ಸೆಸ್ ಪ್ರಮಾಣ ಏರಿಕೆ- ಹ್ಯುಂಡೈ ಕಾರಿನ ಬೆಲೆಗಳಲ್ಲಿ ಭಾರೀ ಏರಿಕೆ

Written By:

ಸೆಡಾಸ್ ಮತ್ತು ಎಸ್‌ಯುವಿ ಕಾರುಗಳ ಮೇಲಿನ ಜಿಎಸ್‌ಟಿ ಸೆಸ್‌ನ್ನು ಶೇ.2 ರಿಂದ ಶೇ.7ಕ್ಕೆ ಏರಿಕೆಯಾಗಿರುವ ಹಿನ್ನೆಲೆ ಹ್ಯುಂಡೈ ಕೂಡಾ ತನ್ನ ಪ್ರಮುಖ ಕಾರು ಮಾದರಿಗಳ ಬೆಲೆಯನ್ನು ಏರಿಕೆ ಮಾಡಿದ್ದು, ಹೊಸ ದರ ಪಟ್ಟಿ ಬಿಡುಗಡೆಗೊಳಿಸಿದೆ.

ಸೆಸ್ ಪ್ರಮಾಣ ಏರಿಕೆ- ಹ್ಯುಂಡೈ ಕಾರಿನ ಬೆಲೆಗಳಲ್ಲಿ ಭಾರೀ ಏರಿಕೆ

ಜಿಎಸ್‌ಟಿ ಸೆಸ್‌ನ್ನು ಶೇ.25ಕ್ಕೆ ಏರಿಕೆ ಮಾಡಲು ಸುಗ್ರೀವಾಜ್ಞೆ ಹೊರಡಿಸಿದ್ದ ಕೇಂದ್ರ ಸಚಿವ ಸಂಪುಟ ಸಭೆಯು ಇದೀಗ ಸೆಸ್ ಪ್ರಮಾಣವನ್ನು ಹೆಚ್ಚಳ ಮಾಡಿದ್ದು, ಈ ಹಿಂದೆ ಇದ್ದ ಸೆಸ್ ಪ್ರಮಾಣವು ಶೇ.15ರಿಂದ ಶೇ.22ಕ್ಕೆ ಏರಿಕೆಯಾಗಲಿದೆ.

Recommended Video - Watch Now!
2017 Skoda Octavia RS Launched In India | In Kannada - DriveSpark ಕನ್ನಡ
ಸೆಸ್ ಪ್ರಮಾಣ ಏರಿಕೆ- ಹ್ಯುಂಡೈ ಕಾರಿನ ಬೆಲೆಗಳಲ್ಲಿ ಭಾರೀ ಏರಿಕೆ

ಈ ಹಿನ್ನೆಲೆ ಹ್ಯುಂಡೈ ಕಾರು ಮಾದರಿಗಳಾದ ಐ20, ವೆರ್ನಾ, ಕ್ರೇಟಾ, ಎಲಾಂತ್ರಾ, ಟಕ್ಸನ್ ಎಸ್‌ಯುವಿ ಮಾದರಿಗಳ ಬೆಲೆಯು ಏರಿಕೆಯಾಗಿದ್ದು, ಗರಿಷ್ಠವಾಗಿ ರೂ.84 ಸಾವಿರ ಹೆಚ್ಚಳ ಮಾಡಲಾಗಿದೆ.

ಸೆಸ್ ಪ್ರಮಾಣ ಏರಿಕೆ- ಹ್ಯುಂಡೈ ಕಾರಿನ ಬೆಲೆಗಳಲ್ಲಿ ಭಾರೀ ಏರಿಕೆ

ಸೆಷ್ಟೆಂಬರ್ 15ರಿಂದಲೇ ಹೊಸ ದರ ಅನ್ವಯವಾಗುವಂತೆ ಹೊಸ ದರ ಪಟ್ಟಿ ಬಿಡುಗಡೆಗೊಳಿಸಿರುವ ಹ್ಯುಂಡೈ, ತನ್ನ ಜನಪ್ರಿಯ ಹ್ಯಾಚ್‌ಬ್ಯಾಕ್ ಮಾದರಿಯಾದ ಐ10 ಬೆಲೆಗಳಲ್ಲಿ ಮಾತ್ರ ಯಾವುದೇ ಬದಲಾವಣೆ ತಂದಿಲ್ಲ.

ಸೆಸ್ ಪ್ರಮಾಣ ಏರಿಕೆ- ಹ್ಯುಂಡೈ ಕಾರಿನ ಬೆಲೆಗಳಲ್ಲಿ ಭಾರೀ ಏರಿಕೆ

ಇನ್ನು ಐ20 ಪೆಟ್ರೋಲ್ ಮಾದರಿಯ ಬೆಲೆಯನ್ನು ಸೆಸ್ ದರ ಏರಿಕೆ ಪ್ರಕಾರ ರೂ. 12,547 ಹೆಚ್ಚಳ ಮಾಡಲಾಗಿದ್ದು, ಡೀಸೆಲ್ ಮಾದರಿಯಲ್ಲಿ ಯಾವುದೇ ಏರಿಕೆ ಮಾಡಿಲ್ಲ. ಈ ಮೂಲಕ ತನ್ನ ಜನಪ್ರಿಯ ಮಾದರಿಗಳ ಮೇಲೆ ದರ ಹೆಚ್ಚಳಕ್ಕೆ ಕೈಹಾಕದಿರುವುದು ಪ್ರಮುಖ ವಿಚಾರ.

ಸೆಸ್ ಪ್ರಮಾಣ ಏರಿಕೆ- ಹ್ಯುಂಡೈ ಕಾರಿನ ಬೆಲೆಗಳಲ್ಲಿ ಭಾರೀ ಏರಿಕೆ

ಜೊತೆಗೆ ಇತ್ತೀಚೆಗೆ ಬಿಡುಗಡೆಯಾದ ವೆರ್ನಾ ಕಾರಿನ ಬೆಲೆಯಲ್ಲೂ ಭಾರೀ ಹೆಚ್ಚಳ ಮಾಡಿರುವ ಹ್ಯುಂಡೈ ರೂ.29 ಸಾವಿರ ಹೆಚ್ಚಳ ಮಾಡಿದ್ದು, ಟಕ್ಸನ್ ಬೆಲೆಗಳು ರೂ.64 ಸಾವಿರದಿಂದ ರೂ. 84 ಸಾವಿರ ಏರಿಕೆಯಾಗಿದೆ.

ಸೆಸ್ ಪ್ರಮಾಣ ಏರಿಕೆ- ಹ್ಯುಂಡೈ ಕಾರಿನ ಬೆಲೆಗಳಲ್ಲಿ ಭಾರೀ ಏರಿಕೆ

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಉತ್ತಮ ಕಾರ್ಯಕ್ಷಮತೆಯುಳ್ಳ ಉತ್ಪನ್ನಗಳನ್ನು ನೀಡುವಲ್ಲಿ ಮುಂಚೂಣಿಯಲ್ಲಿರುವ ಹ್ಯುಂಡೈಗೆ ಸೆಸ್ ಏರಿಕೆ ಪರಿಣಾಮ ಬೀರುವುದಿಲ್ಲವಾದರೂ ಮುಂಬರುವ ದಿನಗಳಲ್ಲಿನ ಮಾರುಕಟ್ಟೆ ಏರುಪೇರು ಕಾರು ಮಾರಾಟದ ಯಾವ ರೀತಿಯ ಪರಿಣಾಮ ಬೀರಲಿದೆ ಎಂಬುವುದನ್ನು ಕಾಯ್ದುನೋಡಬೇಕಿದೆ.

English summary
Read in Kannada about Hyundai Cars Gets A Price Increase.
Story first published: Saturday, September 16, 2017, 18:41 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark