ಜುಲೈನಲ್ಲಿ ಶೇಕಡಾ 10.5% ರಷ್ಟು ಬೆಳವಣಿಗೆ ದಾಖಲಿಸಿದ ಫೋಕ್ಸ್‌ವ್ಯಾಗನ್ ಇಂಡಿಯಾ

Written By:

ಫೋಕ್ಸ್‌ವ್ಯಾಗನ್ ಇಂಡಿಯಾ ಕಂಪನಿ ತನ್ನ 2017 ಜುಲೈ ತಿಂಗಳಿನ ಮಾರಾಟದ ಅಂಕಿ ಅಂಶಗಳನ್ನು ಬಿಡುಗಡೆಗೊಳಿಸಿದ್ದು, ಎಂದಿನಂತೆ ತನ್ನ ಮಾರುಕಟ್ಟೆ ಮೌಲ್ಯವನ್ನು ಹೆಚ್ಚಿಸಿಕೊಂಡಿದೆ.

To Follow DriveSpark On Facebook, Click The Like Button
ಜುಲೈನಲ್ಲಿ ಶೇಕಡಾ 10.5% ರಷ್ಟು ಬೆಳವಣಿಗೆ ದಾಖಲಿಸಿದ ಫೋಕ್ಸ್‌ವಾಗನ್ ಇಂಡಿಯಾ

ತನ್ನ ಉನ್ನತ ಮಟ್ಟದ ವಾಹನಗಳ ಮಾರಾಟದಿಂದಾಗಿ ಭಾರತದಲ್ಲಿ ತನ್ನದೇ ಆದ ಅಭಿಮಾನಿ ಬಳಗ ಹೊಂದಿರುವ ಫೋಕ್ಸ್‌ವ್ಯಾಗನ್ ಸಂಸ್ಥೆ, ಜುಲೈ ತಿಂಗಳಿನಲ್ಲಿ ಶೇಕಡಾ 10.5% ರಷ್ಟು ಮಾರಾಟ ಸಂಖ್ಯೆ ಏರಿಕೆಯನ್ನು ದಾಖಲಿಸಿದ್ದು, ಮಾಸಿಕ ಅಂಕಿ ಅಂಶ ಪಾಸಿಟಿವ್ ಇರುವಂತೆ ನೋಡಿಕೊಂಡಿದೆ.

ಜುಲೈನಲ್ಲಿ ಶೇಕಡಾ 10.5% ರಷ್ಟು ಬೆಳವಣಿಗೆ ದಾಖಲಿಸಿದ ಫೋಕ್ಸ್‌ವಾಗನ್ ಇಂಡಿಯಾ

ಫೋಕ್ಸ್‌ವ್ಯಾಗನ್ ಸಂಸ್ಥೆ 2016ರ ಜುಲೈ ತಿಂಗಳಿನಲ್ಲಿ 4,301 ವಾಹನಗಳನ್ನು ಮಾರಾಟ ಮಾಡಿತ್ತು, ಅದಕ್ಕೆ ವಿರುದ್ಧವಾಗಿ ಈ ವರ್ಷ ಜುಲೈನಲ್ಲಿ 4,753 ವಾಹನಗಳನ್ನು ಮಾರಾಟ ಮಾಡಿದೆ.

ಜುಲೈನಲ್ಲಿ ಶೇಕಡಾ 10.5% ರಷ್ಟು ಬೆಳವಣಿಗೆ ದಾಖಲಿಸಿದ ಫೋಕ್ಸ್‌ವಾಗನ್ ಇಂಡಿಯಾ

ಕಂಪನಿಯು 2017ರಲ್ಲಿ ವರ್ಷಕ್ಕೆ ಶೇಕಡಾ 13% ರಷ್ಟು ಬೆಳವಣಿ ಕಂಡಿದೆ ಮತ್ತು ಹೊಸ ಜಿಎಸ್‌ಟಿ ತೆರಿಗೆ ಬೆಳವಣಿಗೆಯಲ್ಲಿ ಗಮನಾರ್ಹ ಪಾತ್ರವನ್ನು ನಿರ್ವಹಿಸಿದೆ ಎಂದರೆ ತಪ್ಪಾಗಲಾರದು.

