ಜನವರಿಯಿಂದ ನಮ್ಮ ವಾಹನಗಳ ಬೆಲೆ ಹೆಚ್ಚಿಸಲಿದ್ದೇವೆ; ಟೊಯೊಟಾ ಮೋಟರ್ಸ್

Written By:

ಜಪಾನಿನ ವಾಹನ ತಯಾರಕ ಕಂಪೆನಿಯಾದ ಟೊಯೊಟಾ ಕಿರ್ಲೋಸ್ಕರ್ ಮೋಟರ್ ಕಂಪನಿಯು 2018ರ ಜನವರಿಯಿಂದ ತನ್ನ ಸಂಪೂರ್ಣ ಉತ್ಪನ್ನದ ಬೆಲೆಯನ್ನು ಹೆಚ್ಚಿಸುತ್ತೇವೆ ಎಂದು ಘೋಷಿಸಿದೆ.

ಜನವರಿಯಿಂದ ನಮ್ಮ ವಾಹನಗಳ ಬೆಲೆ ಹೆಚ್ಚಿಸಲಿದ್ದೇವೆ; ಟೊಯೊಟಾ ಮೋಟರ್ಸ್

ಭಾರತದಲ್ಲಿ ಟೊಯೊಟಾ ಕಂಪನಿಯು ತನ್ನದೇ ರೀತಿಯ ಅಭಿಮಾನಿ ಬಳಗವನ್ನು ಪಡೆದುಕೊಂಡಿದೆ. ಈಗ ಸಂಸ್ಥೆಯು ತನ್ನ ಎಲ್ಲಾ ವಾಹನಗಳ ಬೆಲೆಯನ್ನು ಮುಂಬರುವ 2018ರಿಂದ ಶೇಕಡಾ ಮೂರರಷ್ಟು ಹೆಚ್ಚಿಸಲಿದೆ. ಹೆಚ್ಚುತ್ತಿರುವ ಬಿಡಿಭಾಗಗಳ ಉಪಯೋಗ ಮತ್ತು ಸರಕು ವೆಚ್ಚವನ್ನು ಆಧರಿಸಿ ಬೆಲೆ ಹೆಚ್ಚಳ ಮಾಡಲು ನಿರ್ಧರಿಸಲಾಗಿದೆ.

ಜನವರಿಯಿಂದ ನಮ್ಮ ವಾಹನಗಳ ಬೆಲೆ ಹೆಚ್ಚಿಸಲಿದ್ದೇವೆ; ಟೊಯೊಟಾ ಮೋಟರ್ಸ್

ಪ್ರಸ್ತುತ, ಕಂಪನಿಯು ಭಾರತದಲ್ಲಿ ಇಟಿಯೋಸ್ ಲಿವಾ ಮತ್ತು ಇಟಿಯೋಸ್ ಸೆಡಾನ್, ಕರೋಲಾ ಆಲ್ಟಿಸ್, ಕ್ಯಾಮ್ರಿ ಹೈಬ್ರಿಡ್, ಫಾರ್ಚುನರ್ ಎಸ್‌ಯುವಿ, ಇನ್ನೊವಾ ಕ್ರಿಸ್ಟ ಎಂಪಿವಿ, ಲ್ಯಾಂಡ್ ಕ್ರೂಸರ್ ಶ್ರೇಣಿ ಮತ್ತು ಪ್ರಯಸ್ ಹೈಬ್ರಿಡ್‌ಗಳನ್ನು ಒಳಗೊಂಡಿದೆ.

ಜನವರಿಯಿಂದ ನಮ್ಮ ವಾಹನಗಳ ಬೆಲೆ ಹೆಚ್ಚಿಸಲಿದ್ದೇವೆ; ಟೊಯೊಟಾ ಮೋಟರ್ಸ್

ಸದ್ಯದ ಮಾಹಿತಿ ಪ್ರಕಾರ, ಜನವರಿ ತಿಂಗಳಿನಿಂದ ಪ್ರವೇಶ ಮಟ್ಟದ ಇಟಿಯೋಸ್ ಲಿವಾ ಕಾರು ಈಗಿರುವ ಬೆಲೆಗಿಂತ ಸುಮಾರು ರೂ.16 ಸಾವಿರ ಹೆಚ್ಚಳವಾಗಲಿದೆ ಮತ್ತು ಫಾರ್ಚುನರ್ ಎಸ್‌ಯುವಿ ಕಾರು ರೂ.81 ಸಾವಿರ ಹೆಚ್ಚಳವಾಗಲಿದೆ.

ಜನವರಿಯಿಂದ ನಮ್ಮ ವಾಹನಗಳ ಬೆಲೆ ಹೆಚ್ಚಿಸಲಿದ್ದೇವೆ; ಟೊಯೊಟಾ ಮೋಟರ್ಸ್

ನೀವೇನಾದರೂ ಟೊಯೊಟಾ ಕಾರನ್ನು ಖರೀದಿಸಲು ನಿರ್ಧರಿಸಿದ್ದರೆ, ಈ ವರ್ಷದಲ್ಲಿಯೇ ಕಾರನ್ನು ಕೊಂಡುಕೊಳ್ಳುವುದು ಉತ್ತಮ. ಟೊಯೊಟಾ ವರ್ಷಾಂತ್ಯದ ಕೊಡುಗೆಗಳನ್ನು ಈಗಾಗಲೇ ಘೋಷಣೆ ಮಾಡಿದೆ. ಈ ಕೊಡುಗೆಗಳನ್ನು ಬಳಸಿಕೊಂಡು ಗ್ರಾಹಕರು ತಮ್ಮ ನೆಚ್ಚಿನ ಕಾರುಗಳನ್ನು ಖರೀದಿಸಬಹುದಾಗಿದೆ.

ಜನವರಿಯಿಂದ ನಮ್ಮ ವಾಹನಗಳ ಬೆಲೆ ಹೆಚ್ಚಿಸಲಿದ್ದೇವೆ; ಟೊಯೊಟಾ ಮೋಟರ್ಸ್

ಟೊಯೊಟಾ ಕಂಪನಿಯು ಈ ತಿಂಗಳ ಮೊದಲ ವಾರ 'ರಿಮೆಂಬರ್ ಡಿಸೆಂಬರ್' ಎಂಬ ಹೆಸರಿನ ಕ್ಯಾಂಪೇನ್ ಪ್ರಾರಂಭಿಸಿದ್ದು, ಇದರ ಮೂಲಕ ಗ್ರಾಹಕರು ಶೇಕಡಾ 100% ರಷ್ಟು ಆನ್‌ಲೈನ್ ಹಣಕಾಸು ಸೌಕರ್ಯ, ಕೇವಲ 4.99% ರಷ್ಟು ವಿಶೇಷ ಬಡ್ಡಿ ದರ ಮತ್ತು ವಿಶೇಷ ಇಎಂಐ ಪ್ಯಾಕೇಜ್ ಪಡೆದುಕೊಳ್ಳಬಹುದು.

ಜನವರಿಯಿಂದ ನಮ್ಮ ವಾಹನಗಳ ಬೆಲೆ ಹೆಚ್ಚಿಸಲಿದ್ದೇವೆ; ಟೊಯೊಟಾ ಮೋಟರ್ಸ್

ಸರ್ಕಾರಿ ಮತ್ತು ಕಾರ್ಪೋರೆಟ್ ಉದ್ಯೋಗಿಗಳಿಗೆ ರೂ.40,000 ರಿಂದ 90,000 ವರೆಗಿನ ಮಾದರಿಯನ್ನು ಆದರಿಸಿ ಪ್ರಯೋಜನಗಳನ್ನು ನೀಡುವ ಯೋಜನೆಯನ್ನೂ ಸಹ ಟೊಯೊಟಾ ಹೊಂದಿದೆ. ಈ ವಿಶೇಷ ಕೊಡುಗೆಗಳು ಈ ವರ್ಷದ ಡಿಸೆಂಬರ್ 31 ವರೆಗೆ ಮಾತ್ರ ಮಾನ್ಯವಾಗಿರುತ್ತವೆ.

ಜನವರಿಯಿಂದ ನಮ್ಮ ವಾಹನಗಳ ಬೆಲೆ ಹೆಚ್ಚಿಸಲಿದ್ದೇವೆ; ಟೊಯೊಟಾ ಮೋಟರ್ಸ್

ಎಲ್ಲಾ ಕಂಪನಿಗಳು ಸುಮ್ಮನಿರುವಾಗ ಟೊಯೊಟಾ ಕಂಪನಿ ಮಾತ್ರ ಏಕೆ ತನ್ನ ಉತ್ಪನ್ನಗಳ ಬೆಲೆ ಹೆಚ್ಚಿಸಿದೆ ? ಎಂದು ನೀವೇನಾದರೂ ಕೇಳಿದರೆ, ಖಂಡಿತ ನಿಮ್ಮ ಊಹೆ ತಪ್ಪು. ಟೊಯೊಟಾ ಕಂಪನಿಯ ಜೊತೆ ಸ್ಕೋಡಾ, ಇಸುಸು ಮತ್ತು ಹೋಂಡಾ ಕಂಪನಿಗಳೂ ಸಹ ತಮ್ಮ ಕಾರುಗಳ ಬೆಲೆಗಳನ್ನು ಭಾರತದಲ್ಲಿ ಹೆಚ್ಚಿಸಲಿವೆ.

ಜನವರಿಯಿಂದ ನಮ್ಮ ವಾಹನಗಳ ಬೆಲೆ ಹೆಚ್ಚಿಸಲಿದ್ದೇವೆ; ಟೊಯೊಟಾ ಮೋಟರ್ಸ್

ಮುಂಬರುವ ದಿನಗಳಲ್ಲಿ ಇತರ ವಾಹನ ತಯಾರಕ ಕಂಪನಿಗಳು ಮೇಲಿನ ಕಂಪನಿಗಳ ನಿರ್ಧಾರನ್ನು ಕೈಗೊಳ್ಳುವ ನಿರೀಕ್ಷೆ ಇದೆ. ಆದ್ದರಿಂದ, ನೀವೇನಾದರೂ ಕಾರು ಖರೀದಿಸಲು ಯೋಜಿಸುತ್ತಿದ್ದರೆ, ಇದು ಸೂಕ್ತ ಸಮಯ.

Trending articles in DriveSpark Kannada;

ಬೆಂಗಳೂರಿನ ಪ್ರತಿಷ್ಠಿತ ಮಾರುತಿ ಸರ್ವಿಸ್ ಸ್ಟೇಷನ್ ಕರ್ಮಕಾಂಡ ಬಯಲು ಮಾಡಿದ ಗ್ರಾಹಕ !! ವಿಡಿಯೋ

ಬರೋಬ್ಬರಿ 3 ಮರ್ಸಿಡಿಸ್ ಐಷಾರಾಮಿ ಕಾರುಗಳನ್ನು ಯಶ್ ಖರೀದಿಸಿದ್ದು ಏಕೆ ಗೊತ್ತೆ ?

ಮಾಡಿದ ತಪ್ಪಿಗೆ ರೂ.1.61 ಲಕ್ಷ ದಂಡ ಪಾವತಿ ಮಾಡಿದ ಮಾರುತಿ ಸುಜುಕಿ

ಯಾಕ್ರಿ ಲಂಚ ಕೊಡ್ತಿರಾ? ಇನ್ಮುಂದೆ ಸುಲಭದಲ್ಲೇ ಸಿಗಲಿದೆ ಡ್ರೈವಿಂಗ್ ಲೈಸೆನ್ಸ್..!!

Read more on toyota ಟೊಯೊಟಾ
English summary
Toyota Kirloskar Motor has announced that it will increase the price of its entire product portfolio, starting from January 2018.
Story first published: Friday, December 8, 2017, 11:44 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark