ಟೊಯೊಟಾ ಕರೊಲ್ಲಾ ಕಾರುಗಳಿಗೆ ಟಾಂಗ್ ನೀಡಲಿದೆ ಹ್ಯುಂಡೈ ಎಲಾಂಟ್ರಾ ಫೇಸ್‌ಲಿಫ್ಟ್

By Praveen Sannamani

ದಕ್ಷಿಣ ಕೊರಿಯ ಜನಪ್ರಿಯ ವಾಹನ ತಯಾರಕ ಸಂಸ್ಥೆಯಾದ ಹ್ಯುಂಡೈ ತಮ್ಮ ಪ್ಯಾಸೆಂಜರ್ ಸೆಗ್ಮೆಂಟ್ ಕಾರುಗಳಿಂದ ಜಾಗತಿಕ ಮಾರುಕಟ್ಟೆಯಲ್ಲಿ ಜನಪ್ರಿಯತೆಯನ್ನು ಪಡೆದಿದ್ದು, ಸಂಸ್ಥೆಯು ಇದೀಗ ತನ್ನ ಎಲಾಂಟ್ರಾ ಸೆಡಾನ್ ಕಾರಿನ ಫೇಸ್‍‍ಲಿಫ್ಟ್ ಮಾದರಿಯನ್ನು ಬಿಡುಗಡೆಗೊಳಿಸಲು ಸಜ್ಜುಗೊಳ್ಳುತ್ತಿದೆ.

ಟೊಯೊಟಾ ಕರೊಲ್ಲಾ ಕಾರುಗಳಿಗೆ ಟಾಂಗ್ ನೀಡಲಿದೆ ಹ್ಯುಂಡೈ ಎಲಾಂಟ್ರಾ ಫೇಸ್‌ಲಿಫ್ಟ್

ಹ್ಯುಂಡೈ ಸಂಸ್ಥೆಯು ಎಲಾಂಟ್ರಾ ಫೇಸ್‌ಲಿಫ್ಟ್ ಕಾರುಗಳನ್ನು ಭಾರತ ಸೇರಿದಂತೆ ಜಗತ್ತಿನ ಪ್ರಮುಖ ರಾಷ್ಟ್ರಗಳಲ್ಲಿ ಬಿಡುಗಡೆಗೊಳಿಸುವ ಸುಳಿವು ನೀಡಿದ್ದು, ಅಮೆರಿಕದಲ್ಲಿ ಇತ್ತೀಚೆಗೆ ನಡೆದ ಸಾಂತಾ ಫೇ ಎಸ್‌ಯುವಿ ಕಾರಿನ ಕುರಿತಾದ ಮಾಧ್ಯಮ ಪ್ರತಿನಿಧಿಗಳ ಸಭೆ ವೇಳೆಯೇ ತನ್ನ ಬಹುನೀರಿಕ್ಷಿತ ಎಲಾಂಟ್ರಾ ಫೇಸ್‌ಲಿಫ್ಟ್ ಬಗ್ಗೆಯು ಮಹತ್ವದ ಮಾಹಿತಿಯನ್ನ ಹೊರಹಾಕಿದೆ.

ಟೊಯೊಟಾ ಕರೊಲ್ಲಾ ಕಾರುಗಳಿಗೆ ಟಾಂಗ್ ನೀಡಲಿದೆ ಹ್ಯುಂಡೈ ಎಲಾಂಟ್ರಾ ಫೇಸ್‌ಲಿಫ್ಟ್

ತನ್ನ ಹಳೆಯ ಮಾದರಿಯ ಕಾರುಗಳಿಂತ ಹೊಸ ಎಲಾಂಟ್ರಾ ಕಾರುಗಳು ವಿನ್ಯಾಸದಲ್ಲಿ ಗುರುತರ ಬದಲಾವಣೆಗಳನ್ನು ಪಡೆದಿದ್ದು, ಈ ಕಾರು ಜಾಗತಿಕವಾಗಿ ಮುಂದಿನ ತಿಂಗಳು ಬಿಡುಗಡೆಗೊಳ್ಳಲಿದ್ದರೇ ಭಾರತದಲ್ಲಿ 2019ರ ಮೊದಲ ತ್ರೈಮಾಸಿಕ ಅವಧಿಯಲ್ಲಿ ಬಿಡುಗಡೆಗೊಳ್ಳು ಸಾಧ್ಯತೆಗಳಿವೆ.

