ಹ್ಯುಂಡೈ ಕ್ರೆಟಾ ಫೇಸ್‍ಲಿಫ್ಟ್ ಕಾರಿನ ವೇರಿಯಂಟ್‍‍ಗಳ ಬಗ್ಗೆ ಮಾಹಿತಿ ಬಹಿರಂಗ..

ದೇಶಿಯ ಮಾರುಕಟ್ಟೆಯಲ್ಲಿ ತನ್ನ ವಾಹನಗಳಿಂದ ಜನಪ್ರಿಯತೆಯನ್ನು ಪಡೆದ ಹ್ಯುಂಡೈ ಸಂಸ್ಥೆಯು ತಮ್ಮ ಕ್ರೆಟಾ ಫೆಸ್‍‍ಲಿಫ್ಟ್ ಕಾರನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಲಿದೆ.

By Rahul Ts

ದೇಶಿಯ ಮಾರುಕಟ್ಟೆಯಲ್ಲಿ ತನ್ನ ವಾಹನಗಳಿಂದ ಜನಪ್ರಿಯತೆಯನ್ನು ಪಡೆದ ಹ್ಯುಂಡೈ ಸಂಸ್ಥೆಯು ತಮ್ಮ ಕ್ರೆಟಾ ಫೆಸ್‍‍ಲಿಫ್ಟ್ ಕಾರನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಲಿದ್ದು, ಇದೀಗ ಈ ಕಾರಿನ ವೇರಿಂಟ್‍ಗಳು ಮತ್ತು ವೈಶಿಷ್ಟ್ಯತೆಗಳ ಬಗ್ಗೆ ಮಾಹಿತಿ ಬಹಿರಂಗಗೊಂಡಿದೆ.

ಹ್ಯುಂಡೈ ಕ್ರೆಟಾ ಫೇಸ್‍ಲಿಫ್ಟ್ ಕಾರಿನ ವೇರಿಯಂಟ್‍‍ಗಳ ಬಗ್ಗೆ ಮಾಹಿತಿ ಬಹಿರಂಗ..

ಮಾಹಿತಿಗಳ ಪ್ರಕಾರ ಹ್ಯುಂಡೈ ಕ್ರೆಟಾ ಫೇಸ್‍‍ಲಿಫ್ಟ್ ಕಾರುಗಳು ಇ, ಇ+, ಎಸ್, ಎಸ್ಎಕ್ಸ್, ಎಸ್ಎಕ್ಸ್ ಡ್ಯುಯಲ್ ಟೋನ್ ಮತ್ತು ಎಸ್ಎಕ್ಸ್ (ಓ) ಎಂಬ ಆರು ವೇರಿಯಂಟ್‍‍ಗಳಲ್ಲಿ ಮಾರುಕಟ್ಟೆಗೆ ಲಗ್ಗೆಯಿಡಲಿವೆ ಎನ್ನಲಾಗಿದೆ.

ಹ್ಯುಂಡೈ ಕ್ರೆಟಾ ಫೇಸ್‍ಲಿಫ್ಟ್ ಕಾರಿನ ವೇರಿಯಂಟ್‍‍ಗಳ ಬಗ್ಗೆ ಮಾಹಿತಿ ಬಹಿರಂಗ..

ಹ್ಯುಂಡೈ ಕ್ರೆಟಾ ಫೇಸ್‍‍ಲಿಫ್ಟ್ ಕಾರಿನ ಮುಂಭಾಗದಲ್ಲಿ ಕೇಸ್‍‍ಕೇಡಿಂಗ್ ಗ್ರಿಲ್, ಸ್ಕಿಡ್ ಪ್ಲೇಟ್ಸ್, ಡ್ಯುಯಲ್ ಟೋನ್ ಬಂಪರ್ ಮತ್ತು ಸ್ಪ್ಲಿಟ್ ಟೈಲ್ ಲೈಟ್ ಕ್ಲಸ್ಟರ್ ಅನ್ನು ಅಳವಡಿಸಲಾಗಿದ್ದು, ಜೊತೆಗೆ ಪ್ರೊಜೆಕ್ಟರ್ ಹೆಡ್‍‍ಲ್ಯಾಂಪ್ಸ್, ಎಲ್ಇಡಿ ಡಿಆರ್‍ಎಲ್ ಮತ್ತು 17 ಇಂಚಿನ ಅಲಾಯ್ ಚಕ್ರಗಳನ್ನು ಪಡೆದುಕೊಂಡಿರಲಿದೆ.

