ಎಲೆಕ್ಟ್ರಿಕ್ ಕಾರುಗಳನ್ನು ಖರೀದಿಸುವ ಗ್ರಾಹಕರಿಗೆ ಕೇಂದ್ರದಿಂದ ಸದ್ಯದಲ್ಲೇ ಸಿಹಿಸುದ್ದಿ

By Praveen Sannamani

2030ರ ಹೊತ್ತಿಗೆ ವಿಶ್ವಾದ್ಯಂತ ಶೇ.99ರಷ್ಟು ಎಲೆಕ್ಟ್ರಿಕ್ ಕಾರುಗಳನ್ನು ರಸ್ತೆಗಿಳಿಸುವ ಉದ್ದೇಶದಿಂದ ವಿಶ್ವದ ಪ್ರಮುಖ ರಾಷ್ಟ್ರಗಳು ಎಲೆಕ್ಟ್ರಿಕ್ ಕಾರುಗಳ ಮಾರಾಟಕ್ಕೆ ಪೂರಕವಾದ ಮಾರುಕಟ್ಟೆ ಒದಗಿಸುತ್ತಿದ್ದು, ಇದೀಗ ಕೇಂದ್ರ ಸರ್ಕಾರವು ಸಹ ಎಲೆಕ್ಟ್ರಿಕ್ ಕಾರುಗಳ ಮಾರಾಟವನ್ನು ದ್ವಿಗುಣಗೊಳಿಸುವ ಸಲುವಾಗಿ ಬೃಹತ್ ಯೋಜನೆಯೊಂದನ್ನ ಜಾರಿ ಮಾಡಲು ಮುಂದಾಗಿದೆ.

ಎಲೆಕ್ಟ್ರಿಕ್ ಕಾರುಗಳನ್ನು ಖರೀದಿಸುವ ಗ್ರಾಹಕರಿಗೆ ಕೇಂದ್ರದಿಂದ ಸದ್ಯದಲ್ಲೇ ಸಿಹಿಸುದ್ದಿ

ಕೇಂದ್ರ ಸರ್ಕಾರವು ಎಲೆಕ್ಟ್ರಿಕ್ ಕಾರುಗಳನ್ನ ಖರೀದಿಗೆ ಪೂರಕವಾದ ವಾತಾವರಣ ನಿರ್ಮಿಸಲು ಈಗಾಗಲೇ ಹಲವಾರು ಕಾರ್ಯಕ್ರಮಗಳನ್ನು ಜಾರಿ ಮಾಡಿದ್ದು, ಮುಂದಿನ ತಿಂಗಳು ನಡೆಯಲಿರುವ ಜಾಗತಿಕ ಇ-ಚಲನಶೀಲ ಶೃಂಗಸಭೆಯನ್ನ ಉದ್ಘಾಟಿಸಲಿರುವ ಪ್ರಧಾನಿ ನರೇಂದ್ರ ಮೋದಿಯವರು ಮತ್ತಷ್ಟು ಯೋಜನೆಗಳನ್ನು ಜಾರಿ ಮಾಡಲು ಮುಂದಾಗಿದ್ದಾರೆ ಎನ್ನುವ ಮಹತ್ವದ ಮಾಹಿತಿ ಲಭ್ಯವಾಗಿದೆ.

ಎಲೆಕ್ಟ್ರಿಕ್ ಕಾರುಗಳನ್ನು ಖರೀದಿಸುವ ಗ್ರಾಹಕರಿಗೆ ಕೇಂದ್ರದಿಂದ ಸದ್ಯದಲ್ಲೇ ಸಿಹಿಸುದ್ದಿ

ನೀತಿ ಆಯೋಗದ ಶಿಫಾರಸ್ಸು ಅನ್ವಯ ಎಲೆಕ್ಟ್ರಿಕ್ ಕಾರುಗಳನ್ನು ಖರೀದಿ ಪ್ರಕ್ರಿಯೆಯನ್ನ ಉತ್ತೇಜಿಸಲು ಪ್ರತಿ ಎಲೆಕ್ಟ್ರಿಕ್ ಕಾರಿನ ಮೇಲೂ ಗರಿಷ್ಠ ಪ್ರಮಾಣದ ಸಬ್ಸಡಿ ಜೊತೆಗೆ ಅತಿಯಾದ ಮಾಲಿನ್ಯ ಹೊಂದಿರುವ ದೇಶದ ಪ್ರಮುಖ 5 ನಗರಗಳಲ್ಲಿ ಎಲೆಕ್ಟ್ರಿಕ್ ಕಾರುಗಳಿಗೆ ಬೇಕಾದ ಅಗತ್ಯ ಚಾರ್ಜಿಂಗ್ ಸ್ಟೇಷನ್‌ಗಳನ್ನು ನಿರ್ಮಾಣ ಮಾಡಲು ಆಟೋ ಉತ್ಪಾದನಾ ಸಂಸ್ಥೆಗಳಿಗೆ 100 ದಿನಗಳ ಗಡುವು ನೀಡಲು ಮುಂದಾಗಿದೆ.

ಎಲೆಕ್ಟ್ರಿಕ್ ಕಾರುಗಳನ್ನು ಖರೀದಿಸುವ ಗ್ರಾಹಕರಿಗೆ ಕೇಂದ್ರದಿಂದ ಸದ್ಯದಲ್ಲೇ ಸಿಹಿಸುದ್ದಿ

ಇದಲ್ಲದೇ ಕಳೆದ ತಿಂಗಳು ಎಲೆಕ್ಟ್ರಿಕ್ ಕಾರುಗಳ ಮುಖ್ಯ ತಾಂತ್ರಿಕ ಅಂಶವಾದ ಎಲೆಕ್ಟ್ರಿಕ್ ಬ್ಯಾಟರಿಗಳ ಮೇಲಿನ ಜಿಎಸ್‌ಟಿ ತೆರಿಗೆ ಪ್ರಮಾಣವನ್ನು ತಗ್ಗಿಸಿದ್ದು, ಇದು ಇವಿ ಕಾರುಗಳ ಮೇಲಿನ ಬೆಲೆ ಇಳಿಕೆಗೆ ಸಹಕಾರಿಯಾಗುವುದರ ಜೊತೆಗೆ ಮಾರಾಟಕ್ಕೂ ಅನುಕೂಲವಾಗಲಿದೆ.

ಎಲೆಕ್ಟ್ರಿಕ್ ಕಾರುಗಳನ್ನು ಖರೀದಿಸುವ ಗ್ರಾಹಕರಿಗೆ ಕೇಂದ್ರದಿಂದ ಸದ್ಯದಲ್ಲೇ ಸಿಹಿಸುದ್ದಿ

ಹೀಗಾಗಿ ಎಲೆಕ್ಟ್ರಿಕ್ ಬ್ಯಾಟರಿಗಳ ಮೇಲೆ ಇಷ್ಟು ದಿನ ಇದ್ದ ಶೇ.28ರಷ್ಟು ಜಿಎಸ್‌ಟಿ ತೆರಿಗೆಯು ಇನ್ಮುಂದೆ ಶೇ.18ಕ್ಕೆ ಇಳಿಕೆಯಾಗಲಿದ್ದು, ಪರಿಸರಕ್ಕೆ ಪೂರಕವಾಗಿರುವ ಎಲೆಕ್ಟ್ರಿಕ್ ಕಾರುಗಳ ಅಭಿವೃದ್ದಿ ಮತ್ತು ಮಾರಾಟಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಹಲವು ಜನಪರ ಯೋಜನೆಗಳನ್ನ ರೂಪಿಸಿತ್ತಿದೆ.

ಎಲೆಕ್ಟ್ರಿಕ್ ಕಾರುಗಳನ್ನು ಖರೀದಿಸುವ ಗ್ರಾಹಕರಿಗೆ ಕೇಂದ್ರದಿಂದ ಸದ್ಯದಲ್ಲೇ ಸಿಹಿಸುದ್ದಿ

2.50 ಲಕ್ಷ ಪ್ರೋತ್ಸಾಹ ಧನ

ಹೊಸ ಯೋಜನೆಯಲ್ಲಿ ಡಿಸೇಲ್ ಮತ್ತು ಪೆಟ್ರೋಲ್‌ ಕಾರುಗಳನ್ನು ಪರಿಮಾಣಕಾರಿಯಾಗಿ ತಗ್ಗಿಸುವುದು ಮತ್ತು ಎಲೆಕ್ಟ್ರಿಕ್ ಕಾರುಗಳನ್ನು ಪ್ರೋತ್ಸಾಹಿಸುವ ಗುರಿ ಹೊಂದಲಾಗಿದೆ. ಇದಕ್ಕಾಗಿ ಎಲೆಕ್ಟ್ರಿಕ್ ಕಾರುಗಳನ್ನು ಖರೀದಿಸುವ ಗ್ರಾಹಕರನ್ನು ಪ್ರೊತ್ಸಾಹಿಸಲು ಮುಂದಾಗಿರುವ ಕೇಂದ್ರ ಸರ್ಕಾರವು ಪ್ರತಿ ಕಾರಿನ ಖರೀದಿ ಮೇಲೆ ಬರೋಬ್ಬರಿ 2. 50 ಲಕ್ಷ ರೂಪಾಯಿ ಪ್ರೋತ್ಸಾಹ ಧನ ಸಹ ನೀಡಲು ಮುಂದಾಗಿದೆ.

ಎಲೆಕ್ಟ್ರಿಕ್ ಕಾರುಗಳನ್ನು ಖರೀದಿಸುವ ಗ್ರಾಹಕರಿಗೆ ಕೇಂದ್ರದಿಂದ ಸದ್ಯದಲ್ಲೇ ಸಿಹಿಸುದ್ದಿ

ಕೇಂದ್ರ ಸರ್ಕಾರವು ಜಾರಿಗೆ ತರುತ್ತಿರುವ ಹೊಸ ಯೋಜನೆಯ ಪ್ರಕಾರ, ಈಗಾಗಲೇ ಡೀಸೆಲ್ ಅಥವಾ ಪೆಟ್ರೋಲ್ ಕಾರುಗಳನ್ನು ಹೊಂದಿರುವ ಮಾಲೀಕರು ತಮ್ಮ ಹಳೆಯ ಬಿಎಸ್ 3 ಕಾರುಗಳನ್ನು ಬದಲಾಯಿಸಿ ಎಲೆಕ್ಟ್ರಿಕ್ ಕಾರನ್ನು ಖರೀದಿಸುವಂತಹ ಗ್ರಾಹಕರಿಗೆ ಮಾತ್ರ ಅನ್ವಯವಾಗಲಿದೆ.

ಎಲೆಕ್ಟ್ರಿಕ್ ಕಾರುಗಳನ್ನು ಖರೀದಿಸುವ ಗ್ರಾಹಕರಿಗೆ ಕೇಂದ್ರದಿಂದ ಸದ್ಯದಲ್ಲೇ ಸಿಹಿಸುದ್ದಿ

ಇನ್ನು ಮೇಲೆ ತಿಳಿಸಿದಂತೆ ಪ್ರತಿ ಕಾರಿನ ಮೇಲೂ ಗರಿಷ್ಠ ಸಬ್ಸಡಿ ಯೋಜನೆ ಮತ್ತು ಹಳೆಯ ಕಾರುಗಳ ಸ್ಕ್ಯಾಪಿಂಂಗ್ ಮೇಲೆ ನೀಡಲಾಗುವ 2.50 ಲಕ್ಷ ಸಬ್ಸಡಿ ಯೋಜನೆಯು ಬೇರೆ ಬೇರೆ ಯೋಜನೆಗಳಾಗಿದ್ದು, ಹಳೆಯ ಡಿಸೇಲ್ ಮತ್ತು ಪೆಟ್ರೋಲ್ ಕಾರುಗಳ ಸ್ಕ್ಯಾಪ್ ಮಾಡುವ ಮೂಲಕ ಎಲೆಕ್ಟ್ರಿಕ್ ಕಾರುಗಳನ್ನ ಖರೀದಿಸುವ ಗ್ರಾಹಕರಿಗೆ ಹೆಚ್ಚಿನ ಪ್ರಮಾಣದಲ್ಲಿ ಹಣಕಾಸಿನ ನೆರವು ಪಡೆದುಕೊಳ್ಳಬಹುದು.

ಎಲೆಕ್ಟ್ರಿಕ್ ಕಾರುಗಳನ್ನು ಖರೀದಿಸುವ ಗ್ರಾಹಕರಿಗೆ ಕೇಂದ್ರದಿಂದ ಸದ್ಯದಲ್ಲೇ ಸಿಹಿಸುದ್ದಿ

ಪ್ರೊತ್ಸಾಹ ಧನ ಪಡೆಯಲು ಹೀಗೆ ಮಾಡುವುದು ಕಡ್ಡಾಯ..!

ಒಂದು ವೇಳೆ ನೀವು ಬಿಎಸ್ 3 ಡೀಸೆಲ್ ಅಥವಾ ಪೆಟ್ರೋಲ್ ಹೊಂದಿದ್ದು, ಎಲೆಕ್ಟ್ರಿಕ್ ಕಾರ್‌ನೊಂದಿಗೆ ಬದಲಾವಣೆ ಮಾಡುವುದಾದರೇ ಮೊದಲು ನಿಮ್ಮ ಹಳೆಯ ಕಾರುಗಳನ್ನು ಅಧಿಕೃತ ಸ್ಕ್ರ್ಯಾಪಿಂಗ್ ಸೆಂಟರ್‌ನಲ್ಲಿ ಸ್ಕ್ರ್ಯಾಪ್ ಮಾಡಿಸುವುದು ಕೂಡಾ ಕಡ್ಡಾಯವಾಗಿರುತ್ತದೆ.

ಎಲೆಕ್ಟ್ರಿಕ್ ಕಾರುಗಳನ್ನು ಖರೀದಿಸುವ ಗ್ರಾಹಕರಿಗೆ ಕೇಂದ್ರದಿಂದ ಸದ್ಯದಲ್ಲೇ ಸಿಹಿಸುದ್ದಿ

ಅಂದ್ರೆ ನಿಮ್ಮ ಹಳೆಯ ಪೆಟ್ರೋಲ್ ಅಥವಾ ಡಿಸೇಲ್ ಕಾರುಗಳು ಗುಜುರಿಗೆ ಸೇರಿದ ನಂತರವೇ ಎಲೆಕ್ಟ್ರಿಕ್ ಕಾರಿನ ಎಕ್ಸ್‌ಚೆಂಜ್‌ ಮೇಲೆ ರೂ. 2.50ಲಕ್ಷ ಪ್ರೊತ್ಸಾಹ ಧನ ಸಿಗಲಿದೆ. ಮತ್ತೊಂದು ವಿಚಾರ ಅಂದ್ರೆ ನೀವು ಖರೀದಿಸುವ ಎಲೆಕ್ಟ್ರಿಕ್ ಕಾರುಗಳ ಬೆಲೆ ಆಧಾರ ಮೇಲೆ ಪ್ರೊತ್ಸಾಹ ಧನ ನಿಗದಿಯಾಗುತ್ತೆ.

ಎಲೆಕ್ಟ್ರಿಕ್ ಕಾರುಗಳನ್ನು ಖರೀದಿಸುವ ಗ್ರಾಹಕರಿಗೆ ಕೇಂದ್ರದಿಂದ ಸದ್ಯದಲ್ಲೇ ಸಿಹಿಸುದ್ದಿ

ಇದಕ್ಕಾಗಿಯೇ ಬರೋಬ್ಬರಿ 9 ಸಾವಿರ ಕೋಟಿ ವ್ಯಯ ಮಾಡುತ್ತಿರುವ ಕೇಂದ್ರವು ಮುಂದಿನ ಐದು ವರ್ಷಗಳ ಅವಧಿಯಲ್ಲಿ ಶೇ.50 ರಷ್ಟು ಎಲೆಕ್ಟ್ರಿಕ್ ಕಾರುಗಳನ್ನು ರಸ್ತೆಗಿಳಿಸುವ ಗುರಿಹೊಂದಿದೆ. ಹೀಗಾಗಿ ಹಳೆಯ ಮಾದರಿಯ ಕಾರುಗಳನ್ನು ಹೊಂದಿರುವ ಕಾರು ಮಾಲೀಕರಿಗೆ ಇಂತದೊಂದು ಆಫರ್ ಘೋಷಣೆ ಮಾಡುತ್ತಿದೆ.

ಎಲೆಕ್ಟ್ರಿಕ್ ಕಾರುಗಳನ್ನು ಖರೀದಿಸುವ ಗ್ರಾಹಕರಿಗೆ ಕೇಂದ್ರದಿಂದ ಸದ್ಯದಲ್ಲೇ ಸಿಹಿಸುದ್ದಿ

ಇದರ ಜೊತೆಗೆ ಎಲೆಕ್ಟ್ರಿಕ್ ಬೈಕ್‌ಗಳನ್ನು ಖರೀದಿಸುವ ಗ್ರಾಹಕರಿಗೂ ಸಹ ರೂ.30 ಸಾವಿರ ಪ್ರೊತ್ಸಾಹ ನೀಡಲು ಮುಂದಾಗಿರುವ ಕೇಂದ್ರ ಸರ್ಕಾರವು ಇದಕ್ಕಾಗಿ 1.5 ಲಕ್ಷ ಮೇಲ್ಪಟ್ಟ ಎಲೆಕ್ಟಿಕ್ ಬೈಕ್‌ಗಳನ್ನು ಖರೀದಿ ಮಾಡಿರಬೇಕು ಎಂಬ ನಿಯಮವನ್ನು ಕಡ್ಡಾಯ ಮಾಡಿದೆ.

ಎಲೆಕ್ಟ್ರಿಕ್ ಕಾರುಗಳನ್ನು ಖರೀದಿಸುವ ಗ್ರಾಹಕರಿಗೆ ಕೇಂದ್ರದಿಂದ ಸದ್ಯದಲ್ಲೇ ಸಿಹಿಸುದ್ದಿ

ಮೆಟ್ರೋ ಸಿಟಿಗಳಲ್ಲಿ ಪೆಟ್ರೋಲ್ ಬಂಕ್ ಮಾದರಿಯಲ್ಲಿ ಪ್ರತಿ ಗಲ್ಲಿ ಗಲ್ಲಿಗೂ ಚಾರ್ಜಿಂಗ್ ಪಾಯಿಂಟ್ ತೆರೆಯಲು ಸಿದ್ದತೆ ನಡೆಸಲಾಗುತ್ತಿದ್ದು, ಹೆದ್ದಾರಿಗಳಲ್ಲಿ ಸಂಚರಿಸುವ ಇವಿ ಕಾರುಗಳಿಗಾಗಿ ಪ್ರತಿ 25 ಕಿ.ಮಿ ಒಂದಂತೆ ಚಾರ್ಜಿಂಗ್ ಸ್ಟೆಷನ್‌ಗಳನ್ನು ನಿರ್ಮಾಣ ಮಾಡುವ ಯೋಜನೆ ಇದೆ.

ಎಲೆಕ್ಟ್ರಿಕ್ ಕಾರುಗಳನ್ನು ಖರೀದಿಸುವ ಗ್ರಾಹಕರಿಗೆ ಕೇಂದ್ರದಿಂದ ಸದ್ಯದಲ್ಲೇ ಸಿಹಿಸುದ್ದಿ

ಇದರೊಂದಿಗೆ ಹೊಸದಾಗಿ ಎಲೆಕ್ಟ್ರಿಕ್ ಕಾರುಗಳನ್ನು ಖರೀದಿಸುವಂತ ಗ್ರಾಹಕರಿಗೆ ಮತ್ತಷ್ಟು ಹೊಸ ಆಫರ್ ‌ನೀಡಿರುವ ಕೇಂದ್ರ ಸರ್ಕಾರವು, ನಿಗದಿತ ಅವಧಿಗೆ ಇವಿ ಕಾರುಗಳಿಗೆ ಟ್ರೋಲ್ ಫ್ರಿ ಮತ್ತು ಎರಡು ವರ್ಷಗಳ ಇನ್ಸುರೆನ್ಸ್, ಬಿಡಿಭಾಗಗಳ ಖರೀದಿ ಮೇಲೆ ರಿಯಾಯ್ತಿ ದರ ಅನ್ವಯವಾಗುವಂತೆ ನಿಯಮ ರೂಪಿಸುತ್ತಿದೆ.

Most Read Articles

Kannada
Read more on electric cars evergreen
English summary
Government plans new policy to promote electric vehicles.
Story first published: Friday, August 3, 2018, 10:49 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X