ಭಾರತದಲ್ಲಿ ದೊರೆಯುವ ಬೆಸ್ಟ್ ಬೈಕ್ ಆಕ್ಸೆಸರಿಗಳಿವು..

Written By: Rahul TS

ದ್ವಿಚಕ್ರ ವಾಹನಗಳ ಮಾರಾಟಕ್ಕೆ ಬಹು ದೊಡ್ಡ ಮಾರುಕಟ್ಟೆಗಾಗಿ ಮಾರ್ಪಟ್ಟಿರುವ ಭಾರತದಲ್ಲಿ ದಿನಂಪ್ರತಿ ಸಾವಿರಾರು ಬೈಕ್ ಮಾದರಿಗಳು ಮಾರಾಟಗೊಳ್ಳುತ್ತಿವೆ. ಹೀಗಾಗಿ ಸುರಕ್ಷಿತ ಬೈಕ್ ಸವಾರಿ ಮುಖ್ಯ ವಿಚಾರವಾಗಿದ್ದು, ಬೈಕ್ ಸವಾರರು ಈ ಕೆಳಗಿನ ಅಗತ್ಯ ಆಕ್ಸೆಸರಿಗಳನ್ನು ಹೊಂದಿದಲ್ಲಿ ನಿಮ್ಮ ಪ್ರಯಾಣ ಸುಖಕವಾಗಿರಲಿದೆ ಎನ್ನುವುದು ನಮ್ಮ ಭಾವನೆ.

ಭಾರತದಲ್ಲಿ ದೊರೆಯುವ ಬೆಸ್ಟ್ ಬೈಕ್ ಆಕ್ಸೆಸರಿಗಳಿವು..

ಸಾಮಾನ್ಯವಾಗಿ ದ್ವಿಚಕ್ರ ವಾಹನ ಚಲಿಸುವಾಗ ಸವಾರು ಹಲವಾರು ಸಮಸ್ಯೆಗಳನ್ನು ಎದುರಿಸುವುದು ನಮಗೆಲ್ಲಾ ಗೊತ್ತಿರುವ ವಿಚಾರ. ಈ ಹಿನ್ನೆಲೆ ಡ್ರೈವ್ ಸ್ಪಾರ್ಕ್ ತಂಡವು ಮೊಟಾರ್‍‍ಸೈಕಲ್ ಚಲಾಯಿಸುವಾಗ ಅಗತ್ಯವಾಗಿ ಹೊಂದಿರಬೇಕಾದ ಆಕ್ಸೆಸರಿಗಳ ಬಗ್ಗೆ ಇಲ್ಲಿ ಚರ್ಚಿಸಲಾಗಿದೆ.

Recommended Video - Watch Now!
[Kannada] Maruti Swift 2018 - Full Specifications, Features, Price, Mileage, Colours - DriveSpark
ಭಾರತದಲ್ಲಿ ದೊರೆಯುವ ಬೆಸ್ಟ್ ಬೈಕ್ ಆಕ್ಸೆಸರಿಗಳಿವು..

ವಾಟರ್‍‍ಪ್ರೂಫ್ ಫೋನ್ ಹೋಲ್ಡರ್

ಬೈಕ್‍‍ನಲ್ಲಿ ದೂರದ ಸ್ಥಳಕ್ಕೆ ಹೋದಾಗ ಕೆಲವೊಮ್ಮೆ ದಾರಿ ತಿಳಿಯದೆ ಪದೇ ಪದೇ ರಸ್ತೆ ಮಧ್ಯೆದಲ್ಲೇ ನಿಲ್ಲಿಸಿ ನ್ಯಾವಿಗೆಷನ್ ಮ್ಯಾಪ್‍‌ನಲ್ಲಿ ದಾರಿ ಹುಡುಕ್ಕುತ್ತಾ ಹೋಗುವುದು ಬೆಂಗಳೂರಿನಂತಹ ಟ್ರಾಫಿಕ್ ಹೆಚ್ಚಿರುವ ನಗರಗಳಲ್ಲಿ ಕಷ್ಟವೇ ಸರಿ.

ಅದಕ್ಕಾಗಿಯೇ ಇಂತಹ ಸಮಸ್ಯೆಗಳಿಗೆ ಪರಿಹಾರವಾಗಿ ಈ 'ವಾಟರ್ ಪ್ರೂಫ್ ಫೋನ್ ಹೋಲ್ಡರ್' ಇದರ ಸಹಾಯದಿಂದ ನ್ಯಾವಿಗೆಷನ್ ಆನ್ ಮಾಡಿ ವಾಹನ ಚಲಿಸುವಾಗ ನೀವು ಸೇರಬೇಕಾದ ಸ್ಥಳವನ್ನು ಅತಿಕಡಿಮೆ ಸಯಯದಲ್ಲಿ ಸುರಕ್ಷಿತವಾಗಿ ಸೇರಬಹುದಾಗಿದೆ.

ಭಾರತದಲ್ಲಿ ದೊರೆಯುವ ಬೆಸ್ಟ್ ಬೈಕ್ ಆಕ್ಸೆಸರಿಗಳಿವು..

ಫೋನ್ ಚಾರ್ಜರ್

ಮಾರುಕಟ್ಟೆಯಲ್ಲಿ ಹಲವಾರು ಇನ್-ಬಿಲ್ಟ್ ಚಾರ್ಜಿಂಗ್ ಆಯ್ಕೆಯಿರುವ ದ್ವಿಚಕ್ರ ವಾಹನಗಳು ಲಭ್ಯವಿದ್ದರೂ ಇನ್ನು ಮುಂಬರುವ ದ್ವಿಚಕ್ರ ವಾಹನಗಳಿಗೆ ಈ ಆಕೆಯನ್ನು ನೀಡಬೇಕಾಗಿದೆ. ನೀವು ನ್ಯಾವಿಗೆಷನ್ ಬಳಸುವಾಗ ನಿಮ್ಮ ಫೋನಿನ ಬ್ಯಾಟರಿ ಬೇಗ ಖಾಲಿಯಾಗುವ ಸಾಧ್ಯತೆಗಳಿರುತ್ತವೆ.

ಆದ್ದರಿಂದ ಈ ಫೋನ್ ಚಾರ್ಜರ್ ನಿಮ್ಮ ವಾಹನದಲ್ಲಿ ಇರಿಸಿಕೊಳ್ಳುವುದರಿಂದ ನಿಮ್ಮ ಫೋನ್‍ ಅನ್ನು ವಾಹನ ಚಾಲನೆ ಮಾಡುತ್ತಲೇ ಚಾರ್ಜಿಂಗ್ ಮಾಡಿಕೊಳ್ಳಬಹುದಾಗಿದೆ.

ಭಾರತದಲ್ಲಿ ದೊರೆಯುವ ಬೆಸ್ಟ್ ಬೈಕ್ ಆಕ್ಸೆಸರಿಗಳಿವು..

ಬ್ಲೂಟೂತ್ ಹೆಡ್‍‍ಸೆಟ್

ನಿಮ್ಮ ಗೆಳೆಯರ ಗುಂಪಿನೊಂದಿಗೆ ಧೀರ್ಘಕಾಲದ ರೈಡಿಂಗ್ ಹೋಗುವ ಸಮಯದಲ್ಲಿ ನಿಮಗೆ ಹತ್ತಿರವಾದ ಕರೆ ಬಂದಾಗ ರೈಡಿಂಗ್ ಮಾಡುವಾಗಲೇ ಮಾತನಾಡಲು ಈ ಬ್ಲೂಟೂತ್ ಹೆಡ್‍‍ಸೆಟ್ ಸಹಾಯಕ್ಕೆ ಬರಲಿದೆ.

ಭಾರತದಲ್ಲಿ ದೊರೆಯುವ ಬೆಸ್ಟ್ ಬೈಕ್ ಆಕ್ಸೆಸರಿಗಳಿವು..

ಹೆಲ್ಮೆಟ್ ಲ್ಯಾಂಪ್ಸ್

ಕೆಲವೊಮ್ಮೆ, ಮೋಟಾರ್ ಸೈಕಲ್ ಹೆಡ್‌ಲ್ಯಾಂಪ್ ದೀಪಗಳು ಒಡೆದು ಹೋಗಬಹುದು. ಅಥವಾ ಮಣ್ಣಿನಲ್ಲಿ ಸವಾರಿ ಮಾಡಿದ ನಂತರ ಕೊಳಕು ಆಗುವುದರ ಮೂಲಕ ಅಗೋಚರವಾಗಿ ಅಥವಾ ಕಡಿಮೆ ಗೋಚರವಾಗುತ್ತವೆ.

ಹೀಗಾಗಿ ಹೆಲ್ಮೆಟ್ ಲ್ಯಾಂಪ್‍‍ಗಳನ್ನು ಖರೀದಿಸುವುದೆ ಇದಕ್ಕೆ ಪರಿಹಾರವಾಗಿದ್ದು, ಇದು ಸುರಕ್ಷಿತವಾಗಿ ಹೆಲ್ಮೆಟ್ ಹಿಂಭಾಗದಲ್ಲಿ ಹಿಡಿಸುತ್ತದೆ ಮತ್ತು ಬ್ಯಾಟರಿ ಮೂಲಕ ಕಾರ್ಯನಿರ್ವಹಿಸುತ್ತದೆ. ಇದು ನೈಟ್ ಮೋಡ್‌ನಲ್ಲಿ ನಿಮ್ಮ ಸಹಾಯಕ್ಕೆ ಬರಲಿದೆ.

ಭಾರತದಲ್ಲಿ ದೊರೆಯುವ ಬೆಸ್ಟ್ ಬೈಕ್ ಆಕ್ಸೆಸರಿಗಳಿವು..

ಆಕ್ಷನ್ ಕ್ಯಾಮೆರಾ

ಹಿಂದಿನ ದಿನಗಳಲಿ ನಿಮ್ಮ ರೈಡಿಂಗ್ ಶೈಲಿಯನ್ನು ಸೆರೆಹಿಡಿಯಲು ಮೊಬೈಲ್ ಅನ್ನು ಹೆಲ್ಮೆಟ್ ಅಥವಾ ಬೈಕ್‍‍ಗೆ ಅಂಟಿಸಿಕೊಂಡು ಸೆರೆಹಿಡಿಯಬೇಕಾಗಿತ್ತು. ಆದರೆ ಈಗ ಅಂತಹ ಸಾಹಸಗಳಿಗೆ ಬ್ರೇಕ್ ಹಾಕಲು ಮಾರುಕಟ್ಟೆಯಲ್ಲಿ ಹಲವಾರು ಆಕ್ಷನ್ ಕ್ಯಾಮೆರಾಗಳು ಲಭ್ಯವಿದ್ದು, ಇದನ್ನು ಖರೀದಿಸಿದ ನಂತರ ನಿಮ್ಮ ರೈಡಿಂಗ್‌ನ ಪ್ರತಿಕ್ಷಣವನ್ನು ಸೆರೆಹಿಡಿಯಬಹುದಾಗಿದೆ.

ಭಾರತದಲ್ಲಿ ದೊರೆಯುವ ಬೆಸ್ಟ್ ಬೈಕ್ ಆಕ್ಸೆಸರಿಗಳಿವು..

ಹೆಲ್ಮೆಟ್ ಕೂಲರ್

ಬೇಸಿಗೆಯ ಸಮಯದಲ್ಲಿ ಮುಖಭಾಗ ಪೂರ್ಣ ಕವರ್ ಆಗುವಂತಹ ಹೆಲ್ಮೆಟ್‍‍ಗಳನ್ನು ಧರಿಸಿದಾಗ ಬೆಸರು ಸಹಜವಾಗಿರುತ್ತದೆ. ಇದರಿಂದ ಮುಕ್ತಿಪಡೆಯಲು ಮಾರುಕಟ್ಟೆಯಲ್ಲಿ ಹೊಸ ರೀತಿಯಾದ ಉತ್ಪನ್ನಗಳು ಲಭ್ಯವಿದ್ದು, ಹೆಲ್ಮೆಟ್ ಕೂಲರ್ ಇದಕ್ಕೆ ಪರಿಹಾರವಾಗಲಿದೆ. ಹೆಲ್ಮೆಟ್ ಕೂಲ್ ಮಾಡಲು ಬ್ಯಾಟರಿ ಹಾಗೂ ಸಣ್ಣದಾದ ವಾಟರ್ ಕಂಟೈನರ್ ಅನ್ನು ಇರಿಸಲಾಗಿದೆ.

ಭಾರತದಲ್ಲಿ ದೊರೆಯುವ ಬೆಸ್ಟ್ ಬೈಕ್ ಆಕ್ಸೆಸರಿಗಳಿವು..

ಕೂಲ್ಡ್ ವೆಸ್ಟ್

ಬೇಸಿಗೆಯ ಸಮಯ ಬಂದಾಯ್ತು, ಇಂತಹ ಸಮಯದಲ್ಲಿ ಹೈವೇ ರೈಡಿಂಗ್ ಮಾಡುವಾಗ ನಿಮ್ಮ ದೇಹದ ವಾತವರಣವನ್ನು ಕಂಟ್ರೋಲ್ ಮಾಡಲು ಈ ಕೂಲ್ಡ್ ವೆಸ್ಟ್ ಉಪಕಾರಿಯಾಗಿದೆ. ಇದನ್ನು ನೀವು ನಿಮ್ಮ ರೈಡಿಂಗ್ ಜಾಕೆಟ್ ಒಳಗೆಯೇ ಧರಿಸಬಹುದಾಗಿದ್ದು, ವಾತವರಣಕ್ಕೆ ತಕ್ಕ ಹಾಗೆ ನಿಮ್ಮ ದೇಹವನ್ನು ರಕ್ಷಿಸುತ್ತದೆ.

ಭಾರತದಲ್ಲಿ ದೊರೆಯುವ ಬೆಸ್ಟ್ ಬೈಕ್ ಆಕ್ಸೆಸರಿಗಳಿವು..

ಫಿಂಗರ್ ಪ್ರಿಂಟ್ ಸ್ಟಾರ್ಟರ್

ದಿನದಿಂದ ದಿನಕ್ಕೆ ತಂತ್ರಜ್ಞಾನವು ಬೆಳೆಯುತ್ತಿದ್ದು, ಮೊಬೈಲ್‍‍ನಂತೆಯೇ ನಿಮ್ಮ ಬೈ‍ಕ್ ಅನ್ನು ಕೂಡ ಫಿಂಗರ್ ಪ್ರಿಂಟ್ ಮೂಲಕವೇ ಸ್ಟಾರ್ಟ್ ಮಾಡಬಹುದು. ಇದಕ್ಕಾಗಿ ಮಾರುಕಟ್ಟೆಯಲ್ಲಿ ಹೊಸದಾದ ಫಿಂಗರ್ ಪ್ರಿಂಟ್ ಸ್ಟಾರ್ಟರ್ ದೊರೆಯುತ್ತಿದ್ದು, ಇದರ ಬೆಲೆಯು 2,999ರೂ ಗೆ ಲಭ್ಯವಿರಲಿದೆ ಎನ್ನಲಾಗಿದೆ.

ಭಾರತದಲ್ಲಿ ದೊರೆಯುವ ಬೆಸ್ಟ್ ಬೈಕ್ ಆಕ್ಸೆಸರಿಗಳಿವು..

ಬಾರ್ ಆ್ಯಂಡ್ ಡಿಆರ್‍ಎಲ್

ಬಾರ್ ಆ್ಯಂಡ್ ಡಿಆರ್‍ಎಲ್‍‍ಗಳು ನಿಮ್ಮ ಬೈಕಿಗೆ ಹೊಸ ಲುಕ್ ನೀಡುವುದಲ್ಲದೆ ಮತ್ತು ಅವು ಮೋಟಾರ್ ಸೈಕಲ್‍‍ನ ಗೋಚರತೆಯನ್ನು ಕೂಡ ಸುಧಾರಿಸುತ್ತವೆ. ಬಾರ್-ಎಂಡ್ ಡಿಆರ್‍ಎಲ್‍‍ಗಳು ಆನ್‍‍ಲೈನ್ ನಲ್ಲಿ ಲಭ್ಯವಿದ್ದು, ಜೊತೆಗೆ ಟರ್ನ್ ಇಂಡಿಕೇಟರ್‍‍ಗಳನ್ನು ತೊಡಗಿಸಿಕೊಂಡಾಗ ಫ್ಲ್ಯಾಷ್ ಮಾಡಲು ಅಳವಡಿಸಬಹುದಾಗಿದೆ.

ಭಾರತದಲ್ಲಿ ದೊರೆಯುವ ಬೆಸ್ಟ್ ಬೈಕ್ ಆಕ್ಸೆಸರಿಗಳಿವು..

ಹೀಟೆಡ್ ಹ್ಯಾಂಡಲ್ ಗ್ರಿಪ್ಸ್

ಹಿಮಾಲಯ ಮತ್ತು ಇತರ ತಂಪಾದ ಸ್ಥಳಗಳಲ್ಲಿ ರೈಡಿಂಗ್ ಮಾಡುವ ದೂರದ ಪ್ರಯಾಣಿಕರು ಸಾಮಾನ್ಯವಾಗಿ ಕೈಗಳು ತಂಪಾಗುವ ಸಮಸ್ಯೆಗಳಿಂದ ಬಳಲುತ್ತಿರುತ್ತಾರೆ. ಇದಕ್ಕೆ ಪರಿಹಾರವೆಂದರೆ ಅಸ್ತಿತ್ವದಲ್ಲಿರುವ ಕೈ ಹಿಡಿತದ ಮೇಲಿರುವ ಬಿಸಿಮಾಡಿದ ಹ್ಯಾಂಡ್ ಗ್ರಿಪ್. ಇದು ಬ್ಯಾಟರಿಯಿಂದ ಚಾಲಿತವಾಗಲಿದೆ ಮತ್ತು ರೈಡರ್ ಅನ್ನು ಆರಾಮದಾಯಕವಾಗುವಂತೆ ವಿಭಿನ್ನ ಮಟ್ಟದ ಹೀಟ್ ಸೆಟ್ಟಿಂಗ್‌ಗಳನ್ನು ಪಡೆಯುತ್ತದೆ.

Source : cartoq

Read more on auto tips
English summary
Coolest and most useful motorcycle accessories that you can get in India.
Story first published: Friday, March 9, 2018, 16:57 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark