YouTube

ಮಂಗನ ಕೈಗೆ ಸ್ಟೀರಿಂಗ್ ಕೊಟ್ಟು ಕೆಲಸ ಕಳ್ಕೊಂಡ ಡ್ರೈವರ್

ಕೆಲ ದಿನಗಳ ಹಿಂದಷ್ಟೆ ನಾಯಿಯೊಂದು ಮಾರುತಿ ಸುಜುಕಿ 800 ಕಾರನ್ನು ಸಹ ಚಾಲಕನ ಸಹಾಯದೊಂದಿಗೆ ಡ್ರೈವಿಂಗ್ ಮಾಡುತ್ತಿದ್ದ ವಿವರದ ಬಗ್ಗೆ ಮಾಹಿತಿ ನೀಡಿದ್ದೆವು. ಆದರೆ ಇದೀಗ ಕೆಎಸ್‍ಆರ್‍‍ಟಿಸಿ ಬಸ್ ಚಾಲಕನೊಬ್ಬ ಸ್ಟೀರಿಂಗ್‍‍ನ ಮೇಲೆ ಕೋತಿಯೊಂದನ್ನು ಕೂರಿಸಿಕೊಂಡು ಡ್ರೈವಿಂಗ್ ಮಾಡುತ್ತಿರುವ ವಿಡಿಯೋ ಬೆಳಕಿಗೆ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಮಂಗನ ಕೈಗೆ ಸ್ಟೀರಿಂಗ್ ಕೊಟ್ಟು ಕೆಲಸ ಕಳ್ಕೊಂಡ ಡ್ರೈವರ್

ಈ ವಿಡಿಯೋವನ್ನು ಕೆಲ ದಿನಗಳ ಹಿಂದೆ ಅಪ್ಲೋಡ್ ಮಾಡಲಾಗಿದ್ದು, ಈ ವಿಡಿಯೋನಲ್ಲಿ ಕರ್ನಾಟಕ ರಾಜ್ಯ ಸಾರಿಗೆ ಇಲಾಖೆಯ ಚಾಲಕರಾದ ಪ್ರಕಾಶ್‍‍ರವರು ಚಲಿಸುತ್ತಿದ್ದ ಬಸ್‍ ಸ್ಟೀರಿಂಗ್‍‍ನ ಮೇಲೆ ಕೋತಿಯೊಂದನ್ನು ಕೂರಿಸಿಕೊಂಡು ಡ್ರೈವಿಂಗ್ ಮಾಡುತ್ತಿದ್ದಾರೆ.

ಮಂಗನ ಕೈಗೆ ಸ್ಟೀರಿಂಗ್ ಕೊಟ್ಟು ಕೆಲಸ ಕಳ್ಕೊಂಡ ಡ್ರೈವರ್

ಬಸ್‍‍ನಲ್ಲಿದ್ದ ಪ್ರಯಾಣಿಕರು ಸಹ ಆ ಕೋತಿಯನ್ನು ಪ್ರೋತ್ಸಾಹ ನೀಡುತ್ತಿದ್ದ ಕಾರಣ ಆ ಬಸ್ ಅನ್ನು ತಾನೇ ಡ್ರೈವಿಂಗ್ ಮಾಡುತ್ತಿರುವ ಅನುಭವವನ್ನು ಪಡೆಯುತ್ತಿದೆ ಆ ಕೋತಿ. ಆದರೆ ನಿಜಕ್ಕೂ ಅದು ಕೇವಲ ಸ್ಟೀರಿಂಗ್‍‍ನ ಮೇಲೆ ಕೂತಿದೆಯೆ ಹೊರತು ಡ್ರೈವಿಂಗ್ ಕಂಟ್ರೋಲ್‍‍ನೆಲ್ಲ ಪ್ರಕಾಶ್‍‍ರವರೆ ಮಾಡುತ್ತಿದ್ದರು.

ಬಸ್ ಡ್ರೈವಿಂಗ್‍ನ ವೇಳೆ ಕೋತಿಯನ್ನು ಸ್ಟೀರಿಂಗ್‍ ವ್ಹೀಲ್‍‍ನ ಮೇಲೆ ಕೂರಲು ಬಿಟ್ಟ ಚಾಲಕನನ್ನು ಇದೀಗ ಕೆಲಸದಿಂದ ತೆಗೆದುಹಾಕಲಾಗಿದ್ದು, ಪ್ರಕಾಶ್ ಅವರ ಉದ್ಯೋಗಕ್ಕೆ ಮುಪ್ಪನ್ನು ತಂದ ಆ ವಿಡಿಯೋ ಇಲ್ಲಿದೆ ನೋಡಿ..

ಮಂಗನ ಕೈಗೆ ಸ್ಟೀರಿಂಗ್ ಕೊಟ್ಟು ಕೆಲಸ ಕಳ್ಕೊಂಡ ಡ್ರೈವರ್

ಅಕ್ಟೋಬರ್ 1,2018ರಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಇಲಾಖೆ ದಾವಣಗೆರೆ ಘಟಕದಲ್ಲಿನ ಬಸ್ ಡ್ರೈವರ್ ಆದ ಪ್ರಕಾಶ್‍ರವರು ಚಲಾಯಿಸುತಿದ್ದ ದಾವಣಗೆರೆ ಇಂದ ಭರಮಸಾಗರಕ್ಕೆ ಹೋಗುತ್ತಿದ ಬಸ್‍‍ನಲ್ಲಿ ಈ ಘಟನೆಯು ನಡೆದಿದ್ದು, ಈ ಘಟನೆಯಿಂದಾಗಿ ಪ್ರಕಾಶ್ ಅವರು ತಮ್ಮ ಕೆಲಸವನ್ನು ಕಳೆದುಕೊಂಡಿದ್ದಾರೆ.

ಮಂಗನ ಕೈಗೆ ಸ್ಟೀರಿಂಗ್ ಕೊಟ್ಟು ಕೆಲಸ ಕಳ್ಕೊಂಡ ಡ್ರೈವರ್

ರದ್ದುಗೊಳಿಸಿದ ಬಸ್ ಚಾಲಕನ ಕೆಲಸ ಕುರಿತಾಗಿ ಕೆಎಸ್ಆರ್‍‍ಟಿಸಿ ಅಧಿಕಾರಿಯೊಬ್ಬರು - ನಾವು ಆ ಡ್ರೈವರ್‍‍ನನ್ನು ಕೆಲಸದಿಂದ ತೆಗೆದು ಹಾಕಲಾಗಿದೆ ಮತ್ತು ಇದರ ಬಗ್ಗೆ ವಿಚಾರಣೆ ನಡೆಸಲು ವಿಭಾಗೀಯ ಭದ್ರತಾ ಇನ್ಸ್ಪೆಕ್ಟರ್ ಅನ್ನು ಆದೇಶಿಸಲಾಗಿದೆ. ಬಸ್ ಚಾಲಕ ಪ್ರಕಾಶ್ ನಮ್ಮ ಮುಂದಿನ ಆದೇಶದ ವರೆಗು ಕೆಲಸಕ್ಕೆ ಹಾಜರಾಗುವಂತಿಲ್ಲ ಎಂದು ಹೇಳಿಕೊಂಡಿದ್ದಾರೆ.