ಟೊಯೊಟಾ ಕರೊಲ್ಲಾ ಕಾರುಗಳಿಗೆ ಟಾಂಗ್ ನೀಡಲಿದೆ ಹ್ಯುಂಡೈ ಎಲಾಂಟ್ರಾ ಫೇಸ್‌ಲಿಫ್ಟ್

ಹೊಸ ಎಲಾಂಟ್ರಾ ಫೇಸ್‍‍ಲಿಫ್ಟ್ ಕಾರು ತನ್ನ ಹಳೆಯ ಮಾದರಿಯಂತೆ ಗಾತ್ರ ಮತ್ತು ಹೋಲಿಕೆ ಪಡೆದಿದ್ದರೂ ಕಾರಿನ ಮುಂಭಾಗದಲ್ಲಿ ಮತ್ತು ಹಿಂಭಾಗದಲ್ಲಿ ಗುರುತರ ಬದಲಾವಣೆಗಳನ್ನು ಪಡೆದಿದೆ. ಎಲಾಂಟ್ರಾ ಫೇಸ್‍‍ಲಿಫ್ಟ್ ಕಾರುಗಳು ಅಗಲವಾದ ಹೆಡ್‍‍ಲ್ಯಾಂಪ್ಸ್, ಹೊಸ ಬಂಪರ್, ಹೊಸ ಕೇಸ್‍ ಕೇಡಿಂಗ್ ಗ್ರಿಲ್ ವಿನ್ಯಾಸ ಮತ್ತು ಎಲ್ಇಡಿ ಅಂಶಗಳನ್ನು ಪಡೆದಿದೆ.

ಟೊಯೊಟಾ ಕರೊಲ್ಲಾ ಕಾರುಗಳಿಗೆ ಟಾಂಗ್ ನೀಡಲಿದೆ ಹ್ಯುಂಡೈ ಎಲಾಂಟ್ರಾ ಫೇಸ್‌ಲಿಫ್ಟ್

ಕಾರಿನ ಬಂಪರ್‍‍ಗಳು ಹೆಚ್ಚು ಆಕ್ರಮಣಕಾರಿ, ಹೆಡ್‍‍ಲ್ಯಾಂಪ್ ಮತ್ತು ಫಾಗ್ ಲ್ಯಾಂಪ್‌ಗಳ ನಡುವೆ ಹೊಸ ಕ್ರಿಸ್ ಲೈನ್ ಅನ್ನು ಅಳವಡಿಸಲಾಗಿದ್ದು, ಇದು ಫಾಗ್ ಲ್ಯಾಂಪ್ ತ್ರಿಭುಜದ ಆಕಾರದಲ್ಲಿದೆ. ಹೀಗಾಗಿ ಹೊಸ ಕಾರಿನ ಏರ್ ವೆಂಟ್ ಸಹ ಪರದೆಯ ದ್ವಾರಗಳಿಂದ ಸುತ್ತುವರಿದಿದೆ.

ಟೊಯೊಟಾ ಕರೊಲ್ಲಾ ಕಾರುಗಳಿಗೆ ಟಾಂಗ್ ನೀಡಲಿದೆ ಹ್ಯುಂಡೈ ಎಲಾಂಟ್ರಾ ಫೇಸ್‌ಲಿಫ್ಟ್

ಇನ್ನು ಎಲಾಂಟ್ರಾ ಕಾರಿನ ಹಿಂಭಾಗದ ವಿನ್ಯಾಸದಲ್ಲೂ ಗುರುತರ ಬದಲಾವಣೆಯನ್ನು ಕಾಣಬಹುದಾಗಿದ್ದು, ಕಾರಿನ ನಂಬರ್ ಪ್ಲೇಟ್‍ ಅನ್ನು ಹಿಂಭಾಗದ ಬಂಪರ್‍‍ಗೆ ಸ್ಥಳಾಂತರಗೊಳಿಸಿರುವುದು ಚಿತ್ರದಲ್ಲಿ ಕಾಣಬಹುದಾಗಿದೆ.

ಟೊಯೊಟಾ ಕರೊಲ್ಲಾ ಕಾರುಗಳಿಗೆ ಟಾಂಗ್ ನೀಡಲಿದೆ ಹ್ಯುಂಡೈ ಎಲಾಂಟ್ರಾ ಫೇಸ್‌ಲಿಫ್ಟ್

ಎಲಾಂಟ್ರಾ ಫೇಸ್‍ಲಿಫ್ಟ್ ಕಾರುಗಳಲ್ಲಿ ಟೈಲ್ ದೀಪಗಳು ತೀಕ್ಷ್ಣವಾದ ನೋಟ, ಕಡಿಮೆ ಹಿಂಭಾಗದ ಬಂಪರ್‍‍ನ ಉದ್ದಕ್ಕೂ ಚಲಿಸುವ ದಪ್ಪದಾದ ಕ್ರೋಮ್ ಬ್ಯಾಂಡ್ ಅನ್ನು ನೀಡುತ್ತದೆ. ಇದರಿಂದ ಹಿಂಭಾಗದಲ್ಲಿ ಪ್ರಮುಖ ಪ್ರತಿಫಲಕಗಳು, ರಿವರ್ಸ್ ದೀಪಗಳು ಮತ್ತು ಹಿಂಭಾಗದ ಫಾಗ್ ಲ್ಯಾಂಪ್ ಅನ್ನು ಸಹ ಕಾಣಬಹುದಾಗಿದೆ.

ಟೊಯೊಟಾ ಕರೊಲ್ಲಾ ಕಾರುಗಳಿಗೆ ಟಾಂಗ್ ನೀಡಲಿದೆ ಹ್ಯುಂಡೈ ಎಲಾಂಟ್ರಾ ಫೇಸ್‌ಲಿಫ್ಟ್

ಅಂತೆಯೇ ಕಾರಿನ ಒಳಭಾಗದಲ್ಲಿಯೂ ಸಹ ಬದಲಾವಣೆಗಳನ್ನು ಮಾಡಲಾಗಿದ್ದು, ವಿನೂತನವಾದ ವೈಶಿಷ್ಟ್ಯತೆಗಳನ್ನು ಅಳವಡಿಸಿರುವುದು ಕಂಡುಬಂದಿದೆ. ಈ ಬಾರಿ ಎಲಾಂಟ್ರಾ ಫೇಸ್‍‍ಲಿಫ್ಟ್ ಕಾರಿನಲ್ಲಿ ವೈರ್‍‍ಲೆಸ್ ಚಾರ್ಜಿಂಗ್ ವೈಶಿಷ್ಟ್ಯತೆಯನ್ನು ಸಹ ಕಾಣಬಹುದಾಗಿದ್ದು, ಇನ್ನಿತರೆ ವೈಶಿಷ್ಟ್ಯತೆಗಳ ಬಗ್ಗೆ ಸಂಸ್ಥೆಯು ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಲಿಲ್ಲ.

ಟೊಯೊಟಾ ಕರೊಲ್ಲಾ ಕಾರುಗಳಿಗೆ ಟಾಂಗ್ ನೀಡಲಿದೆ ಹ್ಯುಂಡೈ ಎಲಾಂಟ್ರಾ ಫೇಸ್‌ಲಿಫ್ಟ್

ಎಂಜಿನ್ ಸಾಮರ್ಥ್ಯ

ಎಲಾಂಟ್ರಾ ಫೇಸ್‍‍ಲಿಫ್ಟ್ ಕಾರುಗಳು ಕೊರಿಯಾ ಸೇರಿದಂತೆ ವಿದೇಶಿ ಮಾರುಕಟ್ಟೆಗಳಿಗಾಗಿ 1.4-ಲೀಟರ್ ಮತ್ತು 1.6-ಲೀಟರ್ ಪೆಟ್ರೋಲ್ ಎಂಜಿನ್‌ನೊಂದಿಗೆ ಬರಲಿದ್ದು, 1.4-ಲೀಟರ್ ಪೆಟ್ರೋಲ್ ಕಾರುಗಳು 123-ಬಿಹೆಚ್‍‍ಪಿ ಮತ್ತು 1.6-ಲೀಟರ್ ಪೆಟ್ರೋಲ್ ಕಾರುಗಳು 201-ಬಿಎಚ್‌ಪಿ ಉತ್ಪಾದಿಸುವ ಶಕ್ತಿಯನ್ನು ಪಡೆಯಲಿದೆ.

ಟೊಯೊಟಾ ಕರೊಲ್ಲಾ ಕಾರುಗಳಿಗೆ ಟಾಂಗ್ ನೀಡಲಿದೆ ಹ್ಯುಂಡೈ ಎಲಾಂಟ್ರಾ ಫೇಸ್‌ಲಿಫ್ಟ್

ಹಾಗೆಯೇ ಭಾರತಕ್ಕೆ ಬರಲಿರುವ ಹ್ಯುಂಡೈ ಎಲಾಂಟ್ರಾ ಫೇಸ್‍‍ಲಿಫ್ಟ್ ಕಾರುಗಳು ಸಹ 1.6-ಲೀಟರ್ ಟರ್ಬೋ ಚಾರ್ಜ್ಡ್ ಡೀಸೆಲ್ ಮತ್ತು 2.0-ಲೀಟರ್ ನ್ಯಾಚುರಲ್ಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಆಯ್ಕೆಗಳಲ್ಲಿ ದೊರೆಯಲಿದ್ದು, 6-ಸ್ಪೀಡ್ ಮ್ಯಾನುವಲ್ ಅಥವಾ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಆಯ್ಕೆಯಲ್ಲಿ ಲಭ್ಯವಿರಲಿದೆ.

ಟೊಯೊಟಾ ಕರೊಲ್ಲಾ ಕಾರುಗಳಿಗೆ ಟಾಂಗ್ ನೀಡಲಿದೆ ಹ್ಯುಂಡೈ ಎಲಾಂಟ್ರಾ ಫೇಸ್‌ಲಿಫ್ಟ್

ಈ ಮೂಲಕ ದೇಶಿಯ ಮಾರುಕಟ್ಟೆಗೆ ಎಂಟ್ರಿ ಕೊಡಲಿರುವ ಹ್ಯುಂಡೈ ಎಲಾಂಟ್ರಾ ಫೇಸ್‍‍ಲಿಫ್ಟ್ ಕಾರು ಈಗಾಗಲೋ ಲಭ್ಯವಿರುವ ಸ್ಕೋಡಾ ಒಕ್ಟಿವಿಯಾ ಮತ್ತು ಟೊಯೊಟಾ ಕೊರೊಲ್ಲಾ ಅಲ್ಟೀಸ್ ಕಾರುಗಳಿಗೆ ತೀವ್ರ ಪೈಪೋಟಿ ನೀಡುವ ತವಕದಲ್ಲಿದೆ.

Most Read Articles

Kannada
Read more on hyundai sedan
English summary
Hyundai Elantra 2019 Facelift Makes Global Debut — To Rival The Toyota Corolla.
Story first published: Thursday, August 23, 2018, 17:50 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X