ಹ್ಯುಂಡೈ ಕ್ರೆಟಾ ಫೇಸ್‍ಲಿಫ್ಟ್ ಕಾರಿನ ವೇರಿಯಂಟ್‍‍ಗಳ ಬಗ್ಗೆ ಮಾಹಿತಿ ಬಹಿರಂಗ..

ಕ್ರೆಟಾ ಫೇಸ್‍‍ಲಿಫ್ಟ್ ಕಾರುಗಳು ಸ್ಮಾರ್ಟ್ ಕೀ ಬ್ಯಾಂಡ್, 6 ಬಿದಗಳಲ್ಲಿ ಅಡ್ಜಸ್ಟ್ ಮಾಡಬಹುದಾದ ಡ್ರವರ್ ಸೀಟ್ಸ್, ಎಲೆಕ್ಟ್ರಾನಿಕ್ ಸನ್‍‍ರೂಫ್, ವೈರ್‍‍ಲೆಸ್ ಚಾರ್ಜಿಂಗ್ ಮತ್ತು ಕ್ರೂಸ್ ಕಂಟ್ರೋಲ್‍‍ನಂತಹ ವೈಶಿಷ್ಟ್ಯತೆಗಳನ್ನು ಪಡೆದುಕೊಂಡಿದ್ದು, ಎಲೆಕ್ಟ್ರಿಕ್ ಸನ್ ರೂಫ್ ವೈಶಿಷ್ಟ್ಯತೆಯು ಕ್ರೆಟಾ ಫೇಸ್‍‍ಲಿಫ್ಟ್ ಕಾರಿನ ಎಸ್ಎಕ್ಸ್ ಆಟೊಮ್ಯಾಟಿಕ್ ಟ್ರಿಮ್ ವೇರಿಯಂಟ್‍‍ನಲ್ಲಿ ದೊರೆಯುತ್ತವೆ.

ಹ್ಯುಂಡೈ ಕ್ರೆಟಾ ಫೇಸ್‍ಲಿಫ್ಟ್ ಕಾರಿನ ವೇರಿಯಂಟ್‍‍ಗಳ ಬಗ್ಗೆ ಮಾಹಿತಿ ಬಹಿರಂಗ..

ಇನ್ನು ಹ್ಯುಂಡೈ ಕ್ರೆಟಾ ಫೇಸ್‍‍ಲಿಫ್ಟ್ ಕಾರುಗಳು ಪ್ಯಾಶನ್ ಆರೆಂಜ್ ಮತ್ತು ಮೆರಿನಾ ಬ್ಲೂ ಎಂಬ ಎರಡು ಹೊಸ ಬಣ್ಣಗಳಲ್ಲಿ ಬರಲಿದ್ದು, ಪ್ಯಾಶನ್ ಆರೆಂಜ್ ಬಣ್ಣವು ಡ್ಯುಯಲ್ ಟೋನ್ ಆಯ್ಕೆಯೊಂದಿಗೆ ಬ್ಲಾಕ್ ರೂಫ್‍‍ನೊಂದಿಗೆ ಬರಲಿದೆ. ಇದಲ್ಲದೆ ಎರಡನೆಯದಾಗಿ ಪೋಲಾರ್ ವೈಟ್ ಬಣ್ಣದೊಂದಿಗೆ ಪ್ಯಾಂಥಮ್ ಬ್ಲಾಕ್ ರೂಫ್ ಎಂಬ ಮತ್ತೊಂದು ಡ್ಯುಯಲ್ ಟೋನ್ ಆಯ್ಕೆಯೊಂದಿಗೆ ಬರಲಿದೆ.

ಹ್ಯುಂಡೈ ಕ್ರೆಟಾ ಫೇಸ್‍ಲಿಫ್ಟ್ ಕಾರಿನ ವೇರಿಯಂಟ್‍‍ಗಳ ಬಗ್ಗೆ ಮಾಹಿತಿ ಬಹಿರಂಗ..

ಪ್ರಯಾಣಿಕರ ಸುರಕ್ಷತೆಗಾಗಿ ಹ್ಯುಂಡೈ ಕ್ರೆಟಾ ಫೇಸ್‍‍ಲಿಫ್ಟ್ ಕಾರುಗಳಲ್ಲಿ ಡ್ಯುಯಲ್ ಏರ್‍‍ಬ್ಯಾಗ್ಸ್ ಮತ್ತು ಎಬಿಎಸ್ ಅನ್ನು ಕಾರಿನ ಎಲ್ಲಾ ವೇರಿಯಂಟ್‍‍ಗಳಲ್ಲಿ ನೀಡಲಾಗುತಿದ್ದು, ಕಾರಿನ ಟಾಪ್ ಸ್ಪೆಕ್ ಮಾಡಲ್‍‍ಗಳು ಆರ್ ಏರ್‍‍ಬ್ಯಾಗ್ಸ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಹಿಲ್ ಅಸ್ಸಿಸ್ಟ್, ರಿಯರ್ ಪಾರ್ಕಿಂಗ್ ಸೆನ್ಸಾರ್ಸ್ ಮತ್ತು ಕ್ಯಾಮೆರಾ ಹಾಗೆಯೆ ಐಎಸ್ಒಫಿಕ್ಸ್ ವೈಲ್ಡ್ ಸೀಟ್ ಮೌಂಟ್‍ ಅನ್ನು ಅಳವಡಿಸಲಾಗಿದೆ.

ಹ್ಯುಂಡೈ ಕ್ರೆಟಾ ಫೇಸ್‍ಲಿಫ್ಟ್ ಕಾರಿನ ವೇರಿಯಂಟ್‍‍ಗಳ ಬಗ್ಗೆ ಮಾಹಿತಿ ಬಹಿರಂಗ..

ಎಂಜಿನ್ ವೈಶಿಷ್ಟ್ಯತೆ

ಹ್ಯುಂಡೈ ಕ್ರೆಟಾ ಫೇಸ್‍‍ಲಿಫ್ಟ್ ಕಾರುಗಳು 1.4 ಲೀಟರ್ ಡೀಸೆಲ್, 1.6 ಲೀಟರ್ ಡೀಸೆಲ್ ಮತ್ತು 1.6 ಲೀಟರ್ ಪೆಟ್ರೋಲ್ ಎಂಜಿನ್ ಮಾದರಿಗಳಲ್ಲಿ ಬರಲಿದ್ದು, 1.6 ಲೀಟರ್ ಎಂಜಿನ್‍‍ಗಳು 6 ಸ್ಪೀಡ್ ಮ್ಯಾನುವಲ್ ಅಥವ 6 ಸ್ಪೀಡ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ನೊಂದಿಗೆ ಮತ್ತು 1.4 ಲೀಟರ್ ಎಂಜಿನ್‍‍ಗಳನ್ನು 5 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಹ್ಯುಂಡೈ ಕ್ರೆಟಾ ಫೇಸ್‍ಲಿಫ್ಟ್ ಕಾರಿನ ವೇರಿಯಂಟ್‍‍ಗಳ ಬಗ್ಗೆ ಮಾಹಿತಿ ಬಹಿರಂಗ..

ಹೊಸ ಕ್ರೆಟಾ ಫೇಸ್‍‍ಲಿಫ್ಟ್ ಕಾರುಗಳು ಪ್ರಸ್ಥುತ ತಲೆಮಾರಿನ ಕ್ರೆಟಾ ಕಾರುಗಳಿಗಿಂತ ವಿಭಿನ್ನವಾದ ವೈಶಿಷ್ಟ್ಯತೆಗಳನ್ನು ಹೊತ್ತು ಮಾರುಕಟ್ಟೆಗೆ ಲಗ್ಗೆಯಿಡಲಿದ್ದು, ಜೊತೆಗೆ ಸಂಸ್ಥೆಯು ಕಾರಿನ ಒಳಭಾಗದಲ್ಲಿಯೂ ಕೂಡ ಗುರುತರ ಬದಲಾವಣೆಗಳನ್ನು ಮಾಡಿವೆ.

ಹ್ಯುಂಡೈ ಕ್ರೆಟಾ ಫೇಸ್‍ಲಿಫ್ಟ್ ಕಾರಿನ ವೇರಿಯಂಟ್‍‍ಗಳ ಬಗ್ಗೆ ಮಾಹಿತಿ ಬಹಿರಂಗ..

ಇನ್ನು ಹ್ಯುಂಡೈ ಕ್ರೆಟಾ ಫೇಸ್‍‍ಲಿಫ್ಟ್ ಕಾರಿನ ಬಿಡುಗಡೆಯ ಸರಿಯಾದ ದಿನಾಂಕದ ಬಗ್ಗೆ ಮಾಹಿತಿ ದೊರೆತಿಲ್ಲವಾದರು, ಇದೇ ತಿಂಗಳಿನ ಕೊನೆಯಲ್ಲಿ ಬಿಡುಗಡೆಗೊಳ್ಳಬಹುದೆಂಬ ನಿರೀಕ್ಷೇಯಿದೆ. ಅಲ್ಲದೆ ಕಾರಿನ ಬೆಲೆಯ ಬಗೆಯು ಮಾಹಿತಿ ದೊರೆತಿಲ್ಲವಾದರು ಪ್ರಸ್ಥುತ ತಲೆಮಾರಿಗಿಂತ ಹೆಚ್ಚಿನ ಬೆಲೆಯಲ್ಲಿಯೆ ಬರಲಿದೆ ಎನ್ನಲಾಗಿದೆ.

ಹ್ಯುಂಡೈ ಕ್ರೆಟಾ ಫೇಸ್‍ಲಿಫ್ಟ್ ಕಾರಿನ ವೇರಿಯಂಟ್‍‍ಗಳ ಬಗ್ಗೆ ಮಾಹಿತಿ ಬಹಿರಂಗ..

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

ವಿಡಿಯೋ- ಟೊಯೊಟಾ ಇನೋವಾ ಗುದ್ದಿದ ರಭಸಕ್ಕೆ 30 ಅಡಿ ದೂರ ಹೋಗಿ ಬಿದ್ದ ಯುವಕ...

4 ಲಕ್ಷದೊಳಗೆ ಖರೀದಿಸಬಹುದಾದ ಉತ್ತಮ ಪೆಟ್ರೋಲ್ ಕಾರುಗಳಿವು..

ಇಲ್ಲಿ ಕೇವಲ 30 ಸೇಕೆಂಡುಗಳಲ್ಲಿ ಡ್ರೈವಿಂಗ್ ಲೈಸೆನ್ಸ್ ಸಿಗುತ್ತೆ..!!

ಹೈವೇಯಲ್ಲಿ ಡ್ರೈವಿಂಗ್ ಮಾಡಲು 11 ಬಹುಮೂಲ್ಯ ಟಿಪ್ಸ್

ಪ್ರತಿ ಚಾರ್ಜ್‌ಗೆ 300 ಕಿ.ಮೀ ಮೈಲೇಜ್ ನೀಡುವ ಟಾಟಾ ಇ ವರ್ಷನ್ ಸೆಡಾನ್

Most Read Articles

Kannada
Read more on hyundai suv new launches
English summary
Hyundai Creta 2018 Facelift Variants And Features Leaked Ahead Of Launch.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X