ಭಾರತ ನಿರ್ಮಿತ ಫೋಕ್ಸ್‌ವ್ಯಾಗನ್ ವೆಂಟೊ ಕಾರು ವಿದೇಶಗಳಲ್ಲಿ ದಾಖಲೆ ಮಾರಾಟ

Written By:

ಫೋಕ್ಸ್‌ವ್ಯಾಗನ್ ಇಂಡಿಯಾ ಭಾರತದಲ್ಲಿಯೇ ನಿರ್ಮಿಸಿದ 2,50,000 ಕಾರುಗಳನ್ನು ಮೆಕ್ಸಿಕೊ ದೇಶಕ್ಕೆ ರಫ್ತು ಮಾಡುವ ಮೂಲಕ ಹೊಸ ಮೈಲಿಗಳನ್ನು ಸ್ಥಾಪಿಸಿದೆ.

ಭಾರತ ನಿರ್ಮಿತ ಫೋಕ್ಸ್‌ವ್ಯಾಗನ್ ವೆಂಟೊ ಕಾರು ವಿದೇಶಗಳಲ್ಲಿ ಧಾಖಲೆ ಮಾರಾಟ

ಫೋಕ್ಸ್‌ವ್ಯಾಗನ್ ಇಂಡಿಯಾ ತನ್ನ ಪ್ರಸಿದ್ಧ ಎಡ ಬದಿ ಚಾಲನೆ ಮಾಡುವ ಕಾರುಗಳಾದ ಪೋಲೊ ಮತ್ತು ವೆಂಟೊ ಕಾರುಗಳನ್ನು ಮೆಕ್ಸಿಕೊ ದೇಶಕ್ಕೆ ಹೆಚ್ಚು ರಫ್ತು ಮಾಡುತ್ತಿದ್ದು, ಈ ಕಾರುಗಳು ಹೆಚ್ಚಿನ ಬೇಡಿಕೆ ಪಡೆದುಕೊಂಡಿರುವ ಕಾರಣದಿಂದಾಗಿ ಕಂಪನಿ ಪೂರೈಕೆಯನ್ನು ಹೆಚ್ಚಿಸಿದೆ.

ಭಾರತ ನಿರ್ಮಿತ ಫೋಕ್ಸ್‌ವ್ಯಾಗನ್ ವೆಂಟೊ ಕಾರು ವಿದೇಶಗಳಲ್ಲಿ ಧಾಖಲೆ ಮಾರಾಟ

ಪ್ರಸಿದ್ಧ ಕಾರು ತಯಾರಕ ಸಂಸ್ಥೆಯಾದ ಫೋಕ್ಸ್‌ವ್ಯಾಗನ್ ಪುಣೆ ಘಟಕದಲ್ಲಿ ನಿರ್ಮಿಸಿದ ಕಾರುಗಳನ್ನು ಕಳೆದ ನಾಲ್ಕು ವರ್ಷಗಳಿಂದ ಮೆಕ್ಸಿಕೊ ದೇಶಕ್ಕೆ ರಫ್ತು ಮಾಡುತ್ತಿದ್ದು, ಅತಿ ಕಡಿಮೆ ಸಮಯದಲ್ಲಿ ದೊಡ್ಡ ಧಾಖಲೆ ನಿರ್ಮಿಸಿದೆ.

ಭಾರತ ನಿರ್ಮಿತ ಫೋಕ್ಸ್‌ವ್ಯಾಗನ್ ವೆಂಟೊ ಕಾರು ವಿದೇಶಗಳಲ್ಲಿ ಧಾಖಲೆ ಮಾರಾಟ

ಫೋಕ್ಸ್‌ವ್ಯಾಗನ್ ಕಂಪನಿ ಇಲ್ಲಿಯವರಿಗೆ ಉತ್ತರ ಅಮೆರಿಕಾ, ದಕ್ಷಿಣ ಅಮೆರಿಕಾ, ಆಫ್ರಿಕಾ ಮತ್ತು ಏಷ್ಯಾ ಖಂಡಗಳಲ್ಲಿ ಇರುವಂತಹ 35 ದೇಶಗಳಿಗೆ ಭಾರತ ನಿರ್ಮಿತ ಕಾರುಗಳನ್ನು ರಫ್ತು ಮಾಡುತ್ತಿದೆ. ಕಂಪನಿ ಇಲ್ಲಿಯವರೆಗೆ 3,10,000ಕ್ಕೂ ಹೆಚ್ಚು ಕಾರುಗಳನ್ನು ಈ ನಾಲ್ಕು ಖಂಡಗಳಿಗೆ ರಫ್ತು ಮಾಡಿದೆ.

ಭಾರತ ನಿರ್ಮಿತ ಫೋಕ್ಸ್‌ವ್ಯಾಗನ್ ವೆಂಟೊ ಕಾರು ವಿದೇಶಗಳಲ್ಲಿ ಧಾಖಲೆ ಮಾರಾಟ

ಮೆಕ್ಸಿಕನ್ ಮಾರುಕಟ್ಟೆಯಲ್ಲಿ ಜೆಟ್ಟಾ ಕ್ಲಾಸಿಕ್ ಕಾರಿಗೆ ಬದಲಾಗಿ ಬಿಡುಗಡೆಗೊಳಿಸಿದ ವಿ.ಡಬ್ಲ್ಯೂ ವೆಂಟೊ ಕಾರು ತನ್ನ ವಿನ್ಯಾಸ, ದೃಢವಾದ ಬೆಳವಣಿಗೆ, ಅತ್ಯಧಿಕ ಸುರಕ್ಷತಾ ಮಾನದಂಡಗಳಿಂದಾಗಿ ಅತಿ ಕಡಿಮೆ ಸಮಯದಲ್ಲಿ ಹೆಚ್ಚು ಪ್ರಖ್ಯಾತಿ ಪಡೆದುಕೊಂಡಿದೆ.

ಭಾರತ ನಿರ್ಮಿತ ಫೋಕ್ಸ್‌ವ್ಯಾಗನ್ ವೆಂಟೊ ಕಾರು ವಿದೇಶಗಳಲ್ಲಿ ಧಾಖಲೆ ಮಾರಾಟ

ಫೋಕ್ಸ್‌ವ್ಯಾಗನ್ ಸಂಸ್ಥೆಯ ಪುಣೆ ಘಟಕ ಹೆಚ್ಚು ಸೌಲಭ್ಯಗಳನ್ನು ಹೊಂದಿದ್ದು, ಸದ್ಯ ರೂ 5,720 ಕೋಟಿ ಬೆಳೆಯಷ್ಟು ಬಂಡವಾಳ ತೊಡಗಿಸಲಾಗಿದೆ. ಈ ಘಟಕವು ಶೇಕಡಾ 82 %ರಷ್ಟು ಸ್ಥಳೀಕರಣ ಮಟ್ಟ ಗಳಿಸಿಕೊಂಡಿದೆ.

ಭಾರತ ನಿರ್ಮಿತ ಫೋಕ್ಸ್‌ವ್ಯಾಗನ್ ವೆಂಟೊ ಕಾರು ವಿದೇಶಗಳಲ್ಲಿ ಧಾಖಲೆ ಮಾರಾಟ

ಫೋಕ್ಸ್‌ವ್ಯಾಗನ್ ಕಂಪನಿಯು ಮೇಕ್ ಇನ್ ಇಂಡಿಯಾ ಪ್ರಯೋಜನಗಳನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಂಡು ಹೆಚ್ಚು ಲಾಭ ಪಡೆದುಕೊಂಡಿದೆ. ಭಾರತ ನಿರ್ಮಿತ ಕಾರೊಂದು ಈ ಮಟ್ಟದಲ್ಲಿ ಪ್ರಖ್ಯಾತಿ ಪಡೆದುಕೊಡಿರುವುದು ಭಾರತದ ಹೆಮ್ಮೆಯ ವಿಚಾರವಾಗಿದೆ.

English summary
Volkswagen India achieved yet another milestone to its local success story by exporting the 2,50,000th India-made car to Mexico till date.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark