2019ರ ಹೊತ್ತಿಗೆ ಫೋಕ್ಸ್‌ವ್ಯಾಗನ್ ಕಾರುಗಳು ಪರಸ್ಪರರ ಮಾತನಾಡಿಕೊಳ್ಳುತ್ತವೆ

Written By:

ಜರ್ಮನಿಯ ಕಾರು ತಯಾರಕ ಫೋಕ್ಸ್‌ವ್ಯಾಗನ್ ಆಟೋನಮಸ್ ತಂತ್ರಜ್ಞಾನಕ್ಕಾಗಿ ಎನ್ವಿಡಿಯಾ ಸಂಸ್ಥೆಯ ಜೊತೆ ಸಹಭಾಗಿತ್ವ ಮಾಡಿಕೊಂಡಿದೆ.

To Follow DriveSpark On Facebook, Click The Like Button
2019ರ ಹೊತ್ತಿಗೆ ಫೋಕ್ಸ್‌ವ್ಯಾಗನ್ ಕಾರುಗಳು ಪರಸ್ಪರರ ಮಾತನಾಡಿಕೊಳ್ಳುತ್ತವೆ

ಇತ್ತೀಚಿಗೆ ಅಟೋದ್ಯಮದಲ್ಲಿ ಅದ್ಯಾಧುನಿಕ ತಂತ್ರಜ್ಞಾನದ ಆವಾಹನೆ ಹೆಚ್ಚಾಗಿದ್ದು, ಇದಕ್ಕೆ ಉದಾಹರಣೆ ಎಂಬಂತೆ ಫೋಕ್ಸ್‌ವ್ಯಾಗನ್ ಆಟೋನಮಸ್ ತಂತ್ರಜ್ಞಾನವನ್ನು ಪರಿಚಯಿಸಲು ಮುಂದಾಗಿದ್ದು, ಈ ತಂತ್ರಜ್ಞಾನದಿಂದಾಗಿ ಕಾರುಗಳು ವಿಚಾರ ವಿನಿಮಯ ಮಾಡಿಕೊಳ್ಳಲಿವೆ.

2019ರ ಹೊತ್ತಿಗೆ ಫೋಕ್ಸ್‌ವ್ಯಾಗನ್ ಕಾರುಗಳು ಪರಸ್ಪರರ ಮಾತನಾಡಿಕೊಳ್ಳುತ್ತವೆ

ಈ ವಿಚಾರ ಖಂಡಿತ ನಮ್ಮೆಲರಿಗೂ ಆಶ್ಚರ್ಯ ಉಂಟು ಮಾಡಲಿದೆ, ಏನಪ್ಪಾ ಇದು ಕಾರುಗಳು ಮಾತನಾಡಿಕೊಳ್ಳಲಿವೆಯೇ ? ಎಂದು ನೀವೇನಾದ್ರು ಕೇಳುದ್ರೆ, ಖಂಡಿತ 'ಹೌದು' ಎನ್ನುವ ಉತ್ತರವನ್ನು ಫೋಕ್ಸ್‌ವ್ಯಾಗನ್ ನೀಡಲಿದೆ.

2019ರ ಹೊತ್ತಿಗೆ ಫೋಕ್ಸ್‌ವ್ಯಾಗನ್ ಕಾರುಗಳು ಪರಸ್ಪರರ ಮಾತನಾಡಿಕೊಳ್ಳುತ್ತವೆ

ಫೋಕ್ಸ್‌ವ್ಯಾಗನ್ ಸಂಸ್ಥೆಯು pWLAN ತಂತ್ರಜ್ಞಾನನ್ನು ಕಾರಿನಲ್ಲಿ ಅಳವಡಿಸಲು ಮುಂದಾಗಿದ್ದು, ಈ ತಂತ್ರಜ್ಞಾನದ ಮೂಲಕ 500 ಮೀಟರ್ ಅಂತರದೊಳಗೆ ಕಾರುಗಳು ಮಾಹಿತಿಯನ್ನು ಹಂಚಿಕೊಳ್ಳಲಿವೆ.

2019ರ ಹೊತ್ತಿಗೆ ಫೋಕ್ಸ್‌ವ್ಯಾಗನ್ ಕಾರುಗಳು ಪರಸ್ಪರರ ಮಾತನಾಡಿಕೊಳ್ಳುತ್ತವೆ

ಎಚ್ಚರಿಕೆಯ ಗಂಟೆ , ಸಂಚಾರ ವ್ಯವಸ್ಥೆ ಮತ್ತು ರಸ್ತೆ ಪರಿಸ್ಥಿತಿಗಳ ಬಗ್ಗೆ ಸಂವಹನ ಮಾಡಬಹುದಾದ ತಂತ್ರಜ್ಞಾನವನ್ನು ಈ ಕಾರು ಹೊಂದಿರಲಿದ್ದು, ಇದರಿಂದಾಗಿ ಮುಂದಾಗುವ ಹಲವು ರೀತಿಯ ಅಪಾಯಗಳನ್ನು ತಡೆಗಟ್ಟಲು ಸಹಾಯವಾಗಲಿದೆ.

2019ರ ಹೊತ್ತಿಗೆ ಫೋಕ್ಸ್‌ವ್ಯಾಗನ್ ಕಾರುಗಳು ಪರಸ್ಪರರ ಮಾತನಾಡಿಕೊಳ್ಳುತ್ತವೆ

ಆರಂಭದಲ್ಲಿ, ಎಚ್ಚರಿಕೆ ಮತ್ತು ಸ್ಥಳೀಯ ಮಾಹಿತಿಗೆ ಸೀಮಿತಗೊಳಿಸಲಿದ್ದು, ಮುಂದಿನ ಹಂತಗಳಲ್ಲಿ ನೈಜ ಸಮಯದ ಟ್ರಾಫಿಕ್ ಸ್ಥಿತಿಯಂತಹ ಮಾಹಿತಿ ವಿನಿಮಯಕ್ಕೆ ತಂತ್ರಜ್ಞಾನವನ್ನು ವಿಸ್ತರಿಸಬಹುದಾಗಿದೆ.

2019ರ ಹೊತ್ತಿಗೆ ಫೋಕ್ಸ್‌ವ್ಯಾಗನ್ ಕಾರುಗಳು ಪರಸ್ಪರರ ಮಾತನಾಡಿಕೊಳ್ಳುತ್ತವೆ

ಈ ವ್ಯವಸ್ಥೆಯನ್ನು ಸ್ಥಳೀಕರಿಸಲಾಗಿದ್ದು, ಇದರಿಂದಾಗಿ ಡೇಟಾ ಸಂಗ್ರಹಣೆ ಅಥವಾ ನೆಟ್‌ವರ್ಕ್ ಕವರೇಜ್ ಅಗತ್ಯತೆಯನ್ನು ನಿವಾರಿಸುತ್ತದೆ. PWLAN ತಂತ್ರಜ್ಞಾನವನ್ನು ಪಡೆದುಕೊಂಡಿರುವ ಎಲ್ಲಾ ಕಾರುಗಳು ಸಹ ಪರಸ್ಪರ ಸಂವಹನ ಮಾಡಬಹುದು ಎಂದು ಸಂಸ್ಥೆ ತಿಳಿಸಿದೆ.

English summary
Read in Kannada about Volkswagen has stated that the cars will be equipped with pWLAN (public wireless LAN) technology from 2019.
Story first published: Friday, June 30, 2017, 13:23 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark