ಹ್ಯುಂಡೈ ಕ್ರೆಟಾ ಫೇಸ್‍‍ಲಿಫ್ಟ್ ಕಾರಿನ ಬಿಡುಗಡೆ ಯಾವಾಗ..?

ದಕ್ಷಿಣ ಕೊರಿಯಾ ಮೂಲದ ವಾಹನ ತಯಾರಕ ಸಂಸ್ಥೆಯಾದ ಹ್ಯುಂಡೈ ತನ್ನ ಜನಪ್ರಿಯ ಕಾರುಗಳ ಮೂಲಕ ಗ್ರಾಹಕರ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾಗಿದೆ. ಇದೀಗ ಹೊಸ 2018ರ ಹ್ಯುಂಡೈ ಕ್ರೆಟಾ ಕಾರ್ ಅನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ.

By Rahul Ts

ದಕ್ಷಿಣ ಕೊರಿಯಾ ಮೂಲದ ವಾಹನ ತಯಾರಕ ಸಂಸ್ಥೆಯಾದ ಹ್ಯುಂಡೈ ತನ್ನ ಜನಪ್ರಿಯ ಕಾರುಗಳ ಮೂಲಕ ಗ್ರಾಹಕರ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾಗಿದೆ. ಇದೀಗ ಹೊಸ 2018ರ ಹ್ಯುಂಡೈ ಕ್ರೆಟಾ ಕಾರ್ ಅನ್ನು ಬಿಡುಗಡೆಗೊಳಿಸಲು ಸಜ್ಜಾಗುತಿದ್ದು, ಮೇ ತಿಂಗಳಲ್ಲಿ ಮಾರುಕಟ್ಟೆಗೆ ಲಗ್ಗೆಯಿಡಲಿದೆ.

ಹ್ಯುಂಡೈ ಕ್ರೆಟಾ ಫೇಸ್‍‍ಲಿಫ್ಟ್ ಕಾರಿನ ಬಿಡುಗಡೆ ಯಾವಾಗ..?

ಬಿಡುಗಡೆಗು ಮುನ್ನವೆ ಹ್ಯುಂಡೈ ಕ್ರೆಟಾ ಕಾರಿನ ರಹಸ್ಯ ಚಿತ್ರಗಳು ಸೋರಿಕೆಯಾಗಿದ್ದು, ಭಾರತೀಯ ರಸ್ಥೆಗಳಲ್ಲಿ ಯಾವುದೆ ಮುಸುಕಿಲ್ಲದೆ ಕಾಣಿಸಿಕೊಂಡಿದೆ. ಚಿತ್ರದಲ್ಲಿ ನೋಡುವುದಾದರೆ ದಕ್ಷಿಣ ಅಮೇರಿಕಾದಲ್ಲಿ ಮಾರಾಟಾವಾಗುತ್ತಿರುವ ಕಾರಿನ ವಿನ್ಯಾಸವನ್ನೆ ಆದರಿಸಿದೆ.

ಹ್ಯುಂಡೈ ಕ್ರೆಟಾ ಫೇಸ್‍‍ಲಿಫ್ಟ್ ಕಾರಿನ ಬಿಡುಗಡೆ ಯಾವಾಗ..?

ಬಿಡುಗಡೆಗೊಳ್ಳಲಿರುವ ಹೊಸ ಕ್ರೆಟಾ ಕಾರುಗಳು 1.6-ಲೀಟರ್ ಪೆಟ್ರೋಲ್, 1.4 ಮತ್ತು 1.6-ಲೀಟರ್ ಡೀಸೆಲ್ ಆವೃತ್ತಿಗಳಲ್ಲಿ ಲಭ್ಯವಿರಲಿದೆ ಎನ್ನಲಾಗಿದೆ.1.6 ಲೀಟರ್ ಪೆಟ್ರೋಲ್ ಎಂಜಿನ್ ಮಾದರಿಯು 121-ಬಿಹೆಚ್‍ಪಿ ಮತ್ತು 154-ಎನ್ಎಂ ಟಾರ್ಕ್ ಉತ್ಪಾದಿಸಿದಲ್ಲಿ 1.4 ಲೀಟರ್ ಡೀಸೆಲ್ ಎಂಜಿನ್ ಮಾದರಿಯು 89-ಬಿಹೆಚ್‍ಪಿ ಮತ್ತು 224-ಎನ್ಎಂ ಟಾರ್ಕ್ ಉತ್ಪಾದಿಸಬಲ್ಲವು.

ಹ್ಯುಂಡೈ ಕ್ರೆಟಾ ಫೇಸ್‍‍ಲಿಫ್ಟ್ ಕಾರಿನ ಬಿಡುಗಡೆ ಯಾವಾಗ..?

ಹಾಗೆಯೇ 1.6 ಲೀಟರ್ ಡೀಸೆಲ್ ಎಂಜಿನ್ ಮಾದರಿಯು 126-ಬಿಹೆಚ್‍ಪಿ ಮತ್ತು 256-ಎನ್ಎಂ ಟಾರ್ಕ್ ಅನ್ನು ಉತ್ಪಾದಿಸಲಿದ್ದು, ಎಲ್ಲಾ ಎಂಜಿನ್‍ಗಳನ್ನು 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಮತ್ತು 1.6-ಡೀಸೆಲ್ ಎಂಜಿನ್ ಮಾದರಿಗಳನ್ನು 6 ಸ್ಪೀಡ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಆಯ್ಕೆಯಲ್ಲಿ ದೊರೆಯಲಿವೆ.

ಹ್ಯುಂಡೈ ಕ್ರೆಟಾ ಫೇಸ್‍‍ಲಿಫ್ಟ್ ಕಾರಿನ ಬಿಡುಗಡೆ ಯಾವಾಗ..?

ಇನ್ನು ಹೊಸ ಕ್ರೆಟಾ ಫೇಸ್‍ಲಿಫ್ಟ್ ಕಾರುಗಳು ನವಿಕರಿಸಲಾಗಿರುವ ಹೆಡ್‍ಲ್ಯಾಂಪ್‍ಗಳು, ಹೊಸ ಬಂಪರ್ ಮತ್ತು ಎಲ್ಇಡಿ ಡಿಎಲ್‍ಆರ್ ಗಳನ್ನು ಪಡೆದಿದ್ದು, ರಿಯರ್ ಭಾಗವು ಕೂಡ ಹೊಸ ಬಂಪರ್‍‍ನೊಂದಿಗೆ ಪರಿಷ್ಕರಿಸಿದ ಟೈಲ್‍ಲೈಟ್ ಗಳನ್ನು ಪಡೆದಿದೆ.

ಹ್ಯುಂಡೈ ಕ್ರೆಟಾ ಫೇಸ್‍‍ಲಿಫ್ಟ್ ಕಾರಿನ ಬಿಡುಗಡೆ ಯಾವಾಗ..?

ಇನ್ನುಳಿದಂತೆ ಕಾರಿನ ಒಳಭಾಗದಲ್ಲಿ 8 ಇಂಚಿನ ಟಚ್‍ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂನೊಂದಿಗೆ ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಆಯ್ಕೆಯನ್ನು ನೀಡಲಾಗಿದ್ದು, ಇವು ಎಸ್‌ಯುವಿ ಪ್ರಿಯರಿಗೆ ಹೊಸ ಚಾಲನಾ ಅನುಭೂತಿ ನೀಡಲಿವೆ.

ಹ್ಯುಂಡೈ ಕ್ರೆಟಾ ಫೇಸ್‍‍ಲಿಫ್ಟ್ ಕಾರಿನ ಬಿಡುಗಡೆ ಯಾವಾಗ..?

ಇದರ ಜೊತೆಗೆ ಹೊಸ ಕಾರು ಸನ್‍ರೂಫ್, ರೈನ್ ಸೆಂಸಿಂಗ್ ವೈಪರ್ಸ್, ಕ್ರೂಸ್ ಕಂಟ್ರೋಲ್ ಮತ್ತು ಆಟೋಮ್ಯಾಟಿಕ್ ಹೆಡ್‍ಲ್ಯಾಂಪ್ ಗಳನ್ನು ಪಡೆದಿದ್ದು, ಸುರಕ್ಷಾ ವೈಶಿಷ್ಟ್ಯತೆಗಳಿಗೂ ಹೆಚ್ಚಿನ ಒತ್ತು ನೀಡಲಾಗಿದೆ.

ಹ್ಯುಂಡೈ ಕ್ರೆಟಾ ಫೇಸ್‍‍ಲಿಫ್ಟ್ ಕಾರಿನ ಬಿಡುಗಡೆ ಯಾವಾಗ..?

ಹೊಸ ಕ್ರೆಟಾ ಫೇಸ್‍ಲಿಫ್ಟ್ ಕಾರುಗಳ ಬೆಲೆಯು ಪ್ರಸ್ಥುತ ಮಾದರಿಗಿಂತ ಹೊಂಚ ಹೆಚ್ಚಿರಲಿದ್ದು, ಬಿಡುಗಡೆಯ ನಂತರ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಎಸ್ ಕ್ರಾಸ್, ರೆನಾಲ್ಟ್ ಕ್ಯಾಪ್ಚರ್, ಮತ್ತು ರೆನಾಲ್ಟ್ ಡಸ್ಟರ್ ಕಾರುಗಳಿಗೆ ಪೈಪೋಟಿಯನ್ನು ನೀಡಲಿದೆ.

ಹ್ಯುಂಡೈ ಕ್ರೆಟಾ ಫೇಸ್‍‍ಲಿಫ್ಟ್ ಕಾರಿನ ಬಿಡುಗಡೆ ಯಾವಾಗ..?

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

ಕಾರ್ ಡ್ರೈವಿಂಗ್ ವೇಳೆ ಈ ತಪ್ಪುಗಳನ್ನು ಮಾಡಲೇಬೇಡಿ..

ರಾತ್ರಿ ವೇಳೆ ಡ್ರೈವಿಂಗ್ ಮಾಡುವ ಮುನ್ನ ಈ ಅಮೂಲ್ಯ ಟಿಪ್ಸ್‌ಗಳನ್ನು ತಪ್ಪದೇ ಪಾಲಿಸಿ...

ಕಾರಿನ ಫ್ಯೂಲ್ ಟ್ಯಾಂಕ್‌ನಲ್ಲಿ ನೀರು ಹೋದ್ರೆ ಏನ್ ಮಾಡೋದು?

ಬೇಸಿಗೆಯಲ್ಲಿ ನಿಮ್ಮ ವಾಹನಗಳ ರಕ್ಷಣೆ ಹೇಗೆ? ಇಲ್ಲಿದೆ ಸರಳ ಉಪಾಯ....

ಭಾರತದಲ್ಲಿ ದೊರೆಯುವ ಬೆಸ್ಟ್ ಬೈಕ್ ಆಕ್ಸೆಸರಿಗಳಿವು..

Article Published On: Wednesday, April 25, 2018, 16:39 [IST]
English summary
Hyundai Creta facelift coming up in May.
Read more on hyundai new launches
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+