ಮಂಗನ ಕೈಗೆ ಸ್ಟೀರಿಂಗ್ ಕೊಟ್ಟು ಕೆಲಸ ಕಳ್ಕೊಂಡ ಡ್ರೈವರ್

ಇನ್ನು ನಡೆದ ಘಟನೆಯ ಕುರಿತಾಗಿ ಮತ್ತೊಬ್ಬ ಕೆಎಸ್ಆರ್‍‍ಟಿಸಿ ಅಧಿಕಾರಿ - ಕೋತಿಯು ತನ್ನ ಮಾಲಿಕನೊಂದಿಗೆ ಅದೇ ಬಸ್‍‍ನಲ್ಲಿ ದಿನನಿತ್ಯ ಪ್ರಯಾಣಿಸುತ್ತಿರುತ್ತದೆ. ಆದರೆ ಕೋತಿ ತಾನಾಗಿ ತಾನೆ ಸ್ಟೀರಿಂಗ್‍‍ನ ಮೇಲೆ ಕೂತಿದ್ದು, ಪ್ರಯಾಣಿಕರು ಅದನ್ನು ಕೆಳಗಿಳಿಸಲು ಪ್ರಯತ್ನಿಸಿದರೂ ಅದು ಕೆಳಗಿಳಿಯಲಿಲ್ಲ.

ಮಂಗನ ಕೈಗೆ ಸ್ಟೀರಿಂಗ್ ಕೊಟ್ಟು ಕೆಲಸ ಕಳ್ಕೊಂಡ ಡ್ರೈವರ್

ಅದಾಗ್ಯು ಚಾಲಕ ಪ್ರಕಾಶ್ ಒಬ್ಬ ಪ್ರಾಣಿ ಪ್ರಿಯರಾದರೂ ಕೂಡಾ ಆ ಕೋತಿಯನ್ನು ಸ್ಟೀರಿಂಗ್‍‍ನ ಮೇಲೆ ಕೂರಲು ಅವಕಾಶ ನೀಡಬಾರದಿತ್ತು. ಕೇವಲ 3-4 ನಿಮಿಷ ಮಾತ್ರ ಆ ಕೋತಿಯು ಸ್ಟೀರಿಂಗ್‍‍ನ ಮೇಲೆ ಕೂತಿದ್ದು, ಇದರ ಬಗ್ಗೆ ಯಾವುದೇ ತೊಂದರೆಯ ಕುರಿತಾಗಿ ಬಸ್‍‍ನಲ್ಲಿದ್ದ ಪ್ರಯಾಣಿಕರು ಸಹ ನಮಗೆ ದೂರು ನೀಡಲಿಲ್ಲ. ಎಂದು ಹೇಳಿದ್ದಾರೆ.

ಮಂಗನ ಕೈಗೆ ಸ್ಟೀರಿಂಗ್ ಕೊಟ್ಟು ಕೆಲಸ ಕಳ್ಕೊಂಡ ಡ್ರೈವರ್

ಎಷ್ಟೆ ಆದರೂ ಒಂದು ಪ್ರಾಣಿಯನ್ನು ಅಥವಾ ತರಬೇತಿ ಇಲ್ಲದ ವ್ಯಕ್ತಿಯನ್ನು ಚಲಿಸುತ್ತಿರುವ ಬಸ್ ಸ್ಟೀರಿಂಗ್‍ನ ಹತ್ತಿರ ಬಿಡುವುದು ತಪ್ಪಾಗಿದ್ದು, ಇದರಿಂದ ಕೊಂಚ ಯಾಮಾರಿದ್ರು ಬಸ್‍‍ನಲ್ಲಿರುವ ಪ್ರಯಾಣಿಕರಿಗೆ ಮತ್ತು ರಸ್ತೆಯಲ್ಲಿನ ನಾಗರೀಕರಿಗೆ ತೊಂದರೆ ತಪ್ಪಿದ್ದಲ್ಲ. ಹಾಗು ತನಿಕೆಯ ನಂತರ ಡ್ರೈವರ್ ಪ್ರಕಾಶ್‍ರವರು ಇನ್ಮುಂದೆ ಬಸ್ ಡ್ರವೈಂಗ್ ಮಾಡಲಿದ್ದಾರೊ ಇಲ್ಲವೊ ಎಂಬುದು ಕಾಯ್ದುನೋಡಬೇಕಿದೆ.

Most Read Articles

Kannada
Read more on auto news ksrtc bus
English summary
Bus driver lets monkey sit on steering wheel in a moving bus: Gets fired.
Story first published: Saturday, October 6, 2018, 15:29 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X