ಫೋಕ್ಸ್‌ವ್ಯಾಗನ್ ಕಂಪೆನಿಯ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ಪಾಟ್ರಿಕ್ ರೀಸ್ ನೇಮಕ

Written By:

ಜರ್ಮನ್ ಕಾರು ತಯಾರಕ ಫೋಕ್ಸ್‌ವ್ಯಾಗನ್ ಕಂಪೆನಿಯು ತನ್ನ ಹಣಕಾಸು ವಿಭಾಗದ ಹೊಸ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ಪಾಟ್ರಿಕ್ ರೀಸ್ ಅವರನ್ನು ನೇಮಕ ಮಾಡಿದೆ.

ಫೋಕ್ಸ್‌ವ್ಯಾಗನ್ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ಪಾಟ್ರಿಕ್ ರೀಸ್ ನೇಮಕ

ಪ್ರತಿಷ್ಠಿತ ಕಾರು ತಯಾರಕ ಫೋಕ್ಸ್‌ವ್ಯಾಗನ್ ಸಂಸ್ಥೆಯ ಹಣಕಾಸು ವಿಭಾಗದ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ಪಾಟ್ರಿಕ್ ರೀಸ್ ಅವರು ಈ ತಿಂಗಳ ಆರಂಭ ಅಂದರೆ ಜುಲೈ 1ರಿಂದ ಅಧಿಕಾರ ವಹಿಸಿಕೊಂಡಿದ್ದು, ಈ ಬಗ್ಗೆ ಕಂಪನಿಯು ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಫೋಕ್ಸ್‌ವ್ಯಾಗನ್ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ಪಾಟ್ರಿಕ್ ರೀಸ್ ನೇಮಕ

ರೀಸ್ ಅವರು ವಾಹನ ಉದ್ಯಮದಲ್ಲಿ 26 ವರ್ಷಗಳಿಗೂ ಹೆಚ್ಚಿನ ಅನುಭವವನ್ನು ಹೊಂದಿದ್ದು, ಫೋಕ್ಸ್‌ವ್ಯಾಗನ್ ಕಂಪನಿಯ ದಕ್ಷಿಣ ಆಫ್ರಿಕಾ ಮತ್ತು ಸ್ವೀಡನ್ ಶಾಖೆಗಳಲ್ಲಿ ಹಣಕಾಸು ವಿಭಾಗದ ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಿರುವ ಅನುಭವ ಹೊಂದಿದ್ದಾರೆ.

ಫೋಕ್ಸ್‌ವ್ಯಾಗನ್ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ಪಾಟ್ರಿಕ್ ರೀಸ್ ನೇಮಕ

ಯುರೋಪ್, ಉತ್ತರ ಮತ್ತು ದಕ್ಷಿಣ ಅಮೆರಿಕಾ, ಮತ್ತು ಆಫ್ರಿಕಾ ಮುಂತಾದ ಜಾಗತಿಕ ಮಾರುಕಟ್ಟೆಗಳಲ್ಲಿ ಮಾರಾಟ ಮತ್ತು ಮಾರುಕಟ್ಟೆ ವಿಭಾಗದಲ್ಲಿ ನಾಯಕತ್ವ ಸ್ಥಾನಗಳನ್ನು ರೀಸ್ ವಹಿಸಿಕೊಂಡು ಗುರಿಯತ್ತ ಮುನ್ನೆಡೆಸುವಲ್ಲಿ ಯಶಸ್ವಿಯಾಗಿದ್ದಾರೆ.

ಫೋಕ್ಸ್‌ವ್ಯಾಗನ್ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ಪಾಟ್ರಿಕ್ ರೀಸ್ ನೇಮಕ

ಗೊಟನ್‌ಬರ್ಗ್ ವಿಶ್ವವಿದ್ಯಾನಿಲಯದ ಬ್ಯುಸಿನೆಸ್ ಸ್ಕೂಲ್‌ನಲ್ಲಿ ಪದವೀಧರರಾಗಿರುವ ಪಾಟ್ರಿಕ್ ರೀಸ್ ಅವರು ಸದ್ಯ ವಹಿಸಿಕೊಂಡಿರುವ ಅಧಿಕಾರವನ್ನು ಸಮರ್ಪಕವಾಗಿ ಉಪಯೋಗಿಸಿಕೊಂಡು ಕಾರ್ಯನಿರ್ವಹಿಸಲಿದ್ದಾರೆ ಎಂದು ಕಂಪನಿ ನಂಬಿದೆ.

English summary
Read in Kannada about German carmaker Volkswagen has appointed Patrik Riese as the new CEO and Managing Director for the company's finance division.
Story first published: Wednesday, July 19, 2017, 10:50 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark