ಭಾರತದಲ್ಲಿ ನ್ಯೂ ಜನರೇಷನ್ ಸ್ಕಾನಿಯಾ ಟಿಪ್ಪರ್ ಬಿಡುಗಡೆ

Written By:

ವಾಣಿಜ್ಯ ವಾಹನಗಳ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಸ್ವಿಡಿಷ್ ಮೂಲದ ಸ್ಕಾನಿಯಾ ಸಂಸ್ಥೆಯು ಹೊಸ ನಮೂನೆಯ ಟಿಪ್ಪರ್ ಅನ್ನು ಬಿಡುಗಡೆ ಮಾಡಿದ್ದು, ವಾಣಿಜ್ಯ ವಾಹನಗಳ ವಿಭಾಗದಲ್ಲಿ ಹೊಸ ಸಂಚಲನ ಉಂಟು ಮಾಡಿದೆ.

To Follow DriveSpark On Facebook, Click The Like Button
ಭಾರತದಲ್ಲಿ ನ್ಯೂ ಜನರೇಷನ್ ಸ್ಕಾನಿಯಾ ಟಿಪ್ಪರ್ ಬಿಡುಗಡೆ

ಗಣಿಗಾರಿಕೆಗಳಿಗೆ ಸಹಾಯಕವಾಗ ನಿಟ್ಟಿನಲ್ಲಿ ಹೊಸ ರೀತಿಯ ಪಿ440 8x4 ಸಿಯು.ಎಂ ಎಂಜಿನ್ ಮಾದರಿ ಬಿಡುಗಡೆಯಾಗಿದ್ದು, ಅತ್ಯುತ್ತಮ ಇಂಧನ ಕಾರ್ಯಕ್ಷಮತೆ ಹಾಗೂ ಅತಿ ಹೆಚ್ಚು ಲೋಡಿಂಗ್ ಸಾಮರ್ಥ್ಯದ ವಿನ್ಯಾಸವನ್ನು ಹೊಂದಿದೆ.

ಭಾರತದಲ್ಲಿ ನ್ಯೂ ಜನರೇಷನ್ ಸ್ಕಾನಿಯಾ ಟಿಪ್ಪರ್ ಬಿಡುಗಡೆ

ಇದರ ಜೊತೆಗೆ ಬಿಎಸ್-4 ವೈಶಿಷ್ಟ್ಯತೆಗಳನ್ನು ಹೊಂದಿರುವ ಸ್ಕಾನಿಯಾ ಟಿಪ್ಪರ್, 13-ಲೀಟರ್ ಎಂಜಿನ್‌ನೊಂದಿಗೆ 440ಬಿಎಚ್‌ಪಿ ಉತ್ಪಾದನಾ ಶಕ್ತಿಯನ್ನು ಪಡೆದುಕೊಂಡಿದೆ.

ಭಾರತದಲ್ಲಿ ನ್ಯೂ ಜನರೇಷನ್ ಸ್ಕಾನಿಯಾ ಟಿಪ್ಪರ್ ಬಿಡುಗಡೆ

ಹೀಗಾಗಿ ಕಡಿದಾದ ಪ್ರದೇಶಗಳಲ್ಲಿನ ಗಣಿ ಚಟುವಟಿಕೆಗೆ ಸ್ಕಾನಿಯಾ ಟಿಪ್ಪರ್‌ಗಳು ಸಹಕಾರಿಯಾಗಲಿದ್ದು, ಎಸ್‌ಸಆರ್ ತಂತ್ರಜ್ಞಾನ ಪ್ರೇರಣೆಯೊಂದಿಗಾಗಿ ಮುಂಜಾಗ್ರತ ಮಾಹಿತಿಗಳನ್ನು ನೀಡಬಲ್ಲ ಫ್ಲೀಟ್ ಮ್ಯಾನೇಜ್ಮೆಂಟ್ ಸಿಸ್ಟಂ ಒದಗಿಸಲಾಗಿದೆ.

ಭಾರತದಲ್ಲಿ ನ್ಯೂ ಜನರೇಷನ್ ಸ್ಕಾನಿಯಾ ಟಿಪ್ಪರ್ ಬಿಡುಗಡೆ

ಈ ಕುರಿತು ಮಾತನಾಡಿರುವ ಸ್ಕಾನಿಯಾ ಇಂಡಿಯಾ ಕಾರ್ಯನಿರ್ವಾಹಕ ಅಧಿಕಾರಿ ರಾಘವನ್ ಶ್ರೀನಿವಾಸ್, "ಸ್ಕಾನಿಯಾ ಹೊಸ ಮಾದರಿಯ ಟಿಪ್ಪರ್ ಭಾರತೀಯ ಆಯ್ದ ಗ್ರಾಹಕರಿಗಾಗಿಯೇ ಅಭಿವೃದ್ಧಿಸಲಾಗಿದ್ದು, ಮುಂಬರುವ ದಿನಗಳಲ್ಲಿ ಟಿಪ್ಪರ್ ಆವೃತ್ತಿಯಲ್ಲೇ ಅತಿಹೆಚ್ಚು ಬೇಡಿಕೆ ಹೊಂದುವ ವಿಶ್ವಾಸವಿದೆ" ಎಂದಿದ್ದಾರೆ.

ಭಾರತದಲ್ಲಿ ನ್ಯೂ ಜನರೇಷನ್ ಸ್ಕಾನಿಯಾ ಟಿಪ್ಪರ್ ಬಿಡುಗಡೆ

ಇನ್ನು ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಜನಪ್ರಿಯತೆ ಹೊಂದಿರುವ ಸ್ಕಾನಿಯಾ ಸಂಸ್ಥೆಯು ಈಗಾಗಲೇ ಹಲವು ಮಾದರಿಯ ಬಸ್‌ಗಳನ್ನು ಹೊರತಂದಿದ್ದು, ಇದೀಗ ವಿನೂತನ ರೀತಿಯ ಟಿಪ್ಪರ್‌ಗಳನ್ನು ಪರಿಚಯಿಸುವ ಮೂಲಕ ಗಣಿ ಪ್ರದೇಶಗಳ ಕಾರ್ಯಚಟುವಟಿಕೆಗಳನ್ನು ಮತ್ತಷ್ಟು ಸುಲಭಗೊಳಿಸಲಿದೆ.

English summary
Read in Kannada about Scania Launches New-Gen Tipper In India.
Story first published: Friday, July 14, 2017, 19:43 [IST]
Please Wait while comments are loading...

Latest Photos