ಟಾಟಾ ಮೋಟಾರ್ಸ್ ಅಧೀನದ ಬ್ರಿಟಿಷ್ ಕಾರು ಉತ್ಪಾದನಾ ಸಂಸ್ಥೆಯಾದ ಜಾಗ್ವಾರ್, ಲ್ಯಾಂಡ್ ರೋವರ್ ಹಾಗೂ ರೇಂಜ್ ರೋವರ್ ಮುಂಬರುವ ದಿನಗಳಲ್ಲಿ ಬ್ರ್ಯಾಂಡ್ ಹೆಸರುಗಳನ್ನು ಬದಲಿಸಲಿದ್ದು, ಹೊಸ ಕ್ರಮವೊಂದನ್ನು ಪರಿಚಯಿಸುತ್ತಿದೆ.
ಇತ್ತೀಚೆಗೆ ಟೆಸ್ಟ್ ಡ್ರೈವ್ ಕೈಗೊಂಡಿದ್ದ ಜಾಗ್ವಾರ್ ಸಂಸ್ಥೆಯು ತನ್ನ ಎಫ್ ಟೈಪ್ ಕಾರು ಆವೃತ್ತಿಗಳಲ್ಲಿ "P380 AVD" ಮಾದರಿಯ ಹೊಸ ನಾಮಕರಣ ಮಾಡುವ ಮೂಲಕ ಭಾರೀ ಚರ್ಚೆಗೆ ಕಾರಣವಾಗಿದ್ದು, ವಿನೂತನ ಕ್ರಮದ ಕುರಿತು ಇದೀಗ ಅಧಿಕೃತ ಮಾಹಿತಿಯನ್ನು ಹೊರಹಾಕಿದೆ.
"P380 AVD" ಸೂಚಕಗಳು ಕಾರಿನ ಎಂಜಿನ್ ಮಾದರಿಗಳು ಸೇರಿದಂತೆ ಮಹತ್ವದ ಮಾಹಿತಿ ನೀಡಬಲ್ಲ ವೈಶಿಷ್ಟ್ಯತೆಗಳನ್ನು ಹೊಂದಿದ್ದು, ಪಿ ಎಂದರೆ ಪೆಟ್ರೋಲ್ ಎಂಜಿನ್ ಎಂದು ಅದರಂತೆ 380 ಎನ್ನುವುದು ಎಂಜಿನ್ ಉತ್ಪಾದಿಸಬಲ್ಲ ಬಿಎಚ್‌ಪಿ ಸಾಮರ್ಥ್ಯ ಹಾಗೂ ಎವಿಡಿ ಎಂಬುವುದು ಆಲ್ ವೀಲ್ಡ್ ಡ್ರೈವ್ ಸ್ಟಿಸಂ ಹೊಂದಿರುವುದು ಸುಲಭವಾಗಿ ಗುರುತಿಸಬಹುದಾಗಿದೆ.
ಹೊಸ ಕ್ರಮದಿಂದ ಕಾರು ಮಾದರಿಗಳ ಕುರಿತಾದ ಮಾಹಿತಿಯನ್ನು ಮೇಲ್ನೋಟದಲ್ಲೇ ಸುಲಭವಾಗಿ ಪಡೆದುಕೊಳ್ಳಬಹುದಾಗಿದ್ದು, ಕಾರು ಮಾದರಿಯು ಪೆಟ್ರೋಲ್ , ಡಿಸೇಲ್ ಅಥವಾ ಹೈಬ್ರಿಡ್ ಮಾದರಿಯದ್ದು ಎಂಬುವುದನ್ನು ತಿಳಿಯಬಹುದಾಗಿದೆ.
ಹೀಗಾಗಿ ಡಿ ಇದಲ್ಲಿ ಡಿಸೇಲ್, ಪಿ ಇದ್ದಲ್ಲಿ ಪೆಟ್ರೋಲ್, ಹೆಚ್ ಇದ್ದಲ್ಲಿ ಹೈಬ್ರಿಡ್ ಹಾಗೆಯೇ ಇ ಇದ್ದಲ್ಲಿ ಎಲೆಕ್ಟ್ರಿಕ್ ಎಂಜಿನ್ ಮಾದರಿ ಕಾರಿದು ಎಂಬುವುದನ್ನು ಪತ್ತೆಹಚ್ಚಲು ಸುಲಭವಾಗಲಿದ್ದು, ಇದು ಗ್ರಾಹಕರಿಗೂ ಸಾಕಷ್ಟು ಸಹಕಾರಿಯಾಗಲಿದೆ.
ಈ ಹಿನ್ನೆಲೆ ಹೊಸ ಪದ್ಧತಿಯನ್ನು 2018ರಿಂದ ಕಡ್ಡಾಯವಾಗಿ ಜಾರಿಗೆ ತರಲು ಮುಂದಾಗಿರುವ ಜೆಎಲ್ಆರ್ ಸಂಸ್ಥೆಯು, ಇನ್ಮುಂದೆ ಹೊಸದಾಗಿ ಉತ್ಪಾದನೆಗೊಳ್ಳಲಿರುವ ಮಾದರಿಗಳಲ್ಲಿ ಹೊಸ ಪದ್ದತಿಯನ್ನು ಪರಿಚಯಿಸಲಿದೆ.
ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Subscribe to Kannada DriveSpark