ಶಕ್ತಿಶಾಲಿ ಬಲೆನೊ ಆರ್.ಎಸ್ ಬುಕಿಂಗ್ಸ್ ಓಪನ್: ನಿಮ್ಮ ಕಾರನ್ನು ಇಂದೇ ಕಾಯ್ದಿರಿಸಿ

Written By:

ಹೊಚ್ಚ ಹೊಸ ಬಲೆನೊ ಕಾರಿನ ಪರೀಕ್ಷೆಯ ವೇಳೆ ಸೆರೆ ಹಿಡಿದಿದ್ದ ಗೌಪ್ಯ ಚಿತ್ರಗಳ ವಿಚಾರ ನಿಮಗೀಗಾಗಲೇ ತಿಳಿದಿರುವ ವಿಚಾರ, ಮುಂದುವರೆದ ಭಾಗವಾಗಿ ಬಲೆನೊ ಆರ್ ಎಸ್ ಕಾರಿನ ಚಿತ್ರಗಳನ್ನು ನೆಕ್ಸಾ ತನ್ನ ಅಧಿಕೃತ ವೆಬ್ ಸೈಟಿನಲ್ಲಿ ಬಿಡುಗಡೆಗೊಳಿಸಿದೆ.

ಶಕ್ತಿಶಾಲಿ ಬಲೆನೊ ಆರ್.ಎಸ್ ಬುಕಿಂಗ್ಸ್ ಓಪನ್: ನಿಮ್ಮ ಕಾರನ್ನು ಇಂದೇ ಕಾಯ್ದಿರಿಸಿ

ಮುಂದಿನ ತಿಂಗಳು ಮಾರ್ಚ್ 3 ರಂದು ಬಿಡುಗಡೆಗೊಳ್ಳುತ್ತಿರುವ ಬಲೆನೊ ಆರ್ ಎಸ್ ಬಗ್ಗೆ ಈಗಾಗಲೇ ಹೆಚ್ಚು ಚರ್ಚೆ ಶುರುವಾಗಿದ್ದು, ನೆಕ್ಸಾ ಅಧಿಕೃತ ವೆಬ್ ಸೈಟಿನಲ್ಲಿ ಬುಕ್ ಮಾಡಬಹುದಾದ ಆಯ್ಕೆಯನ್ನು ಕಂಪನಿ ನೀಡಿದೆ. ಕೇವಲ ರೂ. 11,000 ಮುಂಗಡ ಹಣ ಪಾವತಿ ಮಾಡಿ ತಮ್ಮ ಕಾರಿನ ಬುಕಿಂಗ್ ಮಾಡಬಹುದು ಎಂದು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಶಕ್ತಿಶಾಲಿ ಬಲೆನೊ ಆರ್.ಎಸ್ ಬುಕಿಂಗ್ಸ್ ಓಪನ್: ನಿಮ್ಮ ಕಾರನ್ನು ಇಂದೇ ಕಾಯ್ದಿರಿಸಿ

ಶಕ್ತಿಶಾಲಿ ಹ್ಯಾಚ್‌ಬ್ಯಾಕ್ ಮಾರುತಿ ಸುಜುಕಿ ಬಲೆನೊ ಆರ್ ಎಸ್ ಮಾದರಿಯು 2016 ದೆಹಲಿ ಆಟೋ ಎಕ್ಸ್ ಪೋದಲ್ಲಿ ಮೊತ್ತ ಮೊದಲ ಬಾರಿಗೆ ಅನಾವರಣಗೊಂಡಿತ್ತು.

ಶಕ್ತಿಶಾಲಿ ಬಲೆನೊ ಆರ್.ಎಸ್ ಬುಕಿಂಗ್ಸ್ ಓಪನ್: ನಿಮ್ಮ ಕಾರನ್ನು ಇಂದೇ ಕಾಯ್ದಿರಿಸಿ

ರೆಗ್ಯುಲರ್ ಮಾದರಿಯ ಮಾರುತಿ ಸುಜುಕಿ ಬಲೆನೊ ಕಾರಿಗೂ ಮತ್ತು ಬಲೆನೊ ಆರ್ ಎಸ್ ಕಾರಿಗೂ ಹೆಚ್ಚು ವ್ಯತ್ಯಾಸಗಳು ಇಲ್ಲದೆ ಇದ್ದರೂ ಹೊಸ ಬಲೆನೊ ಆರ್ ಎಸ್ ಕಾರು ಅತ್ಯಂತ ಶಕ್ತಿಶಾಲಿ ಎಂಜಿನ್ ಪಡೆಯಲಿದೆ.

ಶಕ್ತಿಶಾಲಿ ಬಲೆನೊ ಆರ್.ಎಸ್ ಬುಕಿಂಗ್ಸ್ ಓಪನ್: ನಿಮ್ಮ ಕಾರನ್ನು ಇಂದೇ ಕಾಯ್ದಿರಿಸಿ

ಮಾರ್ಚಿನಲ್ಲಿ ಬಿಡುಗಡೆಗೊಳ್ಳುತ್ತಿರುವ ಬಲೆನೊ ಆರ್ ಎಸ್ ಹೊಸ ಎಂಜಿನ್ ಫೈವ್ ಸ್ಪೀಡ್ ಮ್ಯಾನುವಲ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಗಿಟ್ಟಿಸಿಕೊಳ್ಳಲಿದೆ.

ಶಕ್ತಿಶಾಲಿ ಬಲೆನೊ ಆರ್.ಎಸ್ ಬುಕಿಂಗ್ಸ್ ಓಪನ್: ನಿಮ್ಮ ಕಾರನ್ನು ಇಂದೇ ಕಾಯ್ದಿರಿಸಿ

ಡಿಸ್ಕ್ ಬ್ರೇಕ್ ಈ ಕಾರಿನ ಮತ್ತೊಂದು ವೈಶಿಷ್ಟ್ಯ ಎನ್ನಬಹುದು, ನೂತನ ಬಲೆನೊ ಆರ್ ಎಸ್ ನಾಲ್ಕು ಚಕ್ರಗಳಿಗೆ ಡಿಸ್ಕ್ ಬ್ರೇಕ್ ಜೋಡಣೆಯಾಗಿದ್ದು, ಹೆಚ್ಚು ಸುರಕ್ಷಿತ ಪ್ರಯಾಣ ನಿಮ್ಮದಾಗಲಿದೆ.

ಶಕ್ತಿಶಾಲಿ ಬಲೆನೊ ಆರ್.ಎಸ್ ಬುಕಿಂಗ್ಸ್ ಓಪನ್: ನಿಮ್ಮ ಕಾರನ್ನು ಇಂದೇ ಕಾಯ್ದಿರಿಸಿ

ಮಾರುತಿ ಸುಜುಕಿ ಬಲೆನೊ ಆರ್ ಎಸ್ ಮಾದರಿಯಲ್ಲಿರುವ ಪ್ರಮುಖ ಬದಲಾವಣೆಯೆಂದರೆ 1.0 ಲೀಟರ್ ಮೂರು ಸಿಲಿಂಡರ್ ಹೊಂದಿರುವ ಟರ್ಬೊ ಚಾರ್ಜ್ಡ್ ಪೆಟ್ರೋಲ್ ಎಂಜಿನ್ಇ ಆಗಿದ್ದು, 150 ಏನ್ ಎಂ ತಿರುಗುಬಲದಲ್ಲಿ 100 ಅಶ್ವಶಕ್ತಿಯನ್ನು ಉತ್ಪಾದಿಸುವಷ್ಟು ಸಾಮರ್ಥ್ಯ ಹೊಂದಿದೆ.

ಶಕ್ತಿಶಾಲಿ ಬಲೆನೊ ಆರ್.ಎಸ್ ಬುಕಿಂಗ್ಸ್ ಓಪನ್: ನಿಮ್ಮ ಕಾರನ್ನು ಇಂದೇ ಕಾಯ್ದಿರಿಸಿ

ಕೊಂಚ ಮಟ್ಟಿಗೆ ವಿನ್ಯಾಸ ಬದಲಾವಣೆಗೊಂಡು ಹೊರ ಬರುತ್ತಿರುವ ಶಕ್ತಿಶಾಲಿ ಬಲೆನೊ ಆರ್ ಎಸ್, ಕಪ್ಪು ವರ್ಣದ ಕ್ರೀಡಾತ್ಮಕ ಅಲಾಯ್ ವೀಲ್ ಪಡೆದುಕೊಂಡಿದೆ.

ಶಕ್ತಿಶಾಲಿ ಬಲೆನೊ ಆರ್.ಎಸ್ ಬುಕಿಂಗ್ಸ್ ಓಪನ್: ನಿಮ್ಮ ಕಾರನ್ನು ಇಂದೇ ಕಾಯ್ದಿರಿಸಿ

ಇನ್ನು ಕಾರಿನ ಹೊರ ಭಾಗದ ವಿಚಾರಕ್ಕೆ ಬಂದರೆ, ಕ್ರೋಮ್ ಅಸೆಂಟ್ ಫ್ರಂಟ್ ಗ್ರಿಲ್, ಎಲ್ಈಡಿ ಪ್ರೊಜೆಕ್ಟರ್ ಹೆಡ್ ಲ್ಯಾಂಪ್, ಅಲ್ಟ್ರವೈಲೆಟ್ ಕಟ್ ಗ್ಲಾಸ್ ಹೊಂದಿರುವ ಕಾರು ಇದಾಗಿದೆ.

ಶಕ್ತಿಶಾಲಿ ಬಲೆನೊ ಆರ್.ಎಸ್ ಬುಕಿಂಗ್ಸ್ ಓಪನ್: ನಿಮ್ಮ ಕಾರನ್ನು ಇಂದೇ ಕಾಯ್ದಿರಿಸಿ

ಇನ್ನು ಕಾರಿನ ಒಳಭಾಗದಲ್ಲಿ ಕ್ರೀಡಾತ್ಮಕ ಸ್ಟಿಯರಿಂಗ್ ಹೊಂದಿದ್ದು, ನೇವಿಗೇಶನ್ ಸಿಸ್ಟಮ್, ವಾಯ್ಸ್ ಕಮಾಂಡ್, ಸೆಂಟ್ರಲ್ ಲಾಕಿಂಗ್, ಕೀ ಸಹಾಯವಿಲ್ಲದೆ ಒಳ ಪ್ರವೇಶ, ಫಾಲೋ ಮಿ ಹೆಡ್ ಲ್ಯಾಂಪ್, ಸ್ಮಾರ್ಟ್ ಪ್ಲೇ ಇನ್ಪೋಟೈನ್ಮೆಂಟ್ ಸಿಸ್ಟಂ ಹಾಗು ಮತ್ತಿತರ ಸೌಲಭ್ಯಗಳನ್ನು ಕಾಣಬಹುದು.

ಮಾರುತಿ ಸುಜುಕಿಯ ಮತ್ತೊಂದು ಕಾರು ಸ್ವಿಫ್ಟ್ ನ ಹೊಚ್ಚ ಹೊಸ 2017 ಆವೃತಿಯ ಚಿತ್ರಗಳನ್ನು ವೀಕ್ಷಿಸಿ.

English summary
The Maruti Suzuki Baleno RS is now featured on the Nexa website, and customers can book their vehicles online too.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark