ಭಾರತದಲ್ಲಿ ಮಾರುತಿ ಸುಜುಕಿ ಬಲೆನೊ ಆರ್‌ಎಸ್ ಸದ್ದು

Written By:

ಭಾರತದಲ್ಲಿ ಗ್ರಾಹಕ ಸ್ನೇಹಿಯಾಗಿರೋ ಕಾರು ಉತ್ವಾದನಾ ಸಂಸ್ಥೆ ಮಾರುತಿ ಸುಜುಕಿ ನೂತನ ಆವೃತ್ತಿಯ ಬಲೆನೊ ಆರ್‌ಎಸ್ ಕಾರ್ ಬಿಡುಗಡೆಗೊಳಿಸಲು ಸಿದ್ಧತೆ ನಡೆಸಿದೆ. ಮಹತ್ತರ ಬದಲಾವಣೆಗಳೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಡಲಿರುವ ಬಲೆನೊ ಆರ್‌ಎಸ್ ಕಾರು ಪ್ರಿಯರ ಮನಗೆಲ್ಲುವುದರಲ್ಲಿ ಯಾವುದೇ ಸಂದೇಹವಿಲ್ಲ.

ಭಾರತದಲ್ಲಿ ಮಾರುತಿ ಸುಜುಕಿ ಬ್ಯಾಲೆನೋ ಆರ್‌ಎಸ್ ಸದ್ದು

ಹೊಸ ತಂತ್ರಜ್ಞಾನದೊಂದಿಗೆ ಭಾರತದಲ್ಲಿ ಬಿಡುಗಡೆಗೊಳ್ಳಲು ಸಜ್ಜುಗೊಂಡಿರುವ ಮಾರುತಿ ಸುಜುಕಿ ಬಲೆನೊ ಆರ್‌ಎಸ್, ಹ್ಯಾಚ್ ಬ್ಯಾಕ್ ದೇಶದ ರಸ್ತೆಗಳಿಗೆ ಹೊಂದಿಕೊಳ್ಳುವುದಂತೂ ಸುಳ್ಳಲ್ಲ. ಯಾಕೇಂದ್ರೆ ಈ ಹಿಂದೇ ಬಿಡುಗಡೆಗೊಂಡಿರುವ ವಿವಿಧ ಮಾದರಿ ಕಾರುಗಳು ಜನಪ್ರಿಯಗೊಂಡಿವೆ. ಹೀಗಾಗಿ ಬಿಡುಗಡೆಗೊಳ್ಳಲು ಸಜ್ಜುಗೊಂಡಿರುವ ಮಾರುತಿ ಸುಜುಕಿ ಬಲೆನೊ ಆರ್‌ಎಸ್ ಇದೇ ವರ್ಷ ಮಾರ್ಚ್ ಅಂತ್ಯಕ್ಕೆ ಮಾರುಕಟ್ಟೆಯಲ್ಲಿ ಲಭ್ಯವಿರಲಿದೆ.

ಭಾರತದಲ್ಲಿ ಮಾರುತಿ ಸುಜುಕಿ ಬ್ಯಾಲೆನೋ ಆರ್‌ಎಸ್ ಸದ್ದು

ಸದ್ಯ ಬಿಡುಗಡೆಗೆ ಕಾಯ್ದಿರುವ ಮಾರುತಿ ಸುಜುಕಿ ಬಲೆನೊ ಆರ್‌ಎಸ್ ನೂತನ ಆವೃತ್ತಿಯ ಕಾರು 2016ರ ಆಟೋ ಎಕ್ಸ್‌ಪೋದಲ್ಲಿ ಅದ್ಭುತ ಪ್ರದರ್ಶನ ಕಂಡಿತ್ತು. ಇಂಟಿರಿಯರ್ ಹಾಗೂ ಬಾಹ್ಯ ವಿನ್ಯಾಸಗಳು ಗಮನ ಸೆಳೆಯುತ್ತಿದ್ದು, ಮುಂಭಾಗದ ಹಾಗೂ ಹಿಂಭಾಗದ ಬಂಪರ್ ಅನ್ನು ಅಕ್ರಮಕಾರಿಯಾಗಿ ವಿನ್ಯಾಸಗೊಳಿಸಲಾಗಿದೆ.

ಭಾರತದಲ್ಲಿ ಮಾರುತಿ ಸುಜುಕಿ ಬ್ಯಾಲೆನೋ ಆರ್‌ಎಸ್ ಸದ್ದು

ಇನ್ನೂ ನೂತನ ಆವೃತ್ತಿಯ ಬಲೆನೊ ಆರ್‌ಎಸ್ ಎಂಜಿನ್ ಕಾರ್ಯಕ್ಷಮತೆ ಬಗಗೆ ಹೇಳುವುದಾದರೆ, ಬೂಸ್ಟರ್ ಜೆಟ್ ಎಂಜಿನ್ ಬಲೆನೊ ಆರ್‌ಎಸ್‌ಗೆ ವಿಭಿನ್ನ ಶಕ್ತಿ ತುಂಬಲಿದೆ. 100 ಬಿಎಚ್‌ಪಿ ಹಾಗೂ 150 ಎನ್ಎಂ ಟಾರ್ಕ್ ಉತ್ಪಾದನೆ ಸಾಮರ್ಥ್ಯ ಹೊಂದಿದ್ದು, 5 ಸ್ಪೀಡ್ ಮ್ಯಾನುಯಲ್ ಗೇರ್ ಬಾಕ್ಸ್ ಅಳವಡಿಸಲಾಗಿದೆ.

ಭಾರತದಲ್ಲಿ ಮಾರುತಿ ಸುಜುಕಿ ಬ್ಯಾಲೆನೋ ಆರ್‌ಎಸ್ ಸದ್ದು

ಬಿಡುಗಡೆಗೆ ಸಜ್ಜುಗೊಂಡಿರುವ ಮಾರುತಿ ಸುಜುಕಿ ಬಲೆನೊ ಆರ್‌ಎಸ್ ಮತ್ತೊಂದು ವಿಶೇಷವೇನೆಂದರೆ, ನೂತನ ಆವೃತ್ತಿಯಲ್ಲಿ ಟರ್ಬೊಚಾರ್ಜ್ಡ್ ಎಂಜಿನ್ ಅಳವಡಿಸಲಾಗಿದೆ. ಇದರಿಂದಾಗಿ ಕಾರಿನ ಕಾರ್ಯಕ್ಷಮತೆ ಹೆಚ್ಚಿಸಲು ಸಹಕಾರಿಯಾಗಲಿದೆ ಎನ್ನುವುದು ಉತ್ಪಾದಕರ ಅಭಿಪ್ರಾಯವಾಗಿದೆ.

ಭಾರತದಲ್ಲಿ ಮಾರುತಿ ಸುಜುಕಿ ಬ್ಯಾಲೆನೋ ಆರ್‌ಎಸ್ ಸದ್ದು

ವಿನೂತನ ಮಾದರಿಯ ಮಾರುತಿ ಸುಜುಕಿ ಬಲೆನೊ ಆರ್‌ಎಸ್ ಔಟ್ ಲುಕ್ ಅದ್ಭುತವಾಗಿದೆ. ಕಾರು ಉತ್ಪಾದನೆಯಲ್ಲಿ ಗುಣಮಟ್ಟ ಕಾಯ್ದುಕೊಳ್ಳಲಾಗಿದ್ದು, ಇಂಟಿರಿಯರ್ ಡಿಸೈನ್ ಕಾರಿಗೆ ಹೊಸ ಲುಕ್ ನೀಡಿದೆ. ಅಲ್ಲದೇ ಕಾರಿನಲ್ಲಿ ಟಚ್ ಸ್ಕಿನ್ ಸೌಲಭ್ಯವಿದ್ದು, ಬೆರಳತುದಿಯಲ್ಲೇ ಎಲ್ಲ ಮಾಹಿತಿಗಳು ಲಭ್ಯವಾಗಲಿದೆ.

ಭಾರತದಲ್ಲಿ ಮಾರುತಿ ಸುಜುಕಿ ಬ್ಯಾಲೆನೋ ಆರ್‌ಎಸ್ ಸದ್ದು

ಒಟ್ಟಿನಲ್ಲಿ ಅದ್ಭುತ ಲುಕ್‌ ನೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಡಲು ಸಜ್ಜಾಗಿರುವ ಮಾರುತಿ ಸುಜುಕಿ ಬಲೆನೊ ಆರ್‌ಎಸ್ ಕಾರಿನ ಬೆಲೆ 8 ಲಕ್ಷ ರೂಗಳಿಂದ 9 ಲಕ್ಷ ರೂ ಇರಲಿದೆ ಎಂದು ನಿರೀಕ್ಷಿಸಲಾಗಿದೆ. ನೂತನ ಆವೃತ್ತಿಯ ಬಲೆನೊ ಆರ್‌ಎಸ್ ನೆಕ್ಸಾ ಶೋರಂಗಳಲ್ಲಿ ಲಭ್ಯವಿರಲಿದೆ.

ಭಾರತದಲ್ಲಿ ಮಾರುತಿ ಸುಜುಕಿ ಬ್ಯಾಲೆನೋ ಆರ್‌ಎಸ್ ಸದ್ದು

ಭಾರತದಲ್ಲಿ ಬಿಡುಗೆಡೆಯಾದ ನಂತರ ಬಲೆನೊ ಆರ್‌ಎಸ್ ತನ್ನ ಪ್ರತಿಸ್ಪರ್ಧಿ ಕಾರುಗಳಾದಫೋಕ್ಸ್‌ವ್ಯಾಗನ್ ಪೋಲೋ ಜಿಟಿ ಟಿಎಸ್ಐ ಮತ್ತು ಫಿಯೆಟ್ ಅಬಾರ್ತ್ ಪುಂಟೊಗೆ ತೀವ್ರ ಪೈಪೋಟಿ ನೀಡಲಿದೆ.

ಮಾರುತಿ ಸುಜುಕಿ ಬಲೆನೊ ಕಾರಿಗೆ ಪ್ರತಿಸ್ಪರ್ಧಿಯಾಗಲಿರೋ ಫೋಕ್ಸ್‌ವ್ಯಾಗನ್ ಪೋಲೋ ಜಿಟಿ ಟಿಎಸ್ಐನ ಚಿತ್ರಗಳನ್ನು ವೀಕ್ಷಿಸಲು ಈ ಕೆಳಗಿನ ಗ್ಯಾಲರಿಯನ್ನ ಕ್ಲಿಕ್ ಮಾಡಿ.

English summary
Maruti Suzuki Baleno RS India launch details.
Please Wait while comments are loading...

Latest Photos