ಎರಡನೇ ವರ್ಷದ ಸಂಭ್ರಮದಲ್ಲಿರುವ 'ಜೀಟೊ' ವಾಹನ ಕೊಳ್ಳಲು ಆಫರ್ ನೀಡಿದ ಮಹೀಂದ್ರಾ

Written By:

ಎರಡು ವರ್ಷಗಳ ಹಿಂದೆ ಬಿಡುಗಡೆಗೊಳಿಸಿದ ಮಹೀಂದ್ರಾ ಸಂಸ್ಥೆಯ ಸಣ್ಣ ವಾಣಿಜ್ಯ ವಾಹನ ಜೀಟೊ, ಇದೀಗ ಎರಡನೇ ವಾರ್ಷಿಕೋತ್ಸವವನ್ನು 50,000ಕ್ಕೂ ಹೆಚ್ಚು ಸಂತುಷ್ಟ ಗ್ರಾಹಕರೊಂದಿಗೆ ಆಚರಿಸುತ್ತದೆ.

ಮಹೀಂದ್ರಾ ಸಂಸ್ಥೆಯ ಈ ಸಣ್ಣ ವಾಣಿಜ್ಯ ವಾಹನ ಜೀಟೊ ಎಲ್ಲಡೆ ಜನಪ್ರಿಯಗೊಂಡಿದ್ದು, ಈ ವಾಹನವನ್ನು ಮತ್ತಷ್ಟು ಜನಪ್ರಿಯಗೊಳಿಸಲು ನಿಟ್ಟಿನಲ್ಲಿ ಕಂಪೆನಿಯು ಪಾವತಿ ನೀತಿಗಳನ್ನು ಬದಲಾವಣೆ ಮಾಡಲು ತೀರ್ಮಾನ ಮಾಡಿದೆ.

ಇನ್ನು ಮುಂದೆ ಸುಲಭವಾಗಿ ಡೌನ್ ಪೇಮೆಂಟ್ ಆಯ್ಕೆಗಳನ್ನು ನೀಡಲು ಸಂಸ್ಥೆ ತೀರ್ಮಾನಿಸಿದೆ ಮತ್ತು ರೂ. 1,00,000 ಲಕ್ಷದವರೆಗೂ ವಿಮಾ ಕವರ್ ನೀಡಲಿದೆ.

ಮಹೀಂದ್ರಾ ಜೀಟೊ DiGiSENSE ಎನ್ನುವ ತಂತ್ರಜ್ಞಾನ ಪಡೆದುಕೊಂಡಿದ್ದು, ಈ ತಂತ್ರಜ್ಞಾನ ಈ ವಾಹನದ ಸಂಪರ್ಕ ಮಟ್ಟವನ್ನು ಹೆಚ್ಚಿಸಿದೆ ಎನ್ನಬಹುದು.

ಈ ತಂತ್ರಜ್ಞಾನವು ಮಾಲೀಕರಿಗೆ ಜೀಟೊ ವಾಹನದ ಬಗ್ಗೆ ಪ್ರಮುಖ ಮಾಹಿತಿಯನ್ನು ರಿಮೋಟ್ ಮೂಲಕ ಪಡೆದುಕೊಳ್ಳಲು ಅನುಮತಿ ನೀಡುತ್ತದೆ, ಇದರಿಂದಾಗಿ ವಾಹನದ ಒಟ್ಟಾರೆ ದಕ್ಷತೆ ಮತ್ತು ಉತ್ಪಾದಕತೆಯನ್ನು ಸುಧಾರಿಸಬಹುದಾಗಿದೆ.

ನಿಮಗೆ ಗೊತ್ತೇ ? ಭಾರತದಲ್ಲಿನ ಸಣ್ಣ ವಾಣಿಜ್ಯ ವಾಹನ ವಿಭಾಗದಲ್ಲಿ ಜೀಟೊ ಶೇಕಡಾ 22.1% ರಷ್ಟು ಮಾರುಕಟ್ಟೆ ಪಾಲನ್ನು ಸಾಧಿಸಿದೆ ಮತ್ತು ಪ್ರಸಕ್ತ ವರ್ಷ 2017ರಲ್ಲಿ ಶೇಕಡಾ 25% ರಷ್ಟು ಬೆಳವಣಿಗೆಯನ್ನು ಕಂಡಿದೆ.

ಜೀಟೊ ವಾಹನ ಹೆಚ್ಚಿನ ಮೈಲೇಜ್ ಭರವಸೆ ನೀಡಲಿದ್ದು, ಹೆಚ್ಚಿನ ಗಳಿಕೆಯ ಸಾಮರ್ಥ್ಯ ಮತ್ತು ಕಾರಿನಲ್ಲಿ ಇರುವಂತಹ ಸೌಕರ್ಯಗಳನ್ನು ನೀಡುತ್ತಿದ್ದು, ಗ್ರಾಹಕರಿಗೆ ಅಚ್ಚು ಮೆಚ್ಚಿನ ವಾಹನವಾಗಿದೆ.

English summary
Mahindra launched the Jeeto small commercial vehicle two years ago and now celebrates the vehicle's second anniversary with over 50,000 happy customers.
Story first published: Saturday, June 24, 2017, 13:51 [IST]
Please Wait while comments are loading...

Latest Photos