ಭಾರತದ ಮೊದಲ ಫೋಕ್ಸ್‌ವ್ಯಾಗನ್ 'ಡಿಜಿಟಲ್ ಎಕ್ಸ್‌ಪೀರಿಯೆನ್ಸ್' ಉದ್ಘಾಟನೆ

Written By:

ಫೋಕ್ಸ್‌ವ್ಯಾಗನ್ ಇಂಡಿಯ ಸಂಸ್ಥೆ ತಮಿಳುನಾಡಿನ ಕೊಯಮತ್ತೂರಿನಲ್ಲಿ ತನ್ನ ಮೊದಲ ಡಿಜಿಟಲ್ ಎಕ್ಸ್‌ಪೀರಿಯೆನ್ಸ್ ಸೆಟ್‌ಅಪ್ ಉದ್ಘಾಟನೆ ಮಾಡಿದೆ. ಇದು ದೇಶದ್ಲಲಿಯೇ ಮೊದಲು ಪ್ರಯತ್ನ ಎನ್ನಬಹುದು.

ಭಾರತದ ಮೊದಲ ಫೋಕ್ಸ್‌ವ್ಯಾಗನ್ 'ಡಿಜಿಟಲ್ ಎಕ್ಸ್‌ಪೀರಿಯೆನ್ಸ್' ಉದ್ಘಾಟನೆ

ಈ ಹೊಸ ಸೌಲಭ್ಯವನ್ನು ಗ್ರಾಹಕರಿಗೆ ನೀಡಲು ಫೋಕ್ಸ್‌ವ್ಯಾಗನ್ ಇಂಡಿಯ ಸಂಸ್ಥೆ ಮುಂದಾಗಿದ್ದು, ಇದರ ಮೂಲಕ ಸ್ವಯಂ ಕಲಿಕೆಯ ಅಂಶಗಳ ಮೂಲಕ ಫೋಕ್ಸ್‌ವ್ಯಾಗನ್ ಇಂಡಿಯ ಸಂಸ್ಥೆಯ ಕಾರು ಶ್ರೇಣಿಯ ಬಗ್ಗೆ ಅರಿತುಕೊಳ್ಳಲು ಸಹಾಯ ಮಾಡಲಿದೆ ಎನ್ನುವ ವಿಚಾರ ತಿಳಿಯಬಹುದಾಗಿದೆ.

ಭಾರತದ ಮೊದಲ ಫೋಕ್ಸ್‌ವ್ಯಾಗನ್ 'ಡಿಜಿಟಲ್ ಎಕ್ಸ್‌ಪೀರಿಯೆನ್ಸ್' ಉದ್ಘಾಟನೆ

ಮೊದಲ ಡಿಜಿಟಲ್ ಎಕ್ಸ್‌ಪೀರಿಯೆನ್ಸ್ ಸೆಟ್‌ಅಪ್ ಘಟಕವು ಸುದರ್ಶನ್ ಜಗದೀಶನ್ ಅವರ ನೇತೃತ್ವದಲ್ಲಿ ಮುನ್ನೆಡೆಯಲಿದೆ ಎಂಬ ವಿಚಾರ ತಿಳಿದುಬಂದಿದೆ. ಇದರ ಕಚೇರಿಯು ಅವಿನಾಶಿ ರಸ್ತೆಯ ಪೀಲಮೇಡು ಪ್ರದೇಶದಲ್ಲಿ ಇರಿಸಲಾಗಿದೆ.

ಭಾರತದ ಮೊದಲ ಫೋಕ್ಸ್‌ವ್ಯಾಗನ್ 'ಡಿಜಿಟಲ್ ಎಕ್ಸ್‌ಪೀರಿಯೆನ್ಸ್' ಉದ್ಘಾಟನೆ

ಡಿಜಿಟಲ್ ಷೋರೂಂನಲ್ಲಿ ಎರಡು ಕಾರುಗಳನ್ನು ಪ್ರದರ್ಶನಕ್ಕೆ ಇಡಲಾಗಿದ್ದು, ಫೋಕ್ಸ್‌ವ್ಯಾಗನ್ ವಾಹನ ಸರಣಿಯ ವಿವರಗಳನ್ನು ಕಾಗದ ರಹಿತವಾಗಿ ಡಿಜಿಟಲ್ ವಾಹಿನಿ ಹಾಗು ದೊಡ್ಡ ಪರದೆಯ ಮೂಲಕ ತಿಳುವಳಿಕೆ ನೀಡಲು ಸಂಸ್ಥೆ ಮುಂದಾಗಿದೆ.

ಭಾರತದ ಮೊದಲ ಫೋಕ್ಸ್‌ವ್ಯಾಗನ್ 'ಡಿಜಿಟಲ್ ಎಕ್ಸ್‌ಪೀರಿಯೆನ್ಸ್' ಉದ್ಘಾಟನೆ

ಫೋಕ್ಸ್‌ವ್ಯಾಗನ್ ಕಾರುಗಳ ಮಾಹಿತಿ ಪಡೆಯಲು ಬರುವ ಗ್ರಾಹಕರಿಗೆ ವಿಶ್ರಾಂತಿ ಕೋಣೆ ಸೌಲಭ್ಯ ಸಹ ನೀಡಲಾಗಿದೆ. ಗ್ರಾಹಕರ ದೃಷ್ಟಿಕೋನ ಬದಲಾಯಿಸುವ ಕಡೆ ದಿಟ್ಟ ಹೆಜ್ಜೆ ಇಟ್ಟಿರುವ ಫೋಕ್ಸ್‌ವ್ಯಾಗನ್, ತಂತ್ರಜ್ಞಾನ ಮತ್ತು ಸಂಶೋಧನೆ ಬಳಕೆ ಮಾಡುವ ಮೂಲಕ ತನ್ನ ಉತ್ಪನ್ನದ ಬಗ್ಗೆ ತಿಳಿಸಲಿದೆ.

ಭಾರತದ ಮೊದಲ ಫೋಕ್ಸ್‌ವ್ಯಾಗನ್ 'ಡಿಜಿಟಲ್ ಎಕ್ಸ್‌ಪೀರಿಯೆನ್ಸ್' ಉದ್ಘಾಟನೆ

ಈ ಡಿಜಿಟಲ್ ಎಕ್ಸ್‌ಪೀರಿಯೆನ್ಸ್ ಸೆಟ್‌ಅಪ್‌ನಲ್ಲಿ ಐಪ್ಯಾಡ್‌ಗಳನ್ನು ಇರಿಸಲಾಗಿದ್ದು, ಉತ್ಪನ್ನಗಳ ನೋಟ ಮತ್ತು ಭಾವನೆಯನ್ನು ಗ್ರಾಹಕರಿಗೆ ಡಿಜಿಟಲ್ ಪರದೆಗಳ ಮೂಲಕ ತಿಳಿಸಲಾಗುತ್ತದೆ.

ಭಾರತದ ಮೊದಲ ಫೋಕ್ಸ್‌ವ್ಯಾಗನ್ 'ಡಿಜಿಟಲ್ ಎಕ್ಸ್‌ಪೀರಿಯೆನ್ಸ್' ಉದ್ಘಾಟನೆ

ಈ ಡೀಲರ್‌ಶಿಪ್ ವೃತ್ತಿಪರ ಮಾರಾಟಗಾರರನ್ನು ಒಳಗೊಂಡಿರಲಿದ್ದು, ಹೆಚ್ಚು ತರಬೇತಿ ಪಡೆದ ಸಿಬ್ಬಂದಿ ಬರುವ ಗ್ರಾಹಕರಿಗೆ ಸಹಾಯ ಮಾಡಲಿದೆ ಎಂಬ ಮಾಹಿತಿಯನ್ನು ಕಂಪನಿ ತಿಳಿಸಿದೆ.

ಭಾರತದ ಮೊದಲ ಫೋಕ್ಸ್‌ವ್ಯಾಗನ್ 'ಡಿಜಿಟಲ್ ಎಕ್ಸ್‌ಪೀರಿಯೆನ್ಸ್' ಉದ್ಘಾಟನೆ

ಇಡೀ ವಿಶ್ವವೇ ಡಿಜಿಟಲ್ ಹಾದಿಯಲ್ಲಿ ಚಲಿಸುತ್ತಿರುವ ವೇಳೆಯಲ್ಲಿ, ಕಾರು ತಯಾರಕ ಸಂಸ್ಥೆಗಳ ಈ ನಿರ್ಧಾರ ವಿತರಕರಲ್ಲಿ ಹಾಗೂ ಗ್ರಾಹಕರಲ್ಲಿ ಹೆಚ್ಚಿನ ಮಟ್ಟದ ಬದಲಾವಣೆ ಕಾಣಲು ಸಹಾಯ ಮಾಡಲಿದೆ. ಡಿಜಿಟಲ್ ಖರೀದಿ ಅನುಭವವನ್ನು ಒದಗಿಸುವುದರಿಂದ ಗ್ರಾಹಕರ ಕಾರು ಖರೀದಿಸುವ ಆಯ್ಕೆಯ ಗೌಪ್ಯತೆಯನ್ನು ಮತ್ತು ತಮ್ಮ ನಿರ್ಧಾರಕ್ಕೆ ಹೊಸ ಹಾದಿಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡಲಿದೆ.

English summary
Volkswagen India has inaugurated its first digital experience set-up in Coimbatore, Tamil Nadu.
Story first published: Monday, August 7, 2017, 18:00 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark