ಭಾರತಕ್ಕೆ ಬರುತ್ತಾ ಬೆನೆಲ್ಲಿ ಹೊಸ 302 ಟೂರರ್ ಬೈಕ್?

Written By: Rahul TS

ಇಟಾಲಿ ಮೂಲದ ಮೋಟಾರ್ ಸೈಕಲ್ ತಯಾರಕ ಸಂಸ್ಥೆಯಾದ ಬೆನೆಲ್ಲಿ ತನ್ನ ಹೊಸ 302 ಟೂರರ್ ಅನ್ನು ಚೀನಾದಲ್ಲಿ ಅನಾವರಣಗೊಳಿಸಿದ್ದು, ಬೆನೆಲ್ಲಿಯ ನೆಕೆಡ್ ಬಿಎನ್302 ಅಥವಾ ಟಿಎನ್‍ಟಿ 300 ಬೈಕಿನ ಮೂಲವನ್ನು ಪಡೆದಿದೆ.

ಭಾರತಕ್ಕೆ ಬರುತ್ತಾ ಬೆನೆಲ್ಲಿ ಹೊಸ 302 ಟೂರರ್ ಬೈಕ್?

ಹೊಸ 302 ಟೂರರ್ ಬೈಕ್ ಉದ್ದವಾದ ಫೈರಿಂಗ್ ಮತ್ತು ಆಕ್ರಮಣಕಾರಿ ವಿನ್ಯಾಸವನ್ನು ಪಡೆದಿದ್ದು, ಜೊತೆಗೆ ದೊಡ್ಡ ಗಾತ್ರದ ಹೆಡ್‍‍‍ಲ್ಯಾಂಪ್ ಮತ್ತು ವಿಂಡ್‍‍ಸ್ಕ್ರೀನ್ ಬೈಕಿನ ರೂಪವನ್ನು ಹೆಚ್ಚಿಸಿವೆ ಎನ್ನಬಹುದು. ಇದಲ್ಲದೆ ಈ ಬೈಕ್ ಎರಡೂ ತುದಿಗಳಲ್ಲಿ ಪನ್ನಿಯರ್ಸ್ ಬ್ಯಾಸ್ಕೆಟ್‍ಗಳನ್ನು ಪಡೆದಿದೆ.

ಭಾರತಕ್ಕೆ ಬರುತ್ತಾ ಬೆನೆಲ್ಲಿ ಹೊಸ 302 ಟೂರರ್ ಬೈಕ್?

ಬೈಕಿನ ಪಾನಿಯರ್ಸ್‍ಗಳನ್ನು ಕಾಪಾಡಲು ಕ್ರಾಷ್ ಗಾರ್ಡ್‍‍ಗಳನ್ನು ಅಳವಡಿಸಲಾಗಿದ್ದು, ಸ್ಪ್ಲಿಟ್ ಸೀಟ್ ಸೆಟಪ್ ಆರಾಮದಾಯಕ ರೈಡ್‍‍ಗಾಗಿ ಸಹಾಯಕವಾಗಿದೆ. ಮುಂಭಾಗದಲ್ಲಿ ಬಳಸಲಾದಂತಹ ಸಿಗ್ನಲ್ ಲೈಟ್‍‍ಗಳು ಬೈಕಿಗೆ ಪ್ರೀಮಿಯಂ ಟಚ್ ನೀಡಿದೆ.

ಭಾರತಕ್ಕೆ ಬರುತ್ತಾ ಬೆನೆಲ್ಲಿ ಹೊಸ 302 ಟೂರರ್ ಬೈಕ್?

ಎಂಜಿನ್ ಸಾಮರ್ಥ್ಯ

302 ಟೂರರ್ ಬೈಕ್ 300 ಸಿಸಿ ಟ್ವಿನ್ ಸಿಲಿಂಡರ್, ವಾಟರ್ ಕೂಲ್ಡ್, ಫ್ಯುಯಲ್ ಎಂಜಿನ್ ಹೊಂದಿದ್ದು, 34 ಬಿಹೆಚ್‍‍ಪಿ ಮತ್ತು 27ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಪಡೆದಿವೆ. ಜೊತೆಗೆ 6 ಸ್ಪೀಡ್ ಗೇರ್‍‍ಬಾಕ್ಸಿಗೆ ಜೋಡಣೆ ಪಡೆದಿದೆ.

ಭಾರತಕ್ಕೆ ಬರುತ್ತಾ ಬೆನೆಲ್ಲಿ ಹೊಸ 302 ಟೂರರ್ ಬೈಕ್?

ಬೆನೆಲ್ಲಿ ಟೂರರ್ ಅಪ್‍‍ಸೈಡ್ ಡೌನ್ ಫೋರ್ಕ್ಸ್ ಮತ್ತು ಸೈಡ್ ಮೌಂಟೆಡ್ ಮೋನೊಶಾಕ್ ಸಸ್ಪೆಷನ್ ಅನ್ನು ಹಿಂಭಾಗದಲ್ಲಿ ಅಳವಡಿಸಲಾಗಿದ್ದು, ಬ್ರೇಕಿಂಗ್ ಡ್ಯುಟಿಯನ್ನು ಟ್ವಿನ್ ಪೆಟಲ್ ಡಿಸ್ಕ್ ಮುಂಭಾಗದಲ್ಲಿ ಮತ್ತು ಹಿಂಭಾಗದಲ್ಲಿ ಸಿಂಗಲ್ ಡಿಸ್ಕ್ ಬ್ರೇಕ್ ಜೊತೆಗೆ ಡ್ಯುಯಲ್ ಚಾನಲ್ ಎಬಿಸ್ ಸಿಸ್ಟಂ ಅನ್ನು ಬಳಸಲಾಗಿದೆ.

ಭಾರತಕ್ಕೆ ಬರುತ್ತಾ ಬೆನೆಲ್ಲಿ ಹೊಸ 302 ಟೂರರ್ ಬೈಕ್?

ಭಾರತದಲ್ಲಿ ಈಗಾಗಲೇ ಬೆನೆಲ್ಲಿ ತನ್ನ 302ಆರ್ ಟೂರರ್ ಬೈಕ್ ಅನ್ನು ಬಿಡುಗಡೆಗೊಳಿಸಿದ್ದು, 302 ಟೂರರ್ ಬೈಕ್‍‍ನಲ್ಲಿ ಅಳವಡಿಸಲಾಗಿರುವ ವಿನ್ಯಾಸ ಮತ್ತು ಎಂಜಿನ್‍ ಅನ್ನು ಇದರಲ್ಲೂ ಬಳಸಲಾಗಿದೆ. ಇದಲ್ಲದೇ 302ಆರ್ ಬೈಕ್ ಭಾರತದಲ್ಲಿ ಜನಪ್ರಿಯವಾಗಿದ್ದು, 302 ಟೂರರ್ ಬೈಕನ್ನು ಕೂಡ ಭಾರತದ ಮಾರುಕಟ್ಟೆಗೆ ಪರಿಚಯಿಸಬಹುದು ಎನ್ನಲಾಗಿದೆ.

ಭಾರತಕ್ಕೆ ಬರುತ್ತಾ ಬೆನೆಲ್ಲಿ ಹೊಸ 302 ಟೂರರ್ ಬೈಕ್?

ಬೆನೆಲ್ಲಿ 302 ಟೂರರ್ ಬೈಕ್ ಈಗಾಗಲೇ ಜಾಗತಿಕ ಮಾರುಕಟ್ಟೆಯಲ್ಲಿ ಹೆಚ್ಚಾಗಿ ಮಾರಾಟಗೊಳ್ಳುತ್ತಿರುವ ಬಿಎನ್ 302 ಬೈಕಿನ ಆಧಾರವಾಗಿದ್ದು, ಭಾರತೀಯ ಮಾರುಕಟ್ಟೆಯಲ್ಲಿ ಈ ಬೈಕಿನ ಬಿಡುಗಡೆಗೆ ಹೆಚ್ಚಿನ ನಿರೀಕ್ಷೆಯಿದೆ ಎನ್ನಲಾಗಿದೆ.

Read more on benelli
English summary
Benelli Reveals 302 Tourer In China — Will It Come To India?.
Story first published: Friday, March 2, 2018, 18:51 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark