40 ಕೋಟಿ ಬೆಲೆಬಾಳುವ ಬುಗಾಟಿ ಹೈಪರ್ ಕಾರಿನ ಸ್ಪೆಷಲ್ ಏನು ಗೊತ್ತಾ?

Written By: Rahul TS

ಜರ್ಮನ್ ಮೂಲದ ಐಷಾರಾಮಿ ಕಾರು ತಯಾರಕ ಸಂಸ್ಥೆಯಾದ ಬುಗಾಟಿಯು ತನ್ನ ಹೊಸ ಚಿರೊನ್ ಸ್ಪೋರ್ಟ್ ಕಾರನ್ನು ಬಿಡುಗಡೆಗೊಳಿಸಿದ್ದು, ಈ ಕಾರು ಮೊದಲ ಬಾರಿಗೆ 2018ರ ಜೆನೆವಾ ಮೋಟಾರ್ ಶೋನಲ್ಲಿ ಪ್ರದರ್ಶನಗೊಳಿಸಲಾಗಿತ್ತು.

40 ಕೋಟಿ ಬೆಲೆಬಾಳುವ ಬುಗಾಟಿ ಹೈಪರ್ ಕಾರಿನ ಸ್ಪೆಷಲ್ ಏನು ಗೊತ್ತಾ?

ಇನ್ನೊಂದು ಪ್ರಮುಖ ವಿಚಾರ ಅಂದ್ರೆ ಬಿಡುಗಡೆಯಾಗಿರುವ ಬುಗಾಟಿ ಹೊಸ ಕಾರು ಖರೀದಿಸಲು ಕೆಲ ತಿಂಗಳು ಕಾಯಲೇಬೇಕಿದ್ದು, ಬುಕ್ಕಿಂಗ್ ಮಾಡುವ ಗ್ರಾಹಕರ ಸಂಖ್ಯೆ ಮೇಲೆ ಹೊಸ ಕಾರಿನ ಉತ್ಪಾದನಾ ಕಾರ್ಯವು ಆರಂಭಗೊಳ್ಳುತ್ತದೆ.

40 ಕೋಟಿ ಬೆಲೆಬಾಳುವ ಬುಗಾಟಿ ಹೈಪರ್ ಕಾರಿನ ಸ್ಪೆಷಲ್ ಏನು ಗೊತ್ತಾ?

ಎಂಜಿನ್ ಸಾಮರ್ಥ್ಯ

ಬುಗಾಟಿ ಚಿರೊನ್ ಸ್ಪೋರ್ಟ್ ಕಾರು 8.0 ಲೀಟರ್ W16 ಎಂಜಿನ್ ಪಡೆದಿದ್ದು, 1479-ಬಿಹೆಚ್‍ಪಿ ಮತ್ತು 1600-ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದು 2.5 ಸೆಕೆಂಡುಗಳಲ್ಲಿ ಸೊನ್ನೆಯಿಂದ 100 ಕಿಲೋ ಮೀಟರ್ ಚಲಿಸುವ ಸಾಮರ್ಥ್ಯವನ್ನು ಹೊಂದಿದ್ದು, 6.5 ಸೇಕೆಂಡಿಗೆ ಗಂಟೆಗೆ 200 ಕಿಲೋ ಮೀಟರ್ ಚಲಾಯಿಸಬಲ್ಲ ಸಾಮರ್ಥ್ಯವನ್ನು ಹೊಂದಿದೆ.

40 ಕೋಟಿ ಬೆಲೆಬಾಳುವ ಬುಗಾಟಿ ಹೈಪರ್ ಕಾರಿನ ಸ್ಪೆಷಲ್ ಏನು ಗೊತ್ತಾ?

ಇನ್ನು ಕಾರಿನ ತೂಕದ ವಿಷಯಕ್ಕೆ ಬಂದರೆ ಸ್ಟ್ಯಾಂಡರ್ಡ್ ವರ್ಷನ್‍ಗಿಂತ ಕಡಿಮೆ ತೂಕದ ಹೊಸ ಚಕ್ರಗಳು, ಕಾರ್ಬನ್ ಫೈಬರ್ ಇಂಟರ್‌ಕೂಲರ್ ಕವರ್ ಮತ್ತು ಕಾರ್ಬನ್ ಫೈಬರ್ ವಿಂಡ್‍ಸ್ಕ್ರೀನ್ ವೈಪರ್ ಗಳನ್ನು ಬಳಸಲಾಗಿದ್ದು, 18 ಕೆಜಿ ತೂಕವನ್ನು ಕಡಿತಗೊಳಿಸಲಾಗಿದೆ.

40 ಕೋಟಿ ಬೆಲೆಬಾಳುವ ಬುಗಾಟಿ ಹೈಪರ್ ಕಾರಿನ ಸ್ಪೆಷಲ್ ಏನು ಗೊತ್ತಾ?

ಕಾರಿನ ಬಾಗಿಲುಗಳಿಗೆ ಸ್ಪೋರ್ಟ್ಸ್ ಲೋಗೊವನ್ನು ಅಳವಡಿಸಲಾಗಿದ್ದು ಜೊತೆಗೆ ಇದರ ಸೆಂಟರ್ ಕಂಸೋಲ್ ನಲ್ಲಿ ಎಂಬ್ರಾಯ್ಡರಿ ಮಾಡಲಾಗಿದೆ. ಇದಲ್ಲದೆ ಅಲ್ಕಾಂಟರ್ ಮಿಶ್ರಣ, ಲೆದರ್‍‍ನೊಂದಿಗೆ ಬ್ಲಾಕ್ ಫಿನಿಷ್ ಅನ್ನು ಎಂಜಿನ್ ಸ್ಟಾರ್ಟರ್ ಬಳಿ ಅಳವಡಿಸಲಾಗಿದ್ದು, ಡ್ರೈವ್ ಮೋಡ್ ಸೆಲೆಕ್ಟ್ ಮಾಡಿಕೊಳ್ಳಬಲ್ಲ ಅನುಕೂಲತೆಯನ್ನು ಪಡೆದಿದೆ.

40 ಕೋಟಿ ಬೆಲೆಬಾಳುವ ಬುಗಾಟಿ ಹೈಪರ್ ಕಾರಿನ ಸ್ಪೆಷಲ್ ಏನು ಗೊತ್ತಾ?

ಬುಗಾಟಿ ಚಿರೊನ್ ವಿಶ್ವದಲ್ಲೇ ಅತ್ಯಂತ ಕ್ರೇಜ್ ಹುಟ್ಟುಹಾಕಿದ ಹೈಪರ್‍‍ಕಾರ್ ಗಳಲ್ಲಿ ಒಂದಾಗಿದ್ದು, ಹೊಸ ಚಿರೊನ್ ಸ್ಪೋರ್ಟ್ ಕಾರು ಈಗ ಎಲ್ಲಾ ರೆಕಾರ್ಡ್‍ಗಳನ್ನು ಮುರಿದು ಪ್ರಪಂಚದಲ್ಲೇ ಅತ್ಯಂತ ವೇಗ ಉತ್ಪಾದನೆ ಮಾಡಬಲ್ಲ ಕಾರ್ ಆಗಲಿದೆ.

Read more on bugatti luxury car
English summary
Bugatti’s Ultimate Hypercar — The Chiron Sport Launched At A Shocking Price.
Story first published: Friday, March 23, 2018, 18:48 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark