ರೂ. 3.45 ಲಕ್ಷಕ್ಕೆ ಬಿಡುಗಡೆಯಾದ ಮಾರುತಿ ಸುಜುಕಿ ಆಲ್ಟೊ 800 ಉಸ್ತವ್ ಎಡಿಷನ್

Written By:

ದೇಶಿಯ ಮಾರುಕಟ್ಟೆಯಲ್ಲಿ ಇದೀಗ ಸಾಲು ಸಾಲು ಹಬ್ಬಗಳ ಹಿನ್ನೆಲೆ ಕಾರುಗಳ ಖರೀದಿ ಪ್ರಕ್ರಿಯೆ ಜೋರಾಗಿದ್ದು, ಮಾರುತಿ ಸುಜುಕಿ ಸಂಸ್ಥೆಯು ಕೂಡಾ ಗ್ರಾಹಕರನ್ನು ಸೆಳೆಯುವ ನಿಟ್ಟಿನಲ್ಲಿ ತನ್ನ ಹೊಸ ಮಾದರಿಯ ಆಲ್ಟೊ 800 ಉಸ್ತವ್ ಎಡಿಷನ್ ಕಾರ್‌ನ್ನು ಬಿಡುಗಡೆ ಮಾಡಿದೆ.

ಮಾರುತಿ ಸುಜುಕಿ ಆಲ್ಟೊ 800 ಉಸ್ತವ್ ಎಡಿಷನ್ ಬಿಡುಗಡೆ

ಮಧ್ಯಮ ವರ್ಗಗಳನ್ನು ಸೆಳೆಯುವಲ್ಲಿ ಯಶಸ್ವಿಯಾಗಿರುವ ಹ್ಯಾಚ್‌ಬ್ಯಾಕ್ ವೈಶಿಷ್ಟ್ಯತೆಗಳೊಂದಿಗೆ ಸಿದ್ಧಗೊಂಡಿರುವ ಮಾರುತಿ ಸುಜುಕಿ ಆಲ್ಟೊ 800 ಉಸ್ತವ್ ಎಡಿಷನ್ ಕೈಗೆಟುಕುವ ದರಗಳಲ್ಲಿ ಬಿಡುಗಡೆಯಾಗಿದ್ದು, ರೂ.3.45 ಲಕ್ಷಕ್ಕೆ ಖರೀದಿಗೆ ಲಭ್ಯವಿರಲಿದೆ.

ಮಾರುತಿ ಸುಜುಕಿ ಆಲ್ಟೊ 800 ಉಸ್ತವ್ ಎಡಿಷನ್ ಬಿಡುಗಡೆ

ಇನ್ನು ಈ ಹಿಂದಿನ ಸುಜುಕಿ ಆಲ್ಟೊ 800 ಮಾದರಿಯ ಎಂಜಿನ್ ವಿನ್ಯಾಸಗಳನ್ನೇ ಉಸ್ತವ್ ಎಡಿಷನ್‌ನಲ್ಲಿ ಮುಂದುವರಿಸಲಾಗಿದ್ದು, ಹೊರ ಮತ್ತು ಒಳವಿನ್ಯಾಸಗಳಲ್ಲಿ ಮಹತ್ತರ ಬದಲಾವಣೆಗಳನ್ನು ತರಲಾಗಿದೆ.

Recommended Video - Watch Now!
Datsun rediGO Gold 1.0-Litre Launched In India - DriveSpark
ಮಾರುತಿ ಸುಜುಕಿ ಆಲ್ಟೊ 800 ಉಸ್ತವ್ ಎಡಿಷನ್ ಬಿಡುಗಡೆ

ಉಸ್ತವ್ ಎಡಿಷನ್ ಆವೃತ್ತಿಯು ಎಲ್ಎಕ್ಸ್ಐ ಮತ್ತು ವಿಎಕ್ಸ್‌ವಿ ರೂಪಾಂತರಗಳಲ್ಲಿ ಲಭ್ಯವಿದ್ದು, ಸೈಡ್ ಪ್ರೋಫೈಲ್, ಒಆರ್‌ವಿಎಮ್ ಕವರ್ ಗ್ರಾಫಿಕ್ಸ್, ಡೂರ್ ಸೀಲ್ ಗಾರ್ಡ್ ಸೇರಿದಂತೆ ಪ್ರಮುಖ ವಿಭಾಗಗಳಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ.

ಮಾರುತಿ ಸುಜುಕಿ ಆಲ್ಟೊ 800 ಉಸ್ತವ್ ಎಡಿಷನ್ ಬಿಡುಗಡೆ

ಇನ್ನು 796 ಸಿಸಿ ತ್ರಿ ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 47.3-ಬಿಎಚ್‌ಪಿ ಹಾಗೂ 69-ಎನ್ಎಂ ಟಾರ್ಕ್ ಉತ್ಪಾದನಾ ಶಕ್ತಿಯೊಂದಿಗೆ 5-ಸ್ಪಿಡ್ ಮ್ಯಾನುವಲ್ ಗೇರ್‌ಬಾಕ್ಸ್, ಚಾಲಕನ ಮುಂಭಾಗದ ಏರ್‌ಬ್ಯಾಗ್ ಆಯ್ಕೆಯನ್ನು ನೀಡಲಾಗಿದೆ.

ಮಾರುತಿ ಸುಜುಕಿ ಆಲ್ಟೊ 800 ಉಸ್ತವ್ ಎಡಿಷನ್ ಬಿಡುಗಡೆ

ಮತ್ತೊಂದು ಪ್ರಮುಖ ವಿಚಾರವೆಂದ್ರೆ ಮಾರುತಿ ಸುಜುಕಿ ಆಲ್ಟೊ 800 ಉಸ್ತವ್ ಎಡಿಷನ್ ಮಾದರಿಗಳಲ್ಲೇ ಪ್ರಿಮಿಯಂ ಮಾದರಿಯೊಂದನ್ನು ಪರಿಚಯಿಸಲಾಗಿದ್ದು, ಮೊದಲ ಶ್ರೇಣಿಗಿಂತ ಹೆಚ್ಚುವರಿಯಾಗಿ 20 ಸಾವಿರ ನಿಗದಿ ಮಾಡಲಾಗಿದೆ.

ಮಾರುತಿ ಸುಜುಕಿ ಆಲ್ಟೊ 800 ಉಸ್ತವ್ ಎಡಿಷನ್ ಬಿಡುಗಡೆ

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಹ್ಯಾಚ್‌ಬ್ಯಾಕ್ ಆವೃತ್ತಿಗಳಲ್ಲಿ ಆಲ್ಟೊ 800 ಈಗಾಗಲೇ ಸಾಕಷ್ಟು ಜನಪ್ರಿಯತೆ ಹೊಂದಿದ್ದು, ಸಾಲು ಸಾಲು ವಿಶೇಷ ಆಚರಣೆಗಳ ಹಿನ್ನೆಲೆ ಹೊಸ ಆವೃತ್ತಿಯನ್ನು ಬಿಡುಗಡೆ ಮಾಡಲಾಗಿದ್ದು, ಸ್ಪೆಷಲ್ ಎಡಿಷನ್ ಖರೀದಿ ಮೇಲೆ ವಿಶೇಷ ಸೌಲಭ್ಯಗಳು ಕೂಡಾ ದೊರೆಯಲಿವೆ.

English summary
Read in Kannada about Maruti Suzuki Alto 800 Utsav Edition Launched In India.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark