ಫೋಕ್ಸ್‌ವ್ಯಾಗನ್ 'ಟಿಗ್ವಾನ್' ಕಾರು ಭಾರತದಲ್ಲಿ ಬಿಡುಗಡೆ: ಬೆಲೆ ರೂ. 27.68 ಲಕ್ಷ
ಬಹುನಿರೀಕ್ಷಿತ 'ಟಿಗ್ವಾನ್' ಕಾರನ್ನು ಫೋಕ್ಸ್‌ವ್ಯಾಗನ್ ಕಾರು ತಯಾರಕ ಸಂಸ್ಥೆ ಭಾರತದಲ್ಲಿ ಬಿಡುಗಡೆಗೊಳಿಸಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಮುಂದೆ ಓದಿ
ವಿಶ್ವಾಸನೀಯ ಕಾರು ತಯಾರಕ ಸಂಸ್ಥೆ ಫೋಕ್ಸ್‌ವ್ಯಾಗನ್, 2.0 ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯೊಂದಿಗೆ ಲಭ್ಯವಿರುವ ಎರಡನೇ ಪೀಳಿಗೆಯ ಟಿಗ್ವಾನ್ ಕಾರನ್ನು ಭಾರತದಲ್ಲಿ ಅನಾವರಣಗೊಳಿಸಿದೆ.

ಕಳೆದ ವರ್ಷ 2016ರ ಸಾಲಿನಲ್ಲಿ ಭಾರತದ ಮಾರುಕಟ್ಟೆಗೆ ಎರಡನೇ ಪೀಳಿಗೆಯ ಟಿಗ್ವಾನ್ ಕಾರನ್ನು ಬಿಡುಗಡೆಗೊಳಿಸುವ ಆಶಯ ಹೊಂದಿದ್ದ ಫೋಕ್ಸ್‌ವ್ಯಾಗನ್, ಕೊಂಚ ತಡವಾಗಿ ತನ್ನ ಕಾರನ್ನು ಅಮೋಘವಾಗಿ ಹೊರತಂದಿದೆ.

ಎರಡನೇ ತಲೆಮಾರಿನ ಈ ಟಿಗ್ವಾನ್ ಕಾರು MQB ಪ್ಲೇಟ್‌ಫಾರಂ ಆಧಾರಿತವಾಗಿದ್ದು, ಈ ಎಸ್‌ಯುವಿ ಕಾರು ಕೇವಲ ಡೀಸೆಲ್ ಆವೃತಿಯಲ್ಲಿ ಮಾತ್ರ ಬಿಡುಗಡೆಗೊಳ್ಳುತ್ತಿದೆ.

ಕಂಫರ್ಟ್‌ಲೈನ್ ಮತ್ತು ಹೈಲೈನ್ ಎಂಬ ಎರಡು ಎರಡು ಟ್ರಿಮ್ ಹಂತಗಳಲ್ಲಿ ಮಾತ್ರ ಈ ಕಾರು ಭಾರತದಲ್ಲಿ ಲಭ್ಯವಿದೆ.

ಏಕೈಕ ಎಂಜಿನ್ ಆಯ್ಕೆಯೊಂದಿಗೆ ಬಿಡುಗಡೆಗೊಂಡಿರುವ ಈ 2017ರ ಫೋಕ್ಸ್‌ಗನ್ ಟಿಗ್ವಾನ್' ಕಾರು, 2.0-ಲೀಟರ್ ಟರ್ಬೊಚಾರ್ಜ್ಡ್ ಡೀಸೆಲ್ ಎಂಜಿನ್ ಹೊಂದಿದ್ದು, 7-ಸ್ಪೀಡ್ ಸ್ವಯಂಚಾಲಿತ DSG ಗೇರ್ ಬಾಕ್ಸ್ ಪಡೆದುಕೊಂಡಿದೆ.

ಉನ್ನತ ಮಟ್ಟದ ಹೈಲೈನ್ ಟ್ರಿಮ್ ಸೆಲ್ಫ್ ಸೀಲಿಂಗ್ ಟೈರುಗಳನ್ನು ಮತ್ತು ಪನೋರಮಿಕ್ ಸನ್ ರೂಫ್ ಅಂಶಗಳೂ ಸೇರಿದಂತೆ ಕೆಲವು ಹೆಚ್ಚುವರಿ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ.

ಇನ್ನು ಈ ಕಾರು 340 ಎನ್ಎಂ ತಿರುಗುಬಲದಲ್ಲಿ 148 ಅಶ್ವಶಕ್ತಿನ್ನು ಉತ್ಪಾದಿಸಲಿದ್ದು, ಉತ್ಪಾದನೆಗೊಂಡ ಎಲ್ಲಾ ಶಕ್ತಿ ನಾಲ್ಕು ಚಕ್ರಗಳಿಗೂ ಸಮಾನ ರೀತಿಯಲ್ಲಿ ಹಂಚಿಕೆಯಾಗಲಿದೆ.

ಟಿಗ್ವಾನ್ ಕಾರು ಕೇವಲ 9.3 ಸೆಕೆಂಡುಗಳಲ್ಲಿ 0 ಕಿ.ಮೀ ಇಂದ 100 ಕಿ.ಮೀ ವೇಗವನ್ನು ಪಡೆದುಕೊಳ್ಳುವಷ್ಟು ಶಕ್ತಿಯುತವಾಗಿದ್ದು, ಲೀಟರಿಗೆ 17.06 ಕಿ.ಮೀ. ಮೈಲೇಜ್ ನೀಡಲಿದೆ.

200 ಕಿ.ಮೀ ಗರಿಷ್ಠ ವೇಗ ಪಡೆದುಕೊಳ್ಳಬಹುದಾದ ಈ ಕಾರಿನಲ್ಲಿ 17 ಇಂಚಿನ ಮಿಶ್ರಲೋಹದ ಚಕ್ರಗಳನ್ನು ಮತ್ತು ಸೆಲ್ಫ್-ಸೀಲಿಂಗ್ ಟೈಯರ್ ಇರಿಸಲಾಗಿದೆ.

ಇನ್ನು ಕಾರಿನ ಒಳಭಾಗದಲ್ಲಿ, ಆಂಡ್ರಾಯ್ಡ್ ಆಟೊ ಮತ್ತು ಆಪಲ್ ಕಾರ್ ಪ್ಲೇ, ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಎಲೆಕ್ಟ್ರಾನಿಕ್ ಸಹಾಯದಿಂದ ಹೊಂದಾಣಿಕೆ ಮಾಡಬಹುದಾದ ಮುಂಭಾಗದ ಆಸನಗಳು, ಸ್ವಯಂಚಾಲಿತ ಹವಾ ನಿಯಂತ್ರಣ ಮತ್ತು ಪನೋರಮಿಕ್ ಸನ್ರೂಫ್ ಪಡೆದುಕೊಂಡಿದೆ.

ಬೆಳಗಿನ ಹೊತ್ತು ಬೆಳಗುವ ಎಲ್‌ಇಡಿ ದೀಪಗಳು ಮತ್ತು ಎಲ್‌ಇಡಿ ಹೆಡ್ ಲ್ಯಾಂಪ್ ಹೊಂದಿರುವ ಈ ಕಾರು 6 ಏರ್ ಬ್ಯಾಗ್ ಹೊಂದಿದೆ. ನಾಲ್ಕು ವಿಭಿನ್ನ ಬಣ್ಣಗಳ ಆಯ್ಕೆಗಳಲ್ಲಿ ಬಿಡುಗಡೆಗೊಳ್ಳುತ್ತಿರುವ ಈ ಕಾರಿನ ಬೆಲೆ ರೂ. 27.68 ಲಕ್ಷ (ಎಕ್ಸ್ ಷೋ ರೂಂ ಮುಂಬೈ) ನಿಗದಿಪಡಿಸಲಾಗಿದೆ.


Click it and Unblock the Notifications








