ಲಾಲ್‌ ಬಾಗ್ ಕಂಪೌಂಡ್‌ಗೆ ಡಿಕ್ಕಿ ಹೊಡೆದ ಹೋಂಡಾ ಸಿಆರ್‌ವಿ ಗತ್ತು ಹೇಗಿತ್ತು ಗೊತ್ತಾ?

ಹೋಂಡಾ ಸಿಆರ್‌ವಿ ಗುದ್ದಿದ ರಭಸಕ್ಕೆ ಲಾಲ್ ಬಾಗ್ ಪಶ್ಚಿಮ ಗೇಟ್ ಬಳಿಯ ಕಲ್ಲಿನ ಕಂಪೌಂಡ್ ಕಿತ್ತುಹೋಗಿದ್ದು, ಅದೃಷ್ಟವಶಾತ್ ಘಟನೆಯಲ್ಲಿ ಯಾರಿಗೂ ಏನೂ ಆಗಿಲ್ಲ.

By Praveen

ಇಂದು ಬೆಳಗಿನ ಜಾವ ಬೆಂಗಳೂರಿನ ಲಾಲ್‌ಬಾಗ್ ಪಶ್ಚಿಮ ಗೇಟ್‌ಬಳಿ ಸಿಕ್ಕಾಪಟ್ಟೆ ಜನ ಸೇರಿದ್ರು. ಯಾಕೆ ಇಷ್ಟೊಂದು ಜನ ಸೇರಿದ್ದಾರೆ ಅಂತಾ ನೋಡಲು ಹೋದ ನಮಗೂ ಕೂಡಾ ಶಾಕ್ ಆಗಿದ್ದು ಸುಳ್ಳಲ್ಲ. ಇದಕ್ಕೆ ಕಾರಣ ಹೋಂಡಾ ಸಿಆರ್‌ವಿ ಕಾರು ಕಂಪೌಂಡ್ ಕಿತ್ತು ಹೋಗುವ ಹಾಗೆ ಡಿಕ್ಕಿ ಹೊಡೆದಿತ್ತು.

ಲಾಲ್‌ ಬಾಗ್ ಕಂಪೌಂಡ್‌ಗೆ ಡಿಕ್ಕಿ ಹೊಡೆದ ಹೋಂಡಾ ಸಿಆರ್‌ವಿ ಗತ್ತು ಹೇಗಿತ್ತು ಗೊತ್ತಾ?

ಹೋಂಡಾ ಸಿಆರ್‌ವಿ ಗುದ್ದಿದ ರಭಸಕ್ಕೆ ಲಾಲ್ ಬಾಗ್ ಪಶ್ಚಿಮ ಗೇಟ್ ಬಳಿಯ ಕಲ್ಲಿನ ಕಂಪೌಂಡ್ ಕಿತ್ತುಹೋಗಿದ್ದು, ಅದೃಷ್ಟವಶಾತ್ ಘಟನೆಯಲ್ಲಿ ಯಾರಿಗೂ ಏನೂ ಆಗಿಲ್ಲ. ಜೊತೆಗೆ ಕಾರಿನ ಮಾಲೀಕರನಿಗೆ ಯಾವುದೇ ಒಂದು ಸಣ್ಣ ಗಾಯ ಕೂಡಾ ಆಗಿಲ್ಲ ಅಂದ್ರೆ ನೀವು ನಂಬಲೇಬೇಕು.

ಲಾಲ್‌ ಬಾಗ್ ಕಂಪೌಂಡ್‌ಗೆ ಡಿಕ್ಕಿ ಹೊಡೆದ ಹೋಂಡಾ ಸಿಆರ್‌ವಿ ಗತ್ತು ಹೇಗಿತ್ತು ಗೊತ್ತಾ?

ಇನ್ನು ಘಟನೆಗೆ ನಿಖರ ಕಾರಣ ಏನು ವಿಚಾರಿಸಿದಾಗ ಗೊಂದಲದಲ್ಲಿದ್ದ ಕಾರು ಮಾಲೀಕ ಸ್ಟಿರಿಂಗ್ ಲಾಕ್ ಹಿನ್ನೆಲೆ ಅವಘಡ ಸಂಭವಿಸಿದೆ ಎಂದು ಹೇಳಿದ್ದಾದರೂ ಅಪಘಾತದ ತೀವ್ರತೆಯನ್ನು ಕೂಲಂಕುಶವಾಗಿ ವಿಚಾರಿಸಿದಾಗ ನಿಯಂತ್ರಣ ತಪ್ಪಿದ ಪರಿಣಾಮ ನಡೆದ ಅವಾಂತರ ಎಂದು ಗೊತ್ತಾಯಿತು.

Recommended Video

Honda CR-V Crashes Into A Wall
ಲಾಲ್‌ ಬಾಗ್ ಕಂಪೌಂಡ್‌ಗೆ ಡಿಕ್ಕಿ ಹೊಡೆದ ಹೋಂಡಾ ಸಿಆರ್‌ವಿ ಗತ್ತು ಹೇಗಿತ್ತು ಗೊತ್ತಾ?

ಜೊತೆಗೆ ಅಪಘಾತವಾದ ಹೋಂಡಾ ಸಿಆರ್‌ವಿ ಕಾರು ಕಳೆದ ತಿಂಗಳಷ್ಟೇ ಖರೀದಿ ಮಾಡಿದ್ದರು ಎಂಬ ಮಾಹಿತಿಯನ್ನು ಹಂಚಿಕೊಂಡ ಅಪಘಾತದಲ್ಲಿ ಸಿಲುಕಿದ್ದ ಕಾರು ಮಾಲೀಕನು, ಹೊಸ ಕಾರಿನಲ್ಲಿರುವ ಸುರಕ್ಷಾ ಸೌಲಭ್ಯಗಳೇ ನನ್ನ ಜೀವ ಉಳಿಸಿವೇ ಎಂಬ ಅಭಿಪ್ರಾಯ ಹಂಚಿಕೊಂಡರು.

ಲಾಲ್‌ ಬಾಗ್ ಕಂಪೌಂಡ್‌ಗೆ ಡಿಕ್ಕಿ ಹೊಡೆದ ಹೋಂಡಾ ಸಿಆರ್‌ವಿ ಗತ್ತು ಹೇಗಿತ್ತು ಗೊತ್ತಾ?

ಆದ್ರೆ ಹೋಂಡಾ ನಿರ್ಮಾಣದ ಹೈ ಎಂಡ್ ಕಾರುಗಳಲ್ಲಿ ಅಗ್ರಸ್ಥಾನದಲ್ಲಿರುವ ಸಿಆರ್‌ವಿ ಹಲವು ಸುರಕ್ಷಾ ಸೌಲಭ್ಯಗಳನ್ನು ಹೊಂದಿದ್ದು, ಅಪಘಾತ ಸಂದರ್ಭಗಳಲ್ಲಿ ರಕ್ಷಣೆಗಾಗಿ ಹೆಚ್ಚುವರಿ ಏರ್‌ಬ್ಯಾಗ್ ಸೌಲಭ್ಯಗಳನ್ನು ಹೊಂದಿರುವುದು ಅಪಘಾತಗಳ ತೀವ್ರತೆಯನ್ನು ತಗ್ಗಿಸುವಲ್ಲಿ ಸಹಕಾರಿಯಾಗಿದೆ ಎನ್ನಬಹುದು.

ಲಾಲ್‌ ಬಾಗ್ ಕಂಪೌಂಡ್‌ಗೆ ಡಿಕ್ಕಿ ಹೊಡೆದ ಹೋಂಡಾ ಸಿಆರ್‌ವಿ ಗತ್ತು ಹೇಗಿತ್ತು ಗೊತ್ತಾ?

ಸದ್ಯ ಭಾರತೀಯ ಮಾರುಕಟ್ಟೆಗಳಲ್ಲಿ ಹೋಂಡಾ ನಿರ್ಮಾಣದ ಸಿಆರ್‌ವಿ ಕಾರುಗಳ ಬೆಲೆಯು ರೂ.26.83 ಲಕ್ಷಕ್ಕೆ ಲಭ್ಯವಿದ್ದು, 2.0-ಲೀಟರ್ ಪೆಟ್ರೋಲ್ ಎಂಜಿನ್‌ನೊಂದಿಗೆ 4 ವೀಲ್ಹ್ ಡ್ರೈವ್ ಸೌಲಭ್ಯವನ್ನು ಪಡೆದುಕೊಂಡಿವೆ.

ತಪ್ಪದೇ ಓದಿ-ಕಾರಿನ ಗೇರ್ ಸ್ಕಿಪ್ ಮಾಡುವುದರಿಂದ ಗೇರ್‌ಬಾಕ್ಸ್ ಹಾಳಾಗುತ್ತಾ? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

ಲಾಲ್‌ ಬಾಗ್ ಕಂಪೌಂಡ್‌ಗೆ ಡಿಕ್ಕಿ ಹೊಡೆದ ಹೋಂಡಾ ಸಿಆರ್‌ವಿ ಗತ್ತು ಹೇಗಿತ್ತು ಗೊತ್ತಾ?

ಈ ಮೂಲಕ ಹೋಂಡಾ ಸಿಆರ್‌ವಿ ಕಾರುಗಳಲ್ಲಿ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಲಾಗಿದ್ದು, ಇಂದು ಲಾಲ್ ಬಾಗ್ ಉದ್ಯಾನವನದ ಬಳಿ ನಡೆದ ಭೀಕರ ಅಪಘಾತದಲ್ಲೂ ಯಾವುದೇ ತೊಂದರೇ ಇಲ್ಲದೆ ಕಾರು ಮಾಲೀಕ ಪಾರಾಗಿರುವುದು ಕಾರಿನಲ್ಲಿರುವ ಸುರಕ್ಷಾ ಸಾಧನಗಳಿಂದಲೇ ಎಂದರೇ ತಪ್ಪಾಗಲಾರದು.

ತಪ್ಪದೇ ಓದಿ- ಕೇಂದ್ರ ಸರ್ಕಾರವು ಬುಲ್‌ ಬಾರ್ ಹಾಗೂ ಕ್ರ್ಯಾಶ್‌ ಗಾರ್ಡ್‌ ಬ್ಯಾನ್ ಮಾಡಿದ್ದೇಕೆ ಗೊತ್ತಾ?

Trending DriveSpark YouTube Videos

Subscribe To DriveSpark Kannada YouTube Channel - Click Here

Most Read Articles

Kannada
English summary
Read in Kannada about Honda CR-V Crash in Bangalore.
Story first published: Wednesday, December 20, 2017, 19:08 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X