ಮಾಲಿನ್ಯ ತಡೆಯುವಲ್ಲಿ ವಿಫಲ- 3.23 ಲಕ್ಷ ಕಾರುಗಳನ್ನು ಹಿಂಪಡೆದ ಫೋಕ್ಸ್‌ವ್ಯಾಗನ್

Written By:

ಪ್ರಮುಖ ಕಾರು ಮಾದರಿಗಳಲ್ಲಿನ ಮಾಲಿನ್ಯ ಹೊರಸೂಸುವಿಕೆಯ ತಂತ್ರಜ್ಞಾನ ಅಳವಡಿಕೆಯಲ್ಲಿ ಆದ ತಾಂತ್ರಿಕ ದೋಷ ಹಿನ್ನೆಲೆ ಪ್ರತಿಷ್ಠಿತ ಕಾರು ಉತ್ಪಾದನಾ ಸಂಸ್ಥೆ ಫೋಕ್ಸ್‌ವ್ಯಾಗನ್ ಭಾರತದಲ್ಲಿ 3.23 ಲಕ್ಷ ಕಾರುಗಳನ್ನು ಹಿಂಪಡೆಯಲು ಮುಂದಾಗಿದೆ.

ಮಾಲಿನ್ಯ ತಡೆ ವಿಚಾರ-3.23ಲಕ್ಷ ಕಾರುಗಳನ್ನು ಹಿಂಪಡೆದ ಫೋಕ್ಸ್‌ವ್ಯಾಗನ್

ಅಗತ್ಯ ಪ್ರಮಾಣಕ್ಕಿಂತ ಹೆಚ್ಚು ಮಾಲಿನ್ಯ ಹೊರಸೂಸುವಿಕೆ ಹಿನ್ನೆಲೆ ಫೋಕ್ಸ್‌ವ್ಯಾಗನ್ ಸಂಸ್ಥೆಯು ಸಂಕಷ್ಟಕ್ಕೆ ಸಿಲುಕಿದ್ದು, ಸದ್ಯದಲ್ಲೇ 3.23 ಲಕ್ಷ ಕಾರುಗಳಲ್ಲಿನ ತಾಂತ್ರಿಕ ದೋಷವನ್ನು ಸರಿ ಮಾಡುವ ಭರವಸೆ ನೀಡಿದೆ.

ಮಾಲಿನ್ಯ ತಡೆ ವಿಚಾರ-3.23ಲಕ್ಷ ಕಾರುಗಳನ್ನು ಹಿಂಪಡೆದ ಫೋಕ್ಸ್‌ವ್ಯಾಗನ್

ಈ ಬಗ್ಗೆ ರಾಷ್ಟ್ರೀಯ ಹಸಿರು ಪೀಠಕ್ಕೆ ತನ್ನ ಹೊಸ ಮಾರ್ಗಸೂಚಿಯನ್ನು ಸಲ್ಲಿಸಿರುವ ಫೋಕ್ಸ್‌ವ್ಯಾಗನ್, ವಿಶ್ವಾದ್ಯಂತ 4 ದಶಲಕ್ಷ ಕಾರುಗಳನ್ನು ಪ್ರಸ್ತುತ ಮಾಲಿನ್ಯ ತಡೆ ಪರಿಕರಗಳೊಂದಿಗೆ ಉನ್ನತಿಕರಿಸುವ ಯೋಜನೆ ಹೊಂದಿದೆ.

ಮಾಲಿನ್ಯ ತಡೆ ವಿಚಾರ-3.23ಲಕ್ಷ ಕಾರುಗಳನ್ನು ಹಿಂಪಡೆದ ಫೋಕ್ಸ್‌ವ್ಯಾಗನ್

2015ರ ಡಿಸೆಂಬರ್‌ನಲ್ಲೇ ಈ ಬಗ್ಗೆ ಸುಳಿವು ನೀಡದ್ದ ಫೋಕ್ಸ್‌ವ್ಯಾಗನ್, ಮುಂಬರುವ ದಿನಗಳಲ್ಲಿ ಸಮಸ್ಯೆ ಬಗೆಹರಿಸುವ ಬಗ್ಗೆ ಭರವಸೆ ನೀಡಿತ್ತು. ಹೀಗಾಗಿ ಹೊಸ ಮಾರ್ಗದರ್ಶನದಂತೆ ಇದೀಗ ಹಳೆಯ ಕಾರುಗಳಲ್ಲಿನ ಮಾಲಿನ್ಯ ಹೊರಸೂಸುವಿಕ ತಾಂತ್ರಾಂಶವನ್ನು ಉನ್ನತಿಕರಿಸಲಿದೆ.

ಮಾಲಿನ್ಯ ತಡೆ ವಿಚಾರ-3.23ಲಕ್ಷ ಕಾರುಗಳನ್ನು ಹಿಂಪಡೆದ ಫೋಕ್ಸ್‌ವ್ಯಾಗನ್

ಇನ್ನು ಈ ಹಿಂದೆ ನಡೆದಿದ್ದ ಆಟೋಮೋಟಿವ್ ರಿಸರ್ಚ್ ಅಸೋಸಿಯೇಷನ್ ಆಫ್ ಇಂಡಿಯಾ (ಎಎಆರ್‌ಐ) ನಡೆಸಿದ್ದ ಪರೀಕ್ಷೆಯಲ್ಲಿ ಫೋಕ್ಸ್‌ವ್ಯಾಗನ್ ಕಾರುಗಳಲ್ಲಿನ ಸಮಸ್ಯೆ ಬಹಿರಂಗಗೊಂಡು ರಾಷ್ಟ್ರೀಯ ಹಸಿರು ಪೀಠದ ಮೆಟ್ಟೇರಿತ್ತು.

Recommended Video - Watch Now!
2017 Mercedes New GLA India Launch In Malayalam - DriveSpark മലയാളം
ಮಾಲಿನ್ಯ ತಡೆ ವಿಚಾರ-3.23ಲಕ್ಷ ಕಾರುಗಳನ್ನು ಹಿಂಪಡೆದ ಫೋಕ್ಸ್‌ವ್ಯಾಗನ್

ಆದ್ರೆ ಮಾಲಿನ್ಯ ಹೊರಸೂಸುವಿಕೆ ಸಮಸ್ಯೆ ಕುರಿತು ಧನಾತ್ಮಕವಾಗಿಯೇ ಉತ್ತರಿಸಿದ್ದ ಫೋಕ್ಸ್‌ವ್ಯಾಗನ್, ಇದೀಗ ಕೊಟ್ಟ ಮಾತಿನಂತೆ 3.23 ಲಕ್ಷ ಕಾರುಗಳಲ್ಲಿ ಇಎ 189 ಎನ್ನುವ ಡೀಸೆಲ್ ಎಂಜಿನ್ ಅಳವಡಿಸಲಿದೆ.

English summary
Read in Kannada about Volkswagen Submits Recall Roadmap Of 3.23 Lakh Cars Before NGT.
Story first published: Friday, August 18, 2017, 17:26 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark