ಜೀಪ್ ಕಂಪಾಸ್ ಗ್ರೀಲ್ ಹೊಂದಿರೋ ಹ್ಯುಂಡೈ ಕ್ರೇಟಾ ಮಾಡಿಫೈ ಕಾರು

By Praveen Sannamani

ಮಧ್ಯಮ ಗಾತ್ರದ ಎಸ್‌ಯುವಿ ಕಾರುಗಳಲ್ಲೇ ಬಹುತೇಕ ಕಾರು ಪ್ರಿಯರು ಸ್ಪೋರ್ಟಿ ವರ್ಷನ್ ಮಾದರಿಗಳನ್ನು ಆಯ್ಕೆ ಮಾಡಲು ಮುಂದಾಗುತ್ತಾರೆ. ಆದ್ರೆ ಕೆಲವು ಗ್ರಾಹಕರು ಬೆಲೆ ವಿಚಾರವಾಗಿ ಸ್ಪೋರ್ಟಿ ವರ್ಷನ್‌ಗಳ ಬದಲಾಗಿ ಸಾಮಾನ್ಯ ಮಾದರಿಗಳನ್ನು ಆಯ್ಕೆ ಮಾಡಿಕೊಂಡು ಸುಮ್ಮನಾಗಿ ಬಿಡುತ್ತಾರೆ. ಆದ್ರೆ ಮಾಡಿಫೈ ತಂತ್ರಜ್ಞಾನ ಮಾತ್ರ ಕಡಿಮೆ ಬೆಲೆಗಳಲ್ಲೇ ಹೈ ಎಂಡ್ ಕಾರುಗಳ ವಿನ್ಯಾಸವನ್ನೇ ಪಡೆಯಲು ಸಹಕಾರಿಯಾಗಿದೆ ಎನ್ನಬಹುದು.

ಜೀಪ್ ಕಂಪಾಸ್ ಗ್ರೀಲ್ ಹೊಂದಿರೋ ಹ್ಯುಂಡೈ ಕ್ರೇಟಾ ಮಾಡಿಫೈ ಕಾರು

ಇದೇ ಕಾರಣಕ್ಕೆ ದೆಹಲಿ ಮೂಲದ ಸಿಪ್ಲ್ ಆಟೋಮೋಟಿವ್ ಎನ್ನುವ ಮಾಡಿಫೈ ಸಂಸ್ಥೆಯೊಂದು ಕ್ರೇಟಾ ಕಾರುಗಳಿಗೆ ಜೀಪ್ ಗ್ರಿಲ್‌ಗಳನ್ನು ಅಳವಡಿಕೆ ಮಾಡುವ ಮೂಲಕ ಸ್ಪೋರ್ಟಿ ಕಾರು ಪ್ರಿಯರನ್ನು ಸೆಳೆಯುತ್ತಿದ್ದು, ಕಡಿಮೆ ಬೆಲೆಗಳಲ್ಲಿ ಈ ವಿನೂತನ ವಿನ್ಯಾಸದ ಗ್ರೀಲ್‌ ಸ್ಲಾಟ್‌ಗಳನ್ನು ಅಳವಡಿಕೆ ಮಾಡಿರುವುದು ಕಾರಿಗೆ ಹೊಸ ಖದರ್ ನೀಡಿವೆ ಎನ್ನಬಹುದು.

ಜೀಪ್ ಕಂಪಾಸ್ ಗ್ರೀಲ್ ಹೊಂದಿರೋ ಹ್ಯುಂಡೈ ಕ್ರೇಟಾ ಮಾಡಿಫೈ ಕಾರು

ನಾವು ಸಾಮಾನ್ಯವಾಗಿ ಜೀಪ್ ಕಂಪಾಸ್ ಕಾರುಗಳನ್ನು ಖರೀದಿ ಮಾಡುವುದಾದರೇ ಕನಿಷ್ಠ ಅಂದ್ರು 18 ಲಕ್ಷದಿಂದ 22 ಲಕ್ಷ ಬೆಲೆಯಿದ್ದು, ಇವುಗಳನ್ನು ಖರೀದಿ ಮಾಡುವುದು ಎಲ್ಲಾ ಎಸ್‌ಯುವಿ ಪ್ರಿಯರಿಗೂ ಸಾಧ್ಯವಾಗದು. ಅದಕ್ಕಾಗಿಯೇ ಕಡಿಮೆ ಬೆಲೆಗಳಲ್ಲಿ ಸಿಗಬಹುದಾದ ಮತ್ತೊಂದು ಎಸ್‌ಯುವಿ ಕ್ರೇಟಾ ಕಾರುಗಳನ್ನೇ ಬಳಕೆ ಮಾಡಿಕೊಂಡು ಜೀಪ್ ಕಂಪಾಸ್ ವಿನ್ಯಾಸವನ್ನೇ ನೀಡಲಾಗುತ್ತಿದೆ.

