ಜಂಟಿ ಒಪ್ಪಂದವನ್ನು ಕೈಬಿಡಲು ತೀರ್ಮಾನಿಸಿದ ಟಾಟಾ ಮೋಟಾರ್ಸ್ ಮತ್ತು ಫೋಕ್ಸ್‌ವ್ಯಾಗನ್

Written By:

ಟಾಟಾ ಮೋಟಾರ್ಸ್ ಮತ್ತು ಫೋಕ್ಸ್‌ವ್ಯಾಗನ್ ಸಂಸ್ಥೆಗಳು ಮಾರ್ಚ್ 2017ರಲ್ಲಿ ನೆಡೆಸಿದ ಜಂಟಿ ಒಪ್ಪಂದವನ್ನು ಕೈಬಿಡಲು ತೀರ್ಮಾನಿಸಿವೆ.

To Follow DriveSpark On Facebook, Click The Like Button
ಜಂಟಿ ಒಪ್ಪಂದವನ್ನು ಕೈಬಿಡಲು ತೀರ್ಮಾನಿಸಿದ ಟಾಟಾ ಮೋಟಾರ್ಸ್ ಮತ್ತು ಫೋಕ್ಸ್‌ವ್ಯಾಗೆನ್

ಹೌದು, ಕಳೆದ ಮಾರ್ಚ್‌ನಲ್ಲಿ ವಾಹನದ ವಾಸ್ತುಶಿಲ್ಪ, ಜಂಟಿ ಎಂಜಿನ್ ಉದ್ಯಮ ಮತ್ತು ಘಟಕ ಬಳಕೆಯ ವಿಚಾರಗಳಲ್ಲಿ ಜಂಟಿ ಒಪ್ಪಂದಕ್ಕೆ ಬಂದಿದ್ದ ಟಾಟಾ ಮೋಟಾರ್ಸ್ ಮತ್ತು ಫೋಕ್ಸ್‌ವ್ಯಾಗೆನ್ ಸಂಸ್ಥೆಗಳು, ಮುಂಬರುವ ದಿನಗಳಲ್ಲಿ ಮುಂದುವರೆಸದೆ ಇರಲು ತೀರ್ಮಾನ ಕೈಗೊಂಡಿವೆ ಎಂಬ ವಿಚಾರ ವಾಹನೋದ್ಯಮದಲ್ಲಿ ಸಂಚಲ ಮೂಡಿಸಿದೆ.

ಜಂಟಿ ಒಪ್ಪಂದವನ್ನು ಕೈಬಿಡಲು ತೀರ್ಮಾನಿಸಿದ ಟಾಟಾ ಮೋಟಾರ್ಸ್ ಮತ್ತು ಫೋಕ್ಸ್‌ವ್ಯಾಗೆನ್

ಟಾಟಾ ಮೋಟಾರ್ಸ್ ತನ್ನ ಅಧಿಕೃತ ಹೇಳಿಕೆಯಲ್ಲಿ ಈ ಬಗ್ಗೆ ತಿಳಿಸಿದ್ದು, ಸ್ಕೋಡಾ ಸಂಸ್ಥೆಯೊಂದಿಗಿನ ಯಾವುದೇ ರೀತಿಯ ಮಾತುಕತೆಯನ್ನು ಸಹ ಮುಂದುವರೆಸುವ ಉದ್ದೇಶ ನಮ್ಮ ಮುಂದೆ ಇಲ್ಲ ಎಂದು ಹೇಳಿಕೆ ನೀಡಿದೆ.

ಜಂಟಿ ಒಪ್ಪಂದವನ್ನು ಕೈಬಿಡಲು ತೀರ್ಮಾನಿಸಿದ ಟಾಟಾ ಮೋಟಾರ್ಸ್ ಮತ್ತು ಫೋಕ್ಸ್‌ವ್ಯಾಗೆನ್

"ಎರಡೂ ಸಂಸ್ಥೆಗಳ ಕಾರ್ಯತಂತ್ರದ ಪ್ರಯೋಜನಗಳ ಮಿತಿಯ ಮಟ್ಟ ಕಡಿಮೆ ಇದ್ದು, ನಮ್ಮ ಪಾಲುದಾರಿಕೆಯ ಕಲ್ಪನೆಯನ್ನು ಮೊಟಕುಗೊಳಿಸುವ ಹಂತಕ್ಕೆ ಬಂದಿದ್ದೇವೆ" ಎಂದು ಟಾಟಾ ಮೋಟಾರ್ಸ್ ಸಿಇಓ ಮತ್ತು ವ್ಯವಸ್ಥಾಪಕ ನಿರ್ದೇಶಕ ಗ್ವೆಂಟರ್ ಬೂಟ್ಸಚೆಕ್ ತಿಳಿಸಿದರು.

ಜಂಟಿ ಒಪ್ಪಂದವನ್ನು ಕೈಬಿಡಲು ತೀರ್ಮಾನಿಸಿದ ಟಾಟಾ ಮೋಟಾರ್ಸ್ ಮತ್ತು ಫೋಕ್ಸ್‌ವ್ಯಾಗೆನ್

ಮಾತನ್ನು ಮುಂದುವರೆಸಿದ ಟಾಟಾ ಮೋಟಾರ್ಸ್ ಸಿಇಓ ಮತ್ತು ವ್ಯವಸ್ಥಾಪಕ ನಿರ್ದೇಶಕ ಗ್ವೆಂಟರ್ ಬೂಟ್ಸಚೆಕ್," ಮುಂಬರುವ ದಿನಗಳಲ್ಲಿ ಫೋಕ್ಸ್‌ವ್ಯಾಗನ್ ಸಂಸ್ಥೆಯೊಂದಿಗೆ ಅನ್ವೇಷಣೆ ನೆಡೆಸಲು ನಾವು ಸದಾ ಸಿದ್ಧರಿದ್ದು, ಪರಸ್ಪರ ಗೌರವದಿಂದ ಈ ನಿರ್ಧಾರವನ್ನು ಕೈಗೊಂಡಿದ್ದೇವೆ" ಎಂದರು.

ಜಂಟಿ ಒಪ್ಪಂದವನ್ನು ಕೈಬಿಡಲು ತೀರ್ಮಾನಿಸಿದ ಟಾಟಾ ಮೋಟಾರ್ಸ್ ಮತ್ತು ಫೋಕ್ಸ್‌ವ್ಯಾಗೆನ್

ಟಾಟಾ ಮೋಟಾರ್ಸ್ ಕಂಪನಿಯು ಗ್ರಾಹಕರಿಗೆ ಅತ್ಯಾಕರ್ಷಕ ಮತ್ತು ವಿಶ್ವದರ್ಜೆಯ ಉತ್ಪನ್ನಗಳನ್ನು ಹೊರ ತರಲು ಸ್ವತಂತ್ರವಾಗಿ ಕೆಲಸಗಳನ್ನು ಮುಂದುವರೆಸಲಿದೆ.

English summary
In March 2017, Tata Motors and Volkswagen signed a Memorandum of Understanding (MoU) to explore a joint venture on the vehicle architecture, engines, and for the component sourcing.
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark