ಹೊಸ ಫೋರ್ಡ್ ಫ್ರೀಸ್ಟೈಲ್ ಕಾರು ಬಿಡುಗಡೆಗೆ ದಿನಗಣನೆ..
ಭಾರತೀಯ ಮಾರುಕಟ್ಟೆಗಾಗಿ ಹೊಸ ನಮೂನೆಯ ಕಂಪ್ಯಾಕ್ಟ್ ಯುಟಿಲಿಟಿ ಕಾರು ಮಾದರಿಯೊಂದನ್ನು ಅಭಿವೃದ್ಧಿಗೊಳಿಸಿರುವ ಫೋರ್ಡ್ ಇಂಡಿಯಾ ಸಂಸ್ಥೆಯು, ಫಿಗೊ ಹ್ಯಾಚ್‌ಬ್ಯಾಕ್ ಫ್ಯಾಟ್ ಫಾರ್ಮ್ ಅಡಿಯಲ್ಲಿ ಹೊಸ ಕಾರನ್ನು ಅಭಿವೃದ್ಧಿಗೊಳಿಸುವ ಮೂಲಕ ಹೊಸ ಸಂಚಲಯ
ಭಾರತೀಯ ಮಾರುಕಟ್ಟೆಗಾಗಿ ಹೊಸ ನಮೂನೆಯ ಕಂಪ್ಯಾಕ್ಟ್ ಯುಟಿಲಿಟಿ ಕಾರು ಮಾದರಿಯೊಂದನ್ನು ಅಭಿವೃದ್ಧಿಗೊಳಿಸಿರುವ ಫೋರ್ಡ್ ಇಂಡಿಯಾ ಸಂಸ್ಥೆಯು, ಫಿಗೊ ಹ್ಯಾಚ್‌ಬ್ಯಾಕ್ ಪ್ಲಾಟ್‍ಫಾರ್ಮ್ ಅಡಿಯಲ್ಲಿ ಹೊಸ ಕಾರನ್ನು ಅಭಿವೃದ್ಧಿಗೊಳಿಸುವ ಮೂಲಕ ಹೊಸ ಸಂಚಲಯ ಸೃಷ್ಠಿಸಲು ಸಜ್ಜುಗೊಂಡಿದೆ.

ವರ್ಷದ ಆರಂಭದಲ್ಲಿ ಮೂರು ಹೊಸ ಕಾರುಗಳ ಬಿಡುಗಡೆಗೊಳಿಸುವ ಬಗ್ಗೆ ಸುಳಿವು ನೀಡಿದ್ದ ಫೋರ್ಡ್ ಸಂಸ್ಥೆಯು ಇದೀಗ ಕಂಪ್ಯಾಕ್ಟ್ ಯುಟಿಲಿಟಿ ಫ್ರೀಸ್ಟೈಲ್ ಕಾರುನ್ನು ಬಿಡುಗಡೆಗೊಳಿಸುತ್ತಿದ್ದು, ಫೋರ್ಡ್ ಫ್ರೀಸ್ಟೈಲ್ ಕಾರಿನ ಖರೀದಿಗಾಗಿ ಬುಕ್ಕಿಂಗ್ ಅನ್ನು ಪ್ರಾಂಭಿಸಿದೆ.

ಹೊಸ ಫ್ರೀಸ್ಟೈಲ್ ಹ್ಯಾಚ್‌ಬ್ಯಾಕ್ ಕಾರು ಇದೇ ತಿಂಗಳು 26ರಂದು (ಏಪ್ರಿಲ್ 26) ಬಿಡುಗಡೆಗೊಳ್ಳಲಿದ್ದು, ಹೊಸ ಕಾರಿನ ಖರೀದಿಗಾಗಿ ಗ್ರಾಹಕರು ಮುಂಚುಣಿಯಾಗಿ ಡೀಲರ್‍ಗಳ ಹತ್ತಿರ ರೂ 21,000 ಪಾವತಿಸಬೇಕಾಗಿದೆ.

ಹೊಸ ಕಾರು ಬಿಡುಗಡೆಗೂ ಮುನ್ನ ಫ್ರೀಸ್ಟೈಲ್ ಕಾರು ಮಾದರಿಯ ಬಗ್ಗೆ ಮಹತ್ವದ ಮಾಹಿತಿಗಳನ್ನು ಬಹಿರಂಗಗೊಳಿಸಿರುವ ಫೋರ್ಡ್ ಸಂಸ್ಥೆಯು ಹೊಸ ಕಾರಿನಲ್ಲಿ ಪವರ್ ಫುಲ್ ಎಂಜಿನ್ ಒದಗಿಸಿರುವುದು ಮತ್ತೊಂದು ವಿಶೇಷ.

ಎಂಜಿನ್ ಸಾಮರ್ಥ್ಯ
1.2-ಲೀಟರ್ 3 ಸಿಲಿಂಡರಿನ ಪೆಟ್ರೋಲ್ ಎಂಜಿನ್ ಮತ್ತು 1.5-ಲೀಟರ್ 4 ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿರುವ ಫ್ರೀ ಸ್ಟೈಲ್ ಕಾರುಗಳು, 1.2-ಲೀಟರ್ ಮಾದರಿಯಲ್ಲಿ 94.6 ಬಿಎಚ್‌ಪಿ, 120 ಎನ್ಎಂ ಟಾರ್ಕ್ ಹಾಗೂ 1.5-ಲೀಟರ್ ಮಾದರಿಯಲ್ಲಿ 99 ಬಿಎಚ್‌ಪಿ ಮತ್ತು 120 ಎನ್ಎಂ ಟಾರ್ಕ್ ಉತ್ಪಾದಿಸಬಲ್ಲವು.

ಬರಲಿರುವ ಎರಡು ಮಾದರಿಗಳಲ್ಲೂ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಒದಗಿಸಲಾಗಿದ್ದು, ಫಿಗೊ ಹ್ಯಾಚ್‌ಬ್ಯಾಕ್‌ಗಿಂತಲೂ 15ಎಂಎಂ ನಷ್ಟು ಹೆಚ್ಚುವರಿ ಗ್ರೌಂಡ್ ಕ್ಲಿಯರೆನ್ಸ್(189 ಎಂಎಂ) ಪಡೆದುಕೊಂಡಿದೆ.

ಈ ಮೂಲಕ ಸ್ಪೋರ್ಟಿ ಲುಕ್ ಹೊಂದಿರುವ ಫ್ರೀ ಸ್ಟೈಲ್ ಕಾರುಗಳು ಹೆಕ್ಸಾಗೊನಲ್ ಹನಿಕೊಂಬೊ ಮಾದರಿಯ ಗ್ರಿಲ್ ಜೋಡಣೆಯು ಹೊಸ ಕಾರಿನ ಹೊರ ನೋಟವನ್ನು ಹೆಚ್ಚಿಸಿದ್ದು, ಹೊಸ ನಮೂನೆಯ ಬ್ಯಾನೆಟ್, ಬಂಪರ್, ಬ್ಲ್ಯಾಕ್ ಕ್ಲ್ಯಾಂಡಿಂಗ್, ಫಾಗ್ ಲ್ಯಾಂಪ್ಸ್ ನೀಡಲಾಗಿದೆ.

ಲಭ್ಯಲಿರುವ ಬಣ್ಣಗಳು
ಕೆನಾಯಿನ್ ರಿಡ್ಜ್, ಮೂನ್‌ಡಸ್ಟ್ ಸಿಲ್ವರ್, ಸ್ಮೋಕಿ ಗ್ರೇ, ವೈಟ್ ಗೊಲ್ಡ್, ಆಕ್ಸ್‌ಫರ್ಡ್ ವೈಟ್ ಮತ್ತು ಬ್ಲ್ಯಾಕ್ ಬಣ್ಣಗಳಲ್ಲಿ ಫ್ರೀ ಸ್ಟೈಲ್ ಕಾರುಗಳು ಖರೀದಿಗೆ ಲಭ್ಯವಿರಲಿವೆ.

ಫ್ರೀ ಸ್ಟೈಲ್ ಕಾರಿನ ಮೈಲೇಜ್
ಡ್ರ್ಯಾಗನ್ ಪೆಟ್ರೋಲ್ ಎಂಜಿನ್ ಹೊಂದಿರುವ ಫ್ರೀ ಸ್ಟೈಲ್ ಕಾರುಗಳು ಪ್ರತಿ ಲೀಟರ್ ಪೆಟ್ರೋಲ್‌ಗೆ 19 ಕಿ.ಮೀ ಮೈಲೇಜ್ ನೀಡಲಿದ್ದು, ಡೀಸೆಲ್ ಎಂಜಿನ್ ಪ್ರೇರಿತ ಫ್ರೀ ಸ್ಟೈಲ್ ಕಾರುಗಳು ಪ್ರತಿ ಲೀಟರ್ ಡೀಸೆಲ್‌ಗೆ 24.4 ಕಿ.ಮೀ ಮೈಲೇಜ್ ನೀಡಲಿವೆ ಎಂದು ಫೋರ್ಡ್ ಸಂಸ್ಥೆಯು ಹೇಳಿಕೊಂಡಿದೆ.

ಕಾರಿನ ಸುರಕ್ಷಾ ಸಾಧನಗಳು
ಪ್ರಮುಖ ನಾಲ್ಕು ವೇರಿಯೆಂಟ್‌ಗಳಲ್ಲಿ ಲಭ್ಯವಿರುವ ಫ್ರೀ ಸ್ಟೈಲ್ ಕಾರುಗಳು ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್, ಎಬಿಎಸ್, ಇಬಿಡಿ, ಕೀ ಲೆಸ್ ಎಂಟ್ರಿ, ರಿವರ್ಸ್ ಪಾರ್ಕಿಂಗ್ ಸೆನ್ಸಾರ್ ಮತ್ತು ಸೀಟ್ ಬೆಲ್ಟ್ ರೀಮೆಂಡರ್ ಸೌಲಭ್ಯಗಳನ್ನು ಪಡೆದುಕೊಂಡಿರುತ್ತದೆ.

ಜೊತೆಗೆ 15-ಇಂಚಿನ್ ಅಲಾಯ್ ಚಕ್ರಗಳು, ಆಟೋ ಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲರ್, ರಿಯರ್ ಸ್ಪಾಯ್ಲರ್, ರೂಫ್ ವ್ಯಾರ್ಪ್, ಆ್ಯಂಟಿ ಥೆಪ್ಟ್ ನಟ್ಸ್, ರಿಯರ್ ವ್ಯೂ ಕ್ಯಾಮೆರಾ, ನೆಕ್ ರೆಸ್ಟ್ ಮತ್ತು ಪಿಲ್ಲೋ ಸೇರಿದಂತೆ ಪ್ರಮುಖ ವೈಶಿಷ್ಟ್ಯತೆಗಳನ್ನು ಹೊಂದಿರಲಿದೆ.

ಫೊರ್ಡ್ ಫ್ರೀಸ್ಟೈಲ್ ಫಿಗೋ ಸರಣಿಯ ಹ್ಯಾಚ್‍ಬ್ಯಾಕ್ ಕಾರಾಗಿದ್ದು, ಒಮ್ಮೆ ಈ ಕಾರು ಮಾರುಕಟ್ಟೆಗೆ ಲಗ್ಗೆಯಿಟ್ಟಲ್ಲಿ ಹ್ಯುಂಡೈ ಆಕ್ಟಿವ್ ಐ20, ಮತ್ತು ಫಿಯಾಟ್ ಅರ್ಬನ್ ಕಾರ್ ಕಾರುಗಳಿಗೆ ಪೈಪೋಟಿಯನ್ನು ನೀಡಲಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:
ರಸ್ಥೆ ಅಪಘಾತದಿಂದ ಪಾರಾದ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗ್ಡೆ..
ಕಾರ್ ಡ್ರೈವಿಂಗ್ ವೇಳೆ ಈ ತಪ್ಪುಗಳನ್ನು ಮಾಡಲೇಬೇಡಿ..
ಭಾರತದಲ್ಲಿ ನಡೆದ ಭೀಕರ 10 ರೈಲು ದುರಂತಗಳಿವು...


Click it and Unblock the Notifications