ಹೊಸ ವೇರಿಯಂಟ್‍ನಲ್ಲಿ ಬರಲಿದೆ ಫೋರ್ಡ್ ಇಕೊಸ್ಪೋರ್ಟ್ ಕಾರು..
ಅಮೆರಿಕ ಮೂಲದ ವಾಹನ ತಯಾರಕ ಸಂಸ್ಥೆಯಾದ ಫೋರ್ಡ್ ತಮ್ಮ ಜನಪ್ರಿಯ ಇಕೊಸ್ಪೋರ್ಟ್ಸ್ ಕಾರಿನ ಹೊಸ ವೇರಿಯಂಟ್ ಅನ್ನು ಭಾರತದ ಮಾರುಕಟ್ಟೆಗೆ ಪರಿಚಯಿಸಲು ಮುಂದಾಗಿದೆ.
ಅಮೆರಿಕ ಮೂಲದ ವಾಹನ ತಯಾರಕ ಸಂಸ್ಥೆಯಾದ ಫೋರ್ಡ್ ತಮ್ಮ ಜನಪ್ರಿಯ ಇಕೊಸ್ಪೋರ್ಟ್ಸ್ ಕಾರಿನ ಹೊಸ ವೇರಿಯಂಟ್ ಅನ್ನು ಭಾರತದ ಮಾರುಕಟ್ಟೆಗೆ ಪರಿಚಯಿಸಲು ಮುಂದಾಗಿದ್ದು, ಟೈಟಾನಿಯಂ ಎಸ್ ಎಂಬ ಟಾಪ್ ವೇರಿಯಂಟ್ ಅನ್ನು ಬಿಡುಗಡೆಗೊಳಿಸಲಿದೆ.

ಹೊಸ ಇಕೊಸ್ಪೋರ್ಟ್ ಟೈಟಾನಿಯಂ ಎಸ್ ಟಾಪ್ ವೇರಿಯಂಟ್ ಕಾರುಗಳು ಸನ್‍ರೂಫ್ ಮತ್ತು 6 ಸ್ಪೀಡ್ ಮ್ಯಾನುವಲ್ ಗೇರ್‍ಬಾಕ್ಸ್, ವಿನ್ಯಾಸದಲ್ಲಿ ಗುರುತರ ಬದಲಾವಣೆಗಳು ಹಾಗು ಅಲಾಯ್ ಚಕ್ರಗಳನ್ನು ಹೊಸದಾಗಿ ಪಡೆದುಕೊಂಡಿರಲಿದ್ದು, ಟೈಟಾನಿಯಂ ಎಸ್ ವೇರಿಯಂಟ್ ಕಾರು ಈಗಾಗಲೆ ಕೇರಳದಲ್ಲಿನ ಡೀಲರ್ ಹತ್ತಿರ ಕಾಣಿಸಿಕೊಂಡಿದೆ.

ಫೋರ್ಡ್ ಫಿಗೊ ಫೇಸ್‍ಲಿಫ್ಟ್ ಕಾರುಗಳು 2017ರ ನವೆಂಬರ್ ತಿಂಗಳಲ್ಲಿ ಬಿಡುಗಡೆಗೊಂಡಿತ್ತು. ಇನ್ನು ಇಕೊಸ್ಪೋರ್ಟ್ ಕಾರುಗಳು ಏಂಬಿಯಂಟ್, ಟ್ರೆಂಡ್, ಟ್ರೆಂಡ್+, ಟೈಟಾನಿಯಂ ಮತ್ತು ಟೈಟಾನಿಯಂ+ ಎಂಬ ಐದು ವೇರಿಯಂಟ್‍ಗಳಲ್ಲಿ ಲಭ್ಯವಿದ್ದು, ಈಗ ಎಕೊಸ್ಪೋರ್ಟ್ ಕಾರಿನ ಟಾಟಾನಿಯಂ ಎಸ್ ಎಂಬ ಟಾಪ್ ಎಂಡ್ ವೇರಿಯಂಟ್ ಕಾರ್ ಅನ್ನು ಪರಿಚಯಿಸಲಿದೆ.

