ಮಾರುತಿ ಸುಜುಕಿ ಸೆಲೆರಿಯೊ ಎಕ್ಸ್ ಕಾರಿನ ಬಿಡುಗಡೆಗೆ ಭರ್ಜರಿ ಸಿದ್ಧತೆ

ಸುಧಾರಿತ ಮಾದರಿಯ ಸೆಲೆರಿಯೊ ಎಕ್ಸ್ ಕಾರುಗಳು ಮಾರಾಟ ಮಳಿಗೆಯಲ್ಲಿ ಸಂಗ್ರಹ ಮಾಡುತ್ತಿರುವ ಹಿನ್ನೆಲೆ ಸದ್ಯದಲ್ಲೇ ಬಿಡುಗಡೆಯಾಗುವ ಸುಳಿವು ನೀಡಿದೆ.

By Praveen

ಮಾರುತಿ ಸುಜುಕಿ ಸಂಸ್ಥೆಯು ಈ ವರ್ಷದ ಉತ್ಸವ ಋತುವಿನಲ್ಲಿ ಭಾರತೀಯ ಮಾರುಕಟ್ಟೆಗೆ ಮತ್ತೊಂದು ನವಿಕೃತ ಉತ್ಪನ್ನವನ್ನು ಸಿದ್ಧಪಡಿಸಿದ್ದು, ಸುಧಾರಿತ ಮಾದರಿಯ ಸೆಲೆರಿಯೊ ಎಕ್ಸ್ ಕಾರುಗಳು ಮಾರಾಟ ಮಳಿಗೆಯಲ್ಲಿ ಸಂಗ್ರಹ ಮಾಡುತ್ತಿರುವ ಹಿನ್ನೆಲೆ ಸದ್ಯದಲ್ಲೇ ಬಿಡುಗಡೆಯಾಗುವ ಸುಳಿವು ನೀಡಿದೆ.

ಮಾರುತಿ ಸುಜುಕಿ ಸೆಲೆರಿಯೊ ಎಕ್ಸ್ ಕಾರಿನ ಬಿಡುಗಡೆಗೆ ಭರ್ಜರಿ ಸಿದ್ಧತೆ

ಭಾರತೀಯ ಮಾರುಕಟ್ಟೆಯಲ್ಲಿ ಈಗಾಗಲೇ ಸೆಲೆರಿಯೊ ಹ್ಯಾಚ್‌ಬ್ಯಾಕ್ ಆವೃತ್ತಿಗಳು ಸಾಕಷ್ಟು ಜನಪ್ರಿಯತೆ ಹೊಂದಿದ್ದು, ಈ ಹಿನ್ನೆಲೆ ಪ್ರಸಕ್ತ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಸುಧಾರಿತ ಮಾದರಿಯನ್ನು ಪರಿಚಯಿಸಲು ಮುಂದಾಗಿರುವ ಮಾರುತಿ ಸುಜುಕಿ ಸಂಸ್ಥೆಯು ಸೆಲೆರಿಯೊ ಎಕ್ಸ್ ಆವೃತ್ತಿಯನ್ನು ಪರಿಚಯಿಸುತ್ತಿದೆ.

ಮಾರುತಿ ಸುಜುಕಿ ಸೆಲೆರಿಯೊ ಎಕ್ಸ್ ಕಾರಿನ ಬಿಡುಗಡೆಗೆ ಭರ್ಜರಿ ಸಿದ್ಧತೆ

ಆದರೆ ಸೆಲೆರಿಯೊ ಎಕ್ಸ್ ಆವೃತ್ತಿಯಲ್ಲಿ ವಿನ್ಯಾಸಗಳ ಹೊರತಾಗಿ ಯಾವುದೇ ತಾಂತ್ರಿಕ ಬದಲಾವಣೆಗಳನ್ನು ತರದ ಮಾರುತಿ ಸುಜುಕಿ ಸಂಸ್ಥೆಯು ಈ ಹಿಂದಿನ ಕಾರು ಆವೃತ್ತಿ ತಾಂತ್ರಿಕ ವೈಶಿಷ್ಟ್ಯತೆಗಳನ್ನೇ ಮುಂದುವರಿಸಿದೆ.

Recommended Video

Datsun rediGO Gold 1.0-Litre Launched In India - DriveSpark
ಮಾರುತಿ ಸುಜುಕಿ ಸೆಲೆರಿಯೊ ಎಕ್ಸ್ ಕಾರಿನ ಬಿಡುಗಡೆಗೆ ಭರ್ಜರಿ ಸಿದ್ಧತೆ

ಇದಲ್ಲದೇ ಸೆಲೆರಿಯೊದ ಹೊಸ ರೂಪಾಂತರವು ಈ ಹಿಂದಿನ 2016ರ ಆಟೋ ಎಕ್ಸ್‌ಪೋದಲ್ಲಿ ಪರಿಕಲ್ಪನೆಯ ಮಾದರಿಯಾಗಿ ಪ್ರದರ್ಶಿಸಲ್ಪಟ್ಟಿದ್ದು, ಸೋರಿಕೆಯಾದ ಸೆಲೆರಿಯೊ ಕ್ರಾಸ್ ಕಾರಿನ ಚಿತ್ರಗಳನ್ನು ಗಮನಿಸಿದಾಗ ಹಿಂಬದಿಯ ಬಂಪರ್ ಮತ್ತು ಚಕ್ರದ ಕಮಾನುಗಳ ಮೇಲೆ ಕಪ್ಪು ಪ್ಲಾಸ್ಟಿಕ್ ಕ್ಲಾಡಿಂಗ್ ಪಡೆದುಕೊಂಡಿರುವುದನ್ನು ನೋಡಬಹುದಾಗಿದೆ.

ಮಾರುತಿ ಸುಜುಕಿ ಸೆಲೆರಿಯೊ ಎಕ್ಸ್ ಕಾರಿನ ಬಿಡುಗಡೆಗೆ ಭರ್ಜರಿ ಸಿದ್ಧತೆ

ಪ್ರಸ್ತುತ ಮಾರುತಿ ಸುಜುಕಿ ಟಾಟಾ ಟಿಯಾಗೊ ಕಾರಿನಿಂದಲೇ ಸೆಲೆರಿಯೊ ಕಾರುಗಳು ತೀವ್ರ ಸ್ಪರ್ಧೆಯನ್ನು ಎದುರಿಸುತ್ತಿದ್ದು, ಈ ಕಾರಣದಿಂದಾಗಿ ಸೆಲೆರಿಯೊ ಕಾರನ್ನು ಬದಲಾವಣೆಯೊಂದಿಗೆ ಮಾರುಕಟ್ಟೆಗೆ ಪರಿಚಯಿಸುತ್ತಿದೆ.

ಮಾರುತಿ ಸುಜುಕಿ ಸೆಲೆರಿಯೊ ಎಕ್ಸ್ ಕಾರಿನ ಬಿಡುಗಡೆಗೆ ಭರ್ಜರಿ ಸಿದ್ಧತೆ

ಸೆಲೆರಿಯೊ ಎಕ್ಸ್ ಆವೃತ್ತಿಯು ಹ್ಯಾಚ್‌ಬ್ಯಾಕ್ ಬುಚ್ ರೂಪಾಂತರವಾಗಿದ್ದು, ಸ್ನಾಯುವಿನ ನೋಟದಿಂದ ದೇಹವನ್ನು ಮುಚ್ಚುವಿಕೆಯನ್ನು ಕಾಣಬಹುದಾಗಿದೆ ಹಾಗು ಕಪ್ಪು ಬಣ್ಣದ ಮಿಶ್ರಲೋಹದ ಚಕ್ರಗಳನ್ನು ಪಡೆದುಕೊಂಡಿದೆ.

ಮಾರುತಿ ಸುಜುಕಿ ಸೆಲೆರಿಯೊ ಎಕ್ಸ್ ಕಾರಿನ ಬಿಡುಗಡೆಗೆ ಭರ್ಜರಿ ಸಿದ್ಧತೆ

ಎಂಜಿನ್ ಸಾಮರ್ಥ್ಯ

ಸೆಲೆರಿಯೊ ಎಕ್ಸ್ ಕಾರು 1-ಲೀಟರ್ ಕೆ-ಸೀರಿಸ್ ಪೆಟ್ರೋಲ್ ಎಂಜಿನ್ ಹೊಂದಿರಲಿದ್ದು, 90-ಎನ್‌ಎಂ ಟಾರ್ಕ್ ಹಾಗೂ 67-ಬಿಎಚ್‌ಪಿ ಉತ್ಪಾದನಾ ಶಕ್ತಿಯೊಂದಿಗೆ 5-ಸ್ಪೀಡ್ ಮ್ಯಾನುವಲ್ ಅಥವಾ 5-ಸ್ಪೀಡ್ ಸ್ವಯಂಚಾಲಿತ ಗೇರ್‌ಬಾಕ್ಸ್ ಹೊಂದಿರಲಿದೆ.

ಮಾರುತಿ ಸುಜುಕಿ ಸೆಲೆರಿಯೊ ಎಕ್ಸ್ ಕಾರಿನ ಬಿಡುಗಡೆಗೆ ಭರ್ಜರಿ ಸಿದ್ಧತೆ

ಬೆಲೆ (ಅಂದಾಜು)

ಸೆಲೆರಿಯೊ ಬೆಲೆಗಳ ಬಗೆಗೆ ನಿಖರ ಮಾಹಿತಿ ಇಲ್ಲವಾದರೂ ಈ ಹಿಂದಿನ ಮಾದರಿಗಿಂತ ಸುಧಾರಿತ ತಂತ್ರಜ್ಞಾನ ಹೊಂದಿರುವ ಹಿನ್ನೆಲೆ 4.30 ಲಕ್ಷದಿಂದ 5. 40 ಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ.

ಮಾರುತಿ ಸುಜುಕಿ ಸೆಲೆರಿಯೊ ಎಕ್ಸ್ ಕಾರಿನ ಬಿಡುಗಡೆಗೆ ಭರ್ಜರಿ ಸಿದ್ಧತೆ

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಮಾರುತಿ ಸುಜುಕಿ ನಿರ್ಮಾಣದ ಇತರೆ ಕಾರು ಉತ್ಪನ್ನಗಳಿಂದಲೇ ಸೆಲೆರಿಯೊ ತೀವ್ರ ಸ್ಪರ್ಧೆ ಎದುರಿಸುತ್ತಿದ್ದು, ಈ ಹಿನ್ನೆಲೆ ಸುಧಾರಿತ ತಂತ್ರಜ್ಞಾನದ ಜೊತೆಗೆ ಸುರಕ್ಷಾ ಕ್ರಮಗಳನ್ನು ಉನ್ನತಿಕರಿಸಿ ಮರುಬಿಡುಗಡೆ ಮಾಡುತ್ತಿದೆ.

Most Read Articles

Kannada
English summary
Read in Kannada about Maruti Celerio X Spotted Ahead Of Launch.
Story first published: Thursday, October 5, 2017, 10:44 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X