ಹೈಬ್ರಿಡ್ ಬದಲು ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆಗೆ ರೋಲ್ಸ್ ರಾಯ್ಸ್ ಗ್ರೀನ್ ಸಿಗ್ನಲ್

Written By:

ಪರಿಸರ ಮಾಲಿನ್ಯ ತಡೆ ಉದ್ದೇಶದಿಂದ ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆಗೆ ಪ್ರಮುಖ ಕಾರು ಉತ್ಪಾದನಾ ಸಂಸ್ಥೆ ಮುಂದಾಗಿದ್ದು, ಇದೀಗ ಪ್ರತಿಷ್ಠತ ರೋಲ್ಸ್ ರಾಯ್ಸ್ ಕೂಡಾ ಎಲೆಕ್ಟ್ರಿಕ್ ಕಾರು ಉತ್ಪಾದನೆಗೆ ಹಸಿರು ನಿಶಾನೆ ತೊರಿದೆ.

To Follow DriveSpark On Facebook, Click The Like Button
ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆಗೆ ರೋಲ್ಸ್ ರಾಯ್ಸ್ ಗ್ರೀನ್ ಸಿಗ್ನಲ್

ಇಷ್ಟು ದಿನಗಳ ಕಾಲ ಕೇವಲ ಡೀಸೆಲ್ ಮತ್ತು ಪೆಟ್ರೋಲ್ ಚಾಲಿತ ಕಾರು ಮಾದರಿಗಳನ್ನು ಮಾತ್ರ ಉತ್ಪಾದನೆ ಮಾಡುತ್ತಿದ್ದ ರೋಲ್ಸ್ ರಾಯ್ಸ್ ಸಂಸ್ಥೆಯು ಇನ್ಮುಂದೆ ಎಲೆಕ್ಟ್ರಿಕ್ ಕಾರುಗಳನ್ನು ಕೂಡಾ ಉತ್ಪಾದನೆ ಮಾಡಲು ಬೃಹತ್ ಯೋಜನೆ ರೂಪಿಸುತ್ತಿದೆ.

ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆಗೆ ರೋಲ್ಸ್ ರಾಯ್ಸ್ ಗ್ರೀನ್ ಸಿಗ್ನಲ್

ವಿ12 ಎಂಜಿನ್ ಬಳಕೆ ಮಾಡುವ ಮೂಲಕ ಅಲ್ಟ್ರಾ ಲಗ್ಷುರಿ ಕಾರುಗಳನ್ನು ಉತ್ಪಾದನೆ ಮಾಡುವ ರೋಲ್ಸ್ ರಾಯ್ಸ್, ಮುಂಬರುವ ದಿನಗಳಲ್ಲಿ ಎಲೆಕ್ಟ್ರಿಕ್ ಕಾರುಗಳನ್ನು ಕೂಡಾ ಪರಿಚಯಿಸಲಿದೆ.

ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆಗೆ ರೋಲ್ಸ್ ರಾಯ್ಸ್ ಗ್ರೀನ್ ಸಿಗ್ನಲ್

ಈ ಬಗ್ಗೆ ಸ್ಪಷ್ಟನೆ ನೀಡಿರುವ ರೋಲ್ಸ್ ರಾಯ್ಸ್ ಹಿರಿಯ ಅಧಿಕಾರಿಗಳು, ಯಾವುದೇ ಕಾರಣಕ್ಕೂ ಹೈಬ್ರಿಡ್ ಕಾರು ಉತ್ಪಾದನೆ ಮಾಡುವುದಿಲ್ಲ. ಆದ್ರೆ ಪರಿಸರಕ್ಕೆ ಪೂರಕವಾಗಿರುವ ಎಲೆಕ್ಟ್ರಿಕ್ ಕಾರು ಉತ್ಪಾದನೆಗೆ ನಮ್ಮದು ಸಮ್ಮತಿ ಇದೆ ಎಂದಿದ್ದಾರೆ.

ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆಗೆ ರೋಲ್ಸ್ ರಾಯ್ಸ್ ಗ್ರೀನ್ ಸಿಗ್ನಲ್

ಇದಲ್ಲದೇ ಅಟೋನೊಮಸ್(ಚಾಲಕ ರಹಿತ) ಕಾರು ಉತ್ಪಾದನೆ ಬಗ್ಗೆಯೂ ಪ್ರಕ್ರಿಯೆ ನೀಡಿರುವ ರೋಲ್ಸ್ ರಾಯ್ಸ್, ಸದ್ಯಕ್ಕೆ ಚಾಲಕ ರಹಿತ ಕಾರು ಉತ್ಪಾದನೆ ಬಗ್ಗೆ ಯಾವುದೇ ಯೋಜನೆ ಕೈಗೊತ್ತಿಕೊಳ್ಳುತ್ತಿಲ್ಲ. ಬದಲಾಗಿ ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆಗೆ ಹೆಚ್ಚಿನ ಒಲವು ಹೊಂದಲಾಗಲಿದೆ ಎಂದಿದೆ.

ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆಗೆ ರೋಲ್ಸ್ ರಾಯ್ಸ್ ಗ್ರೀನ್ ಸಿಗ್ನಲ್

ಇನ್ನು ಕೆಲ ದಿನಗಳ ಹಿಂದಷ್ಟೇ ಮತ್ತೊಂದು ಪ್ರಮುಖ ಕಾರು ಉತ್ಪಾದನಾ ಸಂಸ್ಥೆಯಾದ ವೊಲ್ಪೋ ಕೂಡಾ ಡಿಸೇಲ್ ಮತ್ತು ಪೆಟ್ರೋಲ್ ಕಾರುಗಳ ಉತ್ಪಾದನೆ ನಿಲ್ಲಿಸುವ ಬಗ್ಗೆ ಪ್ರಮುಖ ನಿರ್ಧಾರ ಕೈಗೊಂಡಿದ್ದು, 2019ರಿಂದ ಕೇವಲ ಎಲೆಕ್ಟ್ರಿಕ್ ಮತ್ತು ಹೈಬ್ರಿಡ್ ಕಾರು ಉತ್ಪಾದನೆ ಮಾಡಲು ಯೋಜನೆ ರೂಪಿಸಿದೆ.

English summary
Read in Kannada about Rolls Royce Says No To Hybrids, But Will Go Straight To Production Of Electric Cars.
Story first published: Thursday, July 6, 2017, 19:49 [IST]
Please Wait while comments are loading...

Latest Photos