ಬ್ರಿಟಿಷ್ ವಾಹನ ತಯಾರಕ ಕಂಪೆನಿಯಾದ ಲ್ಯಾಂಡ್ ರೋವರ್, ಬಾಹ್ಯ ಮತ್ತು ಆಂತರಿಕ ವಿನ್ಯಾಸ ಮತ್ತು ಹೊಸ ರೂಪಾಂತರಗಳಲ್ಲಿ ಹೊಸ ಬದಲಾವಣೆಗಳೊಂದಿಗೆ ಹೊಸ ರೇಂಜ್ ರೋವರ್ ಸ್ಪೋರ್ಟ್ ಫೇಸ್‌ಲಿಫ್ಟ್ ಕಾರನ್ನು ಬಹಿರಂಗಪಡಿಸಿದೆ.
ರೇಂಜ್ ರೋವರ್ ಸ್ಪೋರ್ಟ್ ಫೇಸ್‌ಲಿಫ್ಟ್ ಕಾರು ಪ್ರಮುಖವಾಗಿ ವಿಶಿಷ್ಟತೆಯು 567 ಬಿಎಚ್‌ಪಿ ಎಸ್‌ವಿಆರ್ ರೂಪಾಂತರವಾಗಿದೆ ಮತ್ತು ಪ್ಲಗ್ ಇನ್ ಹೈಬ್ರಿಡ್ ಟ್ರಿಮ್ ಆಯ್ಕೆ ಹೊಂದಿದೆ. ನವೀಕರಿಸಿದ ಎಸ್‌ಯುವಿ ಕಾರು 2020ರ ಹೊತ್ತಿಗೆ ನವೀನ ಮಾದರಿಯಾಗಿ ರೂಪುಕೊಂಡು ಅಕಾಡಕ್ಕಿಳಿಯಲಿದೆ.
ಅತ್ಯುನ್ನತ ಮಾದರಿಯ ರೇಂಜ್ ರೋವರ್ ಸ್ಪೋರ್ಟ್ ಎಸ್‌ವಿಆರ್ ಕಾರು, ಅಸ್ತಿತ್ವದಲ್ಲಿರುವ 5-ಲೀಟರ್ ವಿ8 ಸೂಪರ್‌ಚಾರ್ಜ್ಡ್ ಪೆಟ್ರೋಲ್ ಇಂಜಿನ್ ಆಯ್ಕೆ ಹೊಂದಿದ್ದು, 700 ಎನ್ಎಂ ತಿರುಗುಬಲದಲ್ಲಿ 567 ಬಿಎಚ್‌ಪಿ ಶಕ್ತಿ ಉತ್ಪಾದನೆ ಮಾಡಲಿದೆ.
P400e ಬ್ಯಾಡ್ಜ್ ಪವರ್‌ಟ್ರೈನ್ 296 ಬಿಎಚ್‌ಪಿ 2-ಲೀಟರ್ ಪೆಟ್ರೋಲ್ ಎಂಜಿನ್ ಮತ್ತು 114 ಬಿಎಚ್‌ಪಿ ಎಲೆಕ್ಟ್ರಿಕ್ ಮೋಟಾರ್‌ಗಳ ಸಂಯೋಜನೆಯೊಂದಿಗೆ ಬಿಡುಗಡೆಯಾಗಲಿದ್ದು, ಒಟ್ಟಾರೆ ಉತ್ಪಾದನೆಯು 398 ಬಿಎಚ್‌ಪಿಯಷ್ಟು ಇರಲಿದೆ.
ಈ ಎಸ್‌ಯುವಿ ಕಾರು ಕೇವಲ 4.5 ಸೆಕೆಂಡಿನಲ್ಲಿ 100 ಕಿ.ಮೀ ವೇಗವನ್ನು ತಲುಪುವಷ್ಟು ಬಲಿಷ್ಠವಾಗಿದೆ ಮತ್ತು ಎಸ್‌ಯುವಿ ಪ್ಲಗ್-ಇನ್ ಹೈಬ್ರಿಡ್ ರೂಪಾಂತರವು P400e ಎಂಬ ಬ್ಯಾಡ್ಜ್ ಪಡೆದುಕೊಂಡಿದೆ ಹಾಗು ಇದು ಜಗ್ವಾರ್ ಲ್ಯಾಂಡ್ ರೋವರ್ ಕಾರು ಸ್ಥಿರ ಎಲೆಕ್ಟ್ರಿಫೈಡ್ ಮಾದರಿಯಾಗಿದೆ.
ಪ್ಲಗ್-ಇನ್ ಹೈಬ್ರಿಡ್ ಎಸ್‌ಯುವಿ ಕಾರು ಲಿಟರಿಗೆ 37.75 ಕಿ.ಮೀ ಮೈಲೇಜ್ ನೀಡಲಿದೆ ಮತ್ತು ಶುದ್ಧ ವಿದ್ಯುತ್ ಶಕ್ತಿಯ ಮೂಲಕ 50 ಕಿ.ಮೀ ವ್ಯಾಪ್ತಿಯನ್ನು ತಲುಪಲಿದೆ ಎಂದು ಲ್ಯಾಂಡ್ ರೋವರ್ ಹೇಳಲಿದೆ. ಈ ವಿದ್ಯುತ್ ಮೋಟರ್ 13.1 ಕಿಲೋವ್ಯಾಟ್ ಲಿಥಿಯಂ-ಐಯಾನ್ ಬ್ಯಾಟರಿಯಿಂದ ವಿದ್ಯುತ್ ಶಕ್ತಿ ಹೊಂದುತ್ತದೆ.
ಸುಧಾರಿತ ಎಸ್‌ಯುವಿ ಕಾರಿನ ಬ್ಯಾಟರಿ ಚಾರ್ಜ್ ಮಾಡುವ ಸಮಯವು ಎರಡು ಗಂಟೆ 45 ನಿಮಿಷಗಳು ಕಾಲ ತೆಗೆದುಕೊಳ್ಳುತ್ತದೆ ಹಾಗು ಈ ಕಾರು ಮರುವಿನ್ಯಾಸಗೊಳಿಸಿದ ಗ್ರಿಲ್ ಮತ್ತು ಹೊಸ ಎಲ್ಇಡಿ ಹೆಡ್ ಲ್ಯಾಂಪ್‌ಗಳನ್ನು ಒಳಗೊಂಡಿರಲಿದೆ
ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Subscribe to Kannada DriveSpark