ಕಾರಿನ ಹೊರ ವಿನ್ಯಾಸವು ಸ್ಮೋಕ್ಡ್ ಎಫೆಕ್ಟ್ ಪ್ರೊಜೆಕ್ಟರ್ ಹೆಡ್‍ಲ್ಯಾಂಪ್ಸ್, ಎಲ್ಇಡಿ ಡೇ ಟೈಮ್ ರನ್ನಿಂಗ್ ಲ್ಯಾಂಪ್ಸ್, ಬ್ಲಾಕ್ ರೂಪ್ ರೈಲ್ಸ್, ಫಾಗ್ ಲ್ಯಾಂಪ್‍ಗಲನ್ನು ಕಪ್ಪು ಬಣ್ಣದಿಂದ ಸಜ್ಜುಗೊಳಿಸಿದ್ದು, ಹೊಸದಾದ ಸ್ಪೋರ್ಟಿ ಅಲಾಯ್ ಚಕ್ರಗಳನ್ನು ಪಡೆದುಕೊಂಡಿವೆ.

ಇದಲ್ಲದೆ ಹೊಸ ಟೈಟಾನಿಯಂ ಎಸ್ ಕಾರುಗಳು ಬ್ಲಾಕ್ ರೂಫ್ ಮೌಂಟೆಡ್ ಸ್ಪಾಯ್ಲರ್, ಟೈಟಾನಿಯಂ ಎಸ್ ಬ್ಯಾಡ್ಜಿಂಗ್ ಪಡೆದ ಇಂಟಿಗ್ರೇಟೆಡ್ ಎಲ್ಇಡಿ ಬ್ರೇಕ್ ಲೈಟ್‍ಗಳನ್ನು ಅಳವಡಿಸಲಾಗಿದೆ.

ಟೈಟಾನಿಯಂ ಎಸ್ ಕಾರುಗಳ ಒಳಭಾಗದಲ್ಲಿ ಗುರುತರ ಬದಲಾವಣೆಗಳನ್ನು ಪಡೆದುಕೊಂಡಿದ್ದು, ಆರೆಂಜ್ ಬಣ್ಣವನ್ನು ಬಳಸಲಾಗಿರುವ ಕಪ್ಪು ಬಣ್ಣದ ಇಂಟೀರಿಯರ್‍ಗಳು, ಆಕರ್ಷಿತವಾದ ಡ್ಯಾಶ್‍ಬೋರ್ಡ್, ಡೋರ್ ಪ್ಯಾನಲ್‍ಗಳು ಮತ್ತು ಸ್ಟೀರಿಂಗ್ ವೀಲ್‍ನಿಂದ ಸಜ್ಜುಗೊಂಡಿದೆ.

ಇವುಗಳಲ್ಲದೆ ಹೊಸ ವೇರಿಯಂಟ್ ಕಾರುಗಳು ಎಲೆಕ್ಟ್ರಾನಿಕ್ ಸನ್‍ರೂಫ್, ಟ್ವಿನ್ ಪೊಡ್ ಕ್ಲಸ್ಟರ್, 3 ಸ್ಪೋಕ್ ಮಲ್ಟಿಫಂಕ್ಷನ್ ಸ್ಟೀರಿಂಗ್ ವೀಲ್, ಆಂಡ್ರಾಯ್ಡ್ ಆಟೋ ಹಾಗು ಆಪಲ್ ಕಾರ್‍ಪ್ಲೇ ಮತ್ತು ಫೋರ್ಡ್ ಸಂಸ್ಥೆಯ ಎಸ್‍ವೈಎನ್‍ಸಿ3 ಆಯ್ಕೆಗಳನ್ನು ಪಡೆದುಕೊಂಡಿರುವ ಫ್ಲೋಟಿಂಗ್ ಟಚ್‍ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ ಅನ್ನು ಅಳವಡಿಸಲಾಗಿದೆ.

ಎಂಜಿನ್ ಸಾಮರ್ಥ್ಯ
ಹೊಸ ಫೋರ್ಡ್ ಇಕೊಸ್ಪೋರ್ಟ್ ಟೈಟಾನಿಯಂ ಎಸ್ ವೇರಿಯಂಟ್ ಕಾರುಗಳು 1.5 ಲೀಟರ್ ಟಿಡಿಸಿಐ ಡೀಸೆಲ್ ಎಂಜಿನ್ ಸಹಾಯದಿಂದ 99ಬಿಹೆಚ್‍ಪಿ ಮತ್ತು 205ಎನ್ಎಂ ಟಾರ್ಕ್ ಅನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, 1.5 ಲೀಟರ್ ಪೆಟ್ರೋಲ್ ಎಂಜಿನ್ ಸಹಾಯದಿಂದ 123ಬೆಹೆಚ್‍ಪಿ ಮತ್ತು 150ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತವೆ. ಎರಡು ಎಂಜಿನ್‍ಗಳನ್ನು ಮ್ಯಾನುವಲ್ ಅಥವ ಆಟೋಮ್ಯಾಟಿಕ್ ಟ್ರಾನ್ಸ್ ಮಿಶನ್‍ಗಳೊಂದಿಗೆ ಜೋಡಿಸಲಾಗಿದೆ.

ಈಗಾಗಲೆ ಫೋರ್ಡ್ ತಮ್ಮ ಎಕೊಸ್ಪೋರ್ಟ್ ಕಾರುಗಳ ಮೇಲೆ ರೂ 5000 ರಿಂದ 10000 ಸಾವಿರದ ವರೆಗು ಬೆಲೆಯನ್ನು ಏರಿಸಿದ್ದು, ಎಲ್ಲಾ ವೇರಿಯಂಟ್ ಕಾರುಗಳಲ್ಲಿ ಹೊಸದಾಗಿ ಪಾರ್ಕಿಂಗ್ ಸೆನ್ಸಾರ್ಸ್, ಸ್ಪೀಡ್ ಸೆನ್ಸಿಂಗ್ ಆಟೋ ಡೋರ್ ಲಾಕ್ ಮತ್ತು ಪ್ಯಾಸೆಂಜರ್ ಸೀಟ್‍ಬೆಲ್ಟ್ ರಿಮೈಂಡರ್ ವೈಶಿಷ್ಟ್ಯಗಳನ್ನು ಅಳವಡಿಸಲಾಗಿದೆ.

ಹೊಸದಾಗಿ ಬಿಡುಗಡೆಗೊಳ್ಳಲಿರುವ ಇಕೊಸ್ಪೋರ್ಟ್ ಟೈಟಾನಿಯಂ ಎಸ್ ಕಾರುಗಳು ಮಾರುಕಟ್ಟೆಗೆ ಒಮ್ಮೆ ಲಗ್ಗೆಯಿಟ್ಟಲ್ಲಿ, ಸುಜುಕಿ ಬ್ರಿಝಾ ಮತ್ತು ರೆನಾಲ್ಟ್ ಡಸ್ಟರ್ ಕಾರುಗಳಿಗೆ ತೀವ್ರ ಪೈಪೋಟಿಯನ್ನು ನೀಡಲಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:
ಭಾರತದಲ್ಲಿ ನಡೆದ ಭೀಕರ 10 ರೈಲು ದುರಂತಗಳಿವು...
ಟ್ರಾಫಿಕ್ ರೂಲ್ಸ್ ಬ್ರೇಕ್- ಮಗನನ್ನೇ ಹಿಡಿದು ದಂಡ ವಸೂಲಿ ಮಾಡಿದ ಪೊಲೀಸ್..
ಉತ್ತಮ ಮೈಲೇಜ್ ನೀಡುವ ಟಾಪ್ 10 ಡೀಸೆಲ್ ಕಾರುಗಳಿವು..


Click it and Unblock the Notifications








