನಿಮಲ್ ಗ್ರೇ, ಬ್ರೋಂಜ್ ಟಾನ್ ಮತ್ತು ಮ್ಯಾಗ್ಸಿಸಿಯೋ ಗ್ರೇ ಬಣ್ಣಗಳಲ್ಲಿ ಲಭ್ಯವಿದೆ.

ಖರೀದಿಗೆ ಅತ್ಯುತ್ತಮ ಫಿಯೆಟ್ ಪುಂಟೊ ಇವೊ ಪ್ಯೂರ್ ಕಾರು

ಹೊಸ ಮಾದರಿಯ ಫಿಯೆಟ್ ಪುಂಟೊ ಇವೊ ಪ್ಯೂರ್ ಕಾರು ಹಿಂಭಾಗದ ವಿನ್ಯಾಸದಲ್ಲೂ ಹಲವು ಮಾರ್ಪಾಡುಗಳನ್ನು ತಂದಿದ್ದು, OVMR ಕ್ಯಾಪ್ಸ್ ವ್ಯವಸ್ಥೆಗಳನ್ನು ಇರಿಸಲಾಗಿದೆ.

ಖರೀದಿಗೆ ಅತ್ಯುತ್ತಮ ಫಿಯೆಟ್ ಪುಂಟೊ ಇವೊ ಪ್ಯೂರ್ ಕಾರು

1.2-ಲೀಟರ್ ಫೈರ್ ಪೆಟ್ರೋಲ್ ಎಂಜಿನ್ ಹೊಂದಿರುವ ಫಿಯೆಟ್ ಪುಂಟೊ ಇವೊ ಪ್ಯೂರ್ ಕಾರು, 67ಬಿಎಚ್‌ಪಿ ಮತ್ತು 96ಎಂಎನ್ ಟಾರ್ಕ್ ಉತ್ಪಾದಿಸುವ ಶಕ್ತಿ ಹೊಂದಿದೆ. ಜೊತೆಗೆ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ವ್ಯವಸ್ಥೆ ಕೂಡಾ ಹೊಂದಿದೆ.

ಖರೀದಿಗೆ ಅತ್ಯುತ್ತಮ ಫಿಯೆಟ್ ಪುಂಟೊ ಇವೊ ಪ್ಯೂರ್ ಕಾರು

ಇನ್ನು ಕಾರಿನ ಒಳವಿನ್ಯಾಸದಲ್ಲೂ ಸಾಕಷ್ಟು ಬದಲಾವಣೆ ತರಲಾಗಿದ್ದು, ಏರ್ ಕಂಡೀಷನರ್ ಹಾಗೂ ಡಿಜಿಟಲ್ ತಂತ್ರಜ್ಞಾನದ ಅಳವಡಿಕೆ ಇದೆ.

ಖರೀದಿಗೆ ಅತ್ಯುತ್ತಮ ಫಿಯೆಟ್ ಪುಂಟೊ ಇವೊ ಪ್ಯೂರ್ ಕಾರು

ಫಿಯೆಟ್ ಪುಂಟೊ ಇವೊ ಪ್ಯೂರ್ ಹ್ಯಾಚ್‌ಬ್ಯಾಕ್ ಖರೀದಿ ಮಾಡುವ ಗ್ರಾಹಕರಿಗೆ ಉತ್ತಮ ಆಫರ್ ನೀಡಲಾಗಿದ್ದು, 15-ಸಾವಿರ ಕಿಲೋ ಮೀಟರ್ ಸರ್ವಿಸ್ ವಾರಂಟಿ ನೀಡಲಾಗುತ್ತಿದೆ.

ಖರೀದಿಗೆ ಅತ್ಯುತ್ತಮ ಫಿಯೆಟ್ ಪುಂಟೊ ಇವೊ ಪ್ಯೂರ್ ಕಾರು

ಹೊಸ ವಿನ್ಯಾಸದೊಂದಿಗೆ ಸಿದ್ಧಗೊಂಡು ಬಿಡುಗಡೆಯಾಗಿರುವ ಪುಂಟೊ ಇವೊ ಪ್ಯೂರ್ಕಾರಿನ ಬಗ್ಗೆ ಸಾಕಷ್ಟು ನೀರಿಕ್ಷೆಯಿಟ್ಟುಕೊಂಡಿರುವ ಫಿಯೆಟ್ ಸಂಸ್ಥೆಯು, ಮುಂಬರುವ ದಿನಗಳಲ್ಲಿ ಹೊಸ ದಾಖಲೆ ನಿರ್ಮಿಸುವ ತವಕದಲ್ಲಿದೆ.

Read more on ಫಿಯೆಟ್ fiat
English summary
FCA India has launched the Fiat Punto Evo Pure in the Indian market.
Please Wait while comments are loading...

Latest Photos