ಖರೀದಿಗೆ ಲಭ್ಯ ಡೀಸೆಲ್‌ಗಿಂತಲೂ ಕಡಿಮೆ ಬೆಲೆ, ಉತ್ತಮ ಮೈಲೇಜ್ ನೀಡುವ ಇನ್ಡಿಜೆಲ್..!!

ಮುಂಬೈ ಮೂಲದ ಮೈ ಇಕೋ ಎರ್ನಜಿ(ಎಂಇಇ) ಸಂಸ್ಥೆಯು ಉತ್ತಮ ಕಾರ್ಯಕ್ಷಮತೆಯುಳ್ಳ ಇನ್ಡಿಜೆಲ್ ಎಂಬ ಪರ್ಯಾಯ ಇಂಧನ ಮೂಲವನ್ನು ಪರಿಚಯಿಸಿದೆ.

By Praveen

ಪೆಟ್ರೋಲ್ ಮತ್ತು ಡೀಸೆಲ್‌ಗೆ ಪರ್ಯಾಯವಾಗಿ ಪರಿಸರ ಪೂರಕ ಇಂಧನಗಳ ಬಳಕೆಗೆ ಹೆಚ್ಚಿನ ಬೇಡಿಕೆ ಸೃಷ್ಠಿಯಾಗುತ್ತಿದ್ದು, ಈ ನಿಟ್ಟಿನಲ್ಲಿ ಮುಂಬೈ ಮೂಲದ ಮೈ ಇಕೋ ಎರ್ನಜಿ(ಎಂಇಇ) ಸಂಸ್ಥೆಯು ಉತ್ತಮ ಕಾರ್ಯಕ್ಷಮತೆಯುಳ್ಳ ಇನ್ಡಿಜೆಲ್ ಎಂಬ ಪರ್ಯಾಯ ಇಂಧನ ಮೂಲವನ್ನು ಪರಿಚಯಿಸಿದೆ.

ಅಗ್ಗದ ಬೆಲೆಗೆ ದೊರೆಯಲಿದೆ ಡೀಸೆಲ್ ಪರ್ಯಾಯ ಇಂಧನ ಇನ್ಡೆಜೆಲ್..!!

ಮಾಲಿನ್ಯ ತಡೆ ಉದ್ದೇಶದಿಂದ ಡೀಸೆಲ್ ಮತ್ತು ಪೆಟ್ರೋಲ್ ಬಳಕೆ ತಗ್ಗಿಸಲು ಈಗಾಗಲೇ ಹಲವಾರು ಪರ್ಯಾಯ ಮಾರ್ಗಗಳನ್ನು ಗುರುತಿಸಲಾಗುತ್ತಿದ್ದು, ಈ ನಡುವೆ 'ಮೈ ಇಕೋ ಎರ್ನಜಿ' ಸಂಸ್ಥೆಯು ಪರಿಚಯಿಸಿರುವ ಇನ್ಡಿಜೆಲ್ ಎಂಬ ಹಸಿರು ಇಂಧನವು ಮಾರುಕಟ್ಟೆಯಲ್ಲಿ ಭಾರೀ ನಿರೀಕ್ಷೆ ಹುಟ್ಟುಹಾಕಿದೆ.

ಅಗ್ಗದ ಬೆಲೆಗೆ ದೊರೆಯಲಿದೆ ಡೀಸೆಲ್ ಪರ್ಯಾಯ ಇಂಧನ ಇನ್ಡೆಜೆಲ್..!!

ಇನ್ಡೆಜೆಲ್ ಇಂಧನವು ಪ್ರಸ್ತುತ ಡೀಸೆಲ್ ಬೆಲೆಗಿಂತಲೂ ಕಡಿಮೆ ದರಕ್ಕೆ ಲಭ್ಯವಿದ್ದು, ಉತ್ತಮ ಇಂಧನ ಕಾರ್ಯಕ್ಷಮತೆಯ ಜೊತೆಗೆ ಶೇ.80ರಷ್ಟು ಮಾಲಿನ್ಯ ಉತ್ಪತ್ತಿಯನ್ನು ತಗ್ಗಿಸಬಹುದಾದ ವೈಶಿಷ್ಟ್ಯತೆಯನ್ನು ಹೊಂದಿದೆ.