ಜೀಪ್ ಕಂಪಾಸ್ ಗ್ರೀಲ್ ಹೊಂದಿರೋ ಹ್ಯುಂಡೈ ಕ್ರೇಟಾ ಮಾಡಿಫೈ ಕಾರು

ಒಂದು ವೇಳೆ ನಿಮ್ಮ ಬಳಿಯು ಕ್ರೇಟಾ ಕಾರುಗಳಿದ್ದು, ಅದಕ್ಕೆ ಜೀಪ್ ಗ್ರೀಲ್ ಸ್ಪೋರ್ಟಿ ಲುಕ್ ಜೋಡಿಸುವ ಯೋಜನೆ ಇದ್ದಲ್ಲಿ ಸಿಪ್ಲ್ ಆಟೋಮೋಟಿವ್ ಸಂಪರ್ಕಿಸಬಹುದು. ಜೀಪ್ ಗ್ರೀಲ್‌ಗಳು ಕಾರಿನ ವಿನ್ಯಾಸಕ್ಕೆ ಮೆರಗು ತರಲಿದ್ದು, ಇದಕ್ಕಾಗಿ ಒಂದಿಷ್ಟು ಹಣ ಹಾಕಲೇಬೇಕಾಗುತ್ತೆ.

ಜೀಪ್ ಕಂಪಾಸ್ ಗ್ರೀಲ್ ಹೊಂದಿರೋ ಹ್ಯುಂಡೈ ಕ್ರೇಟಾ ಮಾಡಿಫೈ ಕಾರು

ಸಿಪ್ಲ್ ಆಟೋಮೋಟಿವ್ ಸಂಸ್ಥೆಯು ಸಿದ್ದಪಡಿಸಿರುವ ಕ್ರೇಟಾ ಮಾಡಿಫೈ ಕಾರುಗಳು ಗ್ರೀಲ್ ವಿನ್ಯಾಸವನ್ನು ಹೊರತು ಪಡಿಸಿ ಉಳಿದ ತಾಂತ್ರಿಕ ಅಂಶಗಳಲ್ಲಿ ಯಾವುದೇ ಮಾಡಿಲ್ಲ. ಹೀಗಾಗಿ ಸ್ಪೋರ್ಟಿ ಲುಕ್ ಹೊಂದಿರುವ ಕಾರು ನೋಡಲು ಜೀಪ್ ಕಂಪಾಸ್ ಹೋಲಿಕೆ ಇದ್ದರೂ ಎಂಜಿನ್ ಮಾದರಿ ಮಾತ್ರ ಕ್ರೇಟಾ ಕಾರಿನದ್ದೆ ಆಗಿರುತ್ತೆ.

ಜೀಪ್ ಕಂಪಾಸ್ ಗ್ರೀಲ್ ಹೊಂದಿರೋ ಹ್ಯುಂಡೈ ಕ್ರೇಟಾ ಮಾಡಿಫೈ ಕಾರು

ಎಂಜಿನ್ ಸಾಮರ್ಥ್ಯ

1.4-ಲೀಟರ್ ಡೀಸೆಲ್, 1.6-ಲೀಟರ್ ಪೆಟ್ರೋಲ್ ಮತ್ತು 1.6-ಡೀಸೆಲ್ ಎಂಜಿನ್‌ಗಳನ್ನು ಹೊಂದಿದ್ದು, ಇದರಲ್ಲಿ 1.4-ಲೀಟರ್ ಪೆಟ್ರೋಲ್ ಎಂಜಿನ್‌ಗಳು 88.7-ಬಿಎಚ್‌ಪಿ, 1.6-ಲೀಟರ್ ಪೆಟ್ರೋಲ್ ಎಂಜಿನ್‌ಗಳು 121-ಬಿಎಚ್‌ಪಿ ಮತ್ತು 1.6-ಲೀಟರ್ 126-ಬಿಎಚ್‌ಪಿ ಉತ್ಪಾದನಾ ಗುಣ ಪಡೆದಿವೆ.

ಜೀಪ್ ಕಂಪಾಸ್ ಗ್ರೀಲ್ ಹೊಂದಿರೋ ಹ್ಯುಂಡೈ ಕ್ರೇಟಾ ಮಾಡಿಫೈ ಕಾರು

ಇನ್ನು ಹೊಸ ಕಾರುಗಳಲ್ಲಿ ವಿನ್ಯಾಸ ಮಾಡಲಾಗಿರುವ ಕಾಸ್ ಕ್ಲ್ಯಾಡಿಂಗ್ ಫ್ರಂಟ್ ಗ್ರಿಲ್, ನ್ಯೂ ಫ್ರಂಟ್ ಬಂಪರ್, ಹೊಸ ವಿನ್ಯಾಸ ಫಾಗ್ ಲ್ಯಾಂಪ್, ಸಿಲ್ವರ್ ಸ್ಕೀಡ್ ಪ್ಲೇಟ್, ಡ್ಯುಯಲ್ ಟೋನ್ ಇಂಟಿರಿಯರ್ ಸೌಲಭ್ಯ ಪಡೆದಿದೆ.

ಜೀಪ್ ಕಂಪಾಸ್ ಗ್ರೀಲ್ ಹೊಂದಿರೋ ಹ್ಯುಂಡೈ ಕ್ರೇಟಾ ಮಾಡಿಫೈ ಕಾರು

ಹೊಸ ಕಾರುಗಳಲ್ಲಿನ ರಿಯಲ್ ಬಂಪರ್ ಕೂಡಾ ಆಕರ್ಷಣೆಯಾಗಿದ್ದು, ಸುಧಾರಿತ ತಂತ್ರಜ್ಞಾನ ಪ್ರೇರಿತ 7-ಇಂಚಿನ್ ಇನ್ಪೋಟೈನ್‌ಮೆಂಟ್, ಬೆಸ್ ವೆರಿಯೆಂಟ್‌ಗಳಿಂದಲೇ ಹೊಂದಾಣಿಕೆ ಮಾಡಿಕೊಳ್ಳಬಹುದಾದ ಡ್ರೈವರ್ ಸೈಡ್ ಸೀಟುಗಳು, ಆರ್ಮ್ ರೆಸ್ಟ್ ವಿನ್ಯಾಸವು ಗಮನ ಸೆಳೆಯುತ್ತೆ.

ಜೀಪ್ ಕಂಪಾಸ್ ಗ್ರೀಲ್ ಹೊಂದಿರೋ ಹ್ಯುಂಡೈ ಕ್ರೇಟಾ ಮಾಡಿಫೈ ಕಾರು

ಇನ್ನೊಂದು ಪ್ರಮುಖ ವಿಚಾರ ಅಂದ್ರೆ ಜೀಪ್ ಕಂಪಾಸ್ ಕಾರುಗಳ ಬೆಲೆಗೂ ಕ್ರೇಟಾ ಬೆಲೆಗಳಿಗೂ ತುಂಬಾ ವ್ಯತ್ಯಾಸಗಳಿದ್ದರೂ ಜೀಪ್ ಮಾದರಿಯಲ್ಲೇ ಫ್ರಂಟ್ ವಿನ್ಯಾಸ ಹೊಂದಿರುವ ಕ್ರೇಟಾ ಕಾರುಗಳು ಮಾಡಿಫೈ‌ಗೆ ಉತ್ತಮವಾಗಿದ್ದು, ಆಸಕ್ತ ಗ್ರಾಹಕರು ಸಿಪ್ಲ್ ಆಟೋಮೋಟಿವ್(9711559929) ಸಂಸ್ಥೆಯ ಬಳಿ ಇನ್ನಷ್ಟು ತಾಂತ್ರಿಕ ವಿಚಾರಗಳ ಬಗೆಗೆ ಚರ್ಚಿಸಬಹುದು.

Most Read Articles

Kannada
Read more on car modification
English summary
Hyundai creta suv modified to look like jeep compass.
Story first published: Tuesday, June 19, 2018, 14:00 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X