ಇಸುಝು ವಿ-ಕ್ರಾಸ್ ಖರೀದಿಗಾಗಿ 15 ಲಕ್ಷ ಮುಂಗಡ ನೀಡಿದ್ದ ಈ ಗ್ರಾಹಕನ ಸ್ಥಿತಿ ಯಾರಿಗೂ ಬರದಿರಲಿ...

ಕಾರು ಖರೀದಿ ಮಾಡಲೆಂದು ಮುಂದಾಗಿದ್ದ ಗ್ರಾಹಕನೊಬ್ಬ ಮೈ ತುಂಬ ಸಾಲ ಮಾಡಿಕೊಂಡಿಕೊಂಡಿದಲ್ಲದೇ ಕಾರ್ ಡೀಲರ್‌ಗೆ ಹಣ ಪಾವತಿಸಿ ಹೊಸ ಕಾರಿಗಾಗಿ ಬೀದಿ ಬೀದಿ ತಿರುಗುವ ಪರಿಸ್ಥಿತಿ ಬಂದಿದೆ.

By Praveen

ಕೊಟ್ಟವನು ಕೊಡಂಗಿ ಇಸ್ಕೋಂಡವನು ವೀರಭದ್ರ ಎಂಬ ಗಾದೆ ಮಾತು ಇಲ್ಲೊಂದು ಪ್ರಕರಣಕ್ಕೆ ಸರಿ ಹೋಗುತ್ತೆ. ಯಾಕೇಂದ್ರೆ ಕಾರು ಖರೀದಿ ಮಾಡಲೆಂದು ಮುಂದಾಗಿದ್ದ ಗ್ರಾಹಕನೊಬ್ಬ ಮೈ ತುಂಬ ಸಾಲ ಮಾಡಿಕೊಂಡಿಕೊಂಡಿದಲ್ಲದೇ ಕಾರ್ ಡೀಲರ್‌ಗೆ ಹಣ ಪಾವತಿಸಿ ಹೊಸ ಕಾರಿಗಾಗಿ ಬೀದಿ ಬೀದಿ ತಿರುಗುವ ಪರಿಸ್ಥಿತಿ ಬಂದಿದೆ.

ಇಸುಝು ವಿ-ಕ್ರಾಸ್ ಖರೀದಿಗಾಗಿ 15 ಲಕ್ಷ ಮುಂಗಡ ನೀಡಿದ್ದ ಗ್ರಾಹಕನ ಸ್ಥಿತಿ ಯಾರಿಗೂ ಬರದಿರಲಿ...

ಕಳೆದ ಆಗಸ್ಟ್‌ನಲ್ಲಿ ಇಸುಝು ವಿ-ಕ್ರಾಸ್ ಖರೀದಿಗೆ ಮುಂದಾಗಿದ್ದ ಪುಣೆ ಮೂಲದ ಶಿವರಾಧನ್ ತಪಸ್ವಿ ಎನ್ನುವರು ಹೊಸ ಕಾರು ಖರೀದಿಗಾಗಿ ರೂ. 15.30 ಲಕ್ಷ ಮುಂಗಡ ಪಾವತಿ ಮಾಡಿದ್ದು, ಮುಂಗಡ ಪಾವತಿ ಮಾಡಿದ 2 ದಿನದೊಳಗಾಗಿ ಕಾರು ಪೂರೈಕೆ ಮಾಡುವುದಾಗಿ ಇಸುಝು ಡೀಲರ್ಸ್‌ ಒಬ್ಬ ಗ್ರಾಹಕನಿಗೆ ಪಂಗನಾಮ ಹಾಕಿದ್ದಾನೆ.

ಇಸುಝು ವಿ-ಕ್ರಾಸ್ ಖರೀದಿಗಾಗಿ 15 ಲಕ್ಷ ಮುಂಗಡ ನೀಡಿದ್ದ ಗ್ರಾಹಕನ ಸ್ಥಿತಿ ಯಾರಿಗೂ ಬರದಿರಲಿ...

ಪುಣೆಯಲ್ಲಿರುವ ಸಾಯಿ ಸಾಕ್ಷಿ ಆಟೋ ವಲ್ಡ್ ಪ್ರೈ.ಲಿ ನಿಂದಲೇ ಈ ಮಾಹಾಮೋಸ ನಡೆದಿದ್ದು, ವಿ-ಕ್ರಾಸ್ ಖರೀದಿ ಮಾಡಲು ಮುಂದಾಗಿದ್ದ ಶಿವರಾಧನ್ ತಪಸ್ವಿ ಇದೀಗ ಕಾನೂನು ಹೋರಾಟದಲ್ಲೂ ಕೈ ಚೆಲ್ಲಿ ಕೂರುವ ಪರಿಸ್ಥಿತಿ ಎದುರಾಗಿದೆ.

ಇಸುಝು ವಿ-ಕ್ರಾಸ್ ಖರೀದಿಗಾಗಿ 15 ಲಕ್ಷ ಮುಂಗಡ ನೀಡಿದ್ದ ಗ್ರಾಹಕನ ಸ್ಥಿತಿ ಯಾರಿಗೂ ಬರದಿರಲಿ...

ಇದಕ್ಕೆ ಕಾರಣ ವಿ-ಕ್ರಾಸ್ ಕಾರು ಪೂರೈಕೆ ಮಾಡುವುದಾಗಿ ರೂ. 15.30 ಲಕ್ಷ ಮುಂಗಡ ಪಡೆದಿರುವ ಸಾಯಿ ಸಾಕ್ಷಿ ಆಟೋ ವಲ್ಡ್ ಪ್ರೈ.ಲಿ ಸಂಸ್ಥೆ ಮುಚ್ಚಿಕೊಂಡಿದ್ದು, ಹೊಸ ಕಾರಿಗಾಗಿ ಕಾಯ್ದುಕೊಂಡಿದ್ದ ಗ್ರಾಹಕನಿಗೆ ಮಕ್ಮಲ್ ಟೋಪಿ ಹಾಕಿರುವುದು ಬೆಳಕಿಗೆ ಬಂದಿದೆ.

Recommended Video

Horrifying Footage Of A Cargo Truck Going In Reverse, Without A Driver - DriveSpark
ಇಸುಝು ವಿ-ಕ್ರಾಸ್ ಖರೀದಿಗಾಗಿ 15 ಲಕ್ಷ ಮುಂಗಡ ನೀಡಿದ್ದ ಗ್ರಾಹಕನ ಸ್ಥಿತಿ ಯಾರಿಗೂ ಬರದಿರಲಿ...

ಆದ್ರೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಸುಝು ಇಂಡಿಯಾ ಮಾಧ್ಯಮ ಪ್ರಕಟನೆ ಮೂಲಕ ಹಣಕಾಸಿನ ವಿಚಾರವನ್ನು ತಳ್ಳಿಹಾಕಿದ್ದು, ಘಟನೆಗೂ ನಮಗೂ ಯಾವುದೇ ಸಂಬಂಧವಿಲ್ಲ ಎಂದಿದೆ.

ಇಸುಝು ವಿ-ಕ್ರಾಸ್ ಖರೀದಿಗಾಗಿ 15 ಲಕ್ಷ ಮುಂಗಡ ನೀಡಿದ್ದ ಗ್ರಾಹಕನ ಸ್ಥಿತಿ ಯಾರಿಗೂ ಬರದಿರಲಿ...

ಮಾಧ್ಯಮ ಪ್ರಕಟನೆಯಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಿರುವ ಇಸುಝು ಇಂಡಿಯಾ ಸಂಸ್ಥೆಯು ' ವಿ-ಕ್ರಾಸ್ ಪೂರೈಕೆ ಮಾಡುವುದಾಗಿ ಗ್ರಾಹಕರೊಬ್ಬರಿಂದ 15.30 ಲಕ್ಷ ಮುಂಗಡ ಪಡೆದಿರುವ ಸಾಯಿ ಸಾಕ್ಷಿ ಆಟೋ ವಲ್ಡ್ ಪ್ರೈ.ಲಿ ಸಂಸ್ಥೆಗೂ ಮತ್ತು ಇಸುಝುಗೂ ಯಾವುದೇ ವ್ಯವಹಾರಿಕ ಸಂಬಂಧವಿಲ್ಲ. ಹೀಗಾಗಿ ಹಣಕಾಸು ವಿಚಾರದಲ್ಲಿ ಇಸುಝು ಇಂಡಿಯಾ ಸಂಸ್ಥೆಯದ್ದು ಯಾವುದೇ ಪಾತ್ರವಿಲ್ಲ" ಎಂದಿದೆ.

ಇಸುಝು ವಿ-ಕ್ರಾಸ್ ಖರೀದಿಗಾಗಿ 15 ಲಕ್ಷ ಮುಂಗಡ ನೀಡಿದ್ದ ಗ್ರಾಹಕನ ಸ್ಥಿತಿ ಯಾರಿಗೂ ಬರದಿರಲಿ...

ಇದರ ಜೊತೆಗೆ ಮುಂಗಡ ಪಾವತಿ ವಿಚಾರವಾಗಿ ಹಣ ನೀಡಿದ ಸಂಸ್ಥೆಯೊಂದಿಗೆ ವ್ಯವಹಾರ ಮಾಡಿಕೊಳ್ಳಬೇಕೇ ಹೊರತು ಇಸುಝು ಇಂಡಿಯಾ ಇದಕ್ಕೆ ಹೊಣೆಯಲ್ಲ ಎಂದು ಸಾಯಿ ಸಾಕ್ಷಿ ಆಟೋ ವಲ್ಡ್ ಪ್ರೈ.ಲಿ ಮಾಹಾಮೋಸಕ್ಕೆ ಸ್ಪಷ್ಟನೆ ನೀಡಿದೆ.

ತಪ್ಪದೇ ಓದಿ-ಬೆಂಗಳೂರಿನ ಪ್ರತಿಷ್ಠಿತ ಮಾರುತಿ ಸರ್ವಿಸ್ ಸ್ಟೇಷನ್ ಕರ್ಮಕಾಂಡ ಬಯಲು ಮಾಡಿದ ಗ್ರಾಹಕ..

ಇಸುಝು ವಿ-ಕ್ರಾಸ್ ಖರೀದಿಗಾಗಿ 15 ಲಕ್ಷ ಮುಂಗಡ ನೀಡಿದ್ದ ಗ್ರಾಹಕನ ಸ್ಥಿತಿ ಯಾರಿಗೂ ಬರದಿರಲಿ...

ಇದರಿಂದಾಗಿ ಕಂಗಾಲಾಗಿರುವ ಗ್ರಾಹಕ ಶಿವರಾಧನ್ ತಪಸ್ವಿ ಅವರು ಮುಂಗಡ ಪಡೆದು ನಾಪತ್ತೆಯಾಗಿರುವ ಡೀಲರ್ ಪತ್ತೆಗಾಗಿ ಅಲೆದಾಡುತ್ತಿದ್ದು, ಹೊಸ ಕಾರು ಇಲ್ಲದೇ ತೆಗದುಕೊಂಡ ಸಾಲಕ್ಕೆ ಈಗಾಗಲೇ 4 ತಿಂಗಳ ಇಎಂಐ ಪಾವತಿಸುತ್ತಾ ಹಿಡಿಶಾಪ ಹಾಕುತ್ತಿದ್ದಾರೆ.

ಇಸುಝು ವಿ-ಕ್ರಾಸ್ ಖರೀದಿಗಾಗಿ 15 ಲಕ್ಷ ಮುಂಗಡ ನೀಡಿದ್ದ ಗ್ರಾಹಕನ ಸ್ಥಿತಿ ಯಾರಿಗೂ ಬರದಿರಲಿ...

ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲ ದಾಖಲೆಗಳಿದ್ದರೂ ಕಾನೂನು ಹೋರಾಟದಲ್ಲಿ ಕೈ ಚೆಲ್ಲಿ ಕೂರಬೇಕಾದ ಪರಿಸ್ಥಿತಿ ಎದುರಾಗಿದ್ದು, ಸಂಕಷ್ಟದಲ್ಲಿರುವ ಗ್ರಾಹಕನ ಬಗ್ಗೆ ಇಸುಝು ಇಂಡಿಯಾ ಕೂಡಾ ಬೇಜವಾಬ್ದಾರಿ ವರ್ತನೆ ಗ್ರಾಹಕನ ಆಕ್ರೋಶಕ್ಕೆ ಕಾರಣವಾಗಿದೆ.

ಸುದ್ದಿ ಮೂಲ-team-bhp.com

ತಪ್ಪದೇ ಓದಿ-ಕೇಂದ್ರ ಸರ್ಕಾರವು ಬುಲ್‌ ಬಾರ್ ಹಾಗೂ ಕ್ರ್ಯಾಶ್‌ ಗಾರ್ಡ್‌ ಬ್ಯಾನ್ ಮಾಡಿದ್ದೇಕೆ ಗೊತ್ತಾ?

ಕಾರಿನ ಗೇರ್ ಸ್ಕಿಪ್ ಮಾಡುವುದರಿಂದ ಗೇರ್‌ಬಾಕ್ಸ್ ಹಾಳಾಗುತ್ತಾ ? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

Trending DriveSpark YouTube Videos

Subscribe To DriveSpark Kannada YouTube Channel - Click Here

Most Read Articles

Kannada
Read more on isuzu ಇಸುಝು
English summary
This Customer Paid For Isuzu V-Cross In August 2017; Yet To Receive The Car!
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X