ಬ್ರೇಕ್ ಸಮಸ್ಯೆ : 7,66,000 ವಾಹನಗಳನ್ನು ಹಿಂಪಡೆಯಲಿದೆ ಫೋಕ್ಸ್‌ವ್ಯಾಗನ್

Written By:

ಜರ್ಮನ್ ದೇಶದ ಪ್ರಮುಖ ಪೋಕ್ಸ್‌ವಾಗನ್ ಸಂಸ್ಥೆ ದೊಡ್ಡ ಮಟ್ಟದಲ್ಲಿ ಬ್ರೇಕ್ ಸಿಸ್ಟಂ ಸಾಫ್ಟ್‌ವೇರ್ ಸಮಸ್ಯೆಯನ್ನು ಬಗೆಹರಿಸಲು ಮುಂದಾಗಿದೆ.

ಬ್ರೇಕ್ ನಿಯಂತ್ರಣ ವ್ಯವಸ್ಥೆಯ ಸಾಫ್ಟ್‌ವೇರ್ ಸಮಸ್ಯೆಯನ್ನು ನವೀಕರಿಸಲು ಫೋಕ್ಸ್‌ವ್ಯಾಗನ್ ಮುಂದಾಗಿದ್ದು, ಈ ವಿಚಾರವಾಗಿ ಸರಿ ಸುಮಾರು 7,66,000 ವಾಹನಗಳನ್ನು ಮರುಪಡೆಯಲು ನಿರ್ಧರಿಸಿದೆ ಎನ್ನಲಾಗಿದೆ.

ಸಮಸ್ಯೆ ಹೊಂದಿರುವ ವಾಹನಗಳಲ್ಲಿ, ಬ್ರೇಕ್ ನಿಯಂತ್ರಣ ವ್ಯವಸ್ಥೆಯು ಕೆಲವು ಚಾಲನಾ ಸ್ಥಿತಿಗಳಲ್ಲಿ ಸರಿಯಾಗಿ ಕಾರ್ಯನಿರ್ವಹಿಸದೆ ಇರುವುದು ಇಷ್ಟೆಲ್ಲಾ ತೊಂದರೆಗೆ ಮುಖ್ಯ ಕಾರಣವಾಗಿದೆ.

ಕಾರಿನ ಚಾಲಕ ಬಲವಾಗಿ ಬ್ರೇಕ್ ಒತ್ತಿದಾಗ, ಓವರ್‌ಸ್ಟೇರ್ಸ್ ಅಥವಾ ಅಂಡರ್‌ಸ್ಟೇರ್ಸ್ ಮಾಡಿದಾಗ, ಸಿಸ್ಟಮ್ ಅಸಮರ್ಪಕವಾಗಿ ಕಾರ್ಯನಿರ್ವಹಿಸಲಿದೆ ಎನ್ನುವ ದೂರು ಕೇಳಿ ಬಂದಿದೆ.

ಜರ್ಮನಿಯಲ್ಲಿ 2,88,000 ಲಕ್ಷ ಫೋಕ್ಸ್‌ವ್ಯಾಗನ್ ಸಂಸ್ಥೆಯ ಕಾರುಗಳ ಜೊತೆ ಆಡಿ ಮತ್ತು ಸ್ಕೋಡಾ ಬ್ರಾಂಡ್ ಕಾರುಗಳು ಸೇರಿ ಒಟ್ಟಾರೆ 3,85,000 ವಾಹನಗಳು ಹಿಂಪಡೆಯಲಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ.

ಡೀಸೆಲ್ ಹಗರಣದ ಜೊತೆ ಈಗಾಗಲೇ ಹಲವಾರು ಈ ರೀತಿಯ ಪ್ರಕರಣಗಳನ್ನು ಫೋಕ್ಸ್‌ವ್ಯಾಗನ್ ಸಂಸ್ಥೆ ಎದುರಿಸಿದ್ದು, ಈ ಪಟ್ಟಿಗೆ ಮತ್ತೊಂದು ಬೃಹತ್ ಹಗರಣ ಈ ಬ್ರೇಕ್ ಸಿಸ್ಟಂ ಸಾಫ್ಟ್‌ವೇರ್ ಸಮಸ್ಯೆ ಎನ್ನಬಹುದು.

ವಾಹನದ ಬ್ರೇಕ್ ಸಿಸ್ಟಮ್ ಒಂದು ನಿರ್ಣಾಯಕ ಅಂಶವಾಗಿರುವುದು ನಮಗೆ ತಿಳಿದಿರುವ ವಿಚಾರವಾಗಿದೆ ಮತ್ತು ದೋಷಯುಕ್ತ ಬ್ರೇಕಿಂಗ್ ವ್ಯವಸ್ಥೆಯಿಂದಾಗಿ ಅಪಘಾತಕ್ಕೆ ಕಾರಣವಾಗಬಹುದಾದ ಸಾಧ್ಯತೆ ಇದ್ದು, ಮುಂದೆ ಈ ರೀತಿಯ ಸಮಸ್ಯೆಗಳು ಆಗದೆ ಇರುವ ರೀತಿಯಲ್ಲಿ ಕಂಪನಿ ಎಚ್ಚೆತ್ತುಕೊಳ್ಳಬೇಕಾಗಿದೆ.

English summary
Read in Kannada about German auto major Volkswagen has issued a massive global recall over brake system software issue.
Story first published: Friday, July 7, 2017, 16:02 [IST]
Please Wait while comments are loading...

Latest Photos