ಅಗ್ಗದ ಬೆಲೆಗೆ ದೊರೆಯಲಿದೆ ಡೀಸೆಲ್ ಪರ್ಯಾಯ ಇಂಧನ ಇನ್ಡೆಜೆಲ್..!!

ಇನ್ಡೆಜೆಲ್ ಇಂಧನವನ್ನು ವಿಶೇಷವಾಗಿ ಹಸಿರು ತರಕಾರಿಗಳ ಮೂಲಕವೇ ತಯಾರಿಸಲಾಗಿದ್ದು, ಯುರೋ 4, ಬಿಎಸ್ 4, ಬಿಎಸ್ 3 ಎಂಜಿನ್ ಮಾದರಿಗಳನ್ನು ಹೊಂದಿರುವ ವಾಹನಗಳಿಗೆ ಇನ್ಡೆಜೆಲ್ ಬಳಕೆ ಮಾಡಬಹುದಾಗಿದೆ.

ಅಗ್ಗದ ಬೆಲೆಗೆ ದೊರೆಯಲಿದೆ ಡೀಸೆಲ್ ಪರ್ಯಾಯ ಇಂಧನ ಇನ್ಡೆಜೆಲ್..!!

ಸದ್ಯ ಇನ್ಡೆಜೆಲ್ ದೇಶದ ಪ್ರಮುಖ ನಗರಗಳಾದ ಹೈದ್ರಾಬಾದ್, ಅಹಮದಾಬಾದ್, ಜೈಪುರ್, ಪುಣೆ, ಮುಂಬೈನಲ್ಲಿ ಮಾತ್ರ ಖರೀದಿ ಲಭ್ಯವಿದ್ದು, ನಿನ್ನೆಯಷ್ಟೇ ಬೆಂಗಳೂರಿನಲ್ಲೂ ಹೊಸ ಇಂಧನ ಮಾದರಿಯನ್ನು ಪರಿಚಯಿಸಲಾಗಿದೆ.

ಅಗ್ಗದ ಬೆಲೆಗೆ ದೊರೆಯಲಿದೆ ಡೀಸೆಲ್ ಪರ್ಯಾಯ ಇಂಧನ ಇನ್ಡೆಜೆಲ್..!!

ಹೀಗಾಗಿ ಬೆಂಗಳೂರಿನಲ್ಲೂ ಮುಂದಿನ ತಿಂಗಳು ಒಳಗಾಗಿ ಇನ್ಡೆಜೆಲ್ ಮಾರಾಟ ಪ್ರಕ್ರಿಯೆ ಆರಂಭವಾಗಲಿದ್ದು, ಕರ್ನಾಟಕ ಸೇರಿದಂತೆ ದೇಶಾದ್ಯಂತ 250ಕ್ಕೂ ಡೀಲರ್ಸ್‌ಗಳು ಇನ್ಡಜೆಲ್ ಮಾರಾಟ ಕೇಂದ್ರಗಳನ್ನು ತೆರೆಯುತ್ತಿದ್ದಾರೆ.

ಅಗ್ಗದ ಬೆಲೆಗೆ ದೊರೆಯಲಿದೆ ಡೀಸೆಲ್ ಪರ್ಯಾಯ ಇಂಧನ ಇನ್ಡೆಜೆಲ್..!!

ಜೊತೆಗೆ ಡೀಸೆಲ್ ಬೆಲೆಗಿಂತಲೂ ಇನ್ಡೆಜೆಲ್ ಬೆಲೆ ರೂ.10 ಕಡಿಮೆಗೆ ಖರೀದಿಸಬಹುದಾಗಿದ್ದು, ಈ ಹಿಂದೆ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಇದೇ ಹಸಿರು ಇಂಧನವನ್ನು ಇದೀಗ ಸುಧಾರಿತ ತಂತ್ರಜ್ಞಾನದೊಂದಿಗೆ ತಯಾರಿಸಲಾಗುತ್ತಿದೆ.

ಅಗ್ಗದ ಬೆಲೆಗೆ ದೊರೆಯಲಿದೆ ಡೀಸೆಲ್ ಪರ್ಯಾಯ ಇಂಧನ ಇನ್ಡೆಜೆಲ್..!!

ಪ್ರಸ್ತುತವಾಗಿ ಇನ್ಡೆಜೆಲ್ ಇಂಧನವನ್ನು ಸಿಂಗಪುರ್‌‌ನಲ್ಲಿರುವ ಘಟಕಗಳಿಂದ ಆಮದು ಮಾಡಿಕೊಳ್ಳಲಾಗುತ್ತಿದ್ದು, ಮುಂಬರುವ ದಿನಗಳಲ್ಲಿ ಭಾರತದಲ್ಲೇ ಇನ್ಡೆಜೆಲ್ ಇಂಧನ ಉತ್ಪಾದನಾ ಘಟಕಗಳನ್ನು ಹೊಂದುವ ಗುರಿಯನ್ನು ಹೊಂದಲಾಗಿದೆ.

ಅಗ್ಗದ ಬೆಲೆಗೆ ದೊರೆಯಲಿದೆ ಡೀಸೆಲ್ ಪರ್ಯಾಯ ಇಂಧನ ಇನ್ಡೆಜೆಲ್..!!

ಈ ಬಗ್ಗೆ ಇನ್ಡೆಜೆಲ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಮೈ ಇಕೋ ಎರ್ನಜಿ ಸಹ ಸಂಸ್ಥಾಪಕ ಸಂತೋಷ್ ವರ್ಮಾ, ಡೀಸೆಲ್ ಮಾದರಿಗಿಂತಲೂ ಇನ್ಡೆಜೆಲ್ ಅತ್ಯುತ್ತಮ ಕಾರ್ಯಕ್ಷಮತೆಯನ್ನು ಹೊಂದಿದ್ದು, ಸುಗಮ ಸಂಚಾರಕ್ಕೆ ಇದೊಂದು ಉತ್ತಮ ಮಾರ್ಗ" ಎಂದಿದ್ದಾರೆ.

ಅಗ್ಗದ ಬೆಲೆಗೆ ದೊರೆಯಲಿದೆ ಡೀಸೆಲ್ ಪರ್ಯಾಯ ಇಂಧನ ಇನ್ಡೆಜೆಲ್..!!

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಈ ಹಿಂದೆಯೇ ಇನ್ಡೆಜೆಲ್ ಮಾದರಿಯನ್ನು ಪರಿಚಯಿಸಲಾಗಿದ್ದರು, ಪೆಟ್ರೋಲಿಯಂ ಕಂಪನಿಗಳ ಹಿತಾಸಕ್ತಿಯಿಂದಾಗಿ ಇದನ್ನು ನಿರ್ಲಕ್ಷ ಮಾಡಲಾಗಿತ್ತು. ಆದ್ರೆ ಬದಲಾದ ಪರಿಸ್ಥಿತಿಗಳಿಂದಾಗಿ ಪರಿಸರ ಪೂಕರ ಇಂಧನಗಳಿಗೆ ಬೇಡಿಕೆ ಬಂದಿರುವುದು ಇನ್ಡೆಜೆಲ್ ಖರೀದಿಗೆ ಉತ್ತಮವಾಗಿದೆ.

ಪರ್ಯಾಯ ಇಂಧನಗಳ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕೆಳಗಿನ ಕಮೆಂಟ್ ಬಾಕ್ಸ್‌ನಲ್ಲಿ ಮುಕ್ತವಾಗಿ ಹಂಚಿಕೊಳ್ಳಬಹುದು.

Most Read Articles

Kannada
English summary
Read in Kannada about Bio Diesel Which Costs Lesser Than Regular Diesel And Is 15 percent More Efficient Launched.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X