ಬಿಡುಗಡೆ ಸಿದ್ದಗೊಂಡಿರುವ ಹ್ಯುಂಡೈ ಕೊನಾ ಸಬ್ ಕಂಪ್ಯಾಕ್ಟ್ ಎಸ್‌ಯುವಿ

ಹೊಸ ನಮೂನೆಯ ಸಬ್ ಕಂಪ್ಯಾಕ್ಟ್ ಎಸ್‌ಯುವಿ ಬಿಡುಗಡೆ ಬಗ್ಗೆ ತಿಂಗಳ ಹಿಂದಷ್ಟೇ ಸುಳಿವು ನೀಡಿದ್ದ ಹ್ಯುಂಡೈ ಸಂಸ್ಥೆಯು ಇದೀಗ ಕೊನಾ ಕಾರು ಚಿತ್ರಗಳನ್ನು ಬಿಡುಗಡೆ ಮಾಡಿದ್ದು, ಸಂಪೂರ್ಣ ಮಾಹಿತಿ ಇಲ್ಲಿದೆ.

To Follow DriveSpark On Facebook, Click The Like Button
ಬಿಡುಗಡೆ ಸಿದ್ದಗೊಂಡಿರುವ ಹ್ಯುಂಡೈ ಕೊನಾ ಸಬ್ ಕಂಪ್ಯಾಕ್ಟ್ ಎಸ್‌ಯುವಿ

ಹ್ಯುಂಡೈ ಪ್ರಿಯರಿಗೆ ಇದು ಸಿಹಿಸುದ್ದಿ ಎಂದರೇ ತಪ್ಪಾಗಲಾರದು. ಯಾಕೇಂದ್ರೆ ಹೊಸ ತಂತ್ರಜ್ಞಾನಗಳ ಅಳವಡಿಕೆ ಹೊಂದಿರುವ ಕೊನಾ ಸಬ್ ಕಂಪ್ಯಾಕ್ಟ್ ಎಸ್‌ಯುವಿ ಕಾರು ಬಿಡುಗಡೆಗೆ ಸಜ್ಜುಗೊಳ್ಳುತ್ತಿದೆ.

ಬಿಡುಗಡೆ ಸಿದ್ದಗೊಂಡಿರುವ ಹ್ಯುಂಡೈ ಕೊನಾ ಸಬ್ ಕಂಪ್ಯಾಕ್ಟ್ ಎಸ್‌ಯುವಿ

ಯುಟಿಲಿಟಿ ಎಸ್‌ಯುವಿ ಮಾದರಿಗಳಲ್ಲಿ ಮುಂಚೂಣಿಯಲ್ಲಿರುವ ಹೋಂಡಾ ಹೆಚ್-ಆರ್‌ವಿ, ನಿಸ್ಸಾನ್ ಜ್ಯೂಕ್, ಟೊಯೊಟಾ ಸಿ-ಹೆಚ್‌ಆರ್ ಮಾದರಿಗಳಿಗೆ ಸ್ಪರ್ಧೆ ಒಡ್ಡುವ ನಿಟ್ಟಿನಲ್ಲಿ ಹ್ಯುಂಡೈ ಕೊನಾ ಅಭಿವೃದ್ಧಿಗೊಂಡಿದೆ.

ಬಿಡುಗಡೆ ಸಿದ್ದಗೊಂಡಿರುವ ಹ್ಯುಂಡೈ ಕೊನಾ ಸಬ್ ಕಂಪ್ಯಾಕ್ಟ್ ಎಸ್‌ಯುವಿ

ಹೊಸ ರೀತಿಯ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಹೊಂದಿರುವ ಹ್ಯುಂಡೈ ಕೊನಾ ಎಸ್‌ಯುವಿಯಲ್ಲಿ ಡ್ಯುಯಲ್ ಕ್ಲಚ್ ಸೌಲಭ್ಯವಿದೆ.

ಬಿಡುಗಡೆ ಸಿದ್ದಗೊಂಡಿರುವ ಹ್ಯುಂಡೈ ಕೊನಾ ಸಬ್ ಕಂಪ್ಯಾಕ್ಟ್ ಎಸ್‌ಯುವಿ

ಆತ್ಯಾಕರ್ಷಕ ಹೊರ ವಿನ್ಯಾಸ ಹೊಂದಿರುವ ಹ್ಯುಂಡೈ ಕೊನಾ, ಭಾರತೀಯ ಗ್ರಾಹಕರ ಪ್ರಸ್ತುತ ಬೇಡಿಕೆಗಳಿಗೆ ತಕ್ಕಂತೆ ಸಿದ್ಧಗೊಂಡಿದೆ.

ಬಿಡುಗಡೆ ಸಿದ್ದಗೊಂಡಿರುವ ಹ್ಯುಂಡೈ ಕೊನಾ ಸಬ್ ಕಂಪ್ಯಾಕ್ಟ್ ಎಸ್‌ಯುವಿ

ಕೊನಾ ಕಾರಿನ ಮುಂಭಾಗದ ವಿನ್ಯಾಸವನ್ನು ಬಿಡುಗಡೆಗೆ ಸಜ್ಜುಗೊಂಡಿರುವ ಐ30 ಕಾರಿನ ರೀತಿಯಲ್ಲೇ ಸಿದ್ಧಗೊಳಿಸಲಾಗಿದ್ದು, ಎಲ್‌ಇಡಿ ಲೈಟಿಂಗ್ ವ್ಯವಸ್ಥೆ ಇರಿಸಲಾಗಿದೆ.

ಬಿಡುಗಡೆ ಸಿದ್ದಗೊಂಡಿರುವ ಹ್ಯುಂಡೈ ಕೊನಾ ಸಬ್ ಕಂಪ್ಯಾಕ್ಟ್ ಎಸ್‌ಯುವಿ

ಕಾರಿನ ಹಿಂಭಾಗ ನೋಟದಲ್ಲೂ ಸಾಕಷ್ಟು ಬದಲಾವಣೆ ತರಲಾಗಿದ್ದು, ಹ್ಯುಂಡೈ ಕೊನಾದಲ್ಲಿ ಮೊಟ್ಟಮೊದಲ ಬಾರಿಗೆ ಹೆಚ್‌ವಿಎಸಿ ಕಂಟ್ರೋಲರ್ ಸಿಸ್ಟಮ್ ಬಳಕೆ ಮಾಡಲಾಗಿದೆ.

ಬಿಡುಗಡೆ ಸಿದ್ದಗೊಂಡಿರುವ ಹ್ಯುಂಡೈ ಕೊನಾ ಸಬ್ ಕಂಪ್ಯಾಕ್ಟ್ ಎಸ್‌ಯುವಿ

ಎಂಜಿನ್ ಸಾಮರ್ಥ್ಯ

ಪೆಟ್ರೋಲ್ ಮಾದರಿಯಲ್ಲಿ ಎರಡು ವಿವಿಧ ಎಸ್‌ಯುವಿಗಳನ್ನು ಪರಿಚಯಿಸಲಾಗುತ್ತಿದ್ದು, ಮೊದಲನೇಯ ಆವೃತ್ತಿ 1.0-ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಮತ್ತು ಎರಡನೇಯ ಆವೃತ್ತಿ 1.6-ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಹೊಂದಿದೆ.

ಬಿಡುಗಡೆ ಸಿದ್ದಗೊಂಡಿರುವ ಹ್ಯುಂಡೈ ಕೊನಾ ಸಬ್ ಕಂಪ್ಯಾಕ್ಟ್ ಎಸ್‌ಯುವಿ

1.0-ಪೆಟ್ರೋಲ್ ಆವೃತ್ತಿಯು 118 ಬಿಎಚ್‌ಪಿ ಉತ್ಪಾದನಾ ಸಾಮರ್ಥ್ಯ ಹೊಂದಿದ್ದು, 1.6-ಲೀಟರ್ ಪೆಟ್ರೋಲ್ ಎಂಜಿನ್ 175 ಬಿಎಚ್‌ಪಿ ಉತ್ಪಾದನಾ ಶಕ್ತಿ ಹೊಂದಿದೆ.

ಬಿಡುಗಡೆ ಸಿದ್ದಗೊಂಡಿರುವ ಹ್ಯುಂಡೈ ಕೊನಾ ಸಬ್ ಕಂಪ್ಯಾಕ್ಟ್ ಎಸ್‌ಯುವಿ

ಮೊದಲು ಕೊನಾ ಪೆಟ್ರೋಲ್ ಮಾದರಿಗಳನ್ನು ಬಿಡುಗಡೆ ಮಾಡಲಿರುವ ಹ್ಯುಂಡೈ, ತದನಂತರ 1.6-ಲೀಟರ್ ಡೀಸೆಲ್ ಎಂಜಿನ್ ಹೊಂದಿರುವ ಕಾರುನ್ನು ಬಿಡುಗಡೆಗೆ ಯೋಜನೆ ರೂಪಿಸಿದೆ.

ಬಿಡುಗಡೆ ಸಿದ್ದಗೊಂಡಿರುವ ಹ್ಯುಂಡೈ ಕೊನಾ ಸಬ್ ಕಂಪ್ಯಾಕ್ಟ್ ಎಸ್‌ಯುವಿ

ಬೆಲೆಗಳು

ಹೊಸ ಕಾರಿನ ಬೆಲೆಗಳ ಬಗ್ಗೆ ಖಚಿತ ಮಾಹಿತಿಯನ್ನು ಬಿಡುಗಡೆ ಮಾಡಿಲ್ಲವಾದರೂ ಆರಂಭಿಕ ಆವೃತ್ತಿಯ ಬೆಲೆಯು ರೂ.12 ಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ.

English summary
Read in Kannada about After months of teasers and spy pictures, Hyundai has finally revealed its subcompact SUV Kona.
Story first published: Tuesday, June 13, 2017, 12:07 [IST]
Please Wait while comments are loading...

Latest Photos