ಜುಲೈನಲ್ಲಿ ಶೇಕಡಾ 10.5% ರಷ್ಟು ಬೆಳವಣಿಗೆ ದಾಖಲಿಸಿದ ಫೋಕ್ಸ್‌ವಾಗನ್ ಇಂಡಿಯಾ

ಟಿಗ್ವಾನ್ ಎಸ್‌ಯುವಿ ಕಾರನ್ನು ಇತ್ತೀಚೆಗೆ ಬಿಡುಗಡೆ ಮಾಡಿದ್ದು ಭಾರತೀಯ ಗ್ರಾಹಕರಿಂದ ಭಾರಿ ಮಟ್ಟದಲ್ಲಿ ಪ್ರತಿಕ್ರಿಯೆಯನ್ನು ಪಡೆಯುತ್ತಿದ್ದು, ಈ ಕಾರು ಸಂಸ್ಥೆಯ ಮಾರಾಟವನ್ನು ಮತ್ತಷ್ಟು ಹೆಚ್ಚಿಸಲಿದೆ ಎನ್ನಬಹುದು. ಟಿಗ್ವಾನ್ ಸುರಕ್ಷತೆ, ಶೈಲಿ ಮತ್ತು ಐಷಾರಾಮಿ ಸಂಯೋಜನೆ ನೀಡುತ್ತದೆ ಮತ್ತು ಪ್ರಸ್ತುತ ಮೂರು ತಿಂಗಳ ಕಾಯುವ ಅವಧಿಯನ್ನು ಹೊಂದಿದೆ.

ಜುಲೈನಲ್ಲಿ ಶೇಕಡಾ 10.5% ರಷ್ಟು ಬೆಳವಣಿಗೆ ದಾಖಲಿಸಿದ ಫೋಕ್ಸ್‌ವಾಗನ್ ಇಂಡಿಯಾ

ಟಿಗ್ವಾನ್ ಕಾರಿನಲ್ಲಿ 7 ಸ್ಪೀಡ್ ಆಟೋಮ್ಯಾಟಿಕ್ ಡಿಎಸ್‌ಜಿ ಗೇರ್‌ಬಾಕ್ಸ್ ಅಳವಡಿಕೆಯಾಗಿದೆ ಮತ್ತು ಈ ಕಾರು 2 ಲೀಟರ್ ಟರ್ಬೊ ಡೀಸೆಲ್ ಎಂಜಿನ್ ಹೊಂದಿದೆ. ಈ ಎಸ್‌ಯುವಿ ಕಾರು MQB ವೇದಿಕೆಯಡಿ ನಿರ್ಮಾಣವಾಗಿದ್ದು, ಇಂಟಲಿಜೆಂಟ್ ಆಲ್-ವೀಲ್-ಡ್ರೈವ್ ತಂತ್ರಜ್ಞಾನ ಪಡೆದುಕೊಂಡಿದೆ.

ಜುಲೈನಲ್ಲಿ ಶೇಕಡಾ 10.5% ರಷ್ಟು ಬೆಳವಣಿಗೆ ದಾಖಲಿಸಿದ ಫೋಕ್ಸ್‌ವಾಗನ್ ಇಂಡಿಯಾ

ಫೋಕ್ಸ್‌ವ್ಯಾಗನ್ ಸಂಸ್ಥೆ ಪ್ರಬಲ ಬೆಳವಣಿಗೆಯನ್ನು ಜುಲೈ ತಿಂಗಳಿನಲ್ಲಿ ದಾಖಲಿಸಿದ್ದು, ಈ ವಿಚಾರದಲ್ಲಿ ಇತ್ತೀಚೆಗೆ ಬಿಡುಗಡೆಯಾದ ಎಸ್‌ಯುವಿ ಕಾರಿನ ಪಾತ್ರ ಅತಿ ದೊಡ್ಡದು ಎನ್ನಬಹುದು. ಹೊಸ ಜಿಎಸ್‌ಟಿ ತೆರಿಗೆ ಸಹ ಬೆಳವಣಿಗೆಯಲ್ಲಿ ಗಮನಾರ್ಹ ಪಾತ್ರವನ್ನು ನಿರ್ವಹಿಸಿದೆ.

English summary
Volkswagen India has announced its monthly sales figures for July 2017. The automaker has registered a growth of 10.5 percent in the country.
Story first published: Wednesday, August 2, 2017, 18:17 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark