ಫ್ರಾಂಕ್‌ಫರ್ಟ್ ಆಟೋ ಮೇಳ- ಎಲೆಕ್ಟ್ರಿಕ್ ಕಾರು ಅನಾವರಣಗೊಳಿಸಿದ ಹೋಂಡಾ..!!

ಎಲೆಕ್ಟ್ರಿಕ್ ಎಂಜಿನ್ ಪ್ರೇರಿತ ವಾಹನಗಳ ಉತ್ಪಾದನೆ ಮತ್ತು ಮಾರಾಟ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಈ ಹಿನ್ನೆಲೆ ಹೊಸ ಯೋಜನೆಯೊಂದನ್ನು ರೂಪಿಸಿರುವ ಹೋಂಡಾ ಕಾರು ಉತ್ಪಾದನಾ ಸಂಸ್ಥೆಯು ಸುಧಾರಿತ ತಂತ್ರಜ್ಞಾನ ಪ್ರೇರಿತ ಎಲೆಕ್ಟ್ರಿಕ್ ಅರ್ಬನ್

By Praveen

ಎಲೆಕ್ಟ್ರಿಕ್ ಎಂಜಿನ್ ಪ್ರೇರಿತ ವಾಹನಗಳ ಉತ್ಪಾದನೆ ಮತ್ತು ಮಾರಾಟ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಈ ಹಿನ್ನೆಲೆ ಹೊಸ ಯೋಜನೆಯೊಂದನ್ನು ರೂಪಿಸಿರುವ ಹೋಂಡಾ ಕಾರು ಉತ್ಪಾದನಾ ಸಂಸ್ಥೆಯು ಸುಧಾರಿತ ತಂತ್ರಜ್ಞಾನ ಪ್ರೇರಿತ ಎಲೆಕ್ಟ್ರಿಕ್ ಅರ್ಬನ್ ಹ್ಯಾಚ್‌ಬ್ಯಾಕ್ ಮಾದರಿಯೊಂದನ್ನು ಸಿದ್ಧಗೊಳಿಸಿದೆ.

ಫ್ರಾಂಕ್‌ಫರ್ಟ್ ಆಟೋ ಮೇಳ- ಎಲೆಕ್ಟ್ರಿಕ್ ಕಾರು ಅನಾವರಣಗೊಳಿಸಿದ ಹೋಂಡಾ

ಜಾಗತಿಕ ಮಟ್ಟದಲ್ಲಿ ಎಲೆಕ್ಟ್ರಿಕ್ ಕಾರುಗಳಿಗೆ ಎಲ್ಲಿಲ್ಲದ ಬೇಡಿಕೆ ಸೃಷ್ಠಿಯಾಗುತ್ತಿದ್ದು, ಹೋಂಡಾ ಕೂಡಾ ಈ ನಿಟ್ಟಿನಲ್ಲಿ ನಗರಪ್ರದೇಶಗಳಿಗೆ ಅನುಕೂಲಕರವಾಗಬಹುದಾದ ಹ್ಯಾಚ್‌‌ಬ್ಯಾಕ್ ಮಾದರಿಯೊಂದನ್ನು ಸಿದ್ಧಗೊಳಿಸಿ ಇದೀಗ ಫ್ರಾಂಕ್‌ಫರ್ಟ್ ಆಟೋ ಮೇಳದಲ್ಲಿ ಪ್ರದರ್ಶನಗೊಳಿಸಿದೆ.

ಫ್ರಾಂಕ್‌ಫರ್ಟ್ ಆಟೋ ಮೇಳ- ಎಲೆಕ್ಟ್ರಿಕ್ ಕಾರು ಅನಾವರಣಗೊಳಿಸಿದ ಹೋಂಡಾ

2030ರ ವೇಳೆಗೆ ಜಗತ್ತಿನಾದ್ಯಂತ ಶೇ.90 ರಷ್ಟು ಕಾರುಗಳು ಎಲೆಕ್ಟ್ರಿಕ್ ಮಯವಾಗಲಿದ್ದು, ಈ ಹಿನ್ನಲೆ ಪ್ರಮುಖ ವಾಹನ ಉತ್ಪಾದನಾ ಸಂಸ್ಥೆಗಳು ಎಲೆಕ್ಟ್ರಿಕ್ ಕಾರುಗಳ ನಿರ್ಮಾಣದ ಮೇಲೆ ಬೃಹತ್ ಪ್ರಮಾಣದ ಹೂಡಿಕೆಗೆ ಮುಂದಾಗುತ್ತಿವೆ.

Recommended Video

Tata Nexon Review: Interior And Exterior Details - Drivespark
ಫ್ರಾಂಕ್‌ಫರ್ಟ್ ಆಟೋ ಮೇಳ- ಎಲೆಕ್ಟ್ರಿಕ್ ಕಾರು ಅನಾವರಣಗೊಳಿಸಿದ ಹೋಂಡಾ

ಸದ್ಯ ಹೋಂಡಾ ಕೂಡಾ ಇದೇ ನಿಟ್ಟಿನಲ್ಲಿ ಮಹತ್ವದ ಯೋಜನೆಗೆ ಹಸಿರು ನಿಶಾನೆ ತೊರಿದ್ದು, ಫ್ರಾಂಕ್‌ಫರ್ಟ್ ಆಟೋ ಮೇಳದಲ್ಲಿ ಪ್ರದರ್ಶನಗೊಂಡ ಹ್ಯಾಚ್‌ಬ್ಯಾಕ್ ಕಾರು ಮಾದರಿಗಳನ್ನು 2019ರಿಂದ ಉತ್ಪಾದನೆ ಕೈಗೊಳ್ಳುವ ಬಗ್ಗೆ ಸುಳಿವು ನೀಡಿದೆ.

ಫ್ರಾಂಕ್‌ಫರ್ಟ್ ಆಟೋ ಮೇಳ- ಎಲೆಕ್ಟ್ರಿಕ್ ಕಾರು ಅನಾವರಣಗೊಳಿಸಿದ ಹೋಂಡಾ

ಇನ್ನು ರೆಟ್ರೊ ಲುಕ್‌ನೊಂದಿಗೆ ಸಾಕಷ್ಟು ಗಮನಸೆಳೆಯುತ್ತಿರುವ ಹೋಂಡಾ ಎಲೆಕ್ಟ್ರಿಕ್ ಕಾರು, ಸುರಕ್ಷೆಯಿಂದ ಹಿಡಿದು ಎಲ್ಲಾ ವಿಭಾಗದಲ್ಲೂ ಪ್ರಸ್ತುತ ಮಾದರಿಗಳಿಂತ ಅತ್ಯುತ್ತಮ ಸೌಲಭ್ಯಗಳನ್ನು ಒದಗಿಸಿರುವುದು ಮತ್ತೊಂದು ವಿಶೇಷ ಎಂದೇ ಹೇಳಬಹುದು.

ಫ್ರಾಂಕ್‌ಫರ್ಟ್ ಆಟೋ ಮೇಳ- ಎಲೆಕ್ಟ್ರಿಕ್ ಕಾರು ಅನಾವರಣಗೊಳಿಸಿದ ಹೋಂಡಾ

ಆದ್ರೆ ಹೊಸ ಮಾದರಿಗಳ ತಾಂತ್ರಿಕ ಅಂಶಗಳ ಬಗ್ಗೆ ಯಾವುದೇ ಅಧಿಕೃತ ಮಾಹಿತಿಗಳನ್ನು ಬಿಟ್ಟುಕೊಡದ ಹೋಂಡಾ ಸಂಸ್ಥೆಯು, ನಗರವಾಸಿಗಳಿಗೆ ಇದೊಂದು ಉತ್ತಮ ಮಾದರಿಯಾಗುವುದಲ್ಲದೇ ಉತ್ತಮ ಕಾರ್ಯಕ್ಷಮತೆಯನ್ನು ಹೊಂದಿರಲಿವೆ ಎಂಬುದಾಗಿ ಮಾತ್ರ ಹೇಳಿಕೊಂಡಿದೆ.

ಫ್ರಾಂಕ್‌ಫರ್ಟ್ ಆಟೋ ಮೇಳ- ಎಲೆಕ್ಟ್ರಿಕ್ ಕಾರು ಅನಾವರಣಗೊಳಿಸಿದ ಹೋಂಡಾ

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಪರಿಸರ ಮಾಲಿನ್ಯ ತಡೆ ಉದ್ದೇಶದೊಂದಿಗೆ ಎಲೆಕ್ಟ್ರಿಕ್ ಕಾರುಗಳ ಅಭಿವೃದ್ಧಿಗೆ ಹೋಂಡಾ ಸಂಸ್ಥೆಯು ಕೂಡಾ ವಿಶೇಷ ಒತ್ತು ನೀಡಿದ್ದು, 2019ರ ನಂತರವಷ್ಟೇ ಹೊಸ ಮಾದರಿಯ ಎಲೆಕ್ಟ್ರಿಕ್ ಕಾರುಗಳು ಖರೀದಿಗೆ ಲಭ್ಯವಾಗುವ ಸಾಧ್ಯತೆಗಳಿವೆ.

Most Read Articles

Kannada
English summary
Read in Kannada about Honda Unveils Urban EV Concept in 2017 Frankfurt Motor Show.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X