ಫೋರ್ಡ್ ಇಂಡಿಯಾ ತನ್ನ ಮಾರಾಟ ಮತ್ತು ಸೇವಾ ಜಾಲವನ್ನು ವಿಸ್ತರಿಸುವ ಉದ್ದೇಶ ಹೊಂದಿದ್ದು, ಈ ಕಾರಣದಿಂದಾಗಿ ಬೆಂಗಳೂರಿನಲ್ಲಿ ಹೊಚ್ಚ ಹೊಸ ಜೆಎಸ್‌ಪಿ ಶೋರೂಂ ಆರಂಭಿಸಿದೆ.
ಉದ್ಘಾಟನಾ ಸಮಾರಂಭದಲ್ಲಿ ಫೋರ್ಡ್ ಇಂಡಿಯಾ ಕಂಪನಿಯ ಮಾರ್ಕೆಟಿಂಗ್, ಸೇಲ್ಸ್ ಮತ್ತು ಸೇವಾ ವಿಭಾಗದ ಕಾರ್ಯನಿರ್ವಾಹಕ ನಿರ್ದೇಶಕ ವಿನಯ್ ರೈನಾ ಹಾಜರಿದ್ದರು ಜೊತೆಗೆ ಜೆಎಸ್‌ಪಿ ಫೋರ್ಡ್ ಶೋರೂಂನ ಡೀಲರ್ ಆದಂತಹ ಜ್ಯಾನ್ಸಿ ಪೊನ್ರಾಜ್ ಸಹ ಭಾಗವಹಿಸಿದ್ದರು.
ಹೊಸದಾಗಿ ಉದ್ಘಾಟನೆಗೊಂಡ ಶೋರೂಂ ಬೆಂಗಳೂರಿನ ಜೆಪಿ ನಗರದ 2ನೇ ಹಂತ 15ನೇ ಕ್ರಾಸ್‌ನಲ್ಲಿ ಇದ್ದು, 13000 ಚದುರದಷ್ಟು ವಿಸ್ತಾರವಾಗಿದೆ ಮತ್ತು ಈ ಶೋರೂ ರಿಂಗ್ ರಸ್ತೆಯಿಂದ ಕೇವಲ 100 ಅಡಿ ಅಂತರದಲ್ಲಿ ಇದೆ.
ಬಿಲೇಕಲ್ಲಿ, ಬನ್ನೇರುಘಟ್ಟ ರಸ್ತೆ ಮತ್ತು ಹೊಮ್ಮದೇವನಾ ಹಳ್ಳಿ, ಬನ್ನೇರುಘಟ್ಟ ಮುಖ್ಯ ರಸ್ತೆಯಲ್ಲಿರುವ ಶೋ ರೂಂಗಳ ಸಹಯೋಗದೊಂದಿಗೆ ಜೆಎಸ್‌ಪಿ ಶೋರೂಂ ಗ್ರಾಹಕರಿಗೆ ಸರ್ವಿಂಗ್ ಮತ್ತು ಬಿಡಿಭಾಗಗಳ ಸೌಕರ್ಯ ಒದಗಿಸಲಿದೆ.
ಫೋರ್ಡ್ ತನ್ನ ವೆಬ್ ಸೈಟ್‌ನಲ್ಲಿ ಸೇವೆಗಳ ಮೌಲ್ಯಗಳನ್ನು ನಮೂದಿಸಿದ್ದು, ಸೇವೆಗಳನ್ನು ಬುಕಿಂಗ್ ಮಾಡುವ ಮುಂಚೆ ಗ್ರಾಹಕರು ಸೇವೆಯ ಬೆಲೆ ಅಥವಾ ಬಿಡಿ ಭಾಗಗಳ ವೆಚ್ಚವನ್ನು ತಿಳಿದುಕೊಳ್ಳಬಹುದಾಗಿದೆ.
"ವಿಶ್ವ-ಮಟ್ಟದ ಉತ್ಪನ್ನಗಳುನ್ನು ಮತ್ತು ಸೇವೆಗಳನ್ನು ಗ್ರಾಹಕರಿಗೆ ತಲುಪಿಸಲು ನಾವು ಬದ್ಧರಾಗಿದ್ದೇವೆ. ಆ ಬದ್ಧತೆಗೆ ಮತ್ತಷ್ಟು ಶಕ್ತಿಯನ್ನು ಜೆಎಸ್‌ಪಿ ತುಂಬುತ್ತಿರುವುದು ಸ್ವಾಗತಾರ್ಹ ಬೆಳವಣಿಗೆಯಾಗಿದೆ. ಫೋರ್ಡ್ ಈ ಪಾಲುದಾರಿಕೆಯೊಂದಿಗೆ ಗ್ರಾಹಕರಿಗೆ ಸಂಪೂರ್ಣ ಪಾರದರ್ಶಕತೆ ಸೌಲಭ್ಯ ನೀಡಲಿದೆ" ಎಂದು ಫೋರ್ಡ್ ಇಂಡಿಯಾ ಕಂಪನಿಯ ಮಾರ್ಕೆಟಿಂಗ್, ಸೇಲ್ಸ್ ಮತ್ತು ಸೇವಾ ವಿಭಾಗದ ಕಾರ್ಯನಿರ್ವಾಹಕ ನಿರ್ದೇಶಕ ವಿನಯ್ ರೈನಾ ತಿಳಿಸಿದರು.
ಭಾರತದಲ್ಲಿ ಫೋರ್ಡ್ ಸಂಸ್ಥೆ ನಿಧಾನವಾಗಿ ತನ್ನ ಅಸ್ತಿತ್ವ ಸಂಪಾದಿಸುತ್ತಿದ್ದು, ತನ್ನ ನವೀನ ಮಾದರಿಯ ಕಾರುಗಳೊಂದಿಗೆ ಕರ್ನಾಟಕದಲ್ಲಿ ಅದರಲ್ಲಿಯೂ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹೆಚ್ಚು ಜನರನ್ನು ತಲುಪುವ ನಿಟ್ಟಿನಲ್ಲಿ ಹೊಸ ಶೋ ರೂಂ ತೆರೆದಿರುವುದು ಕಂಪನಿಗೆ ಮತ್ತಷ್ಟು ಶಕ್ತಿ ತಂದುಕೊಡಲಿದೆ.
ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Subscribe to Kannada DriveSpark