2025ರ ವೇಳೆಗೆ 80ಕ್ಕೂ ಹೆಚ್ಚು ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆ ಮಾಡಲಿದೆ ಫೋಕ್ಸ್‌ವ್ಯಾಗನ್

ಬಹುದೊಡ್ಡ ಯೋಜನೆ ರೂಪಿಸಿರುವ ಫೋಕ್ಸ್‌ವ್ಯಾಗನ್ ಸಂಸ್ಥೆಯು 2025ರ ವೇಳೆಗೆ 80ಕ್ಕೂ ಹೆಚ್ಚು ಎಲೆಕ್ಟ್ರಿಕ್ ವಾಹನಗಳನ್ನು ಅಭಿವೃದ್ಧಿಗೊಳಿಸುವುದಾಗಿ ಹೇಳಿಕೊಂಡಿದೆ.

By Praveen

ಎಲೆಕ್ಟ್ರಿಕ್ ಎಂಜಿನ್ ಪ್ರೇರಿತ ವಾಹನಗಳ ಉತ್ಪಾದನೆ ಮತ್ತು ಮಾರಾಟ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಈ ಹಿನ್ನೆಲೆ ಬಹುದೊಡ್ಡ ಯೋಜನೆ ರೂಪಿಸಿರುವ ಫೋಕ್ಸ್‌ವ್ಯಾಗನ್ ಸಂಸ್ಥೆಯು 2025ರ ವೇಳೆಗೆ 80ಕ್ಕೂ ಹೆಚ್ಚು ಎಲೆಕ್ಟ್ರಿಕ್ ವಾಹನಗಳನ್ನು ಅಭಿವೃದ್ಧಿಗೊಳಿಸುವುದಾಗಿ ಹೇಳಿಕೊಂಡಿದೆ.

ಎಲೆಕ್ಟ್ರಿಕ್ ವಾಹನಗಳ ಅಭಿವೃದ್ಧಿಗೆ ಮುಂದಾದ ಫೋಕ್ಸ್‌ವ್ಯಾಗನ್

ಈ ಹಿನ್ನೆಲೆ ತನ್ನ ಹೊಸ ಪರಿಕಲ್ಪನೆಯ ಎಲೆಕ್ಟ್ರಿಕ್ ವಾಹನಗಳ ಬಗೆಗೆ ಅಧಿಕೃತ ಮಾಹಿತಿ ಹೊರಹಾಕಿರುವ ಫೋಕ್ಸ್‌ವ್ಯಾಗನ್, ಪ್ರಸ್ತುತ ಮಾರುಕಟ್ಟೆಯಲ್ಲಿನ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ವಿವಿಧ ಮಾದರಿಯ 80ಕ್ಕೂ ಹೆಚ್ಚು ಎಲೆಕ್ಟ್ರಿಕ್ ವಾಹನಗಳನ್ನು ಅಭಿವೃದ್ಧಿಗೊಳಿಸುವ ಬಗ್ಗೆ ಸುಳಿವು ನೀಡಿದೆ.

ಎಲೆಕ್ಟ್ರಿಕ್ ವಾಹನಗಳ ಅಭಿವೃದ್ಧಿಗೆ ಮುಂದಾದ ಫೋಕ್ಸ್‌ವ್ಯಾಗನ್

ಇದರಲ್ಲಿ 50ಕ್ಕೂ ಹೆಚ್ಚು ವಾಹನ ಮಾದರಿಗಳನ್ನು ಸಂಪೂರ್ಣ ಎಲೆಕ್ಟ್ರಿಕ್ ಎಂಜಿನ್ ಜೊತೆ ಹಾಗೂ 30 ವಾಹನ ಮಾದರಿಗಳನ್ನು ಹೈಬ್ರಿಡ್ ಎಂಜಿನ್ ಜೊತೆ ಅಭಿವೃದ್ಧಿಗೊಳಿಸುವ ಬಗ್ಗೆ ಸುಳಿವು ನೀಡಿರುವ ಫೋಕ್ಸ್‌ವ್ಯಾಗನ್ ಭಾರತ ಸೇರಿದಂತೆ ಜಾಗತೀಕ ಮಾರುಕಟ್ಟೆಗಳಲ್ಲಿ ಬಿಡುಗಡೆಗೊಳಿಸಲಿದೆ.

Recommended Video

2017 Datsun redi-GO 1.0 Litre Launched In India | In Kannada - DriveSpark ಕನ್ನಡ
ಎಲೆಕ್ಟ್ರಿಕ್ ವಾಹನಗಳ ಅಭಿವೃದ್ಧಿಗೆ ಮುಂದಾದ ಫೋಕ್ಸ್‌ವ್ಯಾಗನ್

ಇನ್ನೊಂದು ವಿಶೇಷ ಅಂದ್ರೆ ಫೋಕ್ಸ್‌ವ್ಯಾಗನ್ ನಿರ್ಮಾಣ ಮಾಡುತ್ತಿರುವ ಬಝ್ ಪರಿಕಲ್ಪನೆಯ ಬಸ್ ಮಾದರಿಗಳು ಕೇವಲ ಒಂದೇ ಚಾರ್ಜ್‌ನಲ್ಲಿ 300 ಮೈಲಿ ಕ್ರಮಿಸುವ ಸಾಮರ್ಥ್ಯ ಹೊಂದಿದ್ದು, 30 ನಿಮಿಷಗಳಲ್ಲಿ ಶೇ.80 ಚಾರ್ಜ್ ಮಾಡಬಹುದಾಗಿದೆ.

ಎಲೆಕ್ಟ್ರಿಕ್ ವಾಹನಗಳ ಅಭಿವೃದ್ಧಿಗೆ ಮುಂದಾದ ಫೋಕ್ಸ್‌ವ್ಯಾಗನ್

ಇದಲ್ಲದೇ ಐ.ಡಿ ಬಝ್ ಸೆಮಿ ಆಟೋನಮಸ್ ಟೆಕ್ನಾಲಜಿ ಹೊಂದಿರುವ ಫೋರ್ಕ್ಸ್‌ವ್ಯಾಗನ್ ಎಲೆಕ್ಟ್ರಿಕ್ ಬಸ್‌ಗಳು ಹಾಗೂ ಸಣ್ಣ ಕಾರುಗಳು ಕೂಡಾ ವಿಶೇಷ ಪರಿಕಲ್ಪನೆಯೊಂದಿಗೆ ಅಭಿವೃದ್ಧಿ ಹೊಂದಲಿದ್ದು, "ಆಲ್ ಎಲೆಕ್ಟ್ರಿಕ್ ವೆಹಿಕಲ್' ಎನ್ನುವ ಯೋಜನೆ ಅಡಿ ಇಂತದೊಂದು ಬೃಹತ್ ಬದಲಾವಣೆ ತರುತ್ತಿದೆ.

ಎಲೆಕ್ಟ್ರಿಕ್ ವಾಹನಗಳ ಅಭಿವೃದ್ಧಿಗೆ ಮುಂದಾದ ಫೋಕ್ಸ್‌ವ್ಯಾಗನ್

ಹೀಗಾಗಿಯೇ ಹೊಸ ಪರಿಕಲ್ಪನೆ ಅಡಿ ಮತ್ತಷ್ಟು ಹೊಸ ಆವಿಷ್ಕಾರಗಳನ್ನು ಕೈಗೊಂಡಿರುವ ಫೋಕ್ಸ್‌ವ್ಯಾಗನ್ ಸಂಸ್ಥೆಯು, ಎಲೆಕ್ಟ್ರಿಕ್ ಬಸ್‌ ಸೇರಿದಂತೆ ಎಲೆಕ್ಟ್ರಿಕ್ ಕ್ಯಾಬ್, ಎಲೆಕ್ಟ್ರಿಕ್ ಆಟೋ, ಸೆಲ್ಪ್ ಡ್ರೈವಿಂಗ್ ಕಾರುಗಳು ಸೇರಿದಂತೆ ಹಲವು ಸುಧಾರಿತ ತಂತ್ರಜ್ಞಾನಗಳನ್ನು ಹೊಂದಿರುವ ವಾಹನಗಳನ್ನು ಪರಿಚಯಿಸಲಿದೆ.

ಎಲೆಕ್ಟ್ರಿಕ್ ವಾಹನಗಳ ಅಭಿವೃದ್ಧಿಗೆ ಮುಂದಾದ ಫೋಕ್ಸ್‌ವ್ಯಾಗನ್

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

2030ರ ವೇಳೆಗೆ ಶೇ.90 ರಷ್ಟು ವಾಹನಗಳು ಎಲೆಕ್ಟ್ರಿಕ್ ಎಂಜಿನ್‌ನೊಂದಿಗೆ ಅಭಿವೃದ್ಧಿ ಹೊಂದಿರಲಿದ್ದು, ಫೋಕ್ಸ್‌ವ್ಯಾಗನ್ ಕೂಡಾ ಇದೇ ನಿಟ್ಟಿನಲ್ಲಿ ಬೃಹತ್ ಯೋಜನೆಯೊಂದನ್ನು ಕೈಗೊಳ್ಳುವ ಮೂಲಕ ಎಲೆಕ್ಟ್ರಿಕ್ ವಾಹನಗಳ ವಿಭಾಗದಲ್ಲಿ ಬಹುದೊಡ್ಡ ಬದಲಾವಣೆ ತರಲು ಯತ್ನಿಸುತ್ತಿರುವುದು ಗಮನಾರ್ಹ.

Most Read Articles

Kannada
English summary
Read in Kannada about Volkswagen Group To Introduce 80 Electrified Vehicles By 